ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇವಾಲಯದ ಎದುರು ಬಾಳೆಕಂದು ಕಡಿಯುವ ಸಂಪ್ರದಾಯವಿದ್ದು, ರಾಜವಂಶಸ್ಥ ನಂಜರಾಜ ಅರಸು ಅವರು ಈ ಧಾರ್ಮಿಕ ಆಚರಣೆಯನ್ನು ನೆರವೇರಿಸುವರು. ಇನ್ನು, ಸಂಪ್ರದಾಯದಂತೆ ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ.
ಹಾಸನ: ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವ ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರೋತ್ಸವ ಗುರುವಾರದಿಂದ ಆರಂಭವಾಗಲಿದೆ. ಈ ಐತಿಹಾಸಿಕ ಉತ್ಸವ ಅಕ್ಟೋಬರ್ 29ರಿಂದ ನವೆಂಬರ್ 8ರವರೆಗೆ ಒಟ್ಟು 11 ದಿನಗಳ ಕಾಲ ನಡೆಯಲಿದೆ.
ಅಕ್ಟೋಬರ್ 29ರ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುತ್ತದೆ. ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇವಾಲಯದ ಎದುರು ಬಾಳೆಕಂದು ಕಡಿಯುವ ಸಂಪ್ರದಾಯವಿದ್ದು, ರಾಜವಂಶಸ್ಥ ನಂಜರಾಜ ಅರಸು ಅವರು ಈ ಧಾರ್ಮಿಕ ಆಚರಣೆಯನ್ನು ನೆರವೇರಿಸುವರು.
srihassanaambatemple.com/ ವಾಟ್ಸ್ಆ್ಯಪ್ ಸಂಖ್ಯೆ 73539 39611ನಲ್ಲೇ ಟಿಕೆಟ್ ಬುಕ್ ಮಾಡಿ
ಇನ್ನು, ಸಂಪ್ರದಾಯದಂತೆ ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಭಕ್ತರಿಗೆ ದೇವಿಯ ಉಚಿತ ದರ್ಶನದ ಅವಕಾಶವಿದ್ದು, ಸುಗಮ ದರ್ಶನ ಬಯಸುವ ಭಕ್ತರಿಗಾಗಿ ವಿಶೇಷ ದರ್ಶನದ ವ್ಯವಸ್ಥೆ ಇರುತ್ತದೆ. ಭಕ್ತರು ಬಯಸಿದಲ್ಲಿ 1000, 300 ರು.ಗಳ ದರ್ಶನ ಟಿಕೆಟ್, ಲಾಡು ಟಿಕೆಟ್,ಇ-ಹುಂಡಿ ಹಾಗೂ ದೇಣಿಗೆ ಕಾಣಿಕೆಯನ್ನು ಆನ್ಲೈನ್ ಮುಖಾಂತರ https://srihassanaambatemple.com/ ವಾಟ್ಸಾಪ್ ಸಂಖ್ಯೆ 73539 39611 ಮುಖಾಂತರ ಬುಕ್ ಮಾಡಬಹುದು.
ಗೋಲ್ಡ್ಕಾರ್ಡ್ ದರ್ಶನ ಸಮಯ: ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ, ಪ್ರೋಟೋಕಾಲ್ ದರ್ಶನದ ಸಮಯ: ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಅವಕಾಶವಿದೆ.
ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ದಿವ್ಯಾಂಗರ ಅನುಕೂಲಕ್ಕಾಗಿ ಉಚಿತ ಬಸ್ ಸೇವೆಯನ್ನು ಕಲ್ಪಿಸಲಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಹಾಸನಾಂಬೆಯ ದರ್ಶನಕ್ಕೆ ಸ್ಥಳೀಯರಿಗೆ ಮೊದಲ ಆದ್ಯತೆ ಕೋರಿ ಪ್ರತಿಭಟನೆ
ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಹಾಸನ ತಾಲೂಕಿನ ಸ್ಥಳೀಯ ಭಕ್ತರಿಗೆ ಪ್ರತ್ಯೇಕ ಸಮಯದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು, ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಬಾಗಿಲು ಮುಚ್ಚಬಾರದು ಹಾಗೂ ಭಕ್ತರಿಗೆ ಕುಂಕುಮ ಮತ್ತು ಹೂವು ವಿತರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂಪರ ಮತ್ತು ಧಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹಾಸನಾಂಬ, ಸಿದ್ದೇಶ್ವರ ಸ್ವಾಮಿ ಪುಣ್ಯಕ್ಷೇತ್ರ ಸೇವಾ ಸಮಿತಿ, ವರ್ತಕರ ಸಂಘ, ಅರ್ಚಕರ ಸಂಘ ಸೇರಿ ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಜಾತ್ರಾ ಮಹೋತ್ಸವದ ನಿರ್ವಹಣೆ ಹಾಗೂ ಗುತ್ತಿಗೆ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.






