- Home
- Karnataka Districts
- ಲಕ್ಕುಂಡಿ ನಿಧಿ ಸಿಕ್ಕ ಸ್ವಲ್ಪವೇ ದೂರದಲ್ಲಿ ಚಿನ್ನದ ಗುಡ್ಡ ಪತ್ತೆ: ಬಂಗಾರದ ಗುಹೆ ರಹಸ್ಯ ಇಲ್ಲಿದೆ ನೋಡಿ!
ಲಕ್ಕುಂಡಿ ನಿಧಿ ಸಿಕ್ಕ ಸ್ವಲ್ಪವೇ ದೂರದಲ್ಲಿ ಚಿನ್ನದ ಗುಡ್ಡ ಪತ್ತೆ: ಬಂಗಾರದ ಗುಹೆ ರಹಸ್ಯ ಇಲ್ಲಿದೆ ನೋಡಿ!
ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ನಂತರ, ಸಮೀಪದ ಕಣವಿಹೊಸೂರಿನಲ್ಲಿರುವ ಬ್ರಿಟೀಷರ ಕಾಲದ ನಿಗೂಢ ಚಿನ್ನದ ಗಣಿಯೊಂದು ಗಮನ ಸೆಳೆದಿದೆ. ಈ ಗುಹೆಯೊಳಗೆ ಅಪಾರ ಚಿನ್ನದ ನಿಕ್ಷೇಪವಿದೆ ಎಂದು ನಂಬಲಾಗಿದ್ದರೂ, ಸ್ವತಃ ಜಿಲ್ಲಾಡಳಿತವು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.

ಲಕ್ಕುಂಡಿ ಚಿನ್ನದ ನಿಧಿ ಬೆನ್ನಲ್ಲೇ ಚಿನ್ನ ದೊಡ್ಡ ಗುಡ್ಡ ಪತ್ತೆ
ಗದಗ (ಜ.28): ಕತ್ತಲೆ ತುಂಬಿದ ನಿಗೂಢ ಗುಹೆಯಲ್ಲಿದೆ ಚಿನ್ನವಿದೆಯೇ ಎಂಬ ಕುತೂಹಲ ಇದೀಗ ಜನರಲ್ಲಿ ಆರಂಭವಾಗಿದೆ. ಲಕ್ಕುಂಡಿಯಲ್ಲಿ ಸಾಮಾನ್ಯವಾಗಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಸಿಕ್ಕಿದ್ದು, ಅದರ ಬೆನ್ನಲ್ಲಿಯೇ ಎಲ್ಲೆಲ್ಲೂ ಚಿನ್ನ ಅಡಗಿಸಿಟ್ಟಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಲಕ್ಕುಂಡಿ ಬಳಿಯ ಕಣವಿಹೊಸೂರಿನಲ್ಲಿದೆ ಬ್ರಿಟೀಷರು ಮಾಡಿದ್ದ ಗೋಲ್ಡ್ ಮೈನ್ ಗುಹೆಯೊಂದು ಲಭ್ಯವಾಗಿದೆ.
ಚಿನ್ನದ ಮೈನಿಂಗ್ ಮಾಡಿದ ಗುಡ್ಡ
ನಿಧಿ, ನಿಕ್ಷೇಪದ ದಾರಿಯಲ್ಲಿ ಏಷ್ಯನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ಆಡಳಿತಕ್ಕೆ ಒಳಪಟ್ಟಿದ್ದ ಇಡೀ ನಗರವೀಗ ಹಾಳು ಬಿದ್ದಿದೆ. ಹಾಳು ಬಿದ್ದ ಪ್ರತಿ ಪ್ರದೇಶಕ್ಕೂ ತೆರಳಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಇಂಚಿಂಚು ಭೂಮಿಯನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಪ್ರಯತ್ನವನ್ನು ಮಾಡಿದೆ. ಅದರಲ್ಲಿ ಕತ್ತಲೆ ತುಂಬಿದ ಆಳದ ಗುಹೆಯಲ್ಲಿ ಚಿನ್ನವನ್ನು ಮೈನಿಂಗ್ ಮಾಡಲಾಗುತ್ತಿತ್ತು ಎಂಬ ಸ್ಥಳವನ್ನೂ ತೋರಿಸಲಾಗಿದೆ. ಈ ಗುಹೆ ನೋಡಿದಾಕ್ಷಣ ಲಕ್ಕುಂಡಿಯಲ್ಲಿ ನಿಧಿ ಬೆನ್ನಲ್ಲಿಯೇ ಚಿನ್ನದ ನಿಕ್ಷೇಪವೂ ಇರಬಹುದು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಲಕ್ಕುಂಡಿಯಿಂದ ಕೆಲವೇ ಕಿ.ಮೀ ದೂರ
ಗದಗ ತಾಲೂಕಿನ ಕಣವಿ ಹೊಸೂರಿನಲ್ಲಿವೆ ಚಿನ್ನದ ಗಣಿಯ ಗುಹೆ ಇದಾಗಿದೆ. ಈ ಗುಹೆ ಲಕ್ಕುಂಡಿಯಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿದೆ. ಈ ಕಣವಿ ಹೊಸೂರು ಗ್ರಾಮದ ವ್ಯಪ್ತಿಯಲ್ಲಿ ನಾಲ್ಕೈದು ನಿಗೂಢ ಗುಹೆಯಲ್ಲಿ ಗೋಲ್ಡ್ ಮೈನಿಂಗ್ ನಡೆಯುತ್ತಿತ್ತಂತೆ. ಸಾವಿರಾರು ವರ್ಷಗಳಿಂದಲೂ ಕಣವಿ ಹೊಸೂರಿನ ಮಣ್ಣಿನಲ್ಲಿ ಚಿನ್ನವಿದೆ ಎಂದು ಹೇಳಲಾಗುತ್ತಿದೆ..
ಗೋಲ್ಡ್ ಮೈನಿಂಗ್ ಮಾಡುತ್ತಿದ್ದ ಗುಹೆ
ಬ್ರಿಟಿಷರ ಕಾಲದಲ್ಲಿ ಕಣವಿ ಹೊಸೂರಿನಲ್ಲಿ ಗೋಲ್ಡ್ ಮೈನಿಂಗ್ ಮಾಡಲಾಗುತ್ತಿತ್ತು. ಆದರೆ, ಇಲ್ಲಿಗೆ ಯಾವೊಬ್ಬ ಸ್ಥಳೀಯರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲವಂತೆ. ಅವರು ಬ್ರಿಟೀಷರು ಕೊಪ್ಪರಿಗೆಯಷ್ಟು ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಹೀಗಾಗಿ, ಹೊಸೂರಿನ ವ್ಯಾಪ್ತಿಯಲ್ಲಿ ಈಗಲೂ ಇವೆ ಚಿನ್ನದ ನಿಧಿ ಕಣಿವೆಗಳು ಇವೆ ಎಂದು ಹೇಳಲಾಗುತ್ತಿದೆ.
ಗುಹೆಯೊಳಗೆ ಹೋದವರು ವಾಪಸ್ ಬಂದಿಲ್ಲ
ಆದರೆ, ಬ್ರಿಟೀಷರು ಹೋದರೂ ಕೂಡ ಚಿನ್ನದ ಗುಹೆಯೊಳಗೇಕೆ ಸ್ಥಳೀಯರು ಹೋಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಈ ಗುಹೆಗಳು ಸಾವಿನ ಮನೆಗಳಂತಿವೆ. ಒಳಗೆ ಹೋದವರು ವಾಪಸ್ ಬರುತ್ತಾರೆ ಎಂಬ ಗ್ಯಾರಂಟಿ ಇಲ್ಲವಾಗಿದೆ. ಆದ್ದರಿಂದ ಇಲ್ಲಿಗೆ ಸ್ಥಳೀಯರು ಒಳಗೆ ಹೋಗಲು ಹೆದರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬ್ರಿಟೀಷರು ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಇಲ್ಲಿ ಚಿನ್ನದ ಮೈನಿಂಗ್ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಬ್ರಿಟೀಷರಿಂದ ನಿರಂತರ ಗಣಿಗಾರಿಕೆ
ಈ ಕಣವಿ ಹೊಸೂರಿನಲ್ಲಿ ಚಿನ್ನದ ಮತ್ತು ವಜ್ರದ ನಿಕ್ಷೇಪ ಇರುವ ಬಗ್ಗೆ ಮಾತುಗಳಿವೆ. ಆದ್ದರಿಂದ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಹೊಸೂರು ನಿಕ್ಷೇಪದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಸ್ಟ್ ಇಂಡಿಯಾ ಕಂಪನಿ ಸೇರಿದಂತೆ ಅನೇಕ ಗಣಿ ಕಂಪನಿಯಿಂದ ಗಣಿಗಾರಿಕೆ ಮಾಡಲಾಗಿದೆ. ಗಣಿ ಸುರಂಗದೊಳಗೆ ಈಗಲೂ ಚಿನ್ನ ಇರುವ ಬಗ್ಗೆ ಮಾಹಿತಿಯಿದೆ. ಮಣ್ಣು ಸಂಸ್ಕರಿಸಿ ಚಿನ್ನ ತೆಗೆಯುತ್ತಿದ್ದ ಇಬ್ಬರು ಗಣಿ ಕಾರ್ಮಿಕರು, ದಶಕದ ಹಿಂದೆ ನಿಕ್ಷೇಪದ ಆಸೆಗೆ ಒಳಗೆ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಇಬ್ಬರ ಸಾವಿನ ಬಳಿಕ ಪ್ರವೇಶ ನಿಷೇಧಿಸಿದ್ದ ಜಿಲ್ಲಾಡಳಿತ
ಗುಹೆಯೊಳಗಿನ ಗೋಡೆ ಕುಸಿತದಿಂದ ಇಬ್ಬರು ಯುವಕರ ದುರಂತವಾಗಿ ಸಾವಿಗೀಡಾಗಿದ್ದರು. ಆಗಿನಿಂದ ಸ್ವತಃ ಗದಗ ಜಿಲ್ಲಾಡಳಿತವೇ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ. ಆದರೆ, ಈಗಲೂ ಚಿನ್ನದ ನಿಕ್ಷೇಪದ ಬಗ್ಗೆ ಜನರಲ್ಲಿ ಕುತೂಹಲವಿದೆ. ಚಿನ್ನದ ನಿಧಿ, ವಜ್ರದ ನಿಕ್ಷೇಪದ ಕುತೂಹಲಕ್ಕೆ ಈಗಲೂ ಕೆಲವರು ಈ ನಿಗೂಢ ಜಾಗಕ್ಕೆ ಭೇಟಿಕೊಡುತ್ತಾರೆ.
ಸುವರ್ಣ ನ್ಯೂಸ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆ
ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ಏರಿಯಾದಲ್ಲಿ ಸುವರ್ಣ ನ್ಯೂಸ್ ಕ್ಯಾಮರಾ ಕಣ್ಣು ನೆಟ್ಟಿದ್ದು ಏನೆಲ್ಲಾ ಕಾಣುತ್ತಿದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಈ ಜಾಗದಲ್ಲಿ ಜಿಲ್ಲಾಡಳಿತದಿಂದ ನಿಧಿ ಶೋಧ ಕಾರ್ವನ್ನು ಮಾಡಲಾಗುತ್ತದೆಯೋ ಇಲ್ಲವೋ ಎಂಬುದು ತಿಳಿದಿಲ್ಲ. ಜಿಲ್ಲಾಡಳಿತದ ತೀರ್ಮಾನಕ್ಕೂ ಮುನ್ನ ರಾಜ್ಯ ಸರ್ಕಾರದ ಒಪ್ಪಿಗೆಯೂ ಇದಕ್ಕೆ ಅಗತ್ಯವಾಗಿರುತ್ತದೆ.

