LIVE NOW
Published : Jun 05, 2026, 07:07 AM ISTUpdated : Jun 05, 2026, 09:12 PM IST

Karnataka News Live: ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ - ಆಟವಾಡುತ್ತಿದ್ದ 9 ವರ್ಷದ ವಿದ್ಯಾರ್ಥಿ ನೀರಿನ ಹೊಂಡಕ್ಕೆ ಬಿದ್ದು ಸಾವು!

ಸಾರಾಂಶ

ಖಾತೆ ಹಂಚಿಕೆಯಾದ ಬೆನ್ನಲ್ಲೇ ಆರೋಗ್ಯ ಸಚಿವ ಯುಟಿ ಖಾದರ್ ಕಾರ್ಯಪ್ರವೃತ್ತರಾಗಿದ್ದಾರೆ. ಜಯನಗರದ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯಾ ಎಂದು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಪಾಳಯದ ವೈದ್ಯರು ಗೈರಾಗಿರುವುದನ್ನು ಖಾದರ್ ಗಮನಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ಯುಟಿ ಖಾದರ್ ಹೇಳಿದ್ದಾರೆ. ಹೊಸ ಸಚಿವರ ಕೆಲಸ, ರಾಜ್ಯ ರಾಜಕಾರಣ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಲೈವ್ ಅಪ್‌ಡೇಟ್ ಇಲ್ಲಿದೆ.

Student Death

09:12 PM (IST) Jun 05

ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ - ಆಟವಾಡುತ್ತಿದ್ದ 9 ವರ್ಷದ ವಿದ್ಯಾರ್ಥಿ ನೀರಿನ ಹೊಂಡಕ್ಕೆ ಬಿದ್ದು ಸಾವು!

ಆಟವಾಡುತ್ತಿದ್ದ ವೇಳೆ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 9 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರ್ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸೈಯದ್ ಸಾಬ್ ಪಾಳ್ಯದಲ್ಲಿ ನಡೆದಿದೆ.

Read Full Story

08:54 PM (IST) Jun 05

ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂದೆ ನಿಜಕ್ಕೂ ಏನಾಗಿದೆ? ಶಾಸಕ ಪೊನ್ನಣ್ಣ ಹೇಳಿದ್ದೇನು?

ಸರ್ಕಾರ ಬದಲಾವಣೆ ಆದಾಗ ಸಹಜವಾಗಿ ಇವೆಲ್ಲಾ ನಡೆಯುತ್ತವೆ, ಅಂತಹ ಸಂದರ್ಭದಲ್ಲಿ ಮನಸ್ತಾಪಗಳು ಇದ್ದೇ ಇರುತ್ತವೆ ಎಂದು ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪ್ರತಿಕ್ರಿಯಿಸಿದ್ದಾರೆ.

Read Full Story

08:25 PM (IST) Jun 05

Kodagu - 9 ವರ್ಷಗಳ ಬಳಿಕ ಸಿಕ್ಕ ಸ್ವಂತ ಸೂರು - 43 ಆದಿವಾಸಿ ಕುಟುಂಬಗಳ ಕಣ್ಣಲ್ಲಿ ಸಂತಸದ ಕಣ್ಣೀರು!

ಅವರೆಲ್ಲ ಸ್ವಂತ ಸೂರಿಲ್ಲದೆ ಲೈನ್ ಮನೆಗಳಲ್ಲಿ ಬದುಕು ದೂಡುತ್ತಿದ್ದವರು. 9 ವರ್ಷಗಳ ಹಿಂದೆ ಬಂದು ಇಂಚಿಂಚು ಜಾಗಕ್ಕೆ ಹೋರಾಟ ನಡೆಸಿದ್ದರು. ಸ್ವಂತ ಸೂರಿನ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.

Read Full Story

07:53 PM (IST) Jun 05

ಲವ್ ಮಾಕ್ಟೇಲ್-3 ಸೂಪರ್ ಸಕ್ಸಸ್ ಬೆನ್ನಲ್ಲೇ ಹೊಸ ಕಾರು ಖರೀದಿಸಿದ ಕೃಷ್ಣ-ಮಿಲನಾ - ‘XEV 9e ಸಿನೆಲಕ್ಸ್’ ಸೆಲೆಕ್ಟ್‌ ಮಾಡಲು ಇದೇ ಕಾರಣ

ಲವ್‌ ಮಾಕ್ಟೇಲ್‌-3 ಯಶಸ್ಸಿನ ನಂತರ, ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ ಮಹೀಂದ್ರಾದ ವಿಶೇಷ ಆವೃತ್ತಿಯ XEV 9e Cineluxe ಕಾರನ್ನು ಖರೀದಿಸಿದ್ದಾರೆ. ಈ ಕಾರು 500+ ಕಿ.ಮೀ ರೇಂಜ್, ಹೋಮ್ ಥಿಯೇಟರ್ ಅನುಭವ ನೀಡುವ ಡಿಸ್ಪ್ಲೇ ಇದರಲ್ಲಿದೆ.

Read Full Story

07:49 PM (IST) Jun 05

Bathroom Doors - ಬಾತ್‌ರೂಂ ಬಾಗಿಲಿಗೆ ಈ 4 ಡಿಸೈನ್‌ ಬೆಸ್ಟ್ - ನೀರು, ತೇವಾಂಶಕ್ಕೆ ನೋ ಟೆನ್ಷನ್!

ಬಾತ್‌ರೂಂಗೆ ಯಾವ ಬಾಗಿಲು ಹಾಕಿಸೋದು ಬೆಸ್ಟ್? ನೀರು ಬಿದ್ದು ಹಾಳಾಗದ ಡೋರ್ ಯಾವುದು? WPC ಮತ್ತು uPVC ಬಾಗಿಲುಗಳು ತೇವಾಂಶಕ್ಕೆ ಹಾಳಾಗುವುದಿಲ್ಲವೇ? ಮರದ ಬಾಗಿಲುಗಳನ್ನು ಯಾಕೆ ಬಾತ್‌ರೂಂಗೆ ಬಳಸಬಾರದು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Read Full Story

07:27 PM (IST) Jun 05

ಡಿ.ಕೆ.ಶಿವಕುಮಾರ್ ಸರ್ಕಾರದ ಮುಂದೆ ದೊಡ್ಡ ಸವಾಲುಗಳಿವೆ - ಸಿ.ಟಿ.ರವಿ ಹೇಳಿದ್ದೇನು?

ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ ಒಳ್ಳೆಯ ಕೆಲಸ ಆಗಿಲ್ಲ. ಮುಂದಿನ ಎರಡು ವರ್ಷವಾದರೂ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡಲಿ ಎಂಬ ನಿರೀಕ್ಷೆ ಹೊಂದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

Read Full Story

07:23 PM (IST) Jun 05

ಬೆಂಗಳೂರು - ಹಲಸಿನ ಹಣ್ಣಿನ ಆಸೆಗಾಗಿ ಮರ ಹತ್ತಿದ ಪ್ರಶಸ್ತಿ ವಿಜೇತ ಬಳ್ಳಾರಿ ಮೂಲದ ಜಿಕೆವಿಕೆ ಕೃಷಿ ವಿದ್ಯಾರ್ಥಿ ಸಾವು!

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಹಲಸಿನ ಹಣ್ಣು ಕೀಳಲು ಮರ ಹತ್ತಿದ್ದ ಎಂ.ಎಸ್ಸಿ ವಿದ್ಯಾರ್ಥಿ ಆಕಾಶ್, ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ರಾಷ್ಟ್ರಪತಿ ಪ್ರಶಸ್ತಿ ವಿಜೇತ, ಪ್ರತಿಭಾವಂತನಾಗಿದ್ದ ಈ ಯುವಕನ ಅಕಾಲಿಕ ಮರಣವು ಎಲ್ಲೆಡೆ ಶೋಕವನ್ನುಂಟುಮಾಡಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

07:07 PM (IST) Jun 05

ಕಾಲದ ಚಕ್ರದಲ್ಲಿ ಮೌನವಾದ ಸಿಗಂದೂರು ಲಾಂಚ್‌ - ಸೇತುವೆ ಉದ್ಘಾಟನೆ ಬಳಿಕ ಇದನ್ನ ಕೇಳುವವರೇ ಇಲ್ಲ

ದಶಕಗಳ ಕಾಲ ಶರಾವತಿ ಹಿನ್ನೀರಿನಲ್ಲಿ ಸಿಗಂದೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಲಾಂಚ್, ಸೇತುವೆ ನಿರ್ಮಾಣದ ನಂತರ ತನ್ನ ಸೇವೆ ನಿಲ್ಲಿಸಿದೆ. ಜನರ ಬದುಕಿನ ಭಾಗವಾಗಿದ್ದ ಈ ಲಾಂಚ್, ಈಗ ನದಿಯ ತೀರದಲ್ಲಿ ನಿಂತು ಕೇವಲ ನೆನಪಾಗಿ ಉಳಿದಿದೆ.
Read Full Story

06:57 PM (IST) Jun 05

ಜಾಗತಿಕ ಹೂಡಿಕೆದಾರರ ಹಾಟ್‌ಸ್ಪಾಟ್ ಕರ್ನಾಟಕಕ್ಕೆ 2ನೇ ಸ್ಥಾನ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.18 ಏರಿಕೆ!

ಕೇಂದ್ರ ಸರ್ಕಾರದ ವರದಿ ಪ್ರಕಾರ, ಭಾರತದ ವಿದೇಶಿ ನೇರ ಬಂಡವಾಳ ಹೂಡಿಕೆಯು (FDI) ಶೇ.18ರಷ್ಟು ಏರಿಕೆ ಕಂಡಿದೆ. ಈ ಪೈಕಿ, ಕರ್ನಾಟಕವು ₹1.22 ಲಕ್ಷ ಕೋಟಿ ಎಫ್‌ಡಿಐ ಸ್ವೀಕರಿಸಿ ದೇಶದಲ್ಲೇ ಎರಡನೇ ಅತಿದೊಡ್ಡ ಹೂಡಿಕೆದಾರ ರಾಜ್ಯವಾಗಿ ಹೊರಹೊಮ್ಮಿದೆ.
Read Full Story

06:24 PM (IST) Jun 05

ಡಿಕೆಶಿ ಕೇವಲ ಕೀಲುಗೊಂಬೆ, ಹೈಕಮಾಂಡ್ ಹೇಳಿದಂತೆ ನಡೆಯುತ್ತಿದ್ದಾರೆ - ಆರ್.ಅಶೋಕ್ ವ್ಯಂಗ್ಯ

ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

Read Full Story

05:31 PM (IST) Jun 05

ಸಿಮ್ ಸ್ವಾಪ್ ವಂಚನೆ, ಬಿಎಸ್‌ಎನ್‌ಎಲ್‌ಗೆ ₹55.5 ಲಕ್ಷ ದಂಡ - ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು!

ನಕಲಿ ಸಿಮ್ ನೀಡಿ 'ಸಿಮ್ ಸ್ವಾಪ್' ವಂಚನೆಗೆ ದಾರಿ ಮಾಡಿಕೊಟ್ಟರೆ, ಅದರಿಂದ ಗ್ರಾಹಕರಿಗೆ ಉಂಟಾಗುವ ಹಣಕಾಸಿನ ನಷ್ಟಕ್ಕೆ ಟೆಲಿಕಾಂ ಕಂಪನಿಗಳೇ ಹೊಣೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.  ನಿರ್ಲಕ್ಷ್ಯ ವಹಿಸಿದ ಬಿಎಸ್‌ಎನ್‌ಎಲ್‌ಗೆ ಸಹಕಾರಿ ಬ್ಯಾಂಕ್‌ಗೆ ₹55.5 ಲಕ್ಷ ದಂಡ ಪಾವತಿಸಲು ಆದೇಶಿಸಿದೆ.

Read Full Story

04:38 PM (IST) Jun 05

Peddi - ರಾಮ್‌ ಚರಣ್‌-ಶಿವಣ್ಣ ಶ್ರಮ ಪಾಪ ನೀರಲ್ಲಿ ಹೋಮ - ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ಗೆ ಮತ್ತೊಂದು ಮೊಳೆ!

ಪೆದ್ದಿ ಬಿಡುಗಡೆಗೆ ಮುನ್ನ ನಟ ರಾಮ್‌ ಚರಣ್‌ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಈ ಸಿನಿಮಾ ಕುರಿತು ಕೊಂಚ ಅತಿಯೇ ಅನ್ನಿಸುವಷ್ಟು ಬಿಲ್ಡಪ್ ಕೊಟ್ಟಿದ್ದರು. ಸಿನಿಮಾ ರಂಗದಲ್ಲೇ ಇದೊಂದು ಹೊಸ ಇತಿಹಾಸ ಸೃಷ್ಟಿಸಲಿದೆ.

Read Full Story

04:30 PM (IST) Jun 05

ಕುದುರೆಮುಖ ವನ್ಯಜೀವಿ ವಿಭಾಗದ ಕಾಡಿನಲ್ಲಿ ಗುಡ್ಡ ಕುಸಿತ, 2019ರ ದುರ್ಘಟನೆ ಮತ್ತೆ ನೆನಪು

ಬೆಳ್ತಂಗಡಿಯ ಬಂಡಾಜೆ ಕಾಡಿನಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದ್ದು, ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಜೂನ್ 1 ರಿಂದ ಚಾರಣಕ್ಕೆ ಅಧಿಕೃತವಾಗಿ ಅವಕಾಶ ನೀಡಲಾಗಿದ್ದು, ಸುರಕ್ಷತಾ ಕ್ರಮಗಳೊಂದಿಗೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸಲಾಗಿದೆ.
Read Full Story

04:29 PM (IST) Jun 05

ಕೊಡಗಿನಲ್ಲಿ ಭೀಕರ ದುರಂತ - ಕಾಡಾನೆ ದಾಳಿಗೆ ಕೇಂದ್ರ ಸರ್ಕಾರದ RAW ಐಜಿ ಸುನಿಲ್ ಅಚ್ಚಯ್ಯ ಪತ್ನಿ ದಾರುಣ ಸಾವು

ಕೊಡಗು ಜಿಲ್ಲೆಯ ಪೊನ್ನಂಪೇಟೆ ಬಳಿಯ ತೋಟವೊಂದರಲ್ಲಿ ನಡೆದ ಕಾಡಾನೆ ದಾಳಿಯಲ್ಲಿ ಕೇಂದ್ರ ಸರ್ಕಾರದ RAW ಐಜಿ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ ಮೃತಪಟ್ಟಿದ್ದಾರೆ. ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿ ತೋಟಕ್ಕೆ ಭೇಟಿ ನೀಡಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
Read Full Story

04:21 PM (IST) Jun 05

Exclusive Interview - ನಮ್ಮನೆ ಮಗುವಿಗೆ ನಿಮ್ಮೆಲ್ಲರ ಪ್ರೀತಿ ಸಿಗಲಿ - ಪ್ರಿಯಾ ಸುದೀಪ್

ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಪಾತ್ರದ ಶೇಡ್ಸ್‌ ಅದ್ಭುತವಾಗಿತ್ತು ಎಂದು ಪ್ರಿಯಾ ಸುದೀಪ್ ಸಂದರ್ಶನದಲ್ಲಿ ಹೇಳಿದರು.

Read Full Story

03:10 PM (IST) Jun 05

ಬಿಜೆಪಿ ಮುಖಂಡ ದೇವರಾಜೇಗೌಡ ಲೈಂಗಿಕ ದೌರ್ಜನ್ಯ ಕೇಸ್ - ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ!

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಜಿ. ದೇವರಾಜೇಗೌಡ ಅವರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದ ನ್ಯಾಯಾಲಯ, ಪೊಲೀಸರಿಗೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಿದೆ. ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Read Full Story

02:34 PM (IST) Jun 05

ಬಂಡೀಪುರ ಕಾಡಿನೊಳಗೆ ರೌಡಿಶೀಟರ್ ಬಿಂದಾಸ್ ಗುಂಡು ತುಂಡು ಪಾರ್ಟಿ, ಇಲಾಖೆಯ ಸಿಬ್ಬಂದಿಯೇ ಶಾಮೀಲು?

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಳ್ಳಬೇಟೆ ತಡೆ ಶಿಬಿರದಲ್ಲಿ ಕುಖ್ಯಾತ ರೌಡಿಶೀಟರ್ ಸತೀಶ್ ಮತ್ತು ಆತನ ಗ್ಯಾಂಗ್ ಅಕ್ರಮವಾಗಿ ಮದ್ಯ ಹಾಗೂ ಮಾಂಸದ ಪಾರ್ಟಿ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು ಅರಣ್ಯ ಇಲಾಖೆಯ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಅಧಿಕಾರಿಗಳ ಶಾಮೀಲಾತಿಯ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಾರ್ವಜನಿಕರು ಮತ್ತು ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story

01:58 PM (IST) Jun 05

ಮಂಗಳೂರು ಹೈಕೋರ್ಟ್ ಪೀಠಕ್ಕೆ ಉತ್ತರ ಕನ್ನಡ ಸೇರ್ಪಡೆಗೆ ವಿರೋಧ - ಹೊನ್ನಾವರದಲ್ಲೇ ಹೊಸ ಪೀಠ ಸ್ಥಾಪನೆಗೆ ವಕೀಲರ ಪಟ್ಟು!

ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವುದನ್ನು ಕಾರವಾರ ವಕೀಲರ ಸಂಘ ತೀವ್ರವಾಗಿ ವಿರೋಧಿಸಿದೆ. ಭೌಗೋಳಿಕವಾಗಿ ಧಾರವಾಡವೇ ಹತ್ತಿರವಾಗಿದ್ದು, ಇಲ್ಲವಾದರೆ ಜಿಲ್ಲೆಯ ಮಧ್ಯಭಾಗವಾದ ಹೊನ್ನಾವರದಲ್ಲಿ ಹೊಸ ಪೀಠ ಸ್ಥಾಪಿಸಬೇಕೆಂದು ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದರೆ ತೀವ್ರ ಹೋರಾಟದ ಎಚ್ಚರಿಕೆಯನ್ನೂ ಸಂಘ ನೀಡಿದೆ.
Read Full Story

01:41 PM (IST) Jun 05

ಸಚಿವ ರಾಮಲಿಂಗಾ ರೆಡ್ಡಿ, ಮುನಿಯಪ್ಪ ಬಳಿಕ ಮತ್ತೊಬ್ಬ ಸಚಿವ ಅಸಮಾಧಾನ!

ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲೇ ಸಂಕಷ್ಟಗಳು ಎದುರಾಗುತ್ತಿವೆ. ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಕೆಎಚ್ ಮುನಿಯಪ್ಪ ಕೂಡ ಡಿಕೆಶಿ ನಡೆಗೆ ಅಸಮಾಧಾನ ಹೊರಹಾಕಿದ ಬೆನ್ನಲ್ಲೆ ಇದೀಗ ಕೆಜೆ ಜಾರ್ಜ್ ಕೂಡ ಅಸಮಾಧಾನ.

Read Full Story

12:42 PM (IST) Jun 05

ಡಿಕೆ ಸರ್ಕಾರದಲ್ಲಿ ಚುರುಕಾದ ಇಕ್ಬಾಲ್ ಹುಸೇನ್; ಮಂಚನಬೆಲೆ ಜಲಾಶಯದ ಬಲ ದಂಡೆ ವೀಕ್ಷಿಸಿದ ಶಾಸಕ

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಮಂಚನಬೆಲೆ ಜಲಾಶಯದ ಬಲದಂಡೆ ನಾಲೆಯ ದುಸ್ಥಿತಿಯನ್ನು ವೀಕ್ಷಿಸಿದರು. ಮುರಿದು ಬಿದ್ದ ಸ್ಲ್ಯಾಬ್‌ಗಳಿಂದಾಗಿ ನೀರು ಹರಿಯಲು ಉಂಟಾಗಿರುವ ತಡೆಯನ್ನು ನಿವಾರಿಸಿ, ರೈತರಿಗೆ ಅನುಕೂಲವಾಗುವಂತೆ ಕೂಡಲೇ ನಾಲೆ ದುರಸ್ಥಿಪಡಿಸಲು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.
Read Full Story

12:14 PM (IST) Jun 05

ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!

ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್‌ನಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯಿಂದಾಗಿ ಕೇಂದ್ರ ರೈಲ್ವೆಯು ಜೂನ್ 5 ರಿಂದ 10 ರವರೆಗೆ ಹಲವು ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.
Read Full Story

11:38 AM (IST) Jun 05

Breaking ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಮುನಿಯಪ್ಪ ಮುನಿಸು, ಬೇರೆ ಖಾತೆಗೆ ಪಟ್ಟು ಹಿಡಿದ ಹಿರಿಯ ಸಚಿವ

ಡಿಕೆ ಶಿವಕುಮಾರ್‌ಗೆ ಖಾತೆ ಹಂಚಿಕೆ ದಿನದಿಂದ ದಿನಕ್ಕೆ ಕಗ್ಗಾಂಟಾಗುತ್ತಿದೆ. ಆಹಾರ ಖಾತೆ ಸಚಿವ ಕೆಹೆಚ್ ಮುನಿಯಪ್ಪ ಮುನಿಸಾಗಿದ್ದಾರೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಮುನಿಯಪ್ಪ ಇದೀಗ ಬೇರೆ ಖಾತೆಗೆ ಪಟ್ಟು ಹಿಡಿದಿದ್ದಾರೆ.

 

Read Full Story

11:37 AM (IST) Jun 05

'ಸಿಕ್ಸರ್ ಏನೋ ಹೊಡೆದ್ರು ಈಗ ವಿಕೆಟ್ ಬಿದ್ದಿದೆ..' ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಿಟಿ ರವಿ ಹೇಳಿಕೆ ವೈರಲ್!

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ, ಬಯಸಿದ ಖಾತೆ ಸಿಗದ ಕಾರಣಕ್ಕೆ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಸಿಟಿ ರವಿ ಅವರು ಪ್ರತಿಕ್ರಿಯಿಸಿದ್ದು ಈ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಇದು ಸೂಚಿಸಿದೆ ಎಂದರು.

Read Full Story

11:20 AM (IST) Jun 05

ಕೊಟ್ಟ ಮಾತು ತಪ್ಪಿದ್ದೇ ರೆಡ್ಡಿ ಆಕ್ರೋಶಕ್ಕೆ ಕಾರಣನಾ? ಬೆಂಗಳೂರು ಜಿದ್ದಿನ ಹಿಂದೆದೆಯಾ ಹಳೇ ರಾಜಕೀಯ ಲೆಕ್ಕಾಚಾರ!

ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಭಿನ್ನಮತ ಸ್ಫೋಟಗೊಂಡಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಕಾರಣ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಈ ಹಿಂದೆ ಡಿಕೆಶಿ ನೀಡಿದ್ದರೆನ್ನಲಾದ ಭರವಸೆ ಮುರಿದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
Read Full Story

10:47 AM (IST) Jun 05

ಹಿಂದೂ ಸಂಘಟನೆಗಳಿಂದ ಇಂದು ಭಟ್ಕಳ ಬಂದ್, ಮಧ್ಯಾಹ್ನ ಸಂಪೂರ್ಣ ಸ್ಥಬ್ದವಾಗಲಿದೆ ಪಟ್ಟಣ

ಮುರಿನ ಕಟ್ಟೆ ಧ್ವಂಸ ಪ್ರಕರಣ ಸಂಬಂಧ ಹಿಂದೂ ಸಂಘಟನೆಗಳು ಕೆರಳಿದೆ. ಅನ್ಯ ಕೋಮಿನ ಸಮುದಾಯದ ಉದ್ರಿಕ್ತರು ಮುರಿನ ಕಟ್ಟೆ ಧ್ವಂಸಗೊಳಿಸಿರುವುದು ಹಾಗೂ ಕಟ್ಟೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಇಂದು ಬಂದ್ ನಡೆಸಲಾಗುತ್ತಿದೆ.

Read Full Story

10:44 AM (IST) Jun 05

ಕೋಲಾರ - ಮಲಗಿದ್ದ ಕುರಿಗಳ ಮೇಲೆ ಚಾಕು-ಮಚ್ಚುಗಳಿಂದ ಇರಿದ ದುಷ್ಕರ್ಮಿಗಳು! 50 ಕುರಿಗಳ ಪೈಕಿ 5 ಸಾವು, 18 ಕುರಿಗಳ ಸ್ಥಿತಿ ಗಂಭೀರ!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಹಳ್ಳಿಯಲ್ಲಿ ಆಘಾತಕಾರಿ, ಅಮಾನವೀಯ ಘಟನೆ ನಡೆದಿದೆ, ರಾತ್ರಿ ಶೆಡ್‌ನಲ್ಲಿ ಮಲಗಿದ್ದ 50ಕ್ಕು ಹೆಚ್ಚು ಕುರಿಗಳ ಮೇಲೆ ದುಷ್ಮರ್ಮಿಗಳು ಚಾಕು ಮಚ್ಚು ದಾಳಿಸಿದ್ದಾರೆ. ಐದು ಕುರಿಗಳು ನರಳಾಡಿ ಸತ್ತಿವೆ ಉಳಿದ ಕುರಿಗಳು ಸ್ಥಿತಿ ಗಂಭೀರವಾಗಿದೆ.

Read Full Story

10:38 AM (IST) Jun 05

ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಡಿಮ್ಯಾಂಡಪ್ಪೋ ಡಿಮ್ಯಾಂಡ್, ಸಚಿವರ ಜಿದ್ದಾಜಿದ್ದಿಗೆ ಅಸಲಿ ಕಾರಣಗಳೇನು?

ಕರ್ನಾಟಕ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಸಚಿವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಖಾತೆಯು ಬೃಹತ್ ಬಜೆಟ್, ಪ್ರಮುಖ ಸಂಸ್ಥೆಗಳ ಮೇಲಿನ ನಿಯಂತ್ರಣ, ಮತ್ತು ಅಪಾರ ರಾಜಕೀಯ ಪ್ರಭಾವವನ್ನು ನೀಡುವುದರಿಂದ, ಸಚಿವರು ಇದಕ್ಕಾಗಿ ಪಟ್ಟು ಹಿಡಿಯುತ್ತಾರೆ.  

Read Full Story

10:34 AM (IST) Jun 05

ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಮತ್ತೊಂದು ಶಾಕ್, ಸಾಮೂಹಿಕ ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರು

ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಸಾಮೂಹಿಕ ರಾಜೀನಾಮೆಗೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದಾರೆ. ಸರ್ಕಾರ ರಚನೆಯಾದ ಕೆಲವೇ ದಿನಕ್ಕೆ ಕೋಲಾಹಲ ತೀವ್ರಗೊಂಡಿದೆ.

Read Full Story

10:07 AM (IST) Jun 05

ಖಾತೆ ಅಲ್ಲ ತೀವ್ರ ನೋವು, ಸಚಿವ ಸ್ಥಾನಕ್ಕೆ ರಾಜೀನಾಮೆ ಹಿಂದಿನ ಕಾರಣ ಬಹಿರಂಗಪಡಿಸಿದ ರಾಮಲಿಂಗಾ ರೆಡ್ಡಿ

ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಮೊದಲ ವಿಕೆಟ್ ಪತನಗೊಂಡಿದೆ. ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆಗೆ ಖಾತೆ ಕಾರವಲ್ಲ, ನೋವು ಎಂದಿದ್ದಾರೆ.

Read Full Story

09:55 AM (IST) Jun 05

'ನನಗೆ ಪಕ್ಷ ಜವಾಬ್ದಾರಿ ನೀಡಿದೆ' ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಮಹತ್ವದ ಹೇಳಿಕೆ!

ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಸಚಿವರು, ರಾತ್ರೋರಾತ್ರಿ ಬದಲಾವಣೆ ಅಸಾಧ್ಯವೆಂದರೂ, ಕಠಿಣ ಕ್ರಮಗಳ ಮೂಲಕ ಸುಧಾರಣೆ ತರುವ ಭರವಸೆ ನೀಡಿದ್ದಾರೆ. ಇದೇ ವೇಳೆ, ಸಚಿವ ರಾಮಲಿಂಗಾ ರೆಡ್ಡಿ ಅವರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿ, ಸಹಕಾರ ಕೋರುವುದಾಗಿ ತಿಳಿಸಿದ್ದಾರೆ.
Read Full Story

09:42 AM (IST) Jun 05

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಮಲಿಂಗಾ ರೆಡ್ಡಿ, ಖಾತೆ ಹಂಚಿಕೆ ಬೆನ್ನಲ್ಲೇ ಹೊಸ ಸರ್ಕಾರದಲ್ಲಿ ತಳಮಳ

ತೀವ್ರ ಬೇಸರಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನನಗೆ ಕೊಡ್ತೇನೆ ಎಂದು ಕಿತ್ತುಕೊಂಡಿದ್ದಾರೆ. ಇದು ನನಗೆ ತೀವ್ರ ಬೇಸರ ತರಿಸಿದೆ. ಯಾವುದೇ ಮಾತುಕತೆಗೆ ನಾನು ಮಣಿಯುವುದಿಲ್ಲ ಎಂದಿದ್ದಾರೆ.

 

Read Full Story

09:28 AM (IST) Jun 05

ಮನವೊಲಿಕೆ ಪ್ರಯತ್ನಕ್ಕೆ ಹಿನ್ನಡೆ, ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಸಚಿವ ರಾಮಲಿಂಗಾ ರೆಡ್ಡಿ

ಮುನಿಸಿಕೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ಪಟ್ಟು ಬಿಗಿಗೊಳಿಸಿದ್ದಾರೆ. ಯಾವುದೇ ಮನ ಒಲಿಕೆಗೆ ರಾಮಲಿಂಗಾ ರೆಡ್ಡಿ ಜಗ್ಗಿಲ್ಲ. ಇದೀಗ ರಾಜೀನಾಮೆ ಪತ್ರಕ್ಕೆ ಅಧಿಕೃತ ಸಹಿ ಮಾಡಿದ್ದಾರೆ. ಇದೇ ವೇಳೆ ನಾನು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.

Read Full Story

08:59 AM (IST) Jun 05

ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಮುನಿಸು, ಇಂದು ರಾಜೀನಾಮೆ ಸಲ್ಲಿಕೆ ಸಾಧ್ಯತೆ

ಸಚಿವ ರಾಮಲಿಂಗಾ ರೆಡ್ಡಿ ತಮಗೆ ನೀಡಿರುವ ಜಲಸಂಪನ್ಮೂಲ ಖಾತೆಯಿಂದ ಮುನಿಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪರಿಣಾಮ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

Read Full Story

08:40 AM (IST) Jun 05

ವಿದೇಶಿ ಶಂಕಿತ ಉಗ್ರರ ಜೊತೆ ನಿರಂತರ ಚಾಟ್ ಬಹಿರಂಗ, ತುಮಕೂರಿನ ಅಲ್ಲಾ ಬಕ್ಷು ಅರೆಸ್ಟ್

ವಿದೇಶಿ ಶಂಕಿತ ಉಗ್ರರ ಜೊತೆ ನಿರಂತರ ಸಂಪರ್ಕದಲ್ಲಿದ್ದ ತುಮಕೂರಿನ 24ರ ಹರೆಯದ ಯುವಕ ಅಲ್ಲಾ ಬಕ್ಷುವನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಚಾಟ್‌ಗಳು, ಉಗ್ರರ ಚಟುವಟಿಕೆ ಕುರಿತು ಚಾಟ್ ಮಾಡಿರುವುದು ಬಯಲಾಗಿದೆ.

 

Read Full Story

07:54 AM (IST) Jun 05

ಡಿವೋರ್ಸ್ ಹೋರಾಟ ಗೆದ್ದ ಭಾರತದ ಮಹಿಳೆಗೆ ಬರೋಬ್ಬರಿ 85 ಕೋಟಿ ರೂಪಾಯಿ ಜೀವನಾಂಶ

ಕಳೆದ 2 ದಶಕಗಳಿಂದ ನಡೆಸುತ್ತಿದ್ದ ಡಿವೋರ್ಸ್ ಹೋರಾಟದಲ್ಲಿ ಕೊನೆಗೂ ಭಾರತೀಯ ಮಹಿಳೆ ಗೆದ್ದಿದ್ದಾರೆ. ಪರಿಣಾಮ ಇದೀಗ ಜೀವನಾಂಶವಾಗಿ ಬರೋಬ್ಬರಿ 85 ಕೋಟಿ ರೂಪಾಯಿ ಪಡೆದಿದ್ದಾರೆ. ಆರಂಭದಲ್ಲಿ ಕೋರ್ಟ್ 3.5 ಕೋಟಿ ರೂ ಪಡೆದಿದ್ದರು. ಏನಿದು ಪ್ರಕರಣ?

Read Full Story

07:50 AM (IST) Jun 05

Karnataka Politics - ಹೊಸ ಸರ್ಕಾರ ರಚನೆ ಬೆನ್ನಲ್ಲೇ ಡಿಕೆ-ಬಿಕೆ ಬಗ್ಗೆ ರಾಜಣ್ಣ ಹೇಳಿಕೆ ವೈರಲ್!

ಮಾಜಿ ಸಚಿವ ಕೆ.ಎನ್‌. ರಾಜಣ್ಣ ಅವರ ಪ್ರಕಾರ, ಕಾಂಗ್ರೆಸ್ ಪಕ್ಷದ ಶಕ್ತಿ ಅಹಿಂದ ವರ್ಗಗಳಲ್ಲಿದ್ದು, ಅವರ ವಿಶ್ವಾಸ ಗಳಿಸುವುದರ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ. ಮುಖ್ಯಮಂತ್ರಿ ಆಯ್ಕೆ ಮತ್ತು ಬಿ.ಕೆ. ಹರಿಪ್ರಸಾದ್ ನೇಮಕದ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Read Full Story

07:07 AM (IST) Jun 05

ಗರ್ಭಿಣಿ ನೆಲದ ಕುಳಿತಿರುವುದು ಕಂಡು ಗರಂ ಆದ ಖಾದರ್

ಜಯನಗರ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ವೇಳೆ ಆರೋಗ್ಯ ಸಚಿವ ಯುಟಿ ಖಾದರ್, ವೈದ್ಯಾಧಿಕಾರಿಗಳು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗರ್ಭಿಣಿಯೊಬ್ಬರು ನೆಲದ ಮೇಲೆ ಕುಳಿತಿರುವುದು ಕಂಡಿದ್ದಾರೆ. ಸ್ಥಳದಲ್ಲೆ ಸಿಬ್ಬಂದಿಗಳನ್ನು, ವೈದ್ಯರನ್ನು ಪ್ರಶ್ನಿಸಿದ್ದಾರೆ.


More Trending News