LIVE NOW
Published : Jan 28, 2026, 07:26 AM ISTUpdated : Jan 28, 2026, 10:46 AM IST

State News Live: Kalaburgi - ಅಣ್ಣನ ಅಂತ್ಯಕ್ರಿಯೆ ಮುಗಿಸಿ ಬಂದ ತಮ್ಮನೂ ಮರಣ! ಸಾವಲ್ಲೂ ಒಂದಾದ ಸಹೋದರರು

ಸಾರಾಂಶ

ಬೆಂಗಳೂರು (ಜ.28): ಗಾಂಧೀಜಿ ಹೆಸರಿನ 'ಮನರೇಗಾ' ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ 'ಜಿ ರಾಮ್ ಜಿ' ಕಾಯ್ದೆ ವಿರುದ್ದ ಬೃಹತ್ ಪ್ರತಿಭಟನೆ, ಲೋಕಭವನ ಚಲೋ ಮೂಲಕ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. 'ಮನರೇಗಾ' ಮರು ಜಾರಿಯಾಗುವವರೆಗೆ ಹಂತ ಹಂತವಾಗಿ ಹೋರಾಟ ತೀವ್ರ ಗೊಳಿಸಲಾಗುವುದು. ಕರಾಳ ಕೃಷಿ ಕಾಯ್ದೆ ವಿರುದ್ಧ ನಡೆದ ರೈತ ಚಳವಳಿ ಮಾದರಿಗೆ ಈ ಹೋರಾಟ ಕೊಂಡೊಯ್ಯುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

10:46 AM (IST) Jan 28

Kalaburgi - ಅಣ್ಣನ ಅಂತ್ಯಕ್ರಿಯೆ ಮುಗಿಸಿ ಬಂದ ತಮ್ಮನೂ ಮರಣ! ಸಾವಲ್ಲೂ ಒಂದಾದ ಸಹೋದರರು

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ, ಹಿರಿಯ ಸಹೋದರ ಬಸವಂತರಾಯ ಸಾಣಾಕ್ ಅವರ ಅಂತ್ಯಕ್ರಿಯೆ ನಡೆದ 24 ಗಂಟೆಗಳಲ್ಲೇ, ಅವರ ಸಾವಿನ ನೋವಿನಲ್ಲಿದ್ದ ಕಿರಿಯ ಸಹೋದರ ಶಿವರಾಯ ಸಾಣಾಕ್ ಕೂಡ ನಿಧನರಾಗಿದ್ದಾರೆ. 

Read Full Story

10:26 AM (IST) Jan 28

10 ಸಾವಿರದೊಳಗೆ ಸಿಗುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು - ಕ್ಯಾಮೆರಾ, ಬ್ಯಾಟರಿ ಸೂಪರ್!

10 ಸಾವಿರದೊಳಗಿನ ಟಾಪ್ 5 ಸ್ಮಾರ್ಟ್‌ಫೋನ್‌ಗಳು: 10 ಸಾವಿರ ಬಜೆಟ್‌ನಲ್ಲಿ ಒಳ್ಳೆ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ? ಸ್ಯಾಮ್‌ಸಂಗ್, ರೆಡ್‌ಮಿ, ಪೋಕೋ, ಐಟೆಲ್ ಬ್ರಾಂಡ್‌ಗಳಿಂದ ಅದ್ಭುತ ಫೀಚರ್‌ಗಳೊಂದಿಗೆ ಲಭ್ಯವಿರುವ ಬೆಸ್ಟ್ ಫೋನ್‌ಗಳ ಪೂರ್ಣ ವಿವರ ಮತ್ತು ಬೆಲೆಗಳೆಷ್ಟು ನೋಡೋಣ ಬನ್ನಿ

Read Full Story

10:16 AM (IST) Jan 28

ಬೆಂಗಳೂರು - ಮೋಜು ಮಸ್ತಿಗೆ ಡ್ರಗ್ಸ್ ದಂಧೆ - ಬಿಬಿಎಂ ವಿದ್ಯಾರ್ಥಿನಿ ಅರೆಸ್ಟ್‌!

ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಉದ್ಯಮಿ ಪುತ್ರಿ ಹಾಗೂ ಆಕೆಯ ಸ್ನೇಹಿತನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ನಿವಾಸಿ ಮೇಘನಾ ಹಾಗೂ ಆಕೆಯ ಸ್ನೇಹಿತ ಆದಿತ್ಯ ಬಂಧಿತರಾಗಿದ್ದು, ಆರೋಪಿಗಳಿಂದ 4 ಕೆಜಿ ಗಾಂಜಾ, 37 ಗ್ರಾಂ ಎಡಿಎಂಎ, 35 ಗ್ರಾಂ ಹ್ಯಾಶಿಶ್ ಜಪ್ತಿ

Read Full Story

10:15 AM (IST) Jan 28

ಜಪಾನ್‌ದಲ್ಲಿ ಮತ್ತೊಮ್ಮೆ ಪ್ರಶಸ್ತಿ ಪಡೆದ ಇಕೋ ಸೈಕಲ್ - ಕನ್ನಡಿಗ ಡಾ. ಶ್ರೀಹರಿ ಚಂದ್ರಘಾಟಗಿ ಅಪೂರ್ವ ಸಾಧನೆ

ಜಪಾನ್‌ನಲ್ಲಿರುವ ಅನಿವಾಸಿ ಕನ್ನಡಿಗ ಡಾ. ಶ್ರೀಹರಿ ಚಂದ್ರಘಾಟಗಿ ಅವರ ಇಕೋ ಸೈಕಲ್ ಕಾರ್ಪೊರೇಷನ್ ಸಂಸ್ಥೆಯು ಪ್ರತಿಷ್ಠಿತ 'ಗುಡ್ ಕಂಪನಿ ಪ್ರಶಸ್ತಿ'ಗೆ ಭಾಜನವಾಗಿದೆ. ಕಳೆದ ಮೂರು ತಿಂಗಳಲ್ಲಿ ಇದು ಸಂಸ್ಥೆಗೆ ದೊರೆತ ಎರಡನೇ ಪ್ರಮುಖ ಪ್ರಶಸ್ತಿಯಾಗಿದೆ. 

Read Full Story

09:54 AM (IST) Jan 28

ಪೊಲೀಸ್ರಿಗೆ ತಲೆನೋವಾದ ಸೀರಿಯಲ್ ನಟಿ ಸಂಸಾರದ ಗಲಾಟೆ! ನೀಡಿರೋ ದೂರಿಗೆ ತಕ್ಕ ಸಾಕ್ಷ್ಯ ಇನ್ನೂ ಕೊಟ್ಟಿಲ್ಲ ಕಾವ್ಯ ಗೌಡ!

ಸೀರಿಯಲ್ ನಟಿ ಕಾವ್ಯ ಗೌಡ ಅವರ ಕೌಟುಂಬಿಕ ಗಲಾಟೆ ಪ್ರಕರಣವು ಜಟಿಲಗೊಂಡಿದೆ. ತಮ್ಮ ಪತಿಗೆ ಚಾಕು ಇರಿಯಲಾಗಿದೆ ಎಂದು ಕಾವ್ಯ ದೂರು ನೀಡಿದರೆ, ಅವರ ವಿರುದ್ಧವೇ ಸಾಕ್ಷ್ಯಗಳೊಂದಿಗೆ ಪ್ರತಿದೂರು ದಾಖಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ಮನೆಗೆಲಸದವರ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

Read Full Story

09:52 AM (IST) Jan 28

ಶಿರಸಿ ಮಾರುಕಟ್ಟೆಯಲ್ಲಿ ಬಲು ದುಬಾರಿಯಾದ ಗೋಕರ್ಣ ಮೆಣಸು - ದರ ಏರಿಕೆಗೆ ಕಾರಣ ಏನು?

ಶಿರಸಿ ಸಂತೆ ಮಾರುಕಟ್ಟೆಯಲ್ಲಿ ಗೋಕರ್ಣ ಮೆಣಸು ಮತ್ತು ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ. ಬೆಳೆ ನಷ್ಟ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಗೋಕರ್ಣ ಮೆಣಸಿನ ದರ ಕೆಜಿಗೆ ₹200 ತಲುಪಿದ್ದರೆ, ತಮಿಳುನಾಡಿನಿಂದ ಪೂರೈಕೆ ಕುಂಠಿತಗೊಂಡಿರುವ ನುಗ್ಗೆಕಾಯಿ ದರ ₹300ರ ಗಡಿ ದಾಟಿದೆ.

Read Full Story

09:27 AM (IST) Jan 28

Breaking - ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಇದ್ದ ವಿಮಾನ ಲ್ಯಾಂಡಿಂಗ್‌ ವೇಳೆ ಪತನ, ಗಂಭೀರ ಗಾಯ!

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಬಾರಾಮತಿಯಲ್ಲಿ ಇಳಿಯುವ ಪ್ರಯತ್ನದಲ್ಲಿ ಪತನಗೊಂಡಿದೆ.

 

Read Full Story

09:23 AM (IST) Jan 28

ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪೊಲೀಸರ ಖೆಡ್ಡಾಗೆ ಬಿದ್ದಿದ್ದೇಗೆ?

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಾಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ರಾಜೀವ್ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಶಿಡ್ಲಘಟ್ಟ ಕೋರ್ಟ್ ವಜಾಗೊಳಿಸಿದೆ.

Read Full Story

09:20 AM (IST) Jan 28

ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ - ಮತ್ತಷ್ಟು ವಸ್ತುಗಳು ಪತ್ತೆ

ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ 10ನೇ ದಿನವಾದ ಮಂಗಳವಾರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಪಕ್ಕದ ಕಂಬದ ತೊಲೆಯಲ್ಲಿ ಪ್ರಾಚೀನ ಶಾಸನ ಮತ್ತು ಲಿಂಗು ಆಕಾರದ ಸಣ್ಣ ಶಿಲೆ ಪತ್ತೆಯಾಗಿದೆ.

Read Full Story

09:19 AM (IST) Jan 28

Hubballi - ಸಾರ್ವಕಾಲಿಕ ಆದಾಯ ದಾಖಲಿಸಿದ ನೈಋತ್ಯ ರೈಲ್ವೆ - ಸಾವಿರಾರು ಕೋಟಿಯ ಹೊಸ ಮೈಲಿಗಲ್ಲು

ಹುಬ್ಬಳ್ಳಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ನೈಋತ್ಯ ರೈಲ್ವೆಯು ಪ್ರಸಕ್ತ ಸಾಲಿನಲ್ಲಿ ಗಳಿಸಿದ ಆದಾಯ ಎಷ್ಟು ಎಂಬುದನ್ನು ಘೋಷಿಸಿದೆ. ವಂದೇ ಭಾರತ್ ಸೇರಿದಂತೆ ಹೊಸ ರೈಲುಗಳ ಸೇರ್ಪಡೆ, 'ಕವಚ್' ಸುರಕ್ಷತಾ ವ್ಯವಸ್ಥೆ ಮತ್ತು 'ಮೇರಿ ಸಹೇಲಿ' ಯಂತಹ ಯೋಜನೆಗಳ ಮೂಲಕ ಪ್ರಯಾಣಿಕರ ಅನುಭವವನ್ನು ಸುಧಾರಿಸಿದೆ.

Read Full Story

08:33 AM (IST) Jan 28

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ - ಶಾಸಕ ಪ್ರದೀಪ್‌ ಈಶ್ವರ್‌

ಬಡವರ, ಹಸಿದವರ ಹೊಟ್ಟೆ ತುಂಬಿಸಿದ ಸಿದ್ದರಾಮಯ್ಯ ಅವರು ನನ್ನ ಪಾಲಿನ ‘ಶ್ರೀರಾಮಚಂದ್ರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಹಾಡಿಹೊಗಳಿದ್ದಾರೆ.

Read Full Story

08:19 AM (IST) Jan 28

150 ದೇಶಗಳಿಗೆ ಭಾರತದ ಇಂಧನ - ಮೋದಿ

ಇಂಧನ ಭದ್ರತೆಯಿಂದ ಭಾರತ ಈಗ ಇಂಧನ ಸ್ವಾತಂತ್ರ್ಯದತ್ತ ದಾಪುಗಾಲು ಹಾಕುತ್ತಿದೆ. ಭಾರತದಲ್ಲಿರುವ ಬೃಹತ್‌ ಜನಸಂಖ್ಯೆ ಹಾಗೂ ಹೆಚ್ಚುತ್ತಿರುವ ಆರ್ಥಿಕ ಪ್ರಗತಿಯಿಂದಾಗಿ ಪೆಟ್ರೋ ಕೆಮಿಕಲ್‌ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ.

Read Full Story

08:16 AM (IST) Jan 28

Shivamogga - ಹೊಸನಗರ-ಬೆಂಗಳೂರು ಸ್ಲೀಪರ್‌ ಬಸ್‌ಗೆ ಭೀಕರ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ಪಾರಾದ 40 ಪ್ರಯಾಣಿಕರು!

ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್ಸನ್ನು ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದರಿಂದ ಸುಮಾರು 40 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read Full Story

08:09 AM (IST) Jan 28

ರಾಮನಗರದ ಬಿಸಿ ಕಲ್ಲಿನ ಮೇಲೆ ಬರಿಗಾಲಲ್ಲಿ ‘ಶೋಲೆ’ ಡ್ಯಾನ್ಸ್‌ಗೆ ಅಮ್ಮ ಆಕ್ಷೇಪ - ಹೇಮಾಮಾಲಿನಿ

‘ಮೇ ತಿಂಗಳ ಉರಿಬಿಸಿಲಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಬಿಸಿಲಿನ ಕಾವಿಗೆ ಸುಡುತ್ತಿದ್ದ ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ನೃತ್ಯ ಮಾಡದಂತೆ ನನ್ನ ಅಮ್ಮ ಎಚ್ಚರಿಸಿದ್ದರು’ ಎಂದು ನೆನಪುಗಳನ್ನು ಹೇಮಾಮಾಲಿನಿ ಮೆಲುಕು ಹಾಕಿದ್ದಾರೆ.

Read Full Story

07:55 AM (IST) Jan 28

ಎಲ್ಲ ಗ್ರಾಪಂಗಳಿಗೆ ಗಾಂಧಿ ಹೆಸರು - ಸಿಎಂ, ಡಿಸಿಎಂ

ರಾಜ್ಯದ ಎಲ್ಲಾ 6000 ಗ್ರಾಪಂಗಳಿಗೂ ಮಹಾತ್ಮ ಗಾಂಧೀಜಿ ಅವರ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದ್ದಾರೆ.

Read Full Story

07:28 AM (IST) Jan 28

ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ

ಗಾಂಧೀಜಿ ಹೆಸರಿನ ‘ಮನರೇಗಾ’ ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ‘ಜಿ ರಾಮ್‌ ಜಿ’ ಕಾಯ್ದೆ ವಿರುದ್ಧ ಬೃಹತ್‌ ಪ್ರತಿಭಟನೆ, ಲೋಕಭವನ ಚಲೋ ಮೂಲಕ ಕಾಂಗ್ರೆಸ್‌ ರಣಕಹಳೆ ಮೊಳಗಿಸಿದೆ.

 

Read Full Story

07:27 AM (IST) Jan 28

ಬೆಂಗ್ಳೂರಲ್ಲಿ ಪಂದ್ಯ ಆಡಲು ಆರ್‌ಸಿಬಿ ಬಹುತೇಕ ಒಪ್ಪಿಗೆ?

ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಫ್ರಾಂಚೈಸಿಯು ಈ ಬಾರಿ ಐಪಿಎಲ್‌ನಲ್ಲಿ ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

Read Full Story

More Trending News