ನಟಿ ಶ್ವೇತಾ ಮೆನನ್ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನಟಿ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 

ತಿರುವಂತನಪುರಂ (ಆ.07) ರಾಷ್ಟ್ರ ಪ್ರಶಸ್ತಿ ವಿಜೇತನ ನಟಿ ಶ್ವೇತಾ ಮನೆನ್ ಅಶ್ಲೀಲ ಚಿತ್ರಗಳು, ಜಾಹೀರಾತುಗಳಲ್ಲಿ ನಟೆಸುತ್ತಿದ್ದಾರೆ ಅನ್ನೋ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. ಲಾಭಕ್ಕಾಗಿ ವಯಸ್ಕರ ಸಿನಿಮಾ, ವಯಸ್ಕರ ಸೈಟ್ , ಜಾಹೀರಾತು ಸೇರಿದಂತೆ ಹಲವು ಅಶ್ಲೀಲತೆಗಳ ಪ್ರದರ್ಶನತೆ ಸಿನಿಮಾದಲ್ಲಿ ನಟಿ ಶ್ವೇತಾ ಮೆನನ್ ನಟಿಸುತ್ತಿದ್ದಾರೆ ಎಂದು ನಟಿ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದ ನಟಿ ಶ್ವೇತಾ ಮೆನನ್ ಕೊಂಚ ರಿಲೀಫ್ ಸಿಕ್ಕಿದೆ. ನಟಿ ವಿರುದ್ಧದ ವಿಚಾರಣೆಗೆ ಕೋರ್ಟ್ ತಡೆ ನೀಡಿದೆ.

ನಟಿ ಮೇಲಿನ ಆರೋಪವೇನು?

ಶ್ವೇತಾ ಮೆನನ್ ಹಣಕ್ಕಾಗಿ ಅಶ್ಲೀಲ ವಿಡಿಯೋಗಳು, ಅಶ್ಲೀಲ ಸಿನಿಮಾದಲ್ಲ ನಟೆಸುತ್ತಿದ್ದಾರೆ.ಇದನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ. ರಾಷ್ಟ್ರಪ್ರತಿ ವಿಜೇತ ನಟಿಯ ಈ ನಡೆ ಸಮಾಜದಲ್ಲಿ ಗಂಭೀರ ಪರಿಣಾಮ ಸೃಷ್ಟಿಸುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾರ್ಟಿನ್ ಮನಶೆರ್ ದೂರು ದಾಖಲಿಸಿದ್ದರು. ನಟಿ ಶ್ವೇತಾ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಎಫ್ಐಆರ್ ರದ್ದುಗೊಳಸುವಂತೆ ಕೋರಿ ಶ್ವೇತಾ ಮೆನನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಸ್ಟೀಸ್ ವಿಜಿ ಅರುಣ್ ಈ ಅರ್ಜಿ ವಿಚಾರಣೆ ನಡೆಸಿದ್ದಾರೆ. ಬಳಿಕ ನಟಿ ವಿರುದ್ಧ ವಿಚಾರಣೆಗೆ ತಡೆ ನೀಡಿ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಕೋಲಾಹಲ ಸೃಷ್ಟಿಸಿದ ವಿಡಿಯೋ ಪ್ರಕರಣ

ಶ್ವೇತಾ ಮೆನನ್ ಮಲೆಯಾಳಂ ಸಿನಿಮಾ ನಟಿಯಾಗಿ, ನಿರೂಪಕಿಯಾಗಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ, ಶೋ ಸೇರಿದಂತೆ ಹಲವು ವೇದಿಕೆಯಲ್ಲಿ ನಟಿ ಶ್ವೇತಾ ಮೆನನ್ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಬಹು ಬೇಡಿಕೆಯ ನಟಿಯಾಗಿದ್ದ ನಟಿಯಾಗಿ ಗುರುತಿಸಿಕೊಂಡಿರುವ ಶ್ವೇತಾ ಮೇಲೆ ಆರೋಪಗಳ ಸುರಿಮಳೆಯಾಗಿದೆ. ಕೇರಳದಲ್ಲಿ ಈ ಪ್ರಕರಣ ಬಾರಿ ಕೋಲಾಹಲ ಸೃಷ್ಟಿಸಿದೆ. ಪರ ವಿರೋಧಗಳು ಹೆಚ್ಚಾಗಿದೆ.

ದಿಢೀರ್ ದೂರು ದಾಖಲಾಗಲು ಕಾರಣವೇನು?

ನಟಿ ವಿರುದ್ಧ ದಿಢೀರ್ ದೂರು ದಾಖಲು ಪ್ರಮುಖ ಕಾರಣವಿದೆ ಎಂದು ನಟಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಮಳೆಯಾಂಳ ಚಲನಚಿತ್ರ ಸಂಘ (AMMA) ಅಧ್ಯಕ್ಷ ಸ್ಥಾನಕ್ಕೆ ನಟಿ ಶ್ವೇತಾ ಮೆನನ್ ಸ್ಪರ್ಧಿಸುತ್ತಿದ್ದಾರೆ. ಆಗಸ್ಟ್ 15 ರಂದು ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ದೂರು ದಾಖಲಾಗಿದ್ದು, ರಾಜಕೀಯ ಪ್ರೇರಿತ ಅನ್ನೋ ಮಾತುಗಳನ್ನು ನಟಿ ಬೆಂಬಲಿಗರು ಆರೋಪಿಸಿದ್ದಾರೆ. ಅಮ್ಮಾ ಸಂಘಟನೆ ಸ್ಥಾನಕ್ಕೆ ಸ್ಪರ್ಧಿಸದಂತೆ ಮಾಡಲು ಈ ಪ್ರಯತ್ನಗಳು ಅನ್ನೋ ಮಾತುಗಳು ಕೇಳಿಬಂದಿದೆ.

ನಟಿ ಕೆಲ ಸಿನಿಮಾದಲ್ಲಿನ ಅಭಿನಯದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸರ್ಕಾರದ ಪ್ರಶಸ್ತಿ ಪಡೆದುಕೊಂಡಿರುವ ನಟಿ ಮಾದರಿಯಾಗಿರಬೇಕು. ಆದರೆ ಅಶ್ಲೀಲತೆ ಪ್ರದರ್ಶನ ಹಾಗೂ ಮಾರಾಟ ಮೂಲಕ ಯುವ ಜನತೆ ಹಾಗೂ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂದು ನಟಿ ವಿರುದ್ಧ ಆರೋಪಗಳು ಕೇಳಿಬಂದಿದೆ.

ಅಮ್ಮಾ ಸಂಘಟನೆಗೆ ಚುನಾವಣೆಗೆ ಕಾರಣ ಮೀಟೂ

ಕೇರಳದಲ್ಲಿ ಮೀಟೂ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಸಿನಿಮಾ ರಂಗದಲ್ಲಿ ನಟಿಯರ ವಿರುದ್ದ ನಡೆಯುತ್ತಿರುವ ಕಿರುಕುಳ, ದೌರ್ಜನ್ಯ ವಿರುದ್ಧ ಹೋರಾಟವೇ ನಡೆದಿತ್ತು. ಇತ್ತ ಸಮಿತಿ ಕೂಡ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿತ್ತು. ಆರೋಗಳು, ದೂರುಗಳು ದಾಖಳಾಗುತ್ತಿದ್ದಂತೆ ಅಮ್ಮಾ ಸಂಘಟನೆ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದರು. ಕಳೆದ ವರ್ಷ ರಾಜೀನಾಮೆ ನೀಡಿದ್ದರು. ಇದೀಗ ಚುನಾವಣೆ ನಡೆಯುತ್ತಿದೆ. ಇದರ ನಡುವೆ ನಟಿ ಶ್ವೇತಾ ಮೆನನ್ ಇದೀಗ ಗಂಭೀರ ಆರೋಪ, ದೂರು ಕೇಳಿಬರುತ್ತಿದೆ.