ಮುಖ್ಯಮಂತ್ರಿಗಳ ಆದೇಶದಂತೆ, ನೂತನ ಸಚಿವ ವಿಜಯಾನಂದ ಕಾಶೆಪ್ಪನವರ್ ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಮುಂದಾಗಿದ್ದಾರೆ. ಅವರು ಜಿಲ್ಲೆಯ ಇಳಕಲ್, ಹುನುಗುಂದ, ಗುಳೇದಗುಡ್ಡ ಹಾಗೂ ಬಾಗಲಕೋಟೆ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿನ ಬೆಳೆ ಹಾನಿಯನ್ನು ವೀಕ್ಷಣೆ

ಬಾಗಲಕೋಟೆ (ಆ.5): ರಾಜ್ಯದ ಅನಾವೃಷ್ಟಿ ಮತ್ತು ಅತಿವೃಷ್ಟಿ ಪರಿಸ್ಥಿತಿ ಅಧ್ಯಯನ ನಡೆಸಿ ವರದಿ ನೀಡಲು ಎಲ್ಲ 31 ಜಿಲ್ಲೆಗಳಿಗೂ ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆದೇಶಿಸಿದ ಬೆನ್ನಲ್ಲೇ ಬಾಗಲಕೋಟೆಯ ಬರ ವೀಕ್ಷಣೆಗೆ ಸಚಿವ ವಿಜಯಾನಂದ ಕಾಶೆಪ್ಪನವರು ಮುಂದಾಗಿದ್ದಾರೆ.

ಸಚಿವರಾಗುತ್ತಿದ್ದಂತೆ ಅಖಾಡಕ್ಕಿಳಿದ ಕಾಶೆಪ್ಪನವರ್

ಸಚಿವ ವಿಜಯಾನಂದ ಕಾಶೆಪ್ಪನವರ್ ಮೊನ್ನೆಯಷ್ಟೇ ಸಚಿವ ಸ್ಥಾನದ ಪ್ರಮಾಣವಚನ ಸ್ವೀಕರಿಸಿದರು. ಇದೀಗ ಸಚಿವ ಸ್ಥಾನ ಸ್ವೀಕರಿಸಿದ ಎರಡೇ ದಿನದಲ್ಲಿ ಬರ ಅಧ್ಯಯನಕ್ಕೆ ಸಜ್ಜಾಗಿದ್ದಾರೆ. ಇಂದು ಬೆಳಗ್ಗೆ 9.30ಗಂಟೆಯಿಂದಲೇ ರೈತರ ಜಮೀನುಗಳಿಗೆ ಹೋಗಿ ಬರ ವೀಕ್ಷಣೆ ಆರಂಭಿಸಲಿದ್ದಾರೆ.

ಇದನ್ನೂ ಓದಿ: ಬರ-ಅತಿವೃಷ್ಟಿ ಅಧ್ಯಯನ: 31 ಜಿಲ್ಲೆಗಳಿಗೆ ಸಚಿವರ ನೇಮಕಗೊಳಿಸಿ ಸಿಎಂ ಆದೇಶ; ನಿಮ್ಮ ಜಿಲ್ಲೆಗೆ ಯಾವ ಸಚಿವರು?

ಬಾಗಲಕೋಟೆಯ ಬರಪೀಡಿತ ಗ್ರಾಮಗಳು

ಬಾಗಲಕೋಟೆ, ಇಳಕಲ್ ತಾಲೂಕಿನ ಹೆರೂರ, ಅಮರಾವತಿ, ಹುನುಗುಂದ ತಾಲೂಕಿನ ಹಿರೆಬಾದವಾಡಗಿ, ರಕ್ಕಸಗಿ, ಕಮತಗಿ. ಗುಳೇದಗುಡ್ಡ ತಾಲೂಕಿನ ಇಂಜಿನವಾರಿ, ಬೂದನಗಡ, ಬಾಗಲಕೋಟೆ ತಾಲೂಕಿನ ಶಿರೂರ, ಬೇವಿನಮಟ್ಟಿ ಗ್ರಾಮಗಳುಲ್ಲಿ ಬರ ವೀಕ್ಷಣೆ ಆರಂಭಿಸಲಿದ್ದಾರೆ. ಸಚಿವರೊಂದಿಗೆ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಾಥ್ ನೀಡಲಿದ್ದಾರೆ.