ಸೌಜನ್ಯ ಪ್ರಕರಣದಲ್ಲಿ ಗಿರೀಶ್ ಮಟ್ಟೆನ್ನವರ್ ನೀಡಿರುವ ಹೇಳಿಕೆಗೆ ಜೈನಮುನಿ ಕುಲರತ್ನ ಮಹಾರಾಜರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈನ ಧರ್ಮದ ಬಗ್ಗೆ ಅಧ್ಯಯನವಿಲ್ಲದೆ ಮಾತನಾಡುವುದು ಸರಿಯಲ್ಲ ಎಂದು ಮಟ್ಟೆನ್ನವರ್ ವಿರುದ್ಧ ಕಿಡಿಕಾರಿದ್ದಾರೆ. 

ಬಾಗಲಕೋಟೆ: ಜಿಲ್ಲೆಯ ಹಳಂಗಳಿ ಸಮೀಪದ ಭದ್ರಗಿರಿ ಬೆಟ್ಟದಲ್ಲಿ ವಾಸ್ತವ್ಯ ಹೊಂದಿರುವ ಜೈನಮುನಿ ಕುಲರತ್ನ ಮಹಾರಾಜರು, ಇತ್ತೀಚೆಗೆ ಸೌಜನ್ಯ ಪರ ಹೋರಾಟ ಮಾಡುತ್ತಿರುವ ಗಿರೀಶ್ ಮಟ್ಟೆನ್ನವರ್ ನೀಡಿರುವ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿ ಧರ್ಮದ ಬಗ್ಗೆ ಹೇಳಿಕೆ ನೀಡುವ ಮುನ್ನ ಅದರ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ಹಿಂದೆ ಮುಂದೆ ಗೊತ್ತಿಲ್ಲದೆ ಜೈನಧರ್ಮದ ಬಗ್ಗೆ ಮಾತನಾಡುವುದು ನಾಚಿಕೆಯ ವಿಷಯ. ನಿನಗೆ ಮಾನವೀಯತೆಯೇ ಇಲ್ಲವೇನು? ಎಂಬುದಾಗಿ ಗಿರೀಶ್ ಮಟ್ಟೆನ್ನವರ ವಿರುದ್ಧ ಕಿಡಿಕಾರಿದ್ದಾರೆ.

ನೀನು ಜೇಣುಗೂಡಿಗೆ ಕೈ ಹಾಕಿದೆಯೇನು ಎಂಬ ಅರಿವು ನಿನಗೆ ಇರಬೇಕು. ಜೈನಧರ್ಮ ಅಹಿಂಸೆಯ ತತ್ತ್ವವನ್ನು ಜೀವಮಟ್ಟದಲ್ಲಿ ಅನುಸರಿಸುತ್ತಿರುವ ಧರ್ಮ. ಇಂತಹ ಧರ್ಮದ ಮೇಲೆ ನಿರಾಧಾರ ಆರೋಪ ಮಾಡುವುದು ತುಂಬಾ ದೊಡ್ಡ ತಪ್ಪು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು ಜೈನ ಸ್ರಾವಕರು. ಅವರು ಪಾಲಿಸುತ್ತಿರುವ ಐದು ಅನುವೃತಗಳನ್ನು ನಿಜ ಜೀವನದಲ್ಲಿ ಅನುಸರಿಸುತ್ತಿದ್ದಾರೆ. ಅವರ ಮೇಲೆ ನೀವು ತೀರಾ ಅರ್ಥವಿಲ್ಲದ ಆರೋಪಗಳನ್ನು ಮಾಡುತ್ತಿದ್ದೀರಿ.

ವೀರೇಂದ್ರ ಹೆಗಡೆ ಅವ್ರ ಬಗ್ಗೆ ನೀವು ಆರೋಪ ಮಾಡ್ತಿದ್ದಿರಿ,ಇದರಲ್ಲಿ ಅರ್ಥ ಇದೀಯಾ. ವೀರೇಂದ್ರ ಹೆಗಡೆರವರಂತಹ ಧರ್ಮಾಧಿಕಾರಿ ಬಗ್ಗೆ ಮಾತನಾಡುವ ಶಕ್ತಿ ನಿನಗೆ ಇದೆಯಾ? ಮೊದಲು ಅಧ್ಯಯನ ಮಾಡು. ಸುಮ್ಮನೆ ಧರ್ಮಗಳ ನಡುವೆ ವಿಷ ಬೀಜ ಬಿತ್ತಬೇಡ. ನೀ ಎಂತಹಾ ಮೂರ್ಖ ಅದಿಯೋ ನೀನು ಎಂತಹ ಮೂರ್ಖ ಎಂಬುದು ನಿನಗೂ ತಿಳಿಯಲಿ! ಈ ಘಟನೆಯು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಧರ್ಮ, ರಾಜಕೀಯ ಹಾಗೂ ಜನಸಾಮಾನ್ಯರಲ್ಲಿ ಈ ಹೇಳಿಕೆಗಳು ಸಾಕಷ್ಟು ಕುತೂಹಲ ಹಾಗೂ ಚಿಂತೆ ಎಬ್ಬಿಸುತ್ತಿವೆ.