- Home
- Entertainment
- News
- ಜೈಲಿನಲ್ಲಿ ಇರಲು ಕಷ್ಟ ಹಾಸಿಗೆಗಾಗಿ ದರ್ಶನ್ ಮನವಿ, ಮೈಸೂರಲ್ಲಿ ಕಾಣಿಸಿದ ಪತ್ನಿ ತಾಯಿ, ಪವಿತ್ರಾ ಜಾಮೀನಿಗೆ ಅರ್ಜಿ!
ಜೈಲಿನಲ್ಲಿ ಇರಲು ಕಷ್ಟ ಹಾಸಿಗೆಗಾಗಿ ದರ್ಶನ್ ಮನವಿ, ಮೈಸೂರಲ್ಲಿ ಕಾಣಿಸಿದ ಪತ್ನಿ ತಾಯಿ, ಪವಿತ್ರಾ ಜಾಮೀನಿಗೆ ಅರ್ಜಿ!
ಜೈಲಿನಲ್ಲಿ ದರ್ಶನ್‌ಗೆ ಕನಿಷ್ಠ ಸೌಕರ್ಯಗಳ ಕೊರತೆ ಎದುರಾಗಿದ್ದು, ಹಾಸಿಗೆ, ದಿಂಬು ಮುಂತಾದವುಗಳಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಆದೇಶ ಕಾಯ್ದಿರಿಸಲಾಗಿದೆ. ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ವಿಚಾರಣೆ ಮುಂದೂಡಲ್ಪಟ್ಟಿದೆ.

ಜಾಮೀನಿನ ಮೇಲೆ ಹೊರಬಂದು ಸಕಲ ಸೌಕರ್ಯ ಅನುಭವಿಸಿದ್ದ ದರ್ಶನ್ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳೂ ಸಿಗ್ತಿಲ್ವಂತೆ.. ಹಾಸಿಗೆ, ದಿಂಬು, ಬ್ಲಾಂಕೆಟ್ ಬೇಕು ಅಂತ ದರ್ಶನ್ ಮತ್ತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಪೊಲೀಸರು ಅನುಸರಿಸಿದ್ದ ಕಾನೂನನ್ನೇ ಪ್ರಶ್ನಿಸಿ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ಆದೇಶ ಕೋರ್ಟ್ ಕಾಯ್ದಿರಿಸಿದೆ. ಜೈಲಲ್ಲಿರುವ ನಟ ದರ್ಶನ್‌ಗೆ ಮತ್ತೆ ನಡುಕ ಶುರುವಾಗಿದೆ. ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್‌ಗೆ ಅಕ್ಷರಶಃ ರಾಜಾತಿಥ್ಯವನ್ನೇ ನೀಡಲಾಗಿತ್ತು. ಒಂದು ಕೈಯಲ್ಲಿ ಕಾಫಿ ಕಪ್ಪು ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಚೇರ್ ಮೇಲೆ ದರ್ಶನ್ ಕುಳಿತಿದ್ದ ಫೋಟೋ ನೋಡಿ ಸುಪ್ರೀಂ ಕೋರ್ಟ್ ಕೂಡ ಕೆಂಡಾಮಂಡಲವಾಗಿತ್ತು. ಇದೇನಾದೂ ರಿಪೀಟ್ ಆದ್ರೆ ಪರಿಣಾಮ ನೆಟ್ಟಗಿರಲ್ಲ ಅಂತಾ ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ಮೀಡಿತ್ತು. ಹೀಗಾಗಿ ಡಿ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಇರೋದೇ ಬೇಡ ಅಂತಾ ಅಧಿಕಾರಿಗಳು ತೀರ್ಮಾನಿಸಿದ್ದು, ಆರೋಪಿಗಳನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಆದ್ರೆ ಸ್ಥಳಾಂತರ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧ ದರ್ಶನ್, ಲಕ್ಷ್ಮಣ್, ನಾಗರಾಜ್, ಜಗದೀಶ್ ಹಾಗೂ ಪ್ರದೂಷ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. 64ನೇ ಸೆಷನ್ಸ್ ಕೋರ್ಟ್ ಅರ್ಜಿ ವಿಚಾರಣೆಯನ್ನ ಸೆಪ್ಟೆಂಬರ್ 2ಕ್ಕೆ ಮುಂದೂಡಿಕೆ ಮಾಡಿದ್ದು, ಅಂದೇ ದರ್ಶನ್ ಬಳ್ಳಾರಿ ಜೈಲ್ ಭವಿಷ್ಯ ನಿರ್ಧಾರವಾಗಲಿದೆ. ಆರೋಪಿಗಳನ್ನ ಸ್ಥಳಾಂತರಿಸುವಂತೆ ಮಂಗಳವಾರದಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಲಿದ್ದಾರೆ.
ಪವಿತ್ರಾಗೌಡ ಜಾಮೀನು ಅರ್ಜಿ. ಆದೇಶ ಕಾಯ್ದಿರಿಸಿದ ಕೋರ್ಟ್ ವಾಯ್: ಸುಪ್ರೀಂಕೋರ್ಟ್‌ನಲ್ಲೇ ಜಾಮೀನು ರದ್ದುಗೊಂಡಿದೂ ಪವಿತ್ರಾಗೌಡ ಬೇಲ್‌ಗಾಗಿ ಮತ್ತೆ ಸೆಷನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 64ನೇ ಸೆಷನ್ ಕೋರ್ಟ್‌ನಲ್ಲಿ ಪವಿತ್ರಾ ಬೇಲ್ ಅರ್ಜಿ ವಾದ-ಪ್ರತಿವಾದ ನಡೆಯಿತು. ಸಿಆರ್‌ಪಿಸಿ ಅಡಿಯಲ್ಲಿ ಪವಿತ್ರಾಗೌಡ ವಿರುದ್ಧ ಚಾರ್ಜ್‌ಶೀಟ್ ಆಗಿದೆ. ಅಸ್ತಿತ್ವವಿಲ್ಲದ ಕಾನೂನಿನಡಿ ಜೈಲಿಗೆ ಕಳುಹಿಸಿರೋದ್ರಿಂದ ಜಾಮೀನು ನೀಡಬೇಕೆಂದು ಪವಿತ್ರಾ ಪರ ವಕೀಲ ಬಾಲನ್ ವಾದಿಸಿದ್ರು. ಸರಿಯಾದ ಕಾನೂನಿನಡಿಯೇ ಚಾರ್ಜ್ ಶೀಟ್ ಆಗಿದೆ. ಪವಿತ್ರಾ ಬೇಲ್ ಪಡೆಯಲು ಅರ್ಹರಲ್ಲ ಅಂತಾ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಅರ್ಜಿ ಆದೇಶವನ್ನ ಕಾಯ್ದಿರಿಸಿದೆ.
ಈ ಹಿಂದೆ ಪರಪ್ಪನ ಅಗ್ರಹಾರ ಸೇರಿದ್ದ ದರ್ಶನ್‌ಗೆ ವಿಶೇಷ ಆತಿಥ್ಯ ದೊರೆತಿತ್ತು. ಆದ್ರೆ ಈ ಬಾರಿ ಕಿಲ್ಲಿಂಗ್‌ಸ್ಟಾರ್‌ಗೆ ಜೈಲಲ್ಲಿ ಕನಿಷ್ಠ ಸೌಕರ್ಯವೂ ಸಿಗ್ತಿಲ್ವಂತೆ. ಎರಡು ತೆಳುವಾದ ಚಾಪೆ ಮತ್ತು ಬೆಡ್‌ಶೀಟ್ ಬಿಟ್ಟು ಏನನ್ನೂ ನೀಡಿಲ್ಲವಂತೆ. ಅಧಿಕಾರಿಗಳು ಸೌಲಭ್ಯ ನೀಡ್ತಿಲ್ಲ. ಸ್ವಂತ ದುಡ್ಡಲ್ಲ ಸೌಕರ್ಯ ಪಡೆಯಲು ಬಿಡ್ತಿಲ್ಲ. ಒಳ್ಳೆ ಹಾಸಿಗೆ, ದಿಂ ಬ್ಲಾಂಕೆಟ್ ನೀಡಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್ ಕೋಟೆ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರು ಸಮಯಾ ಕೋರಿದ್ದು, ಸೆಪ್ಟೆಂಬರ್ 2ಕ್ಕೆ ವಿಚಾರಣೆ ನಿಗದಿಯಾಗಿದೆ.
ಇನ್ನು ದರ್ಶನ್ ಪರಪ್ಪನ ಅಗ್ರಹಾರ ಸೇರಿದ ಬಳಿಕ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ, ಸಾರ್ವಜನಿಕವಾಗಿ ಕಾಣಿಸಿಕೊಂಡು. ಮೈಸೂರು ಅರಮನೆ ಆವರಣದಲ್ಲಿ ದಸರಾಗಾಗಿ ಬಂದಿರುವ ಗಜಪಡೆ ಜತೆ ಕಾಲ ಕಳೆದು ಫೋಟೋ ತೆಗೆಸಿಕೊಂಡ್ರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಮಾವುತ ಹಾಗೂ ಕಾವಾಡಿಗರಿಗೆ ಕುಕ್ಕರ್ ವಿತರಿಸಿದ್ರು. ಭೀಮ ಆನೆಗೆ ಬೆಲ್ಲ ತಿನ್ನಿಸಿದ ವಿಜಯಲಕ್ಷ್ಮಿ ಅಭಿಮನ್ಯು ಜತೆಗೆ ಫೋಟೋಗೆ ಪೋಸ್ ನೀಡಿದ್ರು. ಈ ಮೂಲಕ ದರ್ಶನ್ ಜೈಲುವಾಸದ ನೋವಿನಿಂದ ಹೊರಬರಲು ಮೀನಾ ತೂಗುದೀಪ್ ಹಾಗೂ ವಿಜಯಲಕ್ಷ್ಮಿ ಯತ್ನಿಸಿದ್ರು.