ಕೈಗೆಟುಕುವ ದರದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್‌ಸ್ಟರ್ ಶೀಘ್ರದಲ್ಲೇ ಲಾಂಚ್
ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್‌ಸ್ಟರ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಡೀಲರ್ ಬಳಿ ತಲುಪಿರುವ ಈ ಕಾರಿನ ಬೆಲೆ ಎಷ್ಟು?

JSW ಎಂಜಿ ಮೋಟಾರ್ ಇಂಡಿಯಾದ ಮುಂಬರುವ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಎಂಜಿ ಸೆಲೆಕ್ಟ್ ಡೀಲರ್‌ಶಿಪ್‌ಗಳಿಗೆ ಆಗಮಿಸಿದೆ.ಕಾರು ಡೀಲರ್‌ಶಿಪ್‌ಗಳಿಗೆ ಬಂದಿರುವುದರಿಂದ ಬೆಲೆ ಶೀಘ್ರದಲ್ಲೇ ಘೋಷಣೆಯಾಗುವ ನಿರೀಕ್ಷೆಯಿದೆ. 2025 ರ ಜುಲೈನಲ್ಲಿ ರಸ್ತೆಗಿಳಿಯಲಿರುವ ಎಂಜಿ ಎಂ9 ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಭಾರತದಲ್ಲಿ ಅತ್ಯಂತ ಕೈಗೆಟುಕುವ ಸ್ಪೋರ್ಟ್ಸ್ ಕಾರಾಗಿರುವ ಎಂಜಿ ಸೈಬರ್‌ಸ್ಟರ್‌ನ ಬೆಲೆ ಸುಮಾರು 50 ರಿಂದ 60 ಲಕ್ಷ ರೂ. ಎಕ್ಸ್‌ಶೋರೂಂ ಇರಬಹುದು ಎಂದು ಅಂದಾಜಿಸಲಾಗಿದೆ. ಸೀಮಿತ ಸಂಖ್ಯೆಯಲ್ಲಿ ಸಿಬಿಯು ಮಾರ್ಗವಾಗಿ ಈ ಕಾರನ್ನು ಭಾರತಕ್ಕೆ ತರಲಾಗುತ್ತದೆ.
ಎಂಜಿ ಸೈಬರ್‌ಸ್ಟರ್ 77 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಎರಡು ಆಯಿಲ್-ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಪ್ರತಿ ಆಕ್ಸಲ್‌ನಲ್ಲಿ ಅಳವಡಿಸಲಾಗಿದೆ. ಇದರ ಒಟ್ಟು ಪವರ್ ಮತ್ತು ಟಾರ್ಕ್ 510 bhp ಮತ್ತು 725Nm. ಈ ಎರಡು-ಬಾಗಿಲಿನ ಕನ್ವರ್ಟಿಬಲ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಒಂದು ಪೂರ್ಣ ಚಾರ್ಜ್‌ನಲ್ಲಿ 580 ಕಿ.ಮೀ. (ಸಿಎಲ್‌ಟಿಸಿ) ಮೈಲೇಜ್ ನೀಡುತ್ತದೆ. ಇದು ಕೇವಲ 3.2 ಸೆಕೆಂಡ್‌ಗಳಲ್ಲಿ 0 ರಿಂದ 100 ಕಿ.ಮೀ. ವೇಗವನ್ನು ತಲುಪುತ್ತದೆ ಮತ್ತು ಗರಿಷ್ಠ 210 ಕಿ.ಮೀ./ಗಂ. ವೇಗವನ್ನು ಹೊಂದಿದೆ. ಇದು ಇಕೋ, ನಾರ್ಮಲ್, ಸ್ಪೋರ್ಟ್ ಮತ್ತು ಟ್ರ್ಯಾಕ್ (AWD ಮಾತ್ರ) ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಸೈಬರ್‌ಸ್ಟರ್ ಅದೇ 77kWh ಬ್ಯಾಟರಿಯೊಂದಿಗೆ ಲಭ್ಯವಿದ್ದು, ಹಿಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾದ ಒಂದೇ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ. ಈ ಸಂರಚನೆಯು 308 bhp ಪವರ್ ಮತ್ತು 475 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5.0 ಸೆಕೆಂಡ್‌ಗಳಲ್ಲಿ 0 ರಿಂದ 100 ಕಿ.ಮೀ./ಗಂ. ವೇಗವನ್ನು ತಲುಪುತ್ತದೆ ಮತ್ತು ಗರಿಷ್ಠ 200 ಕಿ.ಮೀ./ಗಂ. ವೇಗವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಎಸಿ ಚಾರ್ಜರ್ ಮೂಲಕ ಪೂರ್ಣವಾಗಿ ಚಾರ್ಜ್ ಮಾಡಲು 7 ಗಂಟೆಗಳು ಬೇಕಾಗುತ್ತದೆ ಮತ್ತು ಡಿಸಿ ಫಾಸ್ಟ್ ಚಾರ್ಜರ್ ಮೂಲಕ 10 ರಿಂದ 80% ಚಾರ್ಜ್ ಮಾಡಲು 35 ನಿಮಿಷಗಳು ಬೇಕಾಗುತ್ತದೆ.
ಎಸ್‌ಎಐಸಿಯ ಮಾಡ್ಯುಲರ್ ಸ್ಕೇಲೆಬಲ್ ಪ್ಲಾಟ್‌ಫಾರ್ಮ್ (ಎಂಎಸ್‌ಪಿ) ಆಧಾರದ ಮೇಲೆ ನಿರ್ಮಿಸಲಾದ ಎಂಜಿ ಸೈಬರ್‌ಸ್ಟರ್ 4,535 ಎಂಎಂ ಉದ್ದ, 1,913 ಎಂಎಂ ಅಗಲ ಮತ್ತು 1,329 ಎಂಎಂ ಎತ್ತರವಿದೆ. ಇದರ ವೀಲ್‌ಬೇಸ್ 2,690 ಎಂಎಂ. ಈ ಇವಿ 20 ಇಂಚಿನ ಅಲಾಯ್ ವೀಲ್‌ಗಳನ್ನು (AWD ಆವೃತ್ತಿ) ಹೊಂದಿದೆ. ಇದು ಮಲ್ಟಿ-ಲಿಂಕ್ ಹಿಂಭಾಗದ ಸಸ್ಪೆನ್ಷನ್ ಹೊಂದಿದೆ.