ಧರ್ಮಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಯೂಟ್ಯೂಬರ್ ವರದಿಗಾರಿಕೆ ಹಾಗೂ ನಡೆ ಕುರಿತು ಧರ್ಮಸ್ಥಳದ ಭಕ್ತ ವೃಂದ, ಸ್ಥಳೀಯರು ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ನೂಕಾಟ ತಳ್ಳಾಟ ನಡೆದಿದ್ದು, ಹಲ್ಲೆಯೂ ವರದಿಯಾಗಿದೆ. ಯೂಟ್ಯೂಬರ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಓರ್ವ ಆರೋಪಿ ಬಂಧನವಾಗಿದೆ.
ಧರ್ಮಸ್ಥಳ (ಆ.07) ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಮುಸುಕುದಾರಿ ದೂರುದಾರನ ಆರೋಪದಡಿ ಎಸ್ಐಟಿ ತನಿಖೆ ನಡೆಯುತ್ತಿದೆ. ಗುರುತಿಸಿದ ಸ್ಥಳದಲ್ಲಿ ಉತ್ಖನನ ಕಾರ್ಯಗಳು ನಡೆಯುತ್ತಿದೆ. ಇದನ್ನು ಬಹುತೇಕ ಎಲ್ಲಾ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ವರದಿ ಮಾಡುತ್ತಿದೆ. ಆದರೆ ಯೂಟ್ಯೂಬರ್ ವರದಿ, ನಡೆ ಕುರಿತು ಧರ್ಮಸ್ಥಳ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮ ನೂಕಾಟ, ತಳ್ಳಾಟ ನಡೆದು ಉದ್ವಿಘ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ವೇಳೆ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣ ಸಂಬಂಧ ಹಲವು ದೂರುಗಳು ದಾಖಲಾಗಿದೆ. ಇದೀಗ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬೆಳ್ತಗಂಡಿ ನ್ಯಾಯಾಲಕ್ಕೆ ಆರೋಪಿ ಹಾಜರುಪಡಿಸಿದ ಪೊಲೀಸ್
ಧರ್ಮಸ್ಥಳದಲ್ಲಿ ನಡೆದ ಯೂಟ್ಯೂಬರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿ ಸೋಮನಾಥ್ ಸಫಲ್ಯನನ್ನು ಬಂಧಿಸಲಾಗಿದೆ. ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿಯಾಗಿರುವ 48 ವರ್ಷದ ಸೋಮನಾಥ ಸಫಲ್ಯರನ್ನು ಪೊಲೀಸರು ಬಂಧಿಸಿ ಬೆಳ್ತಂಗಡಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣ ಸಂಬಂಧ ಹಲವು ವಿಡಿಯೋಗಳನ್ನು ಪರಿಶೀಲಿಸುತ್ತಿರುವ ಪೊಲೀಸರ್ ಆರೋಪಿಗಳ ಪತ್ತೆ ಮಾಡಲು ಮುಂದಾಗಿದ್ದಾರೆ. ಹಲ್ಲೆ ಪ್ರಕರಣದಿಂದ ಧರ್ಮಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
13ನೇ ಪಾಯಿಂಟ್ ಉತ್ಖನನ ಬಾಕಿ
ಧರ್ಮಸ್ಥಳದಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ ಆಗಸ್ಟ್ 6 ರಂದು ಗ್ರಾಮದಲ್ಲಿ ಭಾರಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವರದಿಗಾರಿಗೆ ಮಾಡುತ್ತಿದ್ದ ಪತ್ರಕರ್ತರ ಮೇಲೂ ದಾಳಿ ನಡೆದಿತ್ತು. ಪರಿಸ್ಥಿತಿ ಉದ್ಿಗ ಸ್ವರೂಪ ಪಡೆದುಕೊಂಡಿತ್ತು. ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ಭಾರಿ ಹೈಡ್ರಾಮವೇ ನಡೆದಿತ್ತು. ನಿನ್ನೆಯ ಗಲಾಟೆ, ಗದ್ದಲಗಳಿಂದ ಇಂದು (ಆಗಸ್ಟ್ 07) ಉತ್ಖನನ ಕಾರ್ಯ ನಡೆಯಲೇ ಇಲ್ಲ. ಮುಸುಕುದಾರಿ ದೂರುದಾರ ನೀಡಿದ್ದ 13ನೇ ಪಾಯಿಂಟ್ ಉತ್ಖನನ ಕಾರ್ಯ ಇಂದು ನಡೆಯಬೇಕಿತ್ತು. ಆದರೆ ಎಸ್ಐಟಿ ಅಧಿಕಾರಿಗಳು ಇಂದು ಯಾವುದೇ ಉತ್ಖನನ ಮಾಡಿಲ್ಲ. ಇಷ್ಟೇ ಅಲ್ಲ ನಾಳೆ ಉತ್ಖನನ ಕಾರ್ಯ ಮುಂದುವರಿಸುವ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಹೊರಬಂದಿಲ್ಲ.
ಮುಸುಕುದಾರಿ ದೂರುದೂರ ಗುರತಿಸಿದ ಸ್ಥಳದಲ್ಲಿ ಸಿಕ್ಕಿದ್ದೇನು?
ಮುಸುಕುದಾರಿ ದೂರುದಾರ 13 ಸ್ಥಳಗಳನ್ನು ಗುರುತಿಸಿದ್ದ. ಈ ಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ. ಇದು ಸಹಜ ಸಾವಾದ ಮೃತದೇಹಗಳಲ್ಲ. ಯಾವುದೇ ಮರಣೋತ್ತರ ಪರೀಕ್ಷೆ, ಕಾನೂನು ಪ್ರಕ್ರಿಯೆ ನಡೆದಿಲ್ಲ ಎಂದು ಮುಸುಕುದಾರಿ ದೂರುದಾರ ಆರೋಪ ಮಾಡಿದ್ದ. ಎಸ್ಐಟಿ ಅಧಿಕಾರಿಗಳು ದೂರುದಾರ ಜೊತೆ ಗುರುತಿಸಿದ ಸ್ಥಳದಲ್ಲಿ ಉತ್ಖನನ ಮಾಡಿದ್ದಾರೆ. 13 ಸ್ಥಳಗಳಲ್ಲಿ 12 ಸ್ಥಳದ ಉತ್ಖನನವಾಗಿದೆ. ಈ ಪೈಕಿ ದೂರುದಾರ ಗುರುತಿಸಿದ 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಪತ್ತೆಯಾಗಿತ್ತು. ಈ ಆಸ್ತಿಪಂಜರ ಪುರುಷನದ್ದು ಎಂದು ಹೇಳಲಾಗಿದೆ. ಇನ್ನುಳಿದ 11 ಪಾಯಿಂಟ್‌ಗಳಲ್ಲಿ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಅದರೆ ಎಸ್ಐಟಿ ತನಿಖಾ ಸ್ಥಳದ ಕಾಡಿನಲ್ಲಿ ಕಾರ್ಯಾಚರಣೆ ವೇಳೆ ಮತ್ತೊಂದು ಅಸ್ಥಿಪಂಜರ ಪತ್ತೆಯಾಗಿತ್ತು. ಈ ಅಸ್ಥಿಪಂಜರವನ್ನು ಸಂಗ್ರಹಿಸಿದ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
