ಜಿಂಬಾಬ್ವೆ ವಿರುದ್ಧದ ಅಂತಿಮ ಏಕದಿನ ಪಂದ್ಯದ ನಂತರ ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ ಕೈಕುಲುಕದೆ ನಿರ್ಲಕ್ಷಿಸಿದ ವಿಡಿಯೋ ವೈರಲ್ ಆಗಿದೆ. ನಾಯಕತ್ವ ಬದಲಾವಣೆಯ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳಿಗೆ ಈ ಘಟನೆ ಮತ್ತಷ್ಟು ಪುಷ್ಟಿ ನೀಡಿದೆ.

ಟೀಂ ಇಂಡಿಯಾದ ಮಹಿಳಾ ತಂಡದಲ್ಲಿ ಸ್ಮೃತಿ ಮಂದಾನ ಮತ್ತು ಹರ್ಮನ್ ಪ್ರೀತ್ ಕೌರ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳಿವೆ. ಆದರೆ ಅವರಿಬ್ಬರೂ 'ಏನಿಲ್ಲ, ಏನಿಲ್ಲ ನನ್ನ-ನಿನ್ನ ನಡುವೆ ಏನಿಲ್ಲ' ಎಂದು ಹೇಳಿಕೊಂಡಿದ್ದಾರೆ. ಆದರೆ ನಿನ್ನೆ ನಡೆದ ಘಟನೆಯೊಂದು ಹಲವು ಪ್ರಶ್ನೆಗಳನ್ನ ಹುಟ್ಟಿಹಾಕಿದೆ.

ಅಂದ್ಹಾಗೆ ನಿನ್ನೆ ಜಿಂಬಾಬ್ವೆ ವಿರುದ್ಧ ಭಾರತ ತಂಡವು ಅಂತಿಮ ಏಕದಿನ ಪಂದ್ಯವನ್ನ ಆಡಿತು. 3-0 ಅಂತರದಲ್ಲಿ ಸರಣಿ ಗೆದ್ದ ಭಾರತ ತಂಡ, ಟ್ರೋಫಿ ಸ್ವೀಕರಿಸಿ ಸಂಭ್ರಮಿಸಿತ್ತು. ಇನ್ನು ಪಂದ್ಯ ಮುಗಿಯುತ್ತಿದ್ದಂತೆಯೇ ಒಂದು ಘಟನೆ ನಡೆಯಿತು. ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಚರ್ಚೆಗೆ ಕಾರಣವಾಗಿದೆ.

ವಿಡಿಯೋದಲ್ಲಿ ಏನಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯವು ವಡೋದರಾದಲ್ಲಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಆಟಗಾರ್ತಿಯರು ಪರಸ್ಪರ ಶುಭಾಶಯ ಕೋರುತ್ತಿದ್ದರು. ಹರ್ಮನ್‌ಪ್ರೀತ್ ಕೌರ್ ಸ್ಮೃತಿ ಮಂದಾನಾ ಅವರ ಕಡೆಗೆ ಹೋದರು. ಆದರೆ ಸ್ಮೃತಿ ಬೇರೆಡೆ ನೋಡಿದರು. ಇಬ್ಬರೂ ಪರಸ್ಪರ ಕೈಕುಲುಕದೇ ಹೋದರು.

ಬೆನ್ನಲ್ಲೇ ಅವರಿಬ್ಬರ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇಬ್ಬರೂ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರ್ತಿಯರಾಗಿದ್ದಾರೆ. ಮೈದಾನದಲ್ಲಿ ನಡೆದ ಒಂದು ಸಣ್ಣ ಕ್ಷಣ ಅಭಿಮಾನಿಗಳ ಗಮನ ಸೆಳೆದಿದೆ. ಸ್ಮೃತಿ ಉದ್ದೇಶಪೂರ್ವಕವಾಗಿ ಹರ್ಮನ್‌ಪ್ರೀತ್ ಅವರನ್ನು ನಿರ್ಲಕ್ಷಿಸಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಡಿದೆ.

ಯಾಕೆ ಅವರಿಬ್ಬರು ಸುದ್ದಿ ಆಗ್ತಿದ್ದಾರೆ..?

ಟೀಂ ಇಂಡಿಯಾದ ನಾಯಕ ಸ್ಥಾನದಿಂದ ಕೌರ್ ಕೆಳಗೆ ಇಳಿದಿದ್ದಾರೆ. ಬೆನ್ನಲ್ಲೇ ಸ್ಮೃತಿ ಮಂದಾನಾ ಅವರಿಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ. ಕೌರ್‍‌ ಅವರಿಂದ ಸ್ಮೃತಿ ಮಂದಾನಾ ಕ್ಯಾಪ್ಟನ್ಸಿ ಸ್ಥಾನವನ್ನು ಕಿತ್ತುಕೊಂಡಿದ್ದಾರೆ ಅನ್ನೋದು ಕೆಲವು ಅಭಿಮಾನಿಗಳ ಆರೋಪ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಹೇಳಲಾಗಿದೆ.

Scroll to load tweet…

ಎರಡನೇ ಏಕದಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ 121 ಎಸೆತಗಳಲ್ಲಿ 126 ರನ್ ಗಳಿಸಿದರು. ಸ್ಮೃತಿ ಮಂದಾನ ಅವರು ಶತಕ ಪೂರೈಸಿದ ನಂತರ ಶ್ಲಾಘಿಸಿದರು. ಸ್ಮೃತಿ ಅವರು ಕೌರ್‍‌ ಅವರನ್ನು ಹೊಗಳಿದ್ದು, ಭಾರೀ ಸುದ್ದಿ ಆಗಿತ್ತು. ಎರಡನೇ ಪಂದ್ಯದಲ್ಲಿ ಹೊಗಳಿ, ಮೂರನೇ ಪಂದ್ಯ ಮುಗಿದ ಬಳಿಕ ಹ್ಯಾಂಡ್‌ಶೇಕ್ ಮಾಡದಿರೋದು ಇದೀಗ ಚರ್ಚೆಗೆ ಕಾರಣವಾಗಿದೆ.

ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ.. 39.5 ಓವರ್‍‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ ತಂಡ ಎರಡು ವಿಕೆಟ್ ಕಳೆದುಕೊಂಡು 17 ಓವರ್‍‌ನಲ್ಲಿ ನಿಗದಿತ ಗುರಿಯನ್ನ ಮುಟ್ಟಿತು. ಟೀಂ ಇಂಡಿಯಾ ಪರ ಪ್ರತಿಕಾ 59 ರನ್‌ಗಳಿಸಿದ್ರೆ, ಶಫಾಲಿ ವರ್ಮಾ 51 ರನ್‌ಗಳಿಸಿ ತಂಡವನ್ನು ಗೆಲ್ಲಿಸಿಕೊಟ್ಟರು.