ಕಲಬುರಗಿ: ರಾಜ್ಯದ ಆ್ಯಂಬುಲೆನ್ಸ್ ವ್ಯವಸ್ಥೆಗೆ (ವಿಶೇಷವಾಗಿ 108 ಸೇವೆಗೆ) ಮೇಜರ್ ಸರ್ಜರಿ ಮಾಡಲಾಗುತ್ತಿದೆ. ಮುಂಬರುವ ಡಿಸೆಂಬರ್ ವೇಳೆಗೆ 750 ಹೊಸ ಆ್ಯಂಬುಲೆನ್ಸ್ ಸೇರ್ಪಡೆ ಜತೆಗೆ ಹೊಸ ಆ್ಯಂಬುಲೆನ್ಸ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ 108 ಆ್ಯಂಬುಲೆನ್ಸ್ ಸೇವೆಗೆ ಈ ವರ್ಷಾಂತ್ಯದೊಳಗೇ ಮೇಜರ್ ಸರ್ಜರಿ ಮಾಡಲಾಗುತ್ತದೆ. ಹೊಸ ಟೆಂಡರ್, ಕಠಿಣ ನಿಯಮಗಳೊಂದಿಗೆ ನೂತನ ಆ್ಯಂಬುಲೆನ್ಸ್ ಸೇವೆ ಆರರಂಭಿಸಲಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದ ಜನರಿಗೆ ತ್ವರಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಶೀಘ್ರದಲ್ಲೇ 750 ನೂತನ ಆ್ಯಂಬುಲೆನ್ಸ್‌ಗಳನ್ನು ಸೇವೆಗೆ ನಿಯೋಜಿಸಲಾಗುವುದು. ಸದ್ಯ 450 ಆ್ಯಂಬುಲೆನ್ಸ್‌ಗಳಿದ್ದು, ಇವು ಸಾಲುತ್ತಿಲ್ಲ. ಹೆಚ್ಚುವರಿ ಆ್ಯಂಬುಲೆನ್ಸ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
10:42 PM (IST) Oct 29
ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿರುವ ವಿವಾದಗಳ ನಡುವೆ ಪುನೀತ್ ರಾಜ್‌ಕುಮಾರ್ ಅವರ ವ್ಯಕ್ತಿತ್ವದ ಮೌಲ್ಯಗಳು ಚರ್ಚೆಗೆ ಬರುತ್ತಿವೆ. ವಿನಯ, ಸಂಯಮ ಮತ್ತು ಸಾರ್ವಜನಿಕ ಹೊಣೆಗಾರಿಕೆ ಕುರಿತು ಅಪ್ಪು ಬದುಕು ನೀಡುವ ಸಂದೇಶ ಇಲ್ಲಿದೆ.
09:36 PM (IST) Oct 29
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಮತ್ತು ಬಲವಂತದ ಮತಾಂತರದ ಬಗ್ಗೆ ಇನ್‌ಸೈಟ್ ಯುಕೆ ಆಘಾತಕಾರಿ ವರದಿ ಬಿಡುಗಡೆ ಮಾಡಿದೆ. 1947ರಲ್ಲಿ ಶೇ.14ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಈಗ ಶೇ.2ಕ್ಕಿಂತ ಕಡಿಮೆಯಾಗಿದ್ದು, ಪ್ರತಿ ವರ್ಷ ಸಾವಿರಾರು ಹೆಣ್ಣುಮಕ್ಕಳನ್ನು ಅಪಹರಿಸಲಾಗುತ್ತಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
08:43 PM (IST) Oct 29
08:33 PM (IST) Oct 29
ನಟ ರಣಬೀರ್ ಕಪೂರ್ ಆಲಿಯಾ ಭಟ್‌ಗೆ ಮಸೈಮಾರಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರಪೋಸ್ ಮಾಡಿದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ. ಮೂರು ಸಿಂಹಗಳ ಎದುರು ನಡೆದ ಆ ವಿಶೇಷ ಕ್ಷಣದ ಬಗ್ಗೆ ತಿಳಿಯಿರಿ.
07:53 PM (IST) Oct 29
07:32 PM (IST) Oct 29
ಸಚಿನ್,ಸೆಹ್ವಾಗ್ ಅವಧಿಯಲ್ಲಿ ಜೆ. ಅರುಣ್ ಕುಮಾರ್ ರಿಂದ, ರಾಬಿನ್ ಉತ್ತಪ್ಪ, ಕರುಣ್ ನಾಯರ್, ಮಯಾಂಕ್ ಅಗರವಾಲ್ ಸೇರಿ ಹಲವರು ನಮಗೆ ಸಿಗುತ್ತಾರೆ. ಅದೇ ರೀತಿ ಇಲ್ಲಿ ಪ್ರತಿಭೆ ಇದ್ದರೂ, ಯುವಿ, ರೈನಾ ರಿಪ್ಲೇಸ್‌ಮೆಂಟ್ ಆಗಿ ಬಂದು ದಿಗ್ಗಜರ ಪೈಪೋಟಿಯಲ್ಲಿ ಮಾಯವಾದ ಆ ಕನ್ನಡಿಗ ಇಂದು ಏನು ಮಾಡುತ್ತಿದ್ದಾರೆ? ಈಗ ಎಲ್ಲಿದ್ದಾರೆ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
07:11 PM (IST) Oct 29
ಪುನೀತ್ ರಾಜ್‌ಕುಮಾರ್ ಅವರ 5ನೇ ಪುಣ್ಯತಿಥಿಯಂದು 'ಪರಮಾತ್ಮ' ಸಿನಿಮಾದ ಆಳವಾದ ಸಂದೇಶವನ್ನು ಸ್ಮರಿಸಲಾಗಿದೆ. ಕೇವಲ ಜಾಲಿಯಾದ ಲವ್ ಸ್ಟೋರಿ ಎನಿಸುವ ಈ ಚಿತ್ರ, ಪ್ರೀತಿ ಮತ್ತು ಅಗಲಿಕೆಯ ನೋವನ್ನು ಅದ್ಭುತವಾಗಿ ಬಿಂಬಿಸುತ್ತದೆ.
06:56 PM (IST) Oct 29
ನವೆಂಬರ್ 1ರಿಂದ ಸಾಮಾನ್ಯ ವರ್ಗಾವಣೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳಿಗೆ ಅವಕಾಶವಿಲ್ಲ ಎಂದು ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವರ್ಗಾವಣೆ ಶಿಫಾರಸುಗಳಿಗಾಗಿ ಸಮಯ ವ್ಯರ್ಥ ಮಾಡದೆ, ಜನಸೇವೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಸಿದ್ದಾರೆ.
06:33 PM (IST) Oct 29
ಸ್ವೀಡನ್‌ನ ಪ್ರಸಿದ್ಧ ಸಂಸ್ಥೆ ಐಕಿಯಾ, ಕನಕಪುರ ರಸ್ತೆಯಲ್ಲಿ ತನ್ನ ನೂತನ 'ಸಿಟಿ ಸೆಂಟರ್ ಸ್ಟೋರ್' ಅನ್ನು 2026 ರ ನವೆಂಬರ್ 5 ರಂದು ಆರಂಭಿಸಲಿದೆ. 80,000 ಚದರ ಅಡಿ ವಿಸ್ತೀರ್ಣದ ಈ ಮಳಿಗೆಯಲ್ಲಿ ಸ್ಥಳೀಯರ ಅಗತ್ಯಕ್ಕೆ ತಕ್ಕಂತೆ 5,200ಕ್ಕೂ ಹೆಚ್ಚು ವೈವಿಧ್ಯಮಯ ಉತ್ಪನ್ನಗಳು ಲಭ್ಯವಾಗಲಿವೆ.
06:26 PM (IST) Oct 29
ಯುವತಿಯೊಬ್ಬರ ಜೊತೆಗಿನ ಸಾಮಾನ್ಯ ವಿಡಿಯೋ ಕರೆಯನ್ನು ಅಶ್ಲೀಲವೆಂದು ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
06:14 PM (IST) Oct 29
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಪ್ರತಿಭಟನೆಗೆ ಸಜ್ಜಾಗುತ್ತಿರುವಾಗಲೇ, ರಾಜ್ಯದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.
06:13 PM (IST) Oct 29
ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಈ ಧಾವೆಗೆ ಸಂಬಂಧಿಸಿ ದರ್ಶನ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ.
05:36 PM (IST) Oct 29
‘ಟಾಕ್ಸಿಕ್’ ಬಳಿಕ ಯಶ್ ಅವರ ಮುಂದಿನ ಗುರಿ ‘ರಾಮಾಯಣ’. ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಣ ಮತ್ತು ಕರ್ನಾಟಕ ವಿತರಣೆಯಲ್ಲೂ ತೊಡಗಿಸಿಕೊಂಡಿರುವ ಯಶ್‌ಗೆ ಈ ಸಿನಿಮಾ ದೊಡ್ಡ ಕಮ್‌ಬ್ಯಾಕ್ ಆಗುತ್ತಾ? ತಿಳಿಯಿರಿ.
05:34 PM (IST) Oct 29
ಮಾಜಿ ಸಿಎಂ ಸಿದ್ದರಾಮಯ್ಯ ಅವರ 'ಸ್ಟಿಂಗ್ ಆಪರೇಷನ್' ವೈರಲ್ ವಿಡಿಯೋ ಸಂಪೂರ್ಣ ನಕಲಿ ಎಂದು ಸಿಸಿಬಿ ತನಿಖೆಯಿಂದ ದೃಢಪಟ್ಟಿದೆ. 2011ರ ಘಟನೆಗೆ ಸಂಬಂಧಿಸಿದಂತೆ 2023ರಲ್ಲಿ ಈ ವಿಡಿಯೋ ಸೃಷ್ಟಿಸಲಾಗಿದ್ದು, ದೆಹಲಿಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
05:13 PM (IST) Oct 29
04:48 PM (IST) Oct 29
ರಾಮಾಯಣ ಸಿನಿಮಾ ಪ್ರೀಮಿಯರ್‌ನಲ್ಲಿ ನಟಿ ಸಾಯಿ ಪಲ್ಲವಿ ರಾವಣನ ಬಗ್ಗೆ ಮಾತನಾಡಿದ್ದಾರೆ. ‘ರಾವಣ ಸಂಪೂರ್ಣ ಕೆಟ್ಟವನಲ್ಲ, ನಮ್ಮೊಳಗಿನ ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳಬೇಕು’ ಎಂಬ ಸಂದೇಶದ ಬಗ್ಗೆ ಅವರು ಹಂಚಿಕೊಂಡ ವಿಚಾರಗಳೇನು?
04:47 PM (IST) Oct 29
04:43 PM (IST) Oct 29
04:36 PM (IST) Oct 29
ರಾಜ್ಯದಲ್ಲಿ ನವೆಂಬರ್ 1ರಿಂದ ಅನ್ವಯವಾಗುವಂತೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹೆಚ್ಚಳದಲ್ಲಿ 7 ರೂ. ನೇರವಾಗಿ ರೈತರಿಗೆ ಪಾವತಿಯಾಗಲಿದ್ದು, ಹೈನುಗಾರರಿಗೆ ಆರ್ಥಿಕ ನೆರವು ಸಿಗಲಿದೆ.
03:49 PM (IST) Oct 29
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಅಭ್ಯಾಸ ನಡೆಸುತ್ತಿರುವ ಶುಬ್ಮನ್ ಗಿಲ್ ಅವರ ಮುಖದ ಮೇಲಿದ್ದ ವಿಚಿತ್ರ ಸಾಧನವೊಂದು ಕುತೂಹಲ ಮೂಡಿಸಿದೆ.
03:32 PM (IST) Oct 29
ರಾಮಾಯಣ ಚಿತ್ರದ 3ಡಿ ಪ್ರದರ್ಶನದ ಬಳಿಕ ಯಶ್ ರಾವಣನ ನಟನೆ, ರಣಬೀರ್ ಕಪೂರ್ ಅಭಿನಯ ಮತ್ತು VFXಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕಥನ ಶೈಲಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, 2028ರ ಭಾಗದ ಬಗ್ಗೆಯೂ ಕುತೂಹಲ ಹೆಚ್ಚಿದೆ.
03:20 PM (IST) Oct 29
03:15 PM (IST) Oct 29
03:10 PM (IST) Oct 29
ಹಾಲಿವುಡ್‌ನ ಲಾಸ್ ಏಂಜಲೀಸ್‌ನಲ್ಲಿ ನಡೆದ ರಾಮಾಯಣ ಗ್ಲೋಬಲ್ ಪ್ರೀಮಿಯರ್‌ನಲ್ಲಿ ರಾವಣನಾಗಿ ನಟ ಯಶ್ ಮಿಂಚಿದರು. ಚಿನ್ನದ ಬ್ರೂಚ್, ಕನ್ನಡದ ಬಗ್ಗೆ ಅವರ ಹೆಮ್ಮೆಯ ಮಾತುಗಳು ಮತ್ತು ನಮಿತ್ ಮಲ್ಹೋತ್ರಾ ಹೇಳಿದ್ದೇನು?
02:58 PM (IST) Oct 29
ಉಪ ಲೋಕಾಯುಕ್ತ ಬಿ ವೀರಪ್ಪ ಅವರು ಇಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆ(BIMS) ಆಸ್ಪತ್ರೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯ ಅವ್ಯವಸ್ಥೆ ಕಂಡು ವೈದ್ಯರ ವಿರುದ್ಧ ಗರಂ ಆದ ಘಟನೆ ನಡೆಯಿತು.
02:53 PM (IST) Oct 29
ತಿರುಮಲದಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದ್ದು, ಜಲಾಶಯಗಳು ಬತ್ತಿ ಹೋಗಿವೆ. ಇದರಿಂದಾಗಿ ಭಕ್ತಾದಿಗಳಿಗೆ ಕರ್ನಾಟಕ ಭವನದಲ್ಲಿ ಕೊಠಡಿ ಕಾಯ್ದಿರಿಸಲು ನೀಡುತ್ತಿದ್ದ ಶಿಫಾರಸು ಪತ್ರಗಳನ್ನು ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದೆ. ಕೇವಲ ಮುಂಗಡವಾಗಿ ಆನ್‌ಲೈನ್ ಬುಕ್ ಮಾಡಿದವರಿಗೆ ಮಾತ್ರ ಸದ್ಯಕ್ಕೆ ಸೀಮಿತ ನೀರು ಒದಗಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇದು ಕೂಡ ನಿಲ್ಲುವ ಸೂಚನೆ ಇದೆ.
02:18 PM (IST) Oct 29
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದ ನಟಿ 2021ರ ಬಳಿಕ ಚಿತ್ರರಂಗದಿಂದ ಕಣ್ಮರೆಯಾಗಿದ್ದಾರೆ. ಪ್ರಸ್ತುತ ಅವರು ದುಬೈನಲ್ಲಿ ನೆಲೆಸಿದ್ದು, ತಮ್ಮ ಕುಟುಂಬದ ವಜ್ರದ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದಾರೆ. ಈ ದಿಢೀರ್ ಅಜ್ಞಾತವಾಸಕ್ಕೆ ಕಾರಣ ಏನು?
01:57 PM (IST) Oct 29
01:39 PM (IST) Oct 29
01:16 PM (IST) Oct 29
12:27 PM (IST) Oct 29
11:46 AM (IST) Oct 29
ಬೆಂಗಳೂರಿನ ಮೆಜೆಸ್ಟಿಕ್ ಅಂಡರ್‌ಪಾಸ್ ಮತ್ತು ಫ್ಲೈಓವರ್ ಬಳಿ ರಾತ್ರಿ ವೇಳೆ ನಡೆಯುವ ದೇಹವ್ಯಾಪಾರ ಹಾಗೂ ವಂಚನೆ ಬಗ್ಗೆ ವ್ಲಾಗರ್ ಒಬ್ಬರು ವಿಡಿಯೋ ಮಾಡಿದ್ದಾರೆ. ಯುವಕನಿಗೆ 8 ಸಾವಿರ ರೂ. ವಂಚಿಸಿದ ಮಹಿಳೆಯರ ಜೊತೆ ನಡೆದ ಗಲಾಟೆ ಮತ್ತು ಪೊಲೀಸರ ಮಧ್ಯಪ್ರವೇಶವನ್ನು ಇದರಲ್ಲಿ ಸೆರೆಹಿಡಿಯಲಾಗಿದೆ.
10:45 AM (IST) Oct 29
09:46 AM (IST) Oct 29
ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇವಾಲಯದ ಎದುರು ಬಾಳೆಕಂದು ಕಡಿಯುವ ಸಂಪ್ರದಾಯವಿದ್ದು, ರಾಜವಂಶಸ್ಥ ನಂಜರಾಜ ಅರಸು ಅವರು ಈ ಧಾರ್ಮಿಕ ಆಚರಣೆಯನ್ನು ನೆರವೇರಿಸುವರು. ಇನ್ನು, ಸಂಪ್ರದಾಯದಂತೆ ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ.
09:43 AM (IST) Oct 29
'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಚಿತ್ರದ 3ಡಿ ಪ್ರೀಮಿಯರ್ ಪ್ರದರ್ಶನವು ಹಾಲಿವುಡ್‌ನ 'ದಿ ಲಾರ್ಡ್ ಆಫ್ ದಿ ರಿಂಗ್ಸ್' ಚಿತ್ರವನ್ನು ಮೀರಿಸುವ ದೃಶ್ಯವೈಭವ ಹೊಂದಿದೆ ಎಂದು ಪ್ರೇಕ್ಷಕರು ಬಣ್ಣಿಸಿದ್ದಾರೆ. ರಣಬೀರ್ ಕಪೂರ್ ಅವರ ದೈವಿಕ ನಟನೆ ಹಾಗೂ ರಾವಣನಾಗಿ ಯಶ್ ಅವರ ಅಬ್ಬರದ ಅಭಿನಯ ಚಿತ್ರದ ಪ್ರಮುಖ ಹೈಲೈಟ್ ಆಗಿದೆ.
09:33 AM (IST) Oct 29
ಸರ್ಕಾರಿ ಗಾಯರಾಣು ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಲಂಚ ಪಡೆದು ಇದಕ್ಕೆ ಅವಕಾಶ ನೀಡಿದ ಪಿಡಿಒ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಜಮೀನು ರಕ್ಷಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
09:16 AM (IST) Oct 29
ಪತಿ ಪರಾರಿಯಾಗಿದ್ದು, ಪೊಲೀಸರು ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಪಾವಗಡದಲ್ಲಿ ಮೊಬೈಲ್ ಟವರ್ ಏರಿ ಹೈಡ್ರಾಮಾ ನಡೆಸಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಪತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆಕೆಯನ್ನು ಮನವೊಲಿಸಿ ಕೆಳಗಿಳಿಸಿದ್ದಾರೆ.
09:02 AM (IST) Oct 29
08:26 AM (IST) Oct 29
ಬೆಂಗಳೂರಲ್ಲಿ ಕೇವಲ 59 ಲಕ್ಷ ಮತದಾರರಿದ್ದರೂ ರಾಜ್ಯ ಚುನಾವಣಾ ಆಯೋಗ 90 ಲಕ್ಷ ವೋಟರ್ ಐಡಿ ಮುದ್ರಿಸಿ 20 ಕೋಟಿ ರೂ. ಹಗರಣ ನಡೆಸಿದೆ ಎಂದು ಆರ್. ಅಶೋಕ್ ಆರೋಪ. ಮುಂಬರುವ ಚುನಾವಣೆಯಲ್ಲಿ 31 ಲಕ್ಷ ಬೋಗಸ್ ಕಾರ್ಡ್‌ಗಳ ಮೂಲಕ ಅಕ್ರಮಕ್ಕೆ ಕಾಂಗ್ರೆಸ್ ಸರ್ಕಾರ ಪ್ಲಾನ್? ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯ.
08:15 AM (IST) Oct 29