ಬೆಂಗಳೂರು ನಿವಾಸಿಯೊಬ್ಬರು ತಮ್ಮ ಬೆಳಗಿನ ಜಾವದ ಪ್ರಯಾಣದಲ್ಲಿ ಎದುರಿಸಿದ ಎರಡು ಆತಂಕಕಾರಿ ಘಟನೆಗಳನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಮುಂಜಾನೆ ಟ್ರಾಫಿಕ್ ಜಾಮ್ ಮತ್ತು ರಸ್ತೆ ಅಪಘಾತದಿಂದಾಗಿ ನಗರದ ಮೂಲಸೌಕರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.  

ಬೆಂಗಳೂರು ನಿವಾಸಿಯೊಬ್ಬರು ಬೆಳಗಿನ ಜಾವದ ಟ್ರಾವೆಲ್ ಅನುಭವ ಮತ್ತು ಸಿಲಿಕಾನ್ ಸಿಟಿಯಲ್ಲು ಮೂಲಸೌಕರ್ಯದ ಹದಗೆಟ್ಟ ಸ್ಥಿತಿಯ ಕುರಿತು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. @Competitive-Try-6409 ಎಂಬ ಬಳಕೆದಾರ ಹೆಸರಿನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, ಅವರು ತಮ್ಮ ಪ್ರಯಾಣದ ಕೆಲವೇ ಗಂಟೆಗಳ ಅಂತರದಲ್ಲಿ ಎದುರಿಸಿದ ಎರಡು ಆತಂಕಕಾರಿ ಘಟನೆಗಳನ್ನು ವಿವರಿಸಿದ್ದಾರೆ.

ನಾನು ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದೇನೆ. ಆದರೆ ಈಗಿನ ಸ್ಥಿತಿ ಅತ್ಯಂತ ಹೀನಾಯವಾಗಿದೆ,” ಎಂದು ಅವರು ಬರೆದಿದ್ದಾರೆ. “ನಗರವು ಅಕ್ಷರಶಃ ನಕಾರಾತ್ಮಕ ಸಮಗ್ರ ಪರಿಣಾಮವನ್ನು ಎದುರಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿನ ಸಣ್ಣ ನಿರ್ಲಕ್ಷ್ಯಗಳು, ಇದೀಗ ಟಿಕ್ಕಿಂಗ್ ಟೈಮ್ ಬಾಂಬ್ ಆಗಿವೆ ಎಂದು ಬರೆದಿದ್ದಾರೆ.

ಒಂದು ಕರಾಳ ಬೆಳಗ್ಗೆ, ಎರಡು ಘಟನೆಗಳು

“ಬೆಂಗಳೂರಿನಲ್ಲಿ ಮೂಲ ಸೌಕರ್ಯ ಕುಸಿಯುತ್ತಿದೆ ಎಂಬ ಶೀರ್ಷಿಕೆ ನೀಡಿರುವ ಪೋಸ್ಟ್‌ನಲ್ಲಿ, ಬಳಕೆದಾರರು ಒಂದು ದಿನದೊಳಗಿನ ಎರಡು ಘಟನೆಗಳನ್ನು ಹಂಚಿಕೊಂಡಿದ್ದಾರೆ.

“ಟ್ರಾಫಿಕ್ ಜಾಮ್‌ ಕಾರಣದಿಂದ ಇಂದಿರಾನಗರದಿಂದ ಮಾನ್ಯತಾ ಟೆಕ್ ಪಾರ್ಕ್‌ಗೆ ಓಆರ್‌ಆರ್ ಮೂಲಕ ಪ್ರಯಾಣಿಸಲು ನನಗೆ ಎರಡು ಗಂಟೆ ಸಮಯ ಬೇಕಾಯಿತು. ಈ ಘಟನೆಯು ಮುಂಜಾನೆ 3:30ರ ಸಮಯದಲ್ಲಿ ಸಂಭವಿಸಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ರಸ್ತೆ ಖಾಲಿ ಇರುತ್ತದೆ ಎಂಬುದನ್ನು ಗಮನಿಸಿ ಎಂದು ಅವರು ಬರೆದಿದ್ದಾರೆ. ಮುಂಜಾನೆ ಸಮಯದಲ್ಲೂ ವಾಹನ ದಟ್ಟಣೆ ಎದುರಿಸಿದ ಆತಂಕವನ್ನು ಅವರು ತಮ್ಮ ಪೋಸ್ಟ್ ನಲ್ಲಿ ತೋಡಿಕೊಂಡಿದ್ದಾರೆ.

ಕೆಲವೇ ಗಂಟೆಗಳ ಬಳಿಕ ಮತ್ತೊಂದು ಘಟನೆ:

ಎಲಿಮೆಂಟ್ಸ್ ಮಾಲ್ ಮುಂದೆ ಬೀಮ್ ಕುಸಿತವಾಗಿತ್ತು. ಸಂಪೂರ್ಣ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು ಇದು ಬೆಳಿಗ್ಗೆ 5:40ರ ಸಮಯ ರಸ್ತೆಯಲ್ಲಿ ಗಾಜಿನ ತುಂಡುಗಳು ಚದರಿಕೊಂಡಿದ್ದವು. ಅವು ಕಾರಿನ ಮೇಲೆ ಬಿದ್ದಿರಬಹುದು ಎಂದು ನನಗೆ ಅನುಮಾನವಾಗಿದೆ, ಆದರೆ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಅಲ್ಲಿ ಗದ್ದಲ ಆರುವುದು ಖಚಿತ ಎಂದು ಅವರು ಬರೆದಿದ್ದಾರೆ.

ಈ ಪೋಸ್ಟ್ ಹಲವು ರೆಡ್ಡಿಟ್ ಬಳಕೆದಾರರನ್ನು ಸೆಳೆದು ಹಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ:

ತಂತ್ರಜ್ಞರು ಏನು ಮಾಡಲಿದ್ದಾರೆ? ಸಾಮೂಹಿಕ ಪ್ರತಿಭಟನೆ ಅಥವಾ ಏನಾದರೂ? ನಮಗೆ ಗೊತ್ತಿರುವುದು, ಉತ್ತಮ ಪ್ರದೇಶಗಳಲ್ಲಿ ಮೊದಲು ಅಪಾರ್ಟ್‌ಮೆಂಟ್ ಖರೀದಿಸುವುದಷ್ಟೆ.

ಮತ್ತೊಬ್ಬರು, ಬೆಂಗಳೂರಿನ ಪರಿಸ್ಥಿತಿ ಕುರಿತು ತೀಕ್ಷ್ಣವಾಗಿ ಟೀಕೆ ವ್ಯಕ್ತಪಡಿಸಿದರು:

ಇದು ಈಗಾಗಲೇ ಕುಸಿದಿದೆ. ಸರ್ಕಾರದ ಮೂರ್ಖತನದ ಕ್ರಮಗಳೊಂದಿಗೆ ಸೇರಿ, ಬೆಂಗಳೂರು ನಿಧಾನವಾಗಿ ವಾಸಯೋಗ್ಯವಲ್ಲದಂತಾಗುತ್ತಿದೆ.

ಆದರೆ ಇತರರಿಗೆ ಬೇರೆಯಾಗಿ ಅನುಭವವಾಗಿದೆ. ಇತ್ತೀಚೆಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರು ಹೀಗೆ ಹೇಳಿದ್ದಾರೆ:

ನಾನು ವಿಮಾನ ನಿಲ್ದಾಣಕ್ಕೆ ಅದೇ ಮಾರ್ಗವನ್ನು ಬಳಸಿದ್ದೆ. ಎಲ್ಲವೂ ಚೆನ್ನಾಗಿತ್ತು. ಕೆಲ ದಿನಗಳ ಹಿಂದೆ ಅಲ್ಲಿ ಕೆಲಸ ನಡೆಯುತ್ತಿದ್ದುದರಿಂದ ಕೆಲವರ ಸಂಚಾರವನ್ನು ಬೇರೆ ಕಡೆಗೆ ತಿರುಗಿಸಿದ್ದರು.

ಅಷ್ಟೇ ಅಲ್ಲದೆ, ಇನ್ನೊಬ್ಬರು ತೀವ್ರವಾಗಿ ವ್ಯಂಗ್ಯ ಚಮತ್ಕಾರ ಹೇಳಿದರು:

ಇಲ್ಲಿನ ಮೂಲಸೌಕರ್ಯವು ಕೆಲವು ಶ್ರೇಣಿ-3 ಪಟ್ಟಣಗಳಿಗಿಂತಲೂ, ಕೆಲ ಭಾರತೀಯ ಹಳ್ಳಿಗಳಿಗಿಂತಲೂ ಕೆಟ್ಟದು. ತಾಂತ್ರಿಕವಾಗಿ ಈ ಸ್ಥಳವನ್ನು ‘ನಗರ’ ಎಂದು ಕರೆಯುವುದು ಸರಿಯಲ್ಲ.

ಹೆಚ್ಚುವರಿಯಾಗಿ ಒಬ್ಬರು ಹೇಳಿದರು:

ಬೆಂಗಳೂರು ನಗರವನ್ನು ಅದರ ಮಿತಿಗಳಿಗೆ ತಳ್ಳುವುದನ್ನು ನಿಲ್ಲಿಸಿ… ಓಹ್… ಮರೆತುಹೋಯ್ತು, ನಾವು ಅದು ವರ್ಷಗಳ ಹಿಂದೆಯೇ ಮಾಡಿಬಿಟ್ಟಿದ್ದೇವೆ.