ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳ ಧೋರಣೆ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸತತ ಮೂರು ದಿನಗಳ ಕಾಲ 42 ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಮುಖಾಮುಖಿ ಚರ್ಚಿಸಿ ಅಹವಾಲು ಆಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

11:38 PM (IST) Jun 30
ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್‌ಸ್ಟರ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಡೀಲರ್ ಬಳಿ ತಲುಪಿರುವ ಈ ಕಾರಿನ ಬೆಲೆ ಎಷ್ಟು?
11:09 PM (IST) Jun 30
ಮಲೆ ಮಹದೇಶ್ವರದಲ್ಲಿ ಹಸುವಿನ ಮೇಲೆ ದಾಳಿ ದ್ವೇಷಕ್ಕೆ ಮರಿ ಹಾಗೂ ತಾಯಿ ಹುಲಿ ಸೇರಿದಂತೆ ಐದು ಹುಲಿಗಳಿಗೆವ ವಿಷ ಹಾಕಿ ಕೊಂದ ಪ್ರಕರಣ ಕೋಲಾಹಲ ಸೃಷ್ಟಿಸಿದೆ. 25-30 ವರ್ಷದ ಹಿಂದೆ ಇದೇ ಪರಿಸ್ಥಿತಿ ಬಂಡಿಪುರದಲ್ಲೂ ಇತ್ತು. ಆದರೆ ಅಲ್ಲೀಗ ಈ ವಿಷದ ಮನಸ್ಥಿತಿ ಇಲ್ಲ. ಇದಕ್ಕೆ ಕಾರಣ ಚಿತ್ರಕಲಾವಿದೆ ಸುನೀತಾ.
10:39 PM (IST) Jun 30
ಮಂಗಳೂರಿನಲ್ಲಿ ನಡೆದ ಸರಣಿ ಹ-ತ್ಯೆ ಪ್ರಕರಣಗಳ ತನಿಖೆ ತೀವ್ರಗೊಂಡಿದೆ. ಸುಹಾಸ್ ಶೆಟ್ಟಿ ಹ-ತ್ಯೆ ಬಳಿಕ ನಡೆದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ಮತ್ತೊರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
09:41 PM (IST) Jun 30
ಹಾಲಿನ ದರ ಏರಿಕೆ ಸೇರಿದಂತೆ ಕರ್ನಾಟಕದ ಸಾಲು ಸಾಲು ಬೆಲೆ ಏರಿಕೆಯಾಗುತ್ತಿದೆ. ಇದೀಗ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಶೀಘ್ರದಲ್ಲೇ ಬೆಂಗಳೂರು ಆಟೋ ದರ ಏರಿಕೆಯಾಗುತ್ತಿದೆ.
08:57 PM (IST) Jun 30
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಪಂದ್ಯ ನಡೆಸುವುದು ಕಷ್ಟವಾಗಲಿದೆ. ಆರ್‌ಸಿಬಿ ಕಾಲ್ತುಳಿತ ಪ್ರಕರಣದಿಂದ ಇದೀಗ ಕ್ರೀಡಾಂಗಣಕ್ಕೀ ಶಾಕ್ ಎದುರಾಗಿದೆ. ಅಗ್ನಿಶಾಮಕ ದಳ ಸೂಚನೆಯಂತೆ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
07:45 PM (IST) Jun 30
ಭಾರತದ ಟಾಪ್ ಆಹಾರ ಉತ್ಪನ್ನ ಬ್ರ್ಯಾಂಡ್ ಯಾವುದು? ಈ ಪ್ರಶ್ನೆಗೆ ಸರ್ವೇ ಉತ್ತರ ನೀಡಿದೆ. ವಿಶೇಷ ಅಂದರೆ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ಕರ್ನಾಟಕದ ನಂದಿನಿ 4ನೇ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಟಾಪ್ 5 ಪಟ್ಟಿಯಲ್ಲಿ ಯಾರಿದ್ದಾರೆ.
07:40 PM (IST) Jun 30
07:32 PM (IST) Jun 30
07:00 PM (IST) Jun 30
ಬಿಜೆಪಿಯಲ್ಲಿ ಇದೀಗ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಅಂತಿಮ ಹಂತ ತಲುಪಿದೆ. ಆದರೆ ಘೋಷಣೆಗೂ ಮೊದಲೇ ಬಿಜೆಪಿಗೆ ಶಾಕ್ ಎದುರಾಗಿದೆ. ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆ ಬೆನ್ನಲ್ಲೇ ಪ್ರಮುಖ ನಾಯಕ, ಶಾಸಕ ಟಿ ರಾಜ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
06:56 PM (IST) Jun 30
ಮಕ್ಕಳ ಬೆಳವಣಿಗೆಯಲ್ಲಿ ಪೌಷ್ಠಿಕಾಂಶ, ಹಾರ್ಮೋನುಗಳು, ದೈಹಿಕ ಚಟುವಟಿಕೆ ಮತ್ತು ನಿದ್ರೆ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಬೆಳವಣಿಗೆ ಕುಂಠಿತವಾಗುವುದಕ್ಕೆ ಕಾರಣ ಏನು ಎಂದು ಈಗ ನೋಡೋಣ.
06:52 PM (IST) Jun 30
ಪ್ರತಿದಿನ ಕೇವಲ ಮೂರು ಸಣ್ಣ ಅಭ್ಯಾಸಗಳಿಂದ ಸಕ್ಕರೆ ಕಂಟ್ರೋಲ್ ಸಾಧ್ಯ. 10-10-10 ಫಾರ್ಮುಲಾ ರಕ್ತದಲ್ಲಿ ಸಕ್ಕರೆ ಮಟ್ಟನ ಸಮತೋಲನ ಮಾಡುತ್ತದೆ.
06:36 PM (IST) Jun 30
ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಟಿಎಂಸಿ ಮಹಿಳಾ ನಾಯಕಿ ಬೇಬಿ ಕೋಲಿ, ಸಿಪಿಐಎಂ ಹಿರಿಯ ನಾಯಕ ಅನಿಲ್ ದಾಸ್ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ.
06:28 PM (IST) Jun 30
06:11 PM (IST) Jun 30
ಆರ್‌ಎಸ್‌ಎಸ್ ಸಂಘಟನೆಯನ್ನು ಎರಡು ಬಾರಿ ಬ್ಯಾನ್ ಮಾಡಿದ್ದೆವು. ಕೈಕಾಲು ಹಿಡಿದು ವಾಪಸ್ ಬಂದರು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಬ್ಯಾನ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯುವ RSS ಆಗ್ರಹವನ್ನು ಖಂಡಿಸಿದರು
06:05 PM (IST) Jun 30
ಟೀಚರ್ ಕೈಯಿಂದ ತಪ್ಪಿಸಿಕೊಂಡು ನನಗೆ ಶಾಲೆ ಬೇಡ ಎಂದು ಓಡಲು ಆರಂಭಿಸಿದ ಮುದ್ದು ಬಾಲಕನ ಟೀಚರ್ ಬೆನ್ನಟ್ಟಿದ ಘಟನೆ ನಡೆದಿದೆ. ಏನು ಕೊಟ್ಟರೂ ಸಮಾಧಾನವಾಗದ ಈ ಬಾಲಕನ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
05:44 PM (IST) Jun 30
ಬೆಂಗಳೂರಿನಲ್ಲಿ ಮನೆಮಾಲೀಕರೊಬ್ಬರು ಬಾಡಿಗೆದಾರರ ಠೇವಣಿಯಿಂದ ₹60,000ಕ್ಕೂ ಹೆಚ್ಚು ಹಣವನ್ನು ಕಡಿತಗೊಳಿಸಿರುವ ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೇಯಿಂಟಿಂಗ್, ದಲ್ಲಾಳಿ ಶುಲ್ಕ, ತುಕ್ಕು ಹಿಡಿದ ಅಡುಗೆಮನೆ ರ್ಯಾಕ್‌ನಂತಹ ಕಾರಣ ನೀಡಿ ಠೇವಣಿ ಕಡಿತಗೊಳಿಸಲಾಗಿದೆ.
05:30 PM (IST) Jun 30
05:17 PM (IST) Jun 30
ಪ್ರತಿ ದಿನ ಇನ್‌ಸ್ಟಾಂಟ್ ಕಾಫಿ ಕುಡಿಯುವ ಅಭ್ಯಾಸವಿದೆಯಾ? ಹೊಸ ಅಧ್ಯಯನ ವರದಿ ಪ್ರಕಾರ, ಇನ್‌ಸ್ಟಾಂಟ್ ಕಾಫಿಯಿಂದ ದೃಷ್ಟಿದೋಷ ಸಾಧ್ಯತೆ ಇದೆ ಎಂದಿದೆ. ಹಾಗಾದಾರೆ ಯಾವ ಕಾಫಿ ಕುಡಿಯಬಹುದು?
05:17 PM (IST) Jun 30
ಇದೀಗ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಚಾನೆಲ್ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಮುಂಬರುವ ಸೀಸನ್ 12 ಹೋಸ್ಟ್ ಮಾಡಲಿರುವ ಕಿಚ್ಚ ಸುದೀಪ್ ಅವರು ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ.
05:16 PM (IST) Jun 30
05:10 PM (IST) Jun 30
ಅರೆ ಇದೇನಪ್ಪ.... ಇಲ್ಲಿದ್ದ ಕೆರೆ ಎಲ್ಲೋಯ್ತು...? ಇಲ್ಲಿ ಕೆರೆ ಮಾಯವಾಗಿ ನೇರಳೆ ಬೆಡಗಿ ಬಂದಿದ್ದು ಹೇಗೆ ಎಂಬುದು ಈಗ ಇಲ್ಲಿನ ಸ್ಥಳೀಯರ ಪ್ರಶ್ನೆ ಜೊತೆಗೆ ಈ ಪ್ರದೇಶ ಈಗ ಎಲ್ಲರ ಫೇವರೇಟ್ ಹಾಟ್ ಸ್ಪಾಟ್ ಆಗಿದೆ ಅದೆಲ್ಲಿ ಅಂತ ನೋಡೋಣ ಬನ್ನಿ
04:44 PM (IST) Jun 30
04:09 PM (IST) Jun 30
ನಟಿ ಶೆಫಾಲಿ ಜರಿವಾಲ ದಿಢೀರ್ ಕುಸಿದು ಬಿದ್ದು ಮೃತಪಟ್ಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಹೃದಯಾಘಾತ, ಡಯೆಟ್, ಸೌಂದರ್ಯ ವರ್ಧಕ ಔಷಧಿ ಸೇರಿದಂತೆ ಸಾವಿಗೆಹಲವು ಕಾರಣಗಳು ಕೇಳಿಬಂದಿತ್ತು. ಇದೀಗ ಪೊಲೀಸರು ವೈದ್ಯರು ಹೇಳಿದ ಸಾವಿನ ಕಾರಣ ಬಹಿರಂಗಪಡಿಸಿದ್ದಾರೆ.
04:07 PM (IST) Jun 30
ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಸರ್ಕಾರದ ನಿರ್ಧಾರಕ್ಕೆ ಆನ್‌ಲೈನ್‌ನಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಬಳಕೆದಾರರು ಈ ನಡೆಯನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಂದ ಪ್ರೇರಿತವಾದ ರಾಜಕೀಯ ಪ್ರೇರಿತ ಮರುಬ್ರ್ಯಾಂಡಿಂಗ್ ಎಂದು ಟೀಕಿಸಿದ್ದಾರೆ.
03:50 PM (IST) Jun 30
ಭಾರಿ ಮಳೆ, ದಿಢೀರ್ ಪ್ರವಾಹ ಪರಿಸ್ಥಿತಿ ಸುಂದರ ಪ್ರವಾಸವನ್ನು ದುರಂತ ಮಾಡುವ ಸಾಧ್ಯತೆ ಹೆಚ್ಚು.ಹೀಗೆ ಜಲಪಾತ ವೀಕ್ಷಿಸಲು ತೆರಳಿದ್ದ 6 ಯುವತಿರು ಏಕಾಏಕಿ ಹೆಚ್ಚಾದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜಲಪಾತದ ಅಂಚಿನಿಂದ ಯುವತಿಯರ ರಕ್ಷಿಸಲಾಗಿದೆ. ವಿಡಿಯೋ ಇಲ್ಲಿದೆ.
03:34 PM (IST) Jun 30
03:31 PM (IST) Jun 30
03:00 PM (IST) Jun 30
ಪೆಟ್ರೋಲ್ ಅಥವಾ ಡೀಸೆಲ್ ವಾಹನವೇ ಆಗಿರಲಿ, ಆದರೆ EOL ಆಗಿದ್ದರೆ ಅಂತಹ ವಾಹನಗಳಿಗೆ ಇಂಧನ ಸಿಗುವುದಿಲ್ಲ. ರಾಜಧಾನಿ ವ್ಯಾಪ್ತಿಯ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಸಿಗುವುದಿಲ್ಲ. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿದರೆ 5 ರಿಂದ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ.
02:56 PM (IST) Jun 30
ಅನಾರೋಗ್ಯಪೀಡಿತ ತಾಯಿ ಮತ್ತು ಮಗನ ಆರೈಕೆಗಾಗಿ ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
02:44 PM (IST) Jun 30
02:41 PM (IST) Jun 30
ಬೆಂಗಳೂರು ನಿವಾಸಿಯೊಬ್ಬರು ತಮ್ಮ ಬೆಳಗಿನ ಜಾವದ ಪ್ರಯಾಣದಲ್ಲಿ ಎದುರಿಸಿದ ಎರಡು ಆತಂಕಕಾರಿ ಘಟನೆಗಳನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಮುಂಜಾನೆ ಟ್ರಾಫಿಕ್ ಜಾಮ್ ಮತ್ತು ರಸ್ತೆ ಅಪಘಾತದಿಂದಾಗಿ ನಗರದ ಮೂಲಸೌಕರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.
02:24 PM (IST) Jun 30
ಫಿಫಾ ಕ್ಲಬ್ ವಿಶ್ವಕಪ್‌ನಲ್ಲಿ ಇಂಟರ್ ಮಿಯಾಮಿ ಸೋಲಿನ ಬೆನ್ನಲ್ಲೇ ಮೆಸ್ಸಿ ಆಟದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಝ್ಲಾಟನ್ ಇಬ್ರಾಹಿಮೊವಿಕ್, ಮೆಸ್ಸಿ ತಂಡದ ಸದಸ್ಯರೊಂದಿಗೆ ಅಲ್ಲ, ಪ್ರತಿಮೆಗಳೊಂದಿಗೆ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.
02:19 PM (IST) Jun 30
02:10 PM (IST) Jun 30
ಕಾಂಗ್ರೆಸ್‌ನಿಂದ ಹೇರಿದ ತುರ್ತುಪರಿಸ್ಥಿತಿಯು ದೇಶದ ಸ್ವಾತಂತ್ರ್ಯವನ್ನು ಕಸಿದುಕೊಂಡಿತು ಮತ್ತು ಸಂವಿಧಾನವನ್ನು ನಾಶಮಾಡಿತು ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
01:54 PM (IST) Jun 30
ಚಳ್ಳಕೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಪಕ್ಷದ ಪತನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
01:34 PM (IST) Jun 30
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ತಾಯಿ ಮತ್ತು ಮಗನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಹಾವು ಕಚ್ಚಿದ ವಿಷಯ ತಡವಾಗಿ ಗೊತ್ತಾದ್ದರಿಂದ ಚಿಕಿತ್ಸೆ ತಕ್ಷಣವೇ ದೊರೆಯದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
12:58 PM (IST) Jun 30
ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಶೋಧನಾ ಸಮಿತಿಯನ್ನು ರಚಿಸಲಾಗಿದೆ ಮತ್ತು ಹೊಸ ಕಾರ್ಯನಿರ್ವಾಹಕ ನಿರ್ದೇಶಕರನ್ನು ನೇಮಿಸಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
12:55 PM (IST) Jun 30
12:48 PM (IST) Jun 30
ಹಾಸನ ಜಿಲ್ಲೆಯಲ್ಲಿ ಕೇವಲ 40 ದಿನಗಳಲ್ಲಿ 21 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದು, ಆತಂಕ ಮೂಡಿಸಿದೆ. ಮಹಿಳೆ, ಉಪನ್ಯಾಸಕ, ಯೋಧ ಮತ್ತು ಸರ್ಕಾರಿ ನೌಕರ ಸೇರಿದಂತೆ ವಿವಿಧ ವಯೋಮಾನದವರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ.
12:46 PM (IST) Jun 30