ಡೋನಾಲ್ಡ್ ಟ್ರಂಪ್ ಭಾರತದ ಮೇಲೆ ಡಬಲ್ ತೆರಿಗೆ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆಯಾಗಿದೆ. ಅಜಿತ್ ದೋವಲ್  ವ್ಲಾದಿಮಿರ್ ಪುಟಿನ್ ಭೇಟಿ ಮಾಡಿದ್ದಾರೆ. ಇತ್ತ ಚೀನಾ ಕೂಡ ಭಾರತಕ್ಕೆ ಬೆಂಬಲ ನೀಡಿದೆ. ಇದೀಗ ಅಮೆರಿಕ ಹೊರಗಿಟ್ಟು ವ್ಯಾಪಾರ ವ್ಯಹಹಾರ ಹಾಗೂ ಕರೆನ್ಸಿಗೆ ಬ್ರಿಕ್ಸ್ ಮುಂದಾಗಿದೆಯಾ?

ನವದೆಹಲಿ (ಆ.07) ಭಾರತದ ಹಾಗೂ ರಷ್ಯಾ ನಡುವಿನ ವ್ಯವಹಾರ ಅಮೆರಿಕಗೆ ಇಷ್ಟವಿಲ್ಲ. ಅದು ಡೋನಾಲ್ಡ್ ಟ್ರಂಪ್‌ಗೆ ಮಾತ್ರವಲ್ಲ, ಇದರ ಹಿಂದಿನ ಎಲ್ಲಾ ಅಮೆರಿಕದ ಎಲ್ಲಾ ಅಧ್ಯಕ್ಷರಿಗೂ ವ್ಯತ್ಯಾಸವಿಲ್ಲ. ಆದರೆ ಇತರ ಅಧ್ಯಕ್ಷರು ಈ ರೀತಿ ಕಠಿಣ ನಿರ್ಧಾರ ತೆಗೆದುಕೊಂಡಿರಲಿಲ್ಲ ಅಷ್ಟೇ. ಇದೀಗ ಟ್ರಂಪ್ ಡಬಲ್ ತೆರಿಗೆಯಿಂದ ಭಾರತ ಆಕ್ರೋಶಗೊಂಡಿದೆ. ಇದರ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಸ್ಕೋದಲ್ಲಿ ರಷ್ಯಾ ಅಧ್ಯಶ್ರ ವ್ಲಾದಿಮಿರ್ ಪುಟಿನ್ ಬೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತ ಚೀನಾ ಕೂಡ ಭಾರತಕ್ಕೆ ಬೆಂಬಲ ನೀಡಿದೆ. ಈ ಮಾತುಕತೆ ಹಾಗೂ ಬೆಂಬಲದಲ್ಲಿ ಬ್ರಿಕ್ಸ್ ಒಕ್ಕೂಟ ಅಮೆರಿಕ ಹೊರಗಿಟ್ಟು ವ್ಯಾಪಾರ ವಹಿವಾಟು ಮಾತ್ರವಲ್ಲ ಡಾಲರ್ ವಿರುದ್ಧ ಕರೆನ್ಸಿ ಘೋಷಿಸುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಬ್ರಿಕ್ಸ್ ಒಕ್ಕೂಟದಲ್ಲಿ ಮಹತ್ವದ ಚರ್ಚೆ

ಅಜಿತ್ ದೋವಲ್ ರಷ್ಯಾ ಪ್ರವಾಸದಲ್ಲಿದ್ದಾರೆ. ವ್ಲಾದಿಮಿರ್ ಪುಟಿನ್ ಭೇಟಿಯಾಗಿ ರಕ್ಷಣಾ ಒಪ್ಪಂದ, ದ್ವಿಪಕ್ಷೀಯ ಇಂಧನ ಒಪ್ಪಂದ ಸೇರಿದಂತೆ ಹಲವು ಪ್ರಮುಖ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತೆರಿಗೆ, ಬೆದರಿಕೆ ಕುರಿತು ಮಾತುಕತೆ ನಡೆಸಲಾಗಿದೆ. ರಷ್ಯಾದಿಂದ ಇಂಧನ ಖರೀದಿಯೇ ಇದಕ್ಕೆಲ್ಲಾ ಮೂಲವಾಗಿದೆ. ಭಾರತ ವಿಶ್ವದ ಪ್ರಮುಖ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಇದು ಅಮೆರಿಕ ನಿದ್ದೆಗೆಡಿಸಿದೆ. ಇದೀಗ ಬ್ರಿಕ್ಸ್ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಈ ಮಾತುಕತೆಯಿಂದ ವ್ಯಕ್ತವಾಗುತ್ತಿದೆ.

ಅಮೆರಿಕದ ಪ್ರಧಾನಿ ಮೋದಿ ಸ್ಪಷ್ಟ ಸಂದೇಶ

ಅಮೆರಿಕ ಜೊತೆ ಮಾತುಕತೆಗೆ ಪುಟಿನ್ ಮುಂದಾಗಿದ್ದಾರೆ. ಭಾರತದ ಮೇಲೆ ವಿಧಿಸಿರುವ ದುಬಾರಿ ತೆರಿಗೆ ಕುರಿತು ಪುಟಿನ್ ಮಾತುಕತೆ ನಡೆಸುವ ಸಾಧ್ಯತೆ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಅಮೆರಿಕಗ ಸ್ಪಷ್ಟ ಸಂದೇಶ ನೀಡಿದ್ದಾರೆ. ಅದೆಷ್ಟೆ ಬೆಲೆ ತೆತ್ತರೂ ಪರ್ವಾಗಿಲ್ಲ, ಭಾರತೀಯ ರೈತರು, ಭಾರತೀಯರ ರಕ್ಷಣೆ ಸಿದ್ದ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಟ್ರಂಪ್ ತೆರಿಗೆ ಬೆದರಿಕೆಗೆ ಬೆದರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜೊತೆ BRICS ಒಕ್ಕೂಟ ರಾಷ್ಟ್ರಗಳಲ್ಲಿ ಪ್ರಮಖರಾದ ರಷ್ಯಾ, ಭಾರತ, ಚೀನಾ ಇದೀಗ ಅಮೆರಿಕ ತೆರಿಗೆ ವಿರುದ್ಧ ಗರಂ ಆಗಿದೆ.

ಭಾರತಕ್ಕೆ ಭೇಟಿ ನೀಡಲಿದ್ದಾರೆ ಪುಟಿನ್

ಅಜಿತ್ ದೋವಲ್ ಹಾಗೂ ಪುಟಿನ್ ಭೇಟಿ ವೇಳೆ ಹಲವು ವಿಚಾರಗಳ ಕುರಿತು ಚರ್ಚೆಯಾಗಿದೆ. ಬಳಿಕ ಮಾತನಾಡಿರುವ ಅಜಿತ್ ದೋವಲ್, ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀನಡುತ್ತಿದ್ದಾರೆ ಎಂದಿದ್ದಾರೆ. ಆದರೆ ದಿನಾಂಕ ಸ್ಪಷ್ಟವಾಗಿಲ್ಲ. ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದಿದ್ದಾರೆ.