ಸಚಿನ್,ಸೆಹ್ವಾಗ್ ಅವಧಿಯಲ್ಲಿ ಜೆ. ಅರುಣ್ ಕುಮಾರ್ ರಿಂದ, ರಾಬಿನ್ ಉತ್ತಪ್ಪ, ಕರುಣ್ ನಾಯರ್, ಮಯಾಂಕ್ ಅಗರವಾಲ್ ಸೇರಿ ಹಲವರು ನಮಗೆ ಸಿಗುತ್ತಾರೆ. ಅದೇ ರೀತಿ ಇಲ್ಲಿ ಪ್ರತಿಭೆ ಇದ್ದರೂ, ಯುವಿ, ರೈನಾ ರಿಪ್ಲೇಸ್ಮೆಂಟ್ ಆಗಿ ಬಂದು ದಿಗ್ಗಜರ ಪೈಪೋಟಿಯಲ್ಲಿ ಮಾಯವಾದ ಆ ಕನ್ನಡಿಗ ಇಂದು ಏನು ಮಾಡುತ್ತಿದ್ದಾರೆ? ಈಗ ಎಲ್ಲಿದ್ದಾರೆ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಕ್ರಿಕೆಟ್ನಲ್ಲಿ ಪ್ರತಿಭೆಯ ಜತೆಗೆ ಲಕ್ ಬೇಕು ಎನ್ನುವುದಕ್ಕೆ ನಮ್ಮ ಮುಂದೆ ಹಲವಾರು ನಿರ್ದನಗಳಿವೆ. ಅದರಲ್ಲಿ ಸಚಿನ್,ಸೆಹ್ವಾಗ್ ಅವಧಿಯಲ್ಲಿ ಜೆ. ಅರುಣ್ ಕುಮಾರ್ ರಿಂದ, ರಾಬಿನ್ ಉತ್ತಪ್ಪ, ಕರುಣ್ ನಾಯರ್, ಮಯಾಂಕ್ ಅಗರವಾಲ್ ಸೇರಿ ಹಲವರು ನಮಗೆ ಸಿಗುತ್ತಾರೆ. ಅದೇ ರೀತಿ ಇಲ್ಲಿ ಪ್ರತಿಭೆ ಇದ್ದರೂ, ಯುವಿ, ರೈನಾ ರಿಪ್ಲೇಸ್ಮೆಂಟ್ ಆಗಿ ಬಂದು ದಿಗ್ಗಜರ ಪೈಪೋಟಿಯಲ್ಲಿ ಮಾಯವಾದ ಆ ಕನ್ನಡಿಗ ಇಂದು ಏನು ಮಾಡುತ್ತಿದ್ದಾರೆ? ಈಗ ಎಲ್ಲಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
ಐಪಿಎಲ್ನಲ್ಲಿ ಇತಿಹಾಸ!
ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿರುವ ಮನೀಶ್ ಪಾಂಡೆ, ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಭವಿಷ್ಯದ ಸೂಪರ್ಸ್ಟಾರ್ ಎಂದೇ ಗುರುತಿಸಲ್ಪಟ್ಟಿದ್ದರು. ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರ ನಂತರ ಭಾರತದ ಮಧ್ಯಮ ಕ್ರಮಾಂಕ ಮುನ್ನಡೆಸಬಲ್ಲ ಸಮರ್ಥ ಆಟಗಾರ ಎಂದೇ ಇವರನ್ನು ಬಿಂಬಿಸಲಾಗಿತ್ತು. ಆದರೆ ಮುಂದೆ ಆಗಿದ್ದೇ ಬೇರೆ.
ಯುವಿ-ರೈನಾ ರಿಪ್ಲೇಸ್ಮೆಂಟ್ ಆಗಿ ಮಿಂಚಿದ ಕ್ಷಣ!
ಆಸ್ಟ್ರೇಲಿಯಾ ವಿರುದ್ಧದ ಆ ಐತಿಹಾಸಿಕ ಶತಕ ಎಂದಾದರೂ ಮರೆಯಲು ಸಾಧ್ಯವೆ? 2016ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 104 ರನ್ ಬಾರಿಸಿ ಭಾರತಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದರು. ಯುವಿ-ರೈನಾ ಜಾಗಕ್ಕೆ ತಕ್ಕ ಆಟಗಾರ ಸಿಕ್ಕಿದ ಎಂದೇ ಇಡೀ ದೇಶ ಸಂಭ್ರಮಿಸಿತ್ತು.
ಅಸಾಧ್ಯ ಫೀಲ್ಡಿಂಗ್ ಸಾಮರ್ಥ್ಯ!
ಯುವರಾಜ್ ಮತ್ತು ರೈನಾ ಅವರಂತೆಯೇ ಮನೀಶ್ ಪಾಂಡೆ ಕೂಡ ಮೈದಾನದಲ್ಲಿ ಚಿರತೆಯಂತೆ ಫೀಲ್ಡಿಂಗ್ ಮಾಡುತ್ತಿದ್ದರು. ಬೌಂಡರಿ ಲೈನ್ಗಳಲ್ಲಿ ಅದ್ಭುತ ಕ್ಯಾಚ್ಗಳನ್ನು ಹಿಡಿಯುವಲ್ಲಿ ಅವರು ಫೇಮಸ್ ಆಗಿದ್ದರು. ಪ್ರತಿಭೆ ಇದ್ದರೂ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತವಾಗಿ ದೊಡ್ಡ ಸ್ಕೋರ್ ಮಾಡಲು ಮನೀಶ್ ವಿಫಲರಾದರು.
ದಿಗ್ಗಜರು ಮತ್ತು ಯುವ ಆಟಗಾರರ ಪೈಪೋಟಿ!
ಇದೇ ಸಮಯದಲ್ಲಿ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್ ಅವರಂತಹ ಯುವ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸ್ಥಾನವನ್ನು ಗಿಟ್ಟಿಸಿಕೊಂಡರು. ತಂಡದ ಕಾಂಬಿನೇಷನ್ ಬದಲಾಗಿ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿ ಬಂದಿದ್ದರಿಂದ ಪ್ರಮುಖ ಬ್ಯಾಟರ್ಗಳ ಸ್ಥಾನದ ಪೈಪೋಟಿ ಮತ್ತಷ್ಟು ಹೆಚ್ಚಾಯಿತು. 2021ರ ನಂತರ ಮನೀಶ್ ಟೀಮ್ ಇಂಡಿಯಾದಿಂದ ಸಂಪೂರ್ಣವಾಗಿ ಹೊರಬಿದ್ದರು.
ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ?
ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದಿದ್ದರೂ ಕರ್ನಾಟಕ ರಣಜಿ ತಂಡದ ಪರ ಸತತವಾಗಿ ಆಡುತ್ತಾ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಜೊತೆ ಗುರುತಿಸಿಕೊಂಡಿದ್ದ ಇವರು, ಪ್ರಸ್ತುತ ಐಪಿಎಲ್ ಹಾಗೂ ದೇಶಿ ಟಿ20 ಲೀಗ್ಗಳಲ್ಲಿ ಸಕ್ರಿಯರಾಗಿದ್ದಾರೆ. ಇದು ಕನ್ನಡದ ದಂತಕಥೆಯಲ್ಲಿನ ಮತ್ತೊಂದು ಕಥೆ.






