ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಗಳನ್ನು ಹರಾಜಿಗೆ ಇರಿಸಲಾಗಿತ್ತು. ಕೊನೇ ಕ್ಷಣದಲ್ಲಿ ಹೆಸರುಗಳು ಬದಲಾಗಿ ಗೊಂದಲದ ಗೂಡಾಗಿದ್ದೇ ಇದಕ್ಕೆ ಸಾಕ್ಷಿ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಮಾಣ ವಚನ ಸಮಾರಂಭಕ್ಕೆ ಬರಲಿಲ್ಲ. ಇದರಲ್ಲೇ ಸಂಪುಟ ವಿಸ್ತರಣೆ ಹೇಗಿದೆ ಆಗಿದೆ ಎಂಬುದು ಜನರಿಗೆ ತಿಳಿದಿದೆ. ಸಚಿವ ಸ್ಥಾನ ಸಿಗದವರು ರಾಜೀನಾಮೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನ ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಆಡಳಿತ ರಾಜ್ಯವನ್ನು ಅಪಮಾನಕ್ಕೀಡು ಮಾಡುತ್ತಿದೆ. ರಾಜ್ಯದಲ್ಲಿ ತೀವ್ರ ಬರ ಇದ್ದರೂ ಸರ್ಕಾರ ಜನರ ಸಂಕಷ್ಟ ಅರಿತಿಲ್ಲ ಎಂದು ವಾಗ್ದಾಳಿ ನಡೆಸಿದರು.
11:02 PM (IST) Aug 05
10:19 PM (IST) Aug 05
ಸಂಘರ್ಷದ ನಡುವೆಯೂ, ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ತನ್ನ 60 ಸರಕು ಹಡಗುಗಳನ್ನು ಮತ್ತು 3,972 ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈ ಯಶಸ್ವಿ ಕಾರ್ಯಾಚರಣೆಯು ಭಾರತದ ಇಂಧನ ಪೂರೈಕೆ ಸರಪಳಿಯನ್ನು ಅಬಾಧಿತವಾಗಿರಿಸಿದ್ದು, ಸರ್ಕಾರದ ಸಮನ್ವಯ ಮತ್ತು ನೌಕಾಪಡೆ ಶಕ್ತಿ ಪ್ರದರ್ಶಿಸಿದೆ.
10:01 PM (IST) Aug 05
8ನೇ ತರಗತಿಯ ವಿದ್ಯಾರ್ಥಿಯೊಬ್ಬ ತಂದೆಯ ಫೋನ್‌ನಲ್ಲಿ ಅಧ್ಯಯನ ಮಾಡುವ ನೆಪದಲ್ಲಿ ರೊಬ್ಲಾಕ್ಸ್ ಗೇಮ್‌ಗೆ ₹42 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ಸಾಲ ಮತ್ತು ಶಾಲಾ ಶುಲ್ಕದ ಒತ್ತಡದಲ್ಲಿದ್ದ ಕುಟುಂಬ ಹಣ ಮರಳಿ ಪಡೆಯಲು ಸಹಾಯ ಕೋರಿದ್ದು, ಪೋಷಕರು ಉಳಿಸಿದ ಕಾರ್ಡ್ ವಿವರಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬ ಚರ್ಚೆಗೆ ಕಾರಣವಾಗಿದೆ.
09:18 PM (IST) Aug 05
08:02 PM (IST) Aug 05
ಕ್ರಾಲ್‌ನ 2025ರ ಬ್ರಾಂಡ್ ಮೌಲ್ಯಮಾಪನ ವರದಿಯು ಭಾರತದ ಸೆಲೆಬ್ರಿಟಿ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆಯನ್ನು ಬಹಿರಂಗಪಡಿಸಿದೆ. ಆ ವ್ಯಕ್ತಿ ಅಗ್ರಸ್ಥಾನಕ್ಕೇರಿದ್ದರೆ, ರಣವೀರ್ ಸಿಂಗ್ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
08:01 PM (IST) Aug 05
ಸಿಪ್ಲಾ ಔಷಧ ತಯಾರಿಕಾ ಘಟಕದ ಸಾಮರ್ಥ್ಯ ವಿಸ್ತರಣೆಗೆ 200 ಕೋಟಿ ರೂಪಾಯಿ ಹಾಗೂ ರಾಕೆಟ್ ಇಂಡಿಯಾ ಕಂಪನಿಯು ಗೋಕಾಕದಲ್ಲಿರುವ ತನ್ನ ಸ್ಥಾವರ ವಿಸ್ತರಣೆಗೆ ₹100 ಕೋಟಿ ಹೂಡಿಕೆ ಮಾಡುತ್ತಿದೆ.
07:03 PM (IST) Aug 05
05:48 PM (IST) Aug 05
ಭಾರತದಲ್ಲಿ ಅಮೆರಿಕನ್ ಟೆಸ್ಲಾ ಕಾರು ಈಗಾಗಲೇ ಮಾರಾಟ ಆರಂಭಿಸಿದೆ. ವಿಶೇಷ ಅಂದರೆ ಇದೀಗ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಟೆಸ್ಲಾ ಕಾರು ಮಾತನಾಡಲಿದೆ. 500 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರಿನ ಬೆಲೆ ಹಾಗೂ ಗ್ರೂಕ್ ಎಐ ವಿಶೇಷತೆ ಇಲ್ಲಿದೆ.
05:41 PM (IST) Aug 05
ಪ್ರಧಾನಿ ಮೋದಿ ಅವರ ವೀಡಿಯೊ ಡಿಲೀಟ್ ಸೇರಿದಂತೆ ಹಲವು ಗಂಭೀರ ಲೋಪಗಳಿಗಾಗಿ ಮೆಟಾ ಸಂಸ್ಥೆಯು ಭಾರತ ಸರ್ಕಾರದ ಮುಂದೆ ಅಧಿಕೃತವಾಗಿ ಕ್ಷಮೆಯಾಚಿಸಿದೆ. ದೇಶದ ಕಾನೂನಿಗಿಂತ ಯಾವುದೇ ಡಿಜಿಟಲ್ ವೇದಿಕೆ ದೊಡ್ಡದಲ್ಲ ಎಂದು ಎಚ್ಚರಿಸಿದ ಸರ್ಕಾರ, ಮೆಟಾಗೆ ನೀಡಲಾದ 'ಸೇಫ್ ಹಾರ್ಬರ್' ಕಾನೂನು ರಕ್ಷಣೆಯನ್ನು ರದ್ದುಗೊಳಿಸುವ ಬಗ್ಗೆಯೂ ಪ್ರಸ್ತಾಪಿಸಿದೆ.
05:40 PM (IST) Aug 05
ಬೆಂಗಳೂರಿನ ನಿಫ್ಟ್ ಹಳೆಯ ವಿದ್ಯಾರ್ಥಿ ವೈಭವ್ ಅನಂತ್ ಅವರು 'ಬ್ಯಾಂಬ್ರೂ' ಎಂಬ ಹಸಿರು ನವೋದ್ಯಮವನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಬಿದಿರು, ಕಬ್ಬಿನ ಸಿಪ್ಪೆಯಂತಹ ನೈಸರ್ಗಿಕ ವಸ್ತುಗಳಿಂದ ಪ್ಲಾಸ್ಟಿಕ್‌ಗೆ ಪರ್ಯಾಯವಾದ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಉತ್ಪನ್ನಗಳನ್ನು ತಯಾರಿಸುತ್ತಿದೆ.
05:20 PM (IST) Aug 05
ಬೆಂಗಳೂರು ಮನೆ ಬೆಲೆಗಳ ಬಗ್ಗೆ ವೈರಲ್ ಆದ X ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಮುಖ ಪ್ರದೇಶಗಳಲ್ಲಿ 2BHK ಬೆಲೆ ₹1.4–1.8 ಕೋಟಿಗೆ ಏರಿರುವುದರಿಂದ ಮಧ್ಯಮ ವರ್ಗದ ಉದ್ಯೋಗಿಗಳಿಗೆ ಮನೆ ಖರೀದಿ ಅಸಾಧ್ಯವಾಗುತ್ತಿದೆ ಎನ್ನಲಾಗಿದೆ. ಹೆಚ್ಚಿದ EMI, ಮೂಲಸೌಕರ್ಯ ಸಮಸ್ಯೆ ಮತ್ತು ರಿಯಲ್ ಎಸ್ಟೇಟ್ ಬೆಲೆ ಏರಿಕೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
05:18 PM (IST) Aug 05
ಮುಂಡಗೋಡ ತಾಲೂಕಿನಲ್ಲಿ, ಬಾಚಣಕಿ ಜಲಾಶಯದ ಬಳಿ ತಲತಲಾಂತರದಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನನ್ನು, ಯಾವುದೇ ಮುನ್ಸೂಚನೆ ನೀಡದೆ ಸಣ್ಣ ನೀರಾವರಿ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ.
04:45 PM (IST) Aug 05
ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಅಜಾಗರೂಕತೆಯಿಂದಾಗಿ ಯುವತಿಯೊಬ್ಬರು ಭೀಕರ ಅಪಘಾತಕ್ಕೀಡಾಗಿದ್ದಾರೆ. ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿರುವ ಸಂತ್ರಸ್ತೆಗೆ ಕಂಪನಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ.
04:06 PM (IST) Aug 05
2027ರ ವಿಶ್ವಕಪ್‌ಗೆ ಆ ಆಟಗಾರನ ಭವಿಷ್ಯದ ಬಗ್ಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿವೆ. ಅವರ ಇತ್ತೀಚಿನ ಶತಕ ಹಾಗೂ ನಾಯಕತ್ವದ ಯಶಸ್ಸು, ಅವರ ಸ್ಥಾನವನ್ನು ಉಳಿಸಿಕೊಳ್ಳುವ ಚರ್ಚೆಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಹಾಗಾದರೆ ಆಟಗಾರ ಯಾರು ಎನ್ನುವುದನ್ನು ನೋಡೋಣ ಬನ್ನಿ.
02:44 PM (IST) Aug 05
ವೈರಲ್ ಆಗಿರುವ 26 ವರ್ಷಗಳ ಹಿಂದಿನ ಈ ಫೋಟೋ ಸುದೀಪ್ ಅವರ ಪರಿಶ್ರಮದ ಹಾದಿಯನ್ನು ನೆನಪಿಸುವಂತಿದೆ. ಬಿಗ್ ಬಾಸ್ ಮೂಲಕ ಕಿರುತೆರೆಯನ್ನು ಆಳುತ್ತಿರುವ ಸುದೀಪ್, ಅಂದು ಸೀರಿಯಲ್ ಮೂಲಕವೇ ತಮ್ಮ ಪಯಣಕ್ಕೆ ಭದ್ರ ಬುನಾದಿ ಹಾಕಿದ್ದರು. ನಟಿ ಸಂಗೀತಾಗೆ ಬಂದಿರುವ ಕಾಮೆಂಟ್ಸ್ ಏನು ನೋಡಿ!
01:17 PM (IST) Aug 05
ಬೆಂಗಳೂರಿನ ಹೆಬ್ಬಾಳದಲ್ಲಿ ಉದ್ದೇಶಿತ ಕಿರು ಸುರಂಗ ರಸ್ತೆ ಯೋಜನೆಗಾಗಿ 893 ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿದೆ, ಇದು ಪರಿಸರವಾದಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬಿಡಿಎ ಮರಗಳನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದರೂ, ತಜ್ಞರು ಅದರ ಯಶಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
12:50 PM (IST) Aug 05
12:38 PM (IST) Aug 05
ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯು ಬರೋಬರಿ ₹117 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಬಲದಂಡೆ ಭಾಗದಲ್ಲಿ ₹87 ಕೋಟಿ ಮತ್ತು ಎಡದಂಡೆ ಭಾಗದಲ್ಲಿ ₹29 ಕೋಟಿ ಬಾಕಿ ಇದ್ದು, ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಜೆಸ್ಕಾಂ ಮತ್ತು ಹೆಸ್ಕಾಂ ಅಂತಿಮ ಎಚ್ಚರಿಕೆ.
12:34 PM (IST) Aug 05
12:10 PM (IST) Aug 05
ಮಹಾರಾಷ್ಟ್ರದ ಅಂಬೋಲಿ ಬಳಿಯ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಿವಾಸಿ ಅಯೂಬ್ ಸಯ್ಯದ್ ಎಂಬುವವರು ಕಣ್ಮರೆಯಾಗಿದ್ದಾರೆ. ರಭಸದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಅಂಬೋಲಿ ಪೊಲೀಸರು ಶೋಧ ಕಾರ್ಯ ಮುಂದುವರಿದಿದೆ.
12:07 PM (IST) Aug 05
ತಮಿಳುನಾಡಿನ ಭಾವಿ ಸೂಪರ್ ಸ್ಟಾರ್ ಅಥವಾ ಸೆನ್ಸೇಷನಲ್ ನಿರ್ದೇಶಕ ಎನ್ನಿಸಿಕೊಳ್ಳುತ್ತಿರುವ ಜೇಸನ್ ಸಂಜಯ್ ಅವರಿಗೆ ನಮ್ಮ ಕನ್ನಡ ಸಿನಿಮಾದ ಹವಾ ತಗುಲಿರುವುದು ಸ್ಯಾಂಡಲ್‌ವುಡ್ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಜೇಸನ್ ಅವರ 'ಸಿಗ್ಮಾ' ಚಿತ್ರದಲ್ಲೂ ಇದೇ ತರಹದ ಮಾಸ್ ಎಲಿಮೆಂಟ್ಸ್ ಇರಲಿದೆಯೇ ಎಂದು ಕಾದು ನೋಡಬೇಕಿದೆ!
12:03 PM (IST) Aug 05
ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಅವರು, ತಮಗೆ ಶಾಲು, ಪೇಟ, ಹಾರ-ತುರಾಯಿ ತರಬಾರದೆಂದು ಅಭಿಮಾನಿಗಳಲ್ಲಿ ಮನವಿ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
11:40 AM (IST) Aug 05
11:27 AM (IST) Aug 05
ಯಾದಗಿರಿ ಕಡೇಚೂರು ಇಂಡಸ್ಟ್ರಿಯಲ್ ಫ್ಯಾಕ್ಟರಿಯೊಂದರಲ್ಲಿ ಗ್ಯಾಸ್ ವಿಷಾನಿಲ ಸೋರಿಕೆಯಿಂದಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್‌ತಿದ್ದಾರೆ.
10:28 AM (IST) Aug 05
10:27 AM (IST) Aug 05
ಬೆಂಗಳೂರಿನ ಪೀಣ್ಯ ಠಾಣಾ ವ್ಯಾಪ್ತಿಯ ಕರಿಹೋಬನಹಳ್ಳಿಯಲ್ಲಿ ಗಣಿ ಮತ್ತು ನಂಜುಂಡ ಎಂಬ ಪುಂಡರು ಗಾಂಜಾ ಮತ್ತಿನಲ್ಲಿ ವೀಲಿಂಗ್ ಮಾಡಿ, ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸಗೊಳಿಸಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದರೂ, ದೂರು ಸ್ವೀಕರಿಸಿದ ಪೀಣ್ಯ ಪೊಲೀಸರು ಕೇವಲ ಎನ್‌ಸಿಆರ್ (NCR) ಹಾಕಿ ಕೈತೊಳೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
09:21 AM (IST) Aug 05
ಕನ್ನಡ ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ತಮ್ಮ ಕೈ ಮೇಲಿರುವ ಎಂಬ ಹಚ್ಚೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜನ್ಮ ಕೊಟ್ಟಿದ್ದು ತಂದೆ-ತಾಯಿ, ಆದರೆ ಬದುಕು ಕೊಟ್ಟಿದ್ದು ಕನ್ನಡ ನಾಡು ಮತ್ತು ಕನ್ನಡಿಗರು ಎಂದು ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ.
08:52 AM (IST) Aug 05
08:26 AM (IST) Aug 05
08:25 AM (IST) Aug 05
ಮುಖ್ಯಮಂತ್ರಿಗಳ ಆದೇಶದಂತೆ, ನೂತನ ಸಚಿವ ವಿಜಯಾನಂದ ಕಾಶೆಪ್ಪನವರ್ ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಮುಂದಾಗಿದ್ದಾರೆ. ಅವರು ಜಿಲ್ಲೆಯ ಇಳಕಲ್, ಹುನುಗುಂದ, ಗುಳೇದಗುಡ್ಡ ಹಾಗೂ ಬಾಗಲಕೋಟೆ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿನ ಬೆಳೆ ಹಾನಿಯನ್ನು ವೀಕ್ಷಣೆ
08:10 AM (IST) Aug 05
07:57 AM (IST) Aug 05
ರಾಜ್ಯದಲ್ಲಿನ ಅನಾವೃಷ್ಟಿ ಮತ್ತು ಅತಿವೃಷ್ಟಿ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 31 ಜಿಲ್ಲೆಗಳಿಗೂ ಸಚಿವರನ್ನು ನೇಮಿಸಿದ್ದಾರೆ. ಈ ಸಚಿವರು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಗತಿ ಅರಿತು ಡಿಸಿಎಂಗೆ ವರದಿ ಸಲ್ಲಿಸಲಿದ್ದಾರೆ.
07:55 AM (IST) Aug 05
07:43 AM (IST) Aug 05
07:33 AM (IST) Aug 05
07:11 AM (IST) Aug 05
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ, ಬುಲೆಟ್ ಬೈಕ್‌ನಲ್ಲಿ ಹೊರಟಿದ್ದ ಭೂಮಾನಂದ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಗಬ್ಬೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ.