- Home
- Life
- Relationship
- ಮದುವೆಯಾಗುವುದಾಗಿ ಯುವತಿಯನ್ನು ಗರ್ಭಿಣಿ ಮಾಡಿದ, ಇದೀಗ ಬೇರೆ ಹುಡುಗಿ ಮದುವೆಯಾಗಿ ಕೈಕೊಟ್ಟ ಹೋದ
ಮದುವೆಯಾಗುವುದಾಗಿ ಯುವತಿಯನ್ನು ಗರ್ಭಿಣಿ ಮಾಡಿದ, ಇದೀಗ ಬೇರೆ ಹುಡುಗಿ ಮದುವೆಯಾಗಿ ಕೈಕೊಟ್ಟ ಹೋದ
ಭಟ್ಕಳದಲ್ಲಿ ಯುವತಿಯೊಬ್ಬಳಿಗೆ ಮದುವೆಯಾಗುವ ಭರವಸೆ ನೀಡಿ ದೈಹಿಕವಾಗಿ ಬಳಸಿಕೊಂಡು ಗರ್ಭಪಾತ ಮಾಡಿಸಿ ಬೇರೊಬ್ಬಳನ್ನು ವಿವಾಹವಾದ ಘಟನೆ ನಡೆದಿದೆ. ಸಂತ್ರಸ್ತ ಯುವತಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಉತ್ತರಕನ್ನಡ (ಆ.07): ಮದುವೆಯಾಗುವ ಭರವಸೆ ನೀಡಿ ಯುವತಿಯೊಬ್ಬಳಿಗೆ ದೈಹಿಕವಾಗಿ ಬಳಕೆ ಮಾಡಿಕೊಂಡು, ನಂತರ ಗರ್ಭಪಾತ ಮಾಡಿಸಿ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಿರುವ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಯುವತಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ವಿವರ:
ಭಟ್ಕಳ ತಾಲ್ಲೂಕಿನ ಮಾರುಕೇರಿ ನಿವಾಸಿ 'ಗಣೇಶ ಕೃಷ್ಣ ಗೊಂಡ' ಎಂಬಾತನೇ ಈ ವಂಚನೆ ಮಾಡಿರುವ ಆರೋಪಿ. ಭಟ್ಕಳ ಬಾರ್ಡರ್ ನೂಝ ಮೂಲದ ಯುವತಿಯೊಂದಿಗೆ ಗಣೇಶ ಎರಡು ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ. ಈ ಪರಿಚಯ ಮುಂದೆ ಪ್ರೀತಿಗೆ ತಿರುಗಿ, ಇಬ್ಬರೂ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಒಂದು ದಿನ ದೇವಸ್ಥಾನಕ್ಕೆ ಹೋಗುವ ನೆಪ ಹೇಳಿ, ಗಣೇಶ ಆ ಯುವತಿಯನ್ನು ಮಾರುಕೇರಿಯ ಹೋಮ್‌ಸ್ಟೇಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದನು.
ಇದಾದ ನಂತರ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದರಿಂದಾಗಿ ಯುವತಿ ಗರ್ಭಿಣಿಯಾಗಿದ್ದಾಳೆ. ಈ ವಿಚಾರವನ್ನು ತನ್ನ ಪ್ರಿಯತಮ ಗಣೇಶನಿಗೆ ಹೇಳಿದಾಗ ಆಕೆಯನ್ನು ಭಟ್ಕಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾನೆ. ನಂತರ ಆ ಯುವತಿಯನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು, ಕೊನೆಗೆ ಮದುವೆಯಾಗುವ ಭರವಸೆ ಈಡೇರಿಸದೆ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿದ್ದಾನೆ.
ಆರು ಜನರ ವಿರುದ್ಧ ದೂರು ದಾಖಲು:
ಈ ಘಟನೆಯಿಂದ ಮನನೊಂದ ಯುವತಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಣೇಶ ಗೊಂಡನ ವಿರುದ್ಧ ಮಾತ್ರವಲ್ಲದೆ, ಈ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಕೃಷ್ಣಿಗೊಂಡ, ಹರೀಶ ಗೊಂಡ, ಭಾಸ್ಕರ ಗೊಂಡ, ನಾಗೇಂದ್ರ ಗೊಂಡ, ಭಟ್ಕಳದ ನಾಗೇಶ್ ಹಾಗೂ ಎಂ.ಡಿ.ನಾಯ್ಕ ಎಂಬವರ ವಿರುದ್ಧವೂ ದೂರು ದಾಖಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.