MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕೋಲಾರ: ಮಲಗಿದ್ದ ಕುರಿಗಳ ಮೇಲೆ ಚಾಕು-ಮಚ್ಚುಗಳಿಂದ ಇರಿದ ದುಷ್ಕರ್ಮಿಗಳು! 50 ಕುರಿಗಳ ಪೈಕಿ 5 ಸಾವು, 18 ಕುರಿಗಳ ಸ್ಥಿತಿ ಗಂಭೀರ!

ಕೋಲಾರ: ಮಲಗಿದ್ದ ಕುರಿಗಳ ಮೇಲೆ ಚಾಕು-ಮಚ್ಚುಗಳಿಂದ ಇರಿದ ದುಷ್ಕರ್ಮಿಗಳು! 50 ಕುರಿಗಳ ಪೈಕಿ 5 ಸಾವು, 18 ಕುರಿಗಳ ಸ್ಥಿತಿ ಗಂಭೀರ!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಹಳ್ಳಿಯಲ್ಲಿ ಆಘಾತಕಾರಿ, ಅಮಾನವೀಯ ಘಟನೆ ನಡೆದಿದೆ, ರಾತ್ರಿ ಶೆಡ್‌ನಲ್ಲಿ ಮಲಗಿದ್ದ 50ಕ್ಕು ಹೆಚ್ಚು ಕುರಿಗಳ ಮೇಲೆ ದುಷ್ಮರ್ಮಿಗಳು ಚಾಕು ಮಚ್ಚು ದಾಳಿಸಿದ್ದಾರೆ. ಐದು ಕುರಿಗಳು ನರಳಾಡಿ ಸತ್ತಿವೆ ಉಳಿದ ಕುರಿಗಳು ಸ್ಥಿತಿ ಗಂಭೀರವಾಗಿದೆ.

1 Min read
Author : Ravi Janekal
Published : Jun 05 2026, 10:44 AM IST
Share this Photo Gallery
  • FB
  • TW
  • Linkdin
  • Whatsapp
15
ರಾತ್ರೋ ರಾತ್ರಿ ಕುರಿಗಳ ಮೇಲೆ ಮನಬಂದಂತೆ ಇರಿದ ಕಿಡಿಗೇಡಿಗಳು!
Image Credit : Asianet News

ರಾತ್ರೋ ರಾತ್ರಿ ಕುರಿಗಳ ಮೇಲೆ ಮನಬಂದಂತೆ ಇರಿದ ಕಿಡಿಗೇಡಿಗಳು!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಹಳ್ಳಿಯಲ್ಲಿ ಆಘಾತಕಾರಿ, ಅಮಾನವೀಯ ಘಟನೆ ನಡೆದಿದೆ. ರಾತ್ರಿ ಶೆಡ್ ನಲ್ಲಿ ಮಲಗಿದ್ದ ಕುರಿಗಳ ಮೇಲೆ ಕಿಡಿಗಳು ಚಾಕು ಚೂರಿಗಳಿಂದ ಭೀಕರವಾಗಿ ದಾಳಿ ನಡೆಸಿ ವಿಕೃತಿ ಮರೆದಿದ್ದಾರೆ. ಘಟನೆ ದೃಶ್ಯಗಳು ನೋಡಿದರೆ ಎಂಥವರಿಗೂ ಎದೆ ನಡುಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕೋಲಾರ: 50 ಕುರಿಗಳ ಪೈಕಿ 18 ಕುರಿಗಳ ಮೇಲೆ ದಾಳಿ, 5 ನರಳಾಡಿ ಸಾವು
Image Credit : Asianet News

ಕೋಲಾರ: 50 ಕುರಿಗಳ ಪೈಕಿ 18 ಕುರಿಗಳ ಮೇಲೆ ದಾಳಿ, 5 ನರಳಾಡಿ ಸಾವು

ದೊಡ್ಡತಿಮ್ಮರಾಯಪ್ಪ ಎಂಬ ಬಡರೈತನಿಗೆ ಸೇರಿದ್ದ ಕುರಿಗಳು. ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದ ಬಡಪಾಯಿ. ಸುಮಾರು 50 ಕುರಿಗಳ ಸಾಕಿದ್ದ ಅವಳಿಗೆ ಹೆಂಚಿನ ಮನೆಯ ಶೆಡ್ ಕಟ್ಟಿದ್ದ. ರಾತ್ರಿ ಆ ಸೆಡ್ ನಲ್ಲಿ ಮಲಗಿದ್ದ ಕುರಿಗಳ ಮೇಲೆ ಕಿಡಿಗೇಡಿಗಳು ಚಾಕು ಚೂರಿಯಿಂದ ರಾತ್ರಿ ದಾಳಿ ನಡೆಸಿದ್ದಾರೆ. ಕುರಿಗಳ ಮೇಲೆ ಮನಬಂದಂತೆ ಇರಿದ್ದಾರೆ. ದಾಳಿಗೊಳಗಾದ ಪೈಕಿ 18 ಕುರಿಗಳ ಪೈಕಿ 5 ಕುರಿಗಳು ರಾತ್ರಿ ನರಳಾಡಿ ಪ್ರಾಣ ಬಿಟ್ಟಿವೆ. ಇನ್ನು ಕೆಲವು ಕುರಿಗಳಿಗೆ ಕತ್ತು ಸೀಳಿ ಬರ್ಬರವಾಗಿ ಹಲ್ಲೆ ನಡೆಸಿದ್ದು ಸಾವಿನ ಸಂಖ್ಯೆ ಹಚ್ಚುವ ಸಾದ್ಯತೆ ಇದೆ. ಈ ದೃಶ್ಯ ಗ್ರಾಮಸ್ಥರನ್ನೇ ಬೆಚ್ಚಿಬಿಳಿಸಿದೆ.

Related Articles

Related image1
ಕೋಲಾರ, ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆಗಳ ನೀರಿನ ದಾಹ ನೀಗಿಸಿ: ಹೊಸ ಸಿಎಂಗೆ ಬಸವರಾಜ ಬೊಮ್ಮಾಯಿ ಆಗ್ರಹ
Related image2
ಕೋಲಾರ ಶಾಕಿಂಗ್: ಕಮೀಷನ್ ಆಸೆಗೆ ಲೀವ್ ಇನ್ ಟುಗೆದರ್‌ ಜೋಡಿಯ ಮಗು ಮಾರಿಸಿದ ಮಧ್ಯವರ್ತಿ, 5 ಲಕ್ಷಕ್ಕೆ ಮಾರಾಟ!
35
ಕೋಲಾರ, ಕುರಿಗಳ ಮೇಲೆ ಅಮಾನವೀಯ ದಾಳಿ, ಬಡ ರೈತ ಕಣ್ಣೀರು
Image Credit : Asianet News

ಕೋಲಾರ, ಕುರಿಗಳ ಮೇಲೆ ಅಮಾನವೀಯ ದಾಳಿ, ಬಡ ರೈತ ಕಣ್ಣೀರು

ದುಷ್ಕರ್ಮಿಗಳು ತಡರಾತ್ರಿ ದಾಳಿ ನಡೆಸಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಹೀಗಾಗಿ ರಾತ್ರಿಯೆಲ್ಲ ಕುರಿಗಳು ತೀವ್ರ ರಕ್ತಸ್ರಾವವಾಗಿ ನರಳಾಡಿವೆ. ಬೆಳಗ್ಗೆ ಎಂದಿನಂತೆ ಮಾಲೀಕ ಕೊಟ್ಟಿಗೆಗೆ ಬಂದಾಗ ರಕ್ತಸಿಕ್ತವಾಗಿ ಬಿದ್ದಿದ್ದ ಭೀಕರ ದೃಶ್ಯ ಕಂಡು ಮಾಲೀಕ ಆಘಾತಕ್ಕೊಳಗಾಗಿದ್ದಾರೆ. ಗಾಯಗಳಿಂದ ಬಳಲುತ್ತಿರುವ ಕುರಿಗಳು ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ರೈತನ ಕಣ್ಣುಗಳು ನೀರು ನಿರಂತರವಾಗಿ ಸುರಿಯಿತ್ತಿದೆ.

45
ಈಗಾಗಲೇ 5 ಕುರಿಗಳ ಸಾವು
Image Credit : Asianet News

ಈಗಾಗಲೇ 5 ಕುರಿಗಳ ಸಾವು

ಗಂಭೀರವಾಗಿ ಗಾಯಗೊಂಡ 18 ಕುರಿಗಳ ಪೈಕಿ ಈಗಾಗಲೇ 5 ಕುರಿಗಳು ಸಾವನ್ನಪ್ಪಿವೆ. ಉಳಿದ 13 ಕುರಿಗಳ ಸ್ಥಿತಿಯೂ ಗಂಭೀರವಾಗಿದ್ದು, ಇನ್ನಷ್ಟು ಕುರಿಗಳು ಸಾವನ್ನಪ್ಪುವ ಆತಂಕ ವ್ಯಕ್ತವಾಗಿದೆ.

55
ಕೋಲಾರ: ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
Image Credit : Asianet News

ಕೋಲಾರ: ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಘಟನಾ ಸ್ಥಳಕ್ಕೆ ಮಾಸ್ತಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಕಿಡಿಗೇಡಿಗಳು ಯಾರು ಎಂಬುದರ ಬಗ್ಗೆ ತನಿಖೆ ಆರಂಭವಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕೋಲಾರ
ಕ್ರೈಮ್ ನ್ಯೂಸ್
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಡಿಮ್ಯಾಂಡಪ್ಪೋ ಡಿಮ್ಯಾಂಡ್, ಸಚಿವರ ಜಿದ್ದಾಜಿದ್ದಿಗೆ ಅಸಲಿ ಕಾರಣಗಳೇನು?
Recommended image2
ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಮತ್ತೊಂದು ಶಾಕ್, ಸಾಮೂಹಿಕ ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರು
Recommended image3
'ನನಗೆ ಪಕ್ಷ ಜವಾಬ್ದಾರಿ ನೀಡಿದೆ' ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಮಹತ್ವದ ಹೇಳಿಕೆ!
Related Stories
Recommended image1
ಕೋಲಾರ, ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆಗಳ ನೀರಿನ ದಾಹ ನೀಗಿಸಿ: ಹೊಸ ಸಿಎಂಗೆ ಬಸವರಾಜ ಬೊಮ್ಮಾಯಿ ಆಗ್ರಹ
Recommended image2
ಕೋಲಾರ ಶಾಕಿಂಗ್: ಕಮೀಷನ್ ಆಸೆಗೆ ಲೀವ್ ಇನ್ ಟುಗೆದರ್‌ ಜೋಡಿಯ ಮಗು ಮಾರಿಸಿದ ಮಧ್ಯವರ್ತಿ, 5 ಲಕ್ಷಕ್ಕೆ ಮಾರಾಟ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved