Published : Aug 30, 2025, 07:16 AM ISTUpdated : Aug 30, 2025, 11:45 PM IST

Karnataka News Live: ಜಿಎಸ್‌ಟಿ ಸ್ಲ್ಯಾಬ್ ಕಡಿತ - ರಾಜ್ಯಗಳಿಗೆ 2.5 ಲಕ್ಷ ಕೋಟಿ ನಷ್ಟ - ಸಚಿವ ಕೃಷ್ಣ ಬೈರೇಗೌಡ

ಸಾರಾಂಶ

ಬೆಂಗಳೂರು: ನಮ್ಮ ದೇಶದ ಪ್ರಧಾನಮಂತ್ರಿ ಪ್ರತಿ ವರ್ಷ ಅಜೇರ್‌ ಶರೀಫ್‌ಗೆ ಒಂದು ಚಾದರ್ ಕಳುಹಿಸುತ್ತಾರೆ. ಅಲ್ಲಿಂದ ಆಶೀರ್ವಾದ ಪಡೆಯುತ್ತಾರೆ. ಚಾದರ್ ಕಳುಹಿಸಿದ ಮಾತ್ರಕ್ಕೆ ಪ್ರಧಾನಮಂತ್ರಿ ಮುಸ್ಲಿಂ ಆಗಿಬಿಟ್ಟರೇ? ಹಾಗೆಯೇ ಬುಕರ್‌ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಮಾಡುವುದು ಅಥವಾ ಮಾಡದಿರುವುದು ಅವರ ವೈಯಕ್ತಿಕ ವಿಚಾರ. ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ನಗರದ ಜಾಮಿಯಾ ಮಸೀದಿಯ ಮೌಲಾನಾ ಇಮ್ರಾನ್ ಮನ್ಸೂದ್ ಹೇಳಿದ್ದಾರೆ.

ಬಾನು ಮುಷ್ತಾಕ್ ವಿರುದ್ಧ ಫತ್ವಾ ಹೊರಡಿಸಬೇಕು ಎಂದು ಕೆಲ ಮುಸ್ಲಿಮರು ಜಾಲತಾಣಗಳಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ ಅವರು, ದಸರಾ ಉದ್ಘಾಟನೆ ಸಂಬಂಧಿಸಿ ಲೇಖಕಿ ವಿರುದ್ಧ ನಾವು ಯಾವುದೇ ಫತ್ವಾ ಹೊರಡಿಸು ವುದಿಲ್ಲ. ಮುಸ್ಲಿಂ ವಿಚಾರಗಳಿಗೆ ಸಂಬಂಧಿಸಿ ಏನಾದರೂ ಸಮಸ್ಯೆ ಇದ್ದರೆ ಫತ್ವಾ ಹೊರಡಿಸಲಾಗುತ್ತದೆ. ಅದಕ್ಕೆ ಲಿಖಿತ ದೂರು ನೀಡಬೇಕಾಗುತ್ತದೆ. ಯಾರು ಬೇಕಾದವರೂ ಫತ್ವಾ ಹೊರಡಿಸಲಾಗದು ಎಂದರು. ದೇಗುಲ, ಮಸೀದಿ, ಗುರುದ್ವಾರ, ಚರ್ಚ್ ಎಲ್ಲವೂ ಇವೆ. ಅವರವರ ನಂಬಿಕೆಗೆ ತಕ್ಕಂತೆ ಒಟ್ಟಾಗಿ ನಡೆದುಕೊಳ್ಳುತ್ತಾರೆ ಎಂದರು.

11:45 PM (IST) Aug 30

ಜಿಎಸ್‌ಟಿ ಸ್ಲ್ಯಾಬ್ ಕಡಿತ - ರಾಜ್ಯಗಳಿಗೆ 2.5 ಲಕ್ಷ ಕೋಟಿ ನಷ್ಟ - ಸಚಿವ ಕೃಷ್ಣ ಬೈರೇಗೌಡ

ಜಿಎಸ್‌ಟಿ ಸರಳೀಕರಣ ಹಾಗೂ ರಾಜ್ಯಗಳ ಸ್ವಾಯತ್ತತೆ’ಗೆ ಸಂಬಂಧಿಸಿ ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು.

Read Full Story

10:45 PM (IST) Aug 30

ಕಾಂಗ್ರೆಸ್‌ನವರಿಗೆ ಕೇಸರಿ, ಹಿಂದುತ್ವ ಕಂಡರೆ ಅಲರ್ಜಿ - ಎಂ.ಪಿ.ರೇಣುಕಾಚಾರ್ಯ

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಾಗಿದೆ. ಈ ಬಗ್ಗೆ ಎರಡು ಮಾತಿಲ್ಲ. ಆದರೆ, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರದ ನಾಯಕರ ಓಲೈಕೆಗಾಗಿ ಚಾಮುಂಡಿಬೆಟ್ಟದ ಕುರಿತು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ.

Read Full Story

09:29 PM (IST) Aug 30

ಸಂಸಾರ ಕಲಹ.. ಪತಿಯ ಅನುಮಾನಕ್ಕೆ ಬಿತ್ತು ಶುಂಠಿ ಹೊಲದ ಕಾವಲುಗಾರನ ಹೆಣ

ಆತ ಕಳೆದ ನಾಲ್ಕೈದು ವರ್ಷಗಳಿಂದ ಸ್ವಂತ ಚಿಕ್ಕಮ್ಮನೊಂದಿಗೆ ಸಂಸಾರ ಮಾಡ್ತಾ ಇದ್ದ. ಆದರೆ ಇತ್ತೀಚೆಗೆ ಆಕೆಗೆ ಅಕ್ರಮ ಸಂಬಂಧ ಇದೆ ಎನ್ನೋ ಅನುಮಾನ ಶುರುವಾಗಿತ್ತು.

Read Full Story

09:16 PM (IST) Aug 30

ಸಂಕಷ್ಟಕ್ಕೆ ಹಿಮ್ಮೆಟ್ಟದೆ ಒಗ್ಗೂಡಿ ಶ್ರಮಿಸೋಣ - ಮಧ್ಯಪ್ರಾಚ್ಯದ ಸಂಕಟಕ್ಕೆ ಮಿಡಿದ ಸದ್ಗುರು ಮಧುಸೂದನ ಸಾಯಿ

ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಜನರಿಗೆ ಜೀವನವು ಸುಲಭವಾಗಿಲ್ಲ. ನಾಳೆ ನೋಡುತ್ತೇವೆಯೇ ಎನ್ನುವುದೇ ಅವರಿಗೆ ಪ್ರಶ್ನೆ. ಮುಂದಿನ ಊಟ, ಔಷಧಿ ಸಿಗುತ್ತದೆಯೇ ಎಂಬುದರ ಖಾತರಿ ಇರುವುದಿಲ್ಲ.

Read Full Story

08:48 PM (IST) Aug 30

ಕಾಂಗ್ರೆಸ್‌ ಮಾಜಿ ನಾಯಕಿ ಜೊತೆ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಟ್ವಿಟ್‌ ಜಟಾಪಟಿ!

ಬೆಂಗಳೂರು ಮೆಟ್ರೋ ನಿಲ್ದಾಣಗಳ ನಾಮಕರಣ ವಿಚಾರದಲ್ಲಿ ಕಿರಣ್ ಮಜುಂದಾರ್ ಶಾ ಮತ್ತು ಕವಿತಾ ರೆಡ್ಡಿ ನಡುವೆ ಟ್ವಿಟರ್‌ನಲ್ಲಿ ವಾಗ್ಯುದ್ಧ ನಡೆದಿದೆ. ಕಂಪನಿಗಳ ಹೆಸರಿಡುವ ಬದಲು ಐತಿಹಾಸಿಕ ವ್ಯಕ್ತಿಗಳ ಹೆಸರಿಡಬೇಕೆಂದು ಕವಿತಾ ರೆಡ್ಡಿ ವಾದಿಸಿದ್ದಾರೆ.

Read Full Story

08:19 PM (IST) Aug 30

ಸಭಾಪತಿ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದರೆ ಚಿಂತಿಸುವುದಿಲ್ಲ - ಬಸವರಾಜ ಹೊರಟ್ಟಿ

ಅಧಿಕಾರ ಶಾಶ್ವತವಲ್ಲ. ಅಧಿಕಾರ ಬಿಟ್ಟು ಹೋಗಲು ನಾನು ಯಾವಾಗಲೂ ಹಿಂಜರಿದವನಲ್ಲ. ನಾನು ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಅವರಂತೆ ಮೌಲ್ಯವನ್ನು ಇಟ್ಟುಕೊಂಡು ಬಂದವನು.

Read Full Story

08:12 PM (IST) Aug 30

ಮೈಸೂರ ಜನತೆಗೆ ಬಿಗ್‌ ನ್ಯೂಸ್‌, 300 ಕೋಟಿ ಹೂಡಿಕೆ ಮಾಡ್ತೀವಿ ಎಂದ ಸ್ವಿಜರ್ಲೆಂಡ್‌ ಕಂಪನಿ!

ಈ ಯೋಜನೆಯು 2027 ರ ಮಧ್ಯಭಾಗದ ವೇಳೆಗೆ ಪೂರ್ಣಗೊಳ್ಳಲಿದ್ದು, ಭಾರತದಲ್ಲಿ ಹಿಟಾಚಿ ಎನರ್ಜಿಯ ದೀರ್ಘಕಾಲೀನ ಬೆಳವಣಿಗೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.

 

Read Full Story

08:09 PM (IST) Aug 30

ಎಸ್‌ಐಟಿ ತನಿಖೆ ಸ್ವಾಗತಿಸಿದ್ದ ಬಿಜೆಪಿ ಈಗ ವಿರೋಧಿಸುತ್ತಿರುವುದೇಕೆ? - ಸಚಿವ ಸಂತೋಷ್‌ ಲಾಡ್‌

ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನು ಅಂದು ಸ್ವಾಗತಿಸಿದ್ದ ಬಿಜೆಪಿ ನಾಯಕರು ಈಗ ವಿರೋಧ ಮಾಡುತ್ತಿರುವುದೇಕೆ? ಎಸ್‌ಐಟಿ ರಚನೆ ಮಾಡಿದಾಗಲೇ ವಿರೋಧಿಸಬೇಕಿತ್ತಲ್ಲವೇ ಎಂದು ಸಚಿವ ಸಂತೋಷ್‌ ಲಾಡ್‌ ಪ್ರಶ್ನಿಸಿದ್ದಾರೆ.

Read Full Story

07:37 PM (IST) Aug 30

ಸಬ್‌ ಅರ್ಬನ್‌ ರೈಲ್ವೆ ಯೋಜನೆ 2026ರಲ್ಲಿ ಪೂರ್ಣಗೊಳ್ಳುವುದು ಅನುಮಾನ - ವಿ.ಸೋಮಣ್ಣ

ರಾಜ್ಯ ಸರ್ಕಾರದ ಶೇ.51 ರಷ್ಟು ಹಾಗೂ ಕೇಂದ್ರ ಸರ್ಕಾರದ ಶೇ.49 ರಷ್ಟು ಬಂಡವಾಳದಲ್ಲಿ ಯೋಜನೆ ಪೂರ್ಣಗೊಳಿಸುವುದಕ್ಕೆ ನಿರ್ಧರಿಸಲಾಗಿತ್ತು. 2026ರ ಡಿಸೆಂಬರ್‌ ಅಂತ್ಯದ ವೇಳೆಗೆ 4 ಕಾರಿಡಾರ್‌ ಪೈಕಿ 2 ಕಾರಿಡಾರ್‌ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು.

Read Full Story

07:29 PM (IST) Aug 30

ಜನಪ್ರತಿನಿಧಿಗಳು, ಅಧಿಕಾರಿ ಒಟ್ಟಿಗೆ ಸೇರಿ ಸಮಸ್ಯೆ ಬಗೆಹರಿಸಬೇಕು - ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ

ರಾಜ್ಯ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಮುಂದಿನ ಪೀಳಿಗೆಗೆ ಇಲ್ಲಿನ ಸಮಸ್ಯೆ ಇರದಂತೆ ನೋಡಿಕೊಳ್ಳಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Read Full Story

07:18 PM (IST) Aug 30

ಕೊನೆಗೂ ಬಂತು ಆಪ್ತ ಸ್ನೇಹಿತನಿಂದ ಮದುವೆಯ ವಿಶ್‌, ಖುಷ್‌ ಖುಷಿಯಾದ ನಿರೂಪಕಿ ಅನುಶ್ರೀ!

ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನಕಪುರದಲ್ಲಿ ನಡೆದ ಸರಳ ವಿವಾಹದಲ್ಲಿ ಆಪ್ತರು ಹಾಜರಿದ್ದರು, ಆದರೆ ಒಬ್ಬ ಪ್ರಮುಖ ವ್ಯಕ್ತಿ ಗೈರು ಹಾಜರಾಗಿದ್ದರು.
Read Full Story

06:53 PM (IST) Aug 30

ಜೈಲಿನಲ್ಲಿ ಇರಲು ಕಷ್ಟ ಹಾಸಿಗೆಗಾಗಿ ದರ್ಶನ್‌ ಮನವಿ, ಮೈಸೂರಲ್ಲಿ ಕಾಣಿಸಿದ ಪತ್ನಿ ತಾಯಿ, ಪವಿತ್ರಾ ಜಾಮೀನಿಗೆ ಅರ್ಜಿ!

ಜೈಲಿನಲ್ಲಿ ದರ್ಶನ್‌ಗೆ ಕನಿಷ್ಠ ಸೌಕರ್ಯಗಳ ಕೊರತೆ ಎದುರಾಗಿದ್ದು, ಹಾಸಿಗೆ, ದಿಂಬು ಮುಂತಾದವುಗಳಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಆದೇಶ ಕಾಯ್ದಿರಿಸಲಾಗಿದೆ. ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ವಿಚಾರಣೆ ಮುಂದೂಡಲ್ಪಟ್ಟಿದೆ.
Read Full Story

06:51 PM (IST) Aug 30

ಒಳ ಮೀಸಲಾತಿ ಶತಮಾನದ ನೋವಿಗೆ ಸಿಕ್ಕ ನ್ಯಾಯ - ಸಚಿವ ತಿಮ್ಮಾಪೂರ

ನಮ್ಮ ಸಮುದಾಯದ ಜನರು ಜನಸಂಖ್ಯೆಗನುಗುಣವಾಗಿ ಶೇ.6ರಷ್ಟು ಮೀಸಲಾತಿ ಪಡೆದಿದ್ದಾರೆ. ಯಾರಿಂದಲೂ ಕಸಿದುಕೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

Read Full Story

06:31 PM (IST) Aug 30

ಅಮೆರಿಕ ಅಧ್ಯಕ್ಷ ಟ್ರಂಪ್ ನಿಧನ, ಕಿಚ್ಚೆಬ್ಬಿಸಿದ ಸುದ್ದಿ, ಆರೋಗ್ಯದ ಕುರಿತ ಚರ್ಚೆ ನಿಂತಿಲ್ಲ!

ಡೊನಾಲ್ಡ್ ಟ್ರಂಪ್ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ವದಂತಿಯ ಹುಟ್ಟು, ವ್ಯಾಪ್ತಿ, ಟ್ರಂಪ್ ಅವರ ಆರೋಗ್ಯದ ಕುರಿತ ಚರ್ಚೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ಪ್ರತಿಕ್ರಿಯೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

06:29 PM (IST) Aug 30

ಕೆಜಿಎಫ್ ‘ಚಾಚಾ’ ಹರೀಶ್ ರಾಯ್‌ಗೆ ಕ್ಯಾನ್ಸರ್‌ - ಚಿಕಿತ್ಸೆ ವೆಚ್ಚ ಭರಿಸುವುದಾಗಿ ಘೋಷಿಸಿದ ಧ್ರುವ ಸರ್ಜಾ

ನನಗೆ ಚಿರು ಸರ್ಜಾ ಅವರಷ್ಟು ಧ್ರುವ ಸರ್ಜಾ ಕ್ಲೋಸ್‌ ಇರಲಿಲ್ಲ. ಆದರೂ ಅವರ ಕಾಳಜಿ ಕಂಡು ಮನಸ್ಸು ತುಂಬಿಬಂತು ಎಂದಿದ್ದಾರೆ ನಟ ಹರೀಶ್ ರಾಯ್‌.

Read Full Story

06:03 PM (IST) Aug 30

ಕಾಡಿನ ಮಧ್ಯೆ ಸಣ್ಣತನ, ದ್ರೋಹ ಮತ್ತು ಪ್ರತೀಕಾರ - ರಿಪ್ಪನ್ ಸ್ವಾಮಿ ಸಿನಿಮಾ ವಿಮರ್ಶೆ

ಸಿನಿಮಾ ನಾಯಕ ಎಂದರೆ ಒಳ್ಳೆಯವನೇ ಆಗಿರಬೇಕು ಎಂಬ ಸಿದ್ಧಸೂತ್ರವನ್ನು ಈ ಸಿನಿಮಾ ಒಡೆದು ಹಾಕಿದೆ. ಇಲ್ಲಿ ಒಳ್ಳೆಯದು, ಕೆಟ್ಟದ್ದು ಅನ್ನುವುದು ಪರಿಸ್ಥಿತಿಗೆ ಬಿಟ್ಟಿದ್ದು.

 

Read Full Story

05:43 PM (IST) Aug 30

ಉಸಿರು ಸಿನಿಮಾ ವಿಮರ್ಶೆ - ಸೈಕೋ ಥ್ರಿಲ್ಲರ್ ಚಿತ್ರದಲ್ಲಿ ಗರ್ಭಿಣಿಯರು ಕಾಣೆಯಾಗುತ್ತಾರೆ!

ತನ್ನ ತಾಯಿಯನ್ನು ಕಳೆದುಕೊಂಡಿರುವ ವ್ಯಕ್ತಿ ಅಮ್ಮನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆಯೇ ಎನ್ನುವುದರ ಜೊತೆಗೆ ಅಪಾಯದಲ್ಲಿರುವ ತನ್ನ ಪತ್ನಿಯನ್ನು ಪೊಲೀಸ್ ಅಧಿಕಾರಿ ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವುದು ಕತೆಯ ಸಣ್ಣ ತಿರುಳು.

Read Full Story

05:40 PM (IST) Aug 30

ಪ್ರತ್ಯೇಕ ತಾಣಕ್ಕೆ ಹೋಗಲಿದೆ ವಿಧಾನಸೌಧದ ನಾಯಿಗಳು!

ವಿಧಾನಸೌಧದ ಆವರಣದಲ್ಲಿ ಮುಕ್ತವಾಗಿ ಓಡಾಡುವ 53 ನಾಯಿಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಲಾಭರಹಿತ ಸಂಸ್ಥೆಯೊಂದು ನಾಯಿಗಳ ಆರೈಕೆ ವಹಿಸಿಕೊಳ್ಳಲಿದೆ. ಈ ಯೋಜನೆಯು ಶಾಸಕರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ.
Read Full Story

05:24 PM (IST) Aug 30

ಬೆಂಗಳೂರು ಗ್ರಾಮಾಂತರ - ಕ್ರಾಕ್ಸ್ ಚಪ್ಪಲಿ ಧರಿಸಿ ಪ್ರಾಣ ಕಳೆದುಕೊಂಡ ದುದೈವಿ!

ಬನ್ನೇರುಘಟ್ಟದಲ್ಲಿ ಚಪ್ಪಲಿಯೊಳಗೆ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕಾಲಿನ ಸ್ಪರ್ಶಶಕ್ತಿ ಕಳೆದುಕೊಂಡಿದ್ದರಿಂದ ಹಾವು ಕಚ್ಚಿದ್ದನ್ನು ಗಮನಿಸಲಾಗದೆ ದುರಂತ ಸಂಭವಿಸಿದೆ. ಮನೆಯ ಹೊರಗೆ ಇಡುವ ಚಪ್ಪಲಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ.
Read Full Story

05:21 PM (IST) Aug 30

ಪ್ರವಾಸಿಗರಿಗೆ ಶಾಕ್‌, ಇನ್ಮುಂದೆ ಬೇಕೆಂದಾಗ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಹೋಗೋಕೆ ಆಗಲ್ಲ!

ಸೆಪ್ಟೆಂಬರ್ 1 ರಿಂದ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿಗೆ ಭೇಟಿ ನೀಡಲು ಆನ್‌ಲೈನ್ ಬುಕಿಂಗ್ ಕಡ್ಡಾಯವಾಗಿದೆ. ಪ್ರವಾಸಿಗರ ಹೆಚ್ಚಳದಿಂದಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
Read Full Story

05:21 PM (IST) Aug 30

ಹೇಗಿದೆ ಅಂದೊಂದಿತ್ತು ಕಾಲ ಸಿನಿಮಾ - ಕನ್ನಡ ಮೀಡಿಯಂ ಕುಮಾರನ ಡೈರೆಕ್ಷನ್‌ ಸಾಹಸಗಳು!

ಸಿನಿಮಾ ನೋಡುವಾಗ ಕಥೆಯ ಜೊತೆಗೆ ವಿನಯ್‌ ಅವರ ತಣ್ಣನೆಯ ಸೂಕ್ಷ್ಮ ಅಭಿನಯ, ಬದುಕಿನ ಮಾರ್ಪಾಡನ್ನು ಪಾತ್ರವಾಗಿ ಪ್ರತಿಬಿಂಬಿಸಿದ ರೀತಿ ಪರಿಣಾಮಕಾರಿಯಾಗಿದೆ.

Read Full Story

04:47 PM (IST) Aug 30

ಕರ್ನಾಟಕದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ನೇಮಕ, ರಾಜ್ಯ ಸರ್ಕಾರ ಆದೇಶ

ಕರ್ನಾಟಕ ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕರಾಗಿ ಎಂ. ಎ. ಸಲೀಂ ಅವರನ್ನು ನೇಮಕ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಹೊತ್ತಿರುವ ಅವರು ಹಲವು ಸವಾಲುಗಳನ್ನು ಎದುರಿಸಬೇಕಿದೆ.
Read Full Story

04:41 PM (IST) Aug 30

ಹೃದಯದ ಡಾಕ್ಟರ್‌ಗೇ ಹಾರ್ಟ್ ಅಟ್ಯಾಕ್ - ಡ್ಯೂಟಿ ರೌಂಡ್ಸ್ ವೇಳೆಯೇ 39ರ ಹರೆಯದ ವೈದ್ಯ ಸಾವು

ಚೆನ್ನೈನಲ್ಲಿ ಹೃದಯ ಶಸ್ತ್ರಚಿಕಿತ್ಸಕರೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ವೈದ್ಯಕೀಯ ಸಿಬ್ಬಂದಿಯಲ್ಲಿ ಆಘಾತ ಮೂಡಿಸಿದೆ. 39 ವರ್ಷದ ವೈದ್ಯ ಗ್ರಾಡ್ಲಿನ್ ರಾಯ್ ರೋಗಿಗಳ ತಪಾಸಣೆ ವೇಳೆyE ಹೃದಯಾಘಾತಕ್ಕೊಳಗಾಗಿದ್ದಾರೆ.

Read Full Story

04:34 PM (IST) Aug 30

ಬಾನು ಮುಷ್ತಾಕ್ Dasara ಉದ್ಘಾಟನೆ - ಸ್ಪಷ್ಟನೆ ಕೇಳಿದ ಯದುವೀರ- ರಾಣಿ ಪ್ರಮೋದಾ ದೇವಿ ಏನಂದ್ರು?

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ವಿಷಯ ಭಾರಿ ಕೋಲಾಹಲ ಸೃಷ್ಟಿಸಿದೆ. ಇದಕ್ಕೆ ಯದುವೀರ ದತ್ತ ಒಡೆಯರ್​ ಲೇಖಕಿಯಿಂದ ಸ್ಪಷ್ಟನೆ ಕೇಳಿದ್ರೆ, ರಾಣಿ ಪ್ರಮೋದಾ ದೇವಿ ಏನಂದ್ರು?

 

Read Full Story

04:15 PM (IST) Aug 30

ಜಾತಿ ನೋಡಬಾರದು ಅವರ ಸಾಧನೆ, ನೀತಿಯನ್ನು ನೋಡಬೇಕು - ದಸರಾ ವಿವಾದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ವಿರೋಧಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾತಿ ಆಧಾರದ ಮೇಲೆ ತೀರ್ಮಾನಿಸುವುದು ತಪ್ಪು ಎಂದು ಹೇಳಿದ ಅವರು, ಧರ್ಮಸ್ಥಳ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.  

Read Full Story

03:48 PM (IST) Aug 30

'ಶಾಶ್ವತ ಮಿತ್ರ ಅಥವಾ ಶತ್ರು ಯಾರೂ ಇಲ್ಲ, India’s Interests First..' ಟ್ರಂಪ್‌ ಸುಂಕ ಬೆದರಿಕೆಗೆ ರಾಜನಾಥ್ ಸಿಂಗ್‌ ದಿಟ್ಟ ಉತ್ತರ!

ರಾಷ್ಟ್ರೀಯ ಹಿತಾಸಕ್ತಿಗಳೇ ಪ್ರಮುಖವೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸ್ವಾವಲಂಬನೆ ಅವಶ್ಯಕತೆಯೆಂದೂ, ಆಪರೇಷನ್ ಸಿಂದೂರ್ ಯಶಸ್ಸಿನ ಹಿಂದಿನ ದೀರ್ಘಕಾಲದ ಸಿದ್ಧತೆಯನ್ನು ವಿವರಿಸಿದ್ದಾರೆ.
Read Full Story

03:37 PM (IST) Aug 30

ದೂತ ಸಮೀರ್ ಯೂಟ್ಯೂಬ್‌ ಆದಾಯವೆಷ್ಟು? 45 ನಿಮಿಷದ ವಿಚಾರಣೆಯಲ್ಲಿ ಏನೆಲ್ಲಾ ಕೇಳಲಾಯ್ತು?

ವಿವಾದಾತ್ಮಕ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್ ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಒಪ್ಪಿಸಿದರು. ಪೊಲೀಸರು ಸಮೀರ್‌ನ ಯೂಟ್ಯೂಬ್ ಆದಾಯದ ಮೂಲ, AI ವೀಡಿಯೊದ ಉದ್ದೇಶ ಕೇಳಿದರು.

Read Full Story

03:09 PM (IST) Aug 30

ಮಕ್ಕಳು ತಂದಿಟ್ಟ ಜಗಳಕ್ಕೆ ತಂದೆಯ ಜೀವ ಹೋಯ್ತು; ಹಾಸನದಲ್ಲಿ ಭೀಕರ ಕೊಲೆ!

ಹಾಸನದ ಅರಸೀಕೆರೆಯಲ್ಲಿ ಮಕ್ಕಳ ಜಗಳ ತಂದೆ-ತಾಯಿಯರ ನಡುವಿನ ಜಗಳಕ್ಕೆ ತಿರುಗಿ ಒಬ್ಬ ತಂದೆಯನ್ನು ಮತ್ತೊಬ್ಬ ತಂದೆ ಕೊಲೆ ಮಾಡಿದ್ದಾನೆ. ಕೊಲೆಯಾದವರ ಕುಟುಂಬಸ್ಥರು ಆರೋಪಿಯ ಮನೆಗೆ ಬೆಂಕಿ ಹಚ್ಚಿ, ಕಾರನ್ನು ಜಖಂಗೊಳಿಸಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
Read Full Story

03:03 PM (IST) Aug 30

BIGG BOSSನಲ್ಲಿ 'Big' ಬದಲು 'Bigg' ಯಾಕೆ? ಎಕ್ಸ್​ಟ್ರಾ 'G' ಹಿಂದಿರೋ ಬಹುದೊಡ್ಡ ಗುಟ್ಟು ರಿವೀಲ್​!

ಬಿಗ್​ಬಾಸ್​ ರಿಯಾಲಿಟಿ ಶೋನ ಹೆಸರಿನಲ್ಲಿರುವ ಹೆಚ್ಚುವರಿ 'G' ಯ ರಹಸ್ಯವನ್ನು ಖ್ಯಾತ ಸಂಖ್ಯಾಶಾಸ್ತ್ರಜ್ಞರು ಬಹಿರಂಗಪಡಿಸಿದ್ದಾರೆ. ಟಿಆರ್​ಪಿ ಹೆಚ್ಚಿಸಲು ಸಂಖ್ಯಾಶಾಸ್ತ್ರದ ಪ್ರಕಾರ ಹೆಚ್ಚುವರಿ 'G' ಅನ್ನು ಸೇರಿಸಲಾಗಿದೆ ಎಂಬುದು ಅವರ ವಿವರಣೆ.
Read Full Story

03:02 PM (IST) Aug 30

ಬೆಂಗಳೂರಲ್ಲಿ ನಡೆದಿತ್ತು ಧರ್ಮಸ್ಥಳ ವಿರುದ್ಧ ಷಡ್ಯಂತ್ರ - ಚಿನ್ನಯ್ಯನನ್ನು ಕರೆತಂದು ಪೀಣ್ಯದಲ್ಲಿ ಮಹಜರು!

ಧರ್ಮಸ್ಥಳ ಷಡ್ಯಂತ್ರ ಪ್ರಕರಣದಲ್ಲಿ ಮುಸುಕುಧಾರಿ ಚಿನ್ನಯ್ಯನನ್ನು ಬೆಂಗಳೂರಿನಲ್ಲಿ ಮಹಜರು ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಪೀಣ್ಯದಲ್ಲಿ ಬುರುಡೆ ಪಡೆದಿದ್ದಾನೆಂಬ ಆರೋಪದ ಮೇಲೆ ಚಿನ್ನಯ್ಯನನ್ನು ವಿಚಾರಣೆ ನಡೆಸಲಾಗಿದ್ದು, ಮುಂದಿನ ತನಿಖೆಗಾಗಿ ತಮಿಳುನಾಡು ಮತ್ತು ಮಂಡ್ಯಕ್ಕೆ ಕರೆದೊಯ್ಯಲಾಗುವುದು.
Read Full Story

01:24 PM (IST) Aug 30

ಸಾವು ಎಲ್ಲರಿಗೂ ನೋವೇ.. ಮತ್ತೊಂದು ಆನೆಯ ಅಸ್ಥಿಪಂಜರ ನೋಡಿ ಬಿಕ್ಕಳಿಸಿದ ಆನೆ - ವೀಡಿಯೋ

ಸಾವು ಎಲ್ಲರಿಗೂ ಬಹಳ ನೋವು ಕೊಡುತ್ತದೆ. ಅದು ಮನುಷ್ಯರಾದರೂ ಸರಿ ಪ್ರಾಣಿಗಳಾದರೂ ಸರಿ. ಅದೇ ರೀತಿ ದಕ್ಷಿಣ ಆಫ್ರಿಕಾದ ಕ್ರೂಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಯೊಂದು ಮತ್ತೊಂದು ಆನೆಯ ಅಸ್ಥಿಪಂಜರವನ್ನು ನೋಡಿ ಭಾವುಕಳಾಗಿರುವ ದೃಶ್ಯ ಸೆರೆಯಾಗಿದೆ.

Read Full Story

01:18 PM (IST) Aug 30

ಸ್ಪಂದಿಸದ ಅಧಿಕಾರಿಗಳ ವರ್ಗಾವಣೆಗೆ ಶಾಸಕರ ಪತ್ರ ತಪ್ಪಲ್ಲ - ಹೈಕೋರ್ಟ್

ಸಮಯಕ್ಕೆ ಕಚೇರಿಗೆ ಬಾರದ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಯ ವರ್ಗಾವಣೆಯನ್ನು ಹೈಕೋರ್ಟ್ ಸಮರ್ಥಿಸಿದೆ. ಶಾಸಕರ ಶಿಫಾರಸ್ಸಿನ ಮೇರೆಗೆ ವರ್ಗಾವಣೆ ಮಾಡಿದ್ದು ಸರಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Read Full Story

01:07 PM (IST) Aug 30

'ಒಂದಿಷ್ಟೂ ಪರಿಜ್ಞಾನ ಇಲ್ಲವೇ?' ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂದ ಡಿಕೆಶಿ ವಿರುದ್ಧ ಅಶ್ವತ್ಥನಾರಾಯಣ ಕಿಡಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಸರಾ ವಿಚಾರದಲ್ಲಿ ಶಿವಕುಮಾರ್ ಜವಾಬ್ದಾರಿ ಮರೆತು ಮಾತನಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. 

Read Full Story

12:50 PM (IST) Aug 30

ಅನನ್ಯಾ ಭಟ್ ಕೇಸ್‌ಗೆ ಸ್ಟೋಟಕ ಟ್ವಿಸ್ಟ್ ವಾಸಂತಿ ಇನ್ನೂ ಜೀವಂತ! ಸುಜಾತಾ ಭಟ್ ಮರುಪ್ರಶ್ನೆಗೆ ಎಸ್‌ಐಟಿ ದಂಗು!

ಅನನ್ಯಾ ಭಟ್ ಪ್ರಕರಣದಲ್ಲಿ ಸುಜಾತಾ ಭಟ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ವಾಸಂತಿ ಶ್ರೀವತ್ಸ ಜೀವಂತವಿದ್ದಾರೆ ಎಂದು ಹೇಳಿರುವ ಅವರು, ನದಿಯಲ್ಲಿ ಪತ್ತೆಯಾದ ಶವ ವಾಸಂತಿಯದ್ದಲ್ಲ ಎಂದು ಹೇಳಿದ್ದಾರೆ. ಕಟ್ಟುಕಥೆಗಳಿಂದ ತುಂಬಿರುವ ಈ ಪ್ರಕರಣ ಮತ್ತಷ್ಟು ಗೊಂದಲಮಯವಾಗಿದೆ.
Read Full Story

12:37 PM (IST) Aug 30

'ತಾಕತ್ ಇದ್ರೆ ಅಜಾನ್ ಬ್ಯಾನ್ ಮಾಡಿ..' ಡಿಜೆ ಅನುಮತಿ ಕೋರಿ ಪ್ರತಿಭಟನೆ, ಎಂಪಿ ರೇಣುಕಾಚಾರ್ಯ ವಿರುದ್ಧ ಎಫ್‌ಐಆರ್!

ಗಣೇಶೋತ್ಸವದಲ್ಲಿ ಡಿಜೆ ಸಂಗೀತ ನಿಷೇಧ ವಿರೋಧಿಸಿ ಪ್ರತಿಭಟನೆ ಹಾಗೂ ಅನ್ಯ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿದ ಆರೋಪದಡಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲು.
Read Full Story

12:24 PM (IST) Aug 30

ಕರೆಂಟ್ ಟವರ್ ಏರಿ ವಿವಾಹಿತನ ಹೈಡ್ರಾಮಾ - ಪತ್ನಿಯ ತಂಗಿ ಜೊತೆ ಮದ್ವೆ ಮಾಡುವಂತೆ ಒತ್ತಾಯ

ಕನೌಜ್‌ನಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಪತ್ನಿ ಸಾವಿನ ನಂತರ ಆಕೆಯ ಒಬ್ಬಳು ತಂಗಿಯನ್ನು ಮದ್ವೆಯಾಗಿದ್ದ. ಈಗ ಮತ್ತೊಂದು ತಂಗಿಯ ಜೊತೆಗೂ ತನ್ನ ಮದ್ವೆ ಮಾಡಿ ಎಂದು ಆತ ಕರೆಂಟ್ ಟವರ್ ಏರಿ ಹೈಡ್ರಾಮಾ ಮಾಡಿದ್ದಾನೆ. ಘಟನೆಯ ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

12:08 PM (IST) Aug 30

ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ; ಉಜ್ಜಯಿ ಉಸಿರಾಟದಿಂದ ಬದುಕಿ ಬಂದ ಸೈನಿಕ!

ಉಕ್ರೇನ್‌ನ ಯುದ್ಧಭೂಮಿಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯೋಗ-ಧ್ಯಾನ ಶಿಬಿರಗಳನ್ನು ನಡೆಸುತ್ತಿದ್ದು, ಸೈನಿಕರು ಮತ್ತು ನಾಗರಿಕರಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಿದೆ. ಉಸಿರಾಟದ ಪ್ರಕ್ರಿಯೆಗಳು ಮತ್ತು ಧ್ಯಾನದ ಮೂಲಕ ಯುದ್ಧದಿಂದ ಉಂಟಾದ ಮಾನಸಿಕ ಆಘಾತವನ್ನು ನಿವಾರಿಸಲು ಸಹಾಯ ಮಾಡುತ್ತಿದೆ.
Read Full Story

11:55 AM (IST) Aug 30

ರೈತರಿಗೆ ಸಿಹಿಸುದ್ದಿ, ಇನ್ಮುಂದೆ ನಕಲಿ ಹಾವಳಿ ಇರೋಲ್ಲ, ಜನೌಷಧಿಯಂತೆ ಕೀಟನಾಶಕ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಚಿಂತನೆ

ಕೇಂದ್ರ ಸರ್ಕಾರವು ಜನೌಷಧಿ ಮಾದರಿಯಲ್ಲಿ ರೈತರಿಗೆ ಕಡಿಮೆ ದರದಲ್ಲಿ ಕೀಟನಾಶಕಗಳನ್ನು ಒದಗಿಸಲು ಜಿಲ್ಲಾವಾರು ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. 

Read Full Story

11:38 AM (IST) Aug 30

ಚುಂಚಿಫಾಲ್ಸ್‌ನಲ್ಲಿ ಪ್ರವಾಸಿಗರಿಗೆ ಕಿರುಕುಳ - ಪ್ರವೇಶಕ್ಕೆ 100 ರಿಂದ 500 ವಸೂಲಿ, ವಿಡಿಯೋ ವೈರಲ್

ಕನಕಪುರದ ಚುಂಚಿ ಫಾಲ್ಸ್‌ನಲ್ಲಿ ಪ್ರವಾಸಿಗರಿಂದ ಅಕ್ರಮ ಹಣ ವಸೂಲಿ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಪ್ರವಾಸೋದ್ಯಮ ಇಲಾಖೆ ದೂರು ದಾಖಲಿಸಿದೆ. ವೈರಲ್ ವಿಡಿಯೋದಲ್ಲಿ ಕಿಡಿಗೇಡಿಗಳ ದೌರ್ಜನ್ಯ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

Read Full Story

11:21 AM (IST) Aug 30

ಸಾವಿರ ಕಂಬ ಬಸದಿಗೆ ರವೀನಾ ಟಂಡನ್‌ ಪುತ್ರಿಯಿಂದ ಆನೆ ಗಿಫ್ಟ್‌!

ಬಾಲಿವುಡ್ ತಾರೆ ರವೀನಾ ಟಂಡನ್ ಮತ್ತು ಅವರ ಪುತ್ರಿ ರಾಶಾ ತಾದಾನಿ ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಯಾಂತ್ರೀಕೃತ ಐರಾವತವನ್ನು ಕೊಡುಗೆಯಾಗಿ ನೀಡಿದ್ದಾರೆ. ಪೇಟಾ ಇಂಡಿಯಾದ ಪ್ರೇರಣೆಯಿಂದ ಈ ಕೊಡುಗೆ ನೀಡಲಾಗಿದೆ. 

Read Full Story

More Trending News