ಫಿಫಾ ಕ್ಲಬ್ ವಿಶ್ವಕಪ್‌ನಲ್ಲಿ ಇಂಟರ್ ಮಿಯಾಮಿ ಸೋಲಿನ ಬೆನ್ನಲ್ಲೇ ಮೆಸ್ಸಿ ಆಟದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಝ್ಲಾಟನ್ ಇಬ್ರಾಹಿಮೊವಿಕ್, ಮೆಸ್ಸಿ ತಂಡದ ಸದಸ್ಯರೊಂದಿಗೆ ಅಲ್ಲ, ಪ್ರತಿಮೆಗಳೊಂದಿಗೆ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಲಂಡನ್: ಲಿಯೋನೆಲ್ ಮೆಸ್ಸಿ ಫಿಫಾ ಕ್ಲಬ್ ವಿಶ್ವಕಪ್ 2025 ಟೂರ್ನಿಯಲ್ಲಿ ಇಂಟರ್ ಮಿಯಾಮಿ ತಂಡದ ಪರ ಕಣಕ್ಕಿಳಿದು ಮಾಜಿ ತಂಡ ಪ್ಯಾರಿಸ್ ಸೈಂಟ್ ಜರ್ಮೈನ್ ತಂಡದ ಎದುರು 4-0 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಮೆಸ್ಸಿ ಆಟದ ಬಗ್ಗೆ ಟೀಕೆ ಟಿಪ್ಪಣಿಗಳು ವ್ಯಕ್ತವಾಗಿವೆ.

ಲಿಯೋನೆಲ್ ಮೆಸ್ಸಿ ಮೇಜರ್ ಲೀಗ್‌ ಸಾಕರ್ ಸೇರುವ ಮುನ್ನ ಲಿಯೋನೆಲ್ ಮೆಸ್ಸಿ, ಎರಡು ಆವೃತ್ತಿಯಲ್ಲಿ ಪ್ಯಾರಿಸ್ ಸೈಂಟ್ ಜರ್ಮೈನ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಜಾವೋ ನೆವೀಸ್ ಬಾರಿದ ಎರಡು ಅದ್ಭುತ ಗೋಲುಗಳ ನೆರವಿನಿಂದ ವಿಶ್ವದ ಬಲಿಷ್ಠ ತಂಡ ಎನಿಸಿಕೊಂಡಿರುವ ಇಂಟರ್ ಮಿಯಾಮಿಗೆ 16ರ ಘಟ್ಟದ ಪಂದ್ಯದಲ್ಲಿ ಸೋಲು ಎದುರಾಗಿದೆ. ಈ ಸೋಲಿನ ಬೆನ್ನಲ್ಲೇ ಲಿಯೋನೆಲ್ ಮೆಸ್ಸಿ ಟ್ರೋಲ್‌ಗೆ ಒಳಗಾಗಿದ್ದಾರೆ. ಹಲವು ಲಿಯೋನೆಲ್ ಮೆಸ್ಸಿ ಅವರ ಹಳೆಯ ಚಾರ್ಮ್ ಮುಗಿದು ಹೋಗಿದೆ ಎಂದು ಕಾಲೆಳೆದಿದ್ದಾರೆ. ಆದರೆ ಮೆಸ್ಸಿಯ ಬಾರ್ಸಿಲೋನಾದ ಮಾಜಿ ಸಹ ಆಟಗಾರ ಝೆಲ್ಟನ್ ಇಬ್ರಾಹಿಮೊವಿಕ್ ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಪಿಎಸ್‌ಜಿ ಪಂದ್ಯವನ್ನು ನೋಡಿದಾಗ, 8 ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದಿರುವ ಅವರು ಮನುಷ್ಯರೊಂದಿಗೆ ಅಲ್ಲ, ಪ್ರತಿಮೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂಬ ಭಾವನೆ ಮೂಡಿತು ಎಂದಿದ್ದಾರೆ.

ಮೆಸ್ಸಿಯ ಸೋಲು? ಇಲ್ಲ, ಇಲ್ಲ, ಸೋಲಿನ ಬಗ್ಗೆ ಅವನ ತಪ್ಪು ಎಂದು ಮಾತನಾಡಬೇಡಿ! ಮೆಸ್ಸಿ ಸೋತಿಲ್ಲ, ಇಂಟರ್ ಮಿಯಾಮಿ ಸೋತಿತು! ನೀವು ತಂಡವನ್ನು ನೋಡಿದ್ದೀರಾ? ಮೆಸ್ಸಿ ತಂಡದ ಸದಸ್ಯರೊಂದಿಗೆ ಅಲ್ಲ, ಪ್ರತಿಮೆಗಳೊಂದಿಗೆ ಆಡುತ್ತಾನೆ! ಅವನು ನಿಜವಾದ ತಂಡದಲ್ಲಿದ್ದರೆ, ಪ್ಯಾರಿಸ್, ಮ್ಯಾಂಚೆಸ್ಟರ್, ಯಾವುದೇ ದೊಡ್ಡ ತಂಡಗಳಲ್ಲಿ, ನೀವು ನಿಜವಾದ ಸಿಂಹವನ್ನು ನೋಡುತ್ತಿದ್ದಿರಿ ಎಂದು ಝೆಲ್ಟನ್ ಇಬ್ರಾಹಿಮೊವಿಕ್ ಹೇಳಿದ್ದಾರೆ.

ಮೆಸ್ಸಿ ಆಟವನ್ನ ಪ್ರೀತಿಸೋದ್ರಿಂದ ಮಾತ್ರ ಆಡ್ತಾನೆ, ಯಾಕೆಂದರೆ ಶೇ. 99 ರಷ್ಟು ಆಟಗಾರರು ಮಾಡದ ಕೆಲಸವನ್ನು ಅವನು ಮಾಡಬಲ್ಲ! ಆದರೆ ಅವನ ಸುತ್ತ ಸಿಮೆಂಟ್ ಚೀಲಗಳನ್ನು ಹೊತ್ತುಕೊಂಡು ಓಡಾಡುವವರಿದ್ದಾರೆ ಎಂದಿದ್ದಾರೆ.

ಚೆಂಡು ಇಲ್ಲದೇ ಹೇಗೆ ಚಲಿಸಬೇಕು ಎಂದು ಅರ್ಥಮಾಡಿಕೊಳ್ಳದ ಕೋಚ್‌ಗಳಿಲ್ಲ, ಸ್ಟಾರ್‌ಗಳಿಲ್ಲ, ಆಟಗಾರರು ಇಲ್ಲ. ಅಂತಹದ್ದರಲ್ಲಿ ಮೆಸ್ಸಿಯನ್ನು ದೂಷಿಸುತ್ತೀರಾ? ರೊನಾಲ್ಡೊ ಜೊತೆ, ಎಂಬಪ್ಪೆ ಜೊತೆ, ಹಾಲೆಂಡ್ ಜೊತೆ, ಝ್ಲಾಟನ್ ಜೊತೆ ಆಡಿದಾಗ. ನಂತರ ನೀವು ಮಾತನಾಡಬಹುದು! ಆದರೆ ಈ ಮ್ಯಾಚ್‌ನ ಬಗ್ಗೆಯಲ್ಲ ಎಂದು ಹೇಳಿದ್ದಾರೆ.

ಆದರೆ ಜಾಗರೂಕರಾಗಿರಿ, ನೀವು ಅವನಿಗೆ ನಿಜವಾದ ತಂಡವನ್ನು ನೀಡಿದರೆ, ಅವನು ಮತ್ತೆ ಕ್ರೀಡಾಂಗಣದಲ್ಲಿ ಧೂಳೆಬ್ಬಿಸುತ್ತಾರೆ! ಏಕೆಂದರೆ, ಸರಳವಾಗಿ ಹೇಳುವುದಾದರೆ. ಮೆಸ್ಸಿ ಇನ್ನೂ ಮೆಸ್ಸಿಯೇ, ಆದರೆ ಇಂದು? ಇದು ಅವನ ಸೋಲು ಅಲ್ಲ, ಇದು ಇಂಟರ್ ಮಿಯಾಮಿ ಮತ್ತು ಫುಟ್‌ಬಾಲ್‌ನ ಸೋಲು ಎಂದು ಸ್ವೀಡೀಷ್ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.