ಬೆಳಗಾವಿ: ರಾಜ್ಯದಲ್ಲಿ ಉದ್ಭವಿಸಿರುವ ಸಿಎಂ ಕುರ್ಚಿ ಗೊಂದಲದ ನಡುವೆಯೇ ಕೋಡಿಮಠ ಸಂಸ್ಥಾನದ ಡಾ। ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಭವಿಷ್ಯ ನುಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶವಿದೆ ಎಂದಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದರು.
ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ, ಮತ್ತೊಂದು ಯುಗಾದಿ ಫಲ ಇರುತ್ತದೆ. ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣದ ಕಡೆ ಹೋಗುತ್ತಾನೆ. ಇದು ವಿಶೇಷವಾಗಿ ರಾಜರು, ಮಹಾರಾಜರು, ವ್ಯಾಪಾರಸ್ಥರಿಗೆ, ದುಡಿಮೆದಾರರಿಗೆ ಬರುತ್ತದೆ. 14ರ ನಂತರ ಸಂಕ್ರಾಂತಿ ಕಳೆದ ಮೇಲೆ ಈ ಭವಿಷ್ಯ ಹೇಳಬಹುದು ಎಂದು ಹೇಳಿದರು.
12:06 PM (IST) Dec 28
ಪ್ರಭಾಸ್ ಸದ್ಯ 'ದಿ ರಾಜಾ ಸಾಬ್' ಚಿತ್ರದಲ್ಲಿ ನಟಿಸಿರೋದು ಗೊತ್ತೇ ಇದೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಒಂದು ಕ್ರೇಜಿ ಉತ್ತರ ಕೊಟ್ಟಿದ್ದಾರೆ.
11:51 AM (IST) Dec 28
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿವೃದ್ಧಿಗಾಗಿ ಕಿತ್ತಾಡಿದ್ದರೆ ಜನರು ಮೆಚ್ಚಿಕೊಳ್ಳುತ್ತಿದ್ದರು. ಆದರೆ ಇವರು ತಮ್ಮ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಎನ್.ರವಿಕುಮಾರ್ ಟೀಕಿಸಿದ್ದಾರೆ.
11:46 AM (IST) Dec 28
Ramachari Kannada Serial Today Episode: ಮೌನ ಗುಡ್ಡೇಮನೆ, ರಿತ್ವಿಕ್ ಕೃಪಾಕರ್ ನಟನೆಯ ರಾಮಾಚಾರಿ ಧಾರಾವಾಹಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ಈ ಸೀರಿಯಲ್ ಅಂತ್ಯವಾಗುವ ಸಮಯ ಬಂದಿದೆ. ಹಾಗಾದರೆ ಕೊನೆಯಲ್ಲಿ ಏನಾಯ್ತು?
11:25 AM (IST) Dec 28
ಬಿಗ್‌ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿ ಸೂರಜ್ ಮನೆಯಿಂದ ಹೊರಬಂದಿದ್ದಾರೆ. ಸ್ಪಂದನಾ ಎಲಿಮಿನೇಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ , ಈ ಹೊಸ ಸುದ್ದಿ ಕೇಳಿ ರಕ್ಷಿತಾ ಶೆಟ್ಟಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
10:53 AM (IST) Dec 28
ಮಾರ್ಕ್ ಸಿನಿಮಾ ರಿಲೀಸ್ ಆಗಿದ್ದು, ನಟ ಕಿಚ್ಚ ಸುದೀಪ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆಗ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಮಾತನಾಡುವಾಗ, ಮಗಳ ಬಗ್ಗೆಯೂ ಮಾತನಾಡಿದ್ದಾರೆ. ಈಗ ಕಿಚ್ಚ ಸುದೀಪ್ ಮಗಳು ಸಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.
10:45 AM (IST) Dec 28
10:30 AM (IST) Dec 28
ಯಶಸ್ವಿ ವ್ಯಕ್ತಿಗಳು ಯಾರಿರುತ್ತಾರೋ ಅವರು ಕನಿಷ್ಠ ಆರು ತಿಂಗಳಿಗೊಮ್ಮೆ ಹೊಸ ಅಭ್ಯಾಸ ಶುರು ಮಾಡುತ್ತಾರೆ. ಹೊಸ ದಿನಚರಿ ಆರಂಭಿಸುತ್ತಾರೆ. ಅದು ಅವರನ್ನು ಅವರು ಹೊಸತಾಗಿಸುವ ಕ್ರಮ. ಹೊಸ ದಾರಿಗೆ ಹೊರಳುವ ಅಭ್ಯಾಸ.
10:13 AM (IST) Dec 28
ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 7 ಜಿಲ್ಲೆ, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ ಸೇರಿದಂತೆ 9 ಜಿಲ್ಲೆಗಳಲ್ಲಿ ಮುಂಬರುವ 5 ವರ್ಷದಲ್ಲಿ 10 ಸಾವಿರ ಮಕ್ಕಳ ಮನೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ.
09:50 AM (IST) Dec 28
‘ಅಷ್ಟಾಂಗ ಹೃದಯ ಸಂಹಿತೆ ದಿನಚರ್ಯ ಅಧ್ಯಾಯ’ವನ್ನು 4 ಸಾವಿರಕ್ಕೂ ಅಧಿಕ ಜನರು ಏಕಕಾಲಕ್ಕೆ ಪಠಿಸುವ ಮೂಲಕ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ ಹಾಗೂ ಏಷಿಯಾ ಬುಕ್ಸ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದರು.
09:49 AM (IST) Dec 28
09:13 AM (IST) Dec 28
ಸರ್ಕಾರ ಯಾವಾಗ ವಿಫಲವಾಗುತ್ತದೆಯೋ ಮತ್ತು ಜನಪ್ರಿಯತೆ ಕಳೆದುಕೊಳ್ಳುತ್ತದೆಯೋ ಆಗೆಲ್ಲಾ ಕಠಿಣ ಕಾನೂನಿನ ಮೊರೆ ಹೋಗುವುದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಕಠಿಣ ಕಾನೂನುಗಳು ಪ್ರಜಾಪ್ರಭುತ್ವದ ಮೂಲ ಉದ್ದೇಶಕ್ಕೆ ಮಾರಕ.
08:26 AM (IST) Dec 28
ಪತ್ನಿ ಗಾನವಿ ಆತ್ಮ*ಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪತಿ ಸೂರಜ್ ಕೂಡ ನಾಗ್ಪುರದಲ್ಲಿ ನೇಣಿಗೆ ಶರಣಾಗಿದ್ದಾನೆ. ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾದ ಬಳಿಕ ಈ ಘಟನೆ ನಡೆದಿದ್ದು, ಇದೀಗ ಸೂರಜ್ ಸೋದರ, ಗಾನವಿ ಕುಟುಂಬಸ್ಥರ ವಿರುದ್ಧವೇ ದೂರು ದಾಖಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
07:56 AM (IST) Dec 28
ವರ್ಷದ ಕೊನೆಯ ವಾರವು 5 ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ಈ ರಾಶಿಗಳಿಗೆ ರಾಜಯೋಗ, ಕಾರ್ಯಸಿದ್ಧಿ, ಆರ್ಥಿಕ ಲಾಭ ಮತ್ತು ವೃತ್ತಿಯಲ್ಲಿ ಯಶಸ್ಸು ಸೇರಿದಂತೆ ಅನೇಕ ಸಕಾರಾತ್ಮಕ ಫಲಿತಾಂಶಗಳು ಕಾದಿವೆ.
07:29 AM (IST) Dec 28