ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ. ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟನೆಗೊಳ್ಳುತ್ತಿರುವುದು ಇದು ಮೂರನೇ ಬಾರಿ. ಕಳೆದ ಫೆ.10ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನೀಡಿದ ವಿವರಣೆಯನ್ನು ಪರಿಗಣಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಶಿಸ್ತನ್ನು ಪದೇ ಪದೆ ಉಲ್ಲಂಘಿಸಿರುವುದು, ಹಿಂದೆ ಶೋಕಾಸ್ ನೋಟಿಸ್ ನೀಡಿದ ಬಳಿಕವೂ ಉತ್ತಮ ನಡವಳಿಕೆ ಪ್ರದರ್ಶಿಸದೇ ಇರುವುದನ್ನು ಉಲ್ಲೇಖಿಸಲಾಗಿದೆ. ಕೆಲದಿನಗಳ ಕಾಲ ಮೌನವಾಗಿರುತ್ತಿದ್ದ ಯತ್ನಾಳ್ ಅವರು ಮತ್ತೆ ತಮ್ಮ ವಾಗ್ದಾಳಿ ಮುಂದುವರೆಸುತ್ತಿದ್ದರು. ಲೋಕಸಭಾ ಚುನಾವಣೆ ಬಳಿಕ ಬಹಿರಂಗ ಹೇಳಿಕೆಗಳನ್ನು ತೀವ್ರಗೊಳಿಸಿದ ಯತ್ನಾಳ್ ಅವರು ವಿಜಯೇಂದ್ರ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸತೊಡಗಿದರು. ಇದಕ್ಕೆ ಪೂರಕ ಎಂಬಂತೆ ವಕ್ಫ್ ಆಸ್ತಿ ವಿವಾದದ ವೇಳೆ ಅವರಿಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ಬಿ.ವಿ.ನಾಯಕ್, ಬಿ.ಪಿ.ಹರೀಶ್ ಮೊದವಲಾದವರು ಸಕ್ರಿಯವಾಗಿ ಜತೆಗೂಡಿದರು. ರಾಜ್ಯ ಪ್ರವಾಸ ಕೈಗೊಂಡರು. ಹೋದಲ್ಲೆಲ್ಲ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಮಾಡಿದರು. ಆದರೆ ಈಗ ಯತ್ನಾಳ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದ್ದು, ಯತ್ನಾಳ್ ಬಣದ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.

11:49 PM (IST) Mar 27
ಬೇಸಿಗೆಯಲ್ಲಿ ಆರೋಗ್ಯವಾಗಿರಲು ಹೈಡ್ರೇಟ್ ಆಗಿರುವ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ ಮತ್ತು ತಂಪಾಗಿರಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ ದೇಹವನ್ನು ಆರೋಗ್ಯವಾಗಿ ಮತ್ತು ಉಲ್ಲಾಸದಿಂದ ಇಡಬಹುದು.
ಪೂರ್ತಿ ಓದಿ11:21 PM (IST) Mar 27
ಇತ್ತೀಚಿನ ದಿನಗಳಲ್ಲಿ ಎನರ್ಜಿ ಡ್ರಿಂಕ್‌ಗಳ ಬಳಕೆ ಹೆಚ್ಚಾಗಿದೆ, ಆದರೆ ಅವು ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಅಧ್ಯಯನಗಳ ಪ್ರಕಾರ, ಇವು ಹೃದಯದ ಮೇಲೆ ಒತ್ತಡ ಹೇರಿ, ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.
ಪೂರ್ತಿ ಓದಿ10:45 PM (IST) Mar 27
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಪ್ರಯಾಣಿಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಆಟೋ ಚಾಲಕನ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿದ್ದರಿಂದ ಕಳ್ಳನ ಪತ್ತೆ ಪೊಲೀಸರಿಗೆ ಸವಾಲಾಗಿದೆ.
ಪೂರ್ತಿ ಓದಿ10:11 PM (IST) Mar 27
ಲೋಕಸಭೆಯಲ್ಲಿ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಗಡಿ ಬೇಲಿ ನಿರ್ಮಾಣಕ್ಕೆ ಭೂಮಿ ನೀಡದಿರುವ ಮತ್ತು ಅಕ್ರಮ ವಲಸಿಗರಿಗೆ ನೆರವು ನೀಡುತ್ತಿರುವ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಾಂಗ್ಲಾದೇಶಿ ನುಸುಳುಕೋರರಿಗೆ ಟಿಎಂಸಿ ಸರ್ಕಾರ ಆಧಾರ್ ಕಾರ್ಡ್ ನೀಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಪೂರ್ತಿ ಓದಿ09:43 PM (IST) Mar 27
ಕೊಡಗಿನ ಚೊಟ್ಟೆಪಾರಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಬಹುಜನ ಪಕ್ಷದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಘಟಕ ಸ್ಥಾಪನೆಯಿಂದ ಪರಿಸರ ಮಾಲಿನ್ಯವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ08:51 PM (IST) Mar 27
ಕೇರಳದ ಶ್ರೀ ಮೃದಂಗ ಶೈಲೇಶ್ವರಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ಇಫ್ತಾರ್ ಕೂಟವನ್ನು ಹೈಕೋರ್ಟ್ ಮಧ್ಯಪ್ರವೇಶದ ನಂತರ ರದ್ದು ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಇಫ್ತಾರ್ ಆಯೋಜನೆಗೆ ವಿರೋಧ ವ್ಯಕ್ತವಾಗಿತ್ತು.
ಪೂರ್ತಿ ಓದಿ08:39 PM (IST) Mar 27
ಉತ್ತರ ಪ್ರದೇಶದಲ್ಲಿ ಬೀದಿಗಳಲ್ಲಿ ನಮಾಜ್ ನಿಷೇಧಿಸಿರುವುದಕ್ಕೆ ಎಸ್‌ಪಿ ಶಾಸಕ ಅಬು ಅಜ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ. ತಾಜ್ ಮಹಲ್ ಕುರಿತ ವಿವಾದ ಮತ್ತು ಸಲ್ಮಾನ್ ರಶ್ದಿಗೆ ರೆಡ್ ಕಾರ್ಪೆಟ್ ಹಾಕುವ ವಿಚಾರವನ್ನೂ ಅವರು ಪ್ರಶ್ನಿಸಿದ್ದಾರೆ.
ಪೂರ್ತಿ ಓದಿ08:23 PM (IST) Mar 27
ಬೆಂಗಳೂರಿನಲ್ಲಿ ಮಹಾರಾಷ್ಟ್ರ ಮೂಲದ ದಂಪತಿಗಳ ನಡುವೆ ಜಗಳವಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡನೇ ಹೆಂಡತಿಯನ್ನು ಕೊಂದು ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ.
ಪೂರ್ತಿ ಓದಿ08:07 PM (IST) Mar 27
ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಯಾದ ಕಾರಣ, ಕಾಫಿ ಮತ್ತು ಟೀ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಬೆಂಗಳೂರು ಹೊಟೇಲ್ ಮಾಲೀಕರ ಸಂಘವು ದರವನ್ನು 2-3 ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಪೂರ್ತಿ ಓದಿ07:59 PM (IST) Mar 27
ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ದರವನ್ನು 9 ರೂಪಾಯಿ ಏರಿಸಿದೆ, ಈ ಬಾರಿ 4 ರೂಪಾಯಿ ಏರಿಕೆ ಮಾಡಿದ್ದು, ಸಿಎಂ ಸಮರ್ಥಿಸಿಕೊಂಡಿದ್ದಾರೆ. ರೈತರಿಗೆ ಪ್ರೋತ್ಸಾಹ ಧನ ನೀಡುವ ಬದಲು ದರ ಏರಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ07:31 PM (IST) Mar 27
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಭಾರತದಲ್ಲಿ ಐಟಿ ಕಂಪನಿಗಳ ಸ್ಥಾಪನೆ ಶೇ.90ರಷ್ಟು ಕುಸಿದಿದೆ. 2020ರಲ್ಲಿ 16388 ಕಂಪನಿಗಳು ಸ್ಥಾಪನೆಯಾಗಿದ್ದರೆ, 2025ರಲ್ಲಿ ಕೇವಲ 2419ಕ್ಕೆ ಇಳಿದಿದೆ.
ಪೂರ್ತಿ ಓದಿ06:55 PM (IST) Mar 27
ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತವು ಯಾರೂ ಬೇಕಾದ್ರೂ ಬಂದು ಹೋಗುವ ಧರ್ಮಶಾಲೆಯಲ್ಲ ಎಂದು ಹೇಳಿದ್ದಾರೆ. ವಲಸೆ ಮತ್ತು ವಿದೇಶಿಯರ ಮಸೂದೆ 2025 ರ ಕುರಿತು ಮಾತನಾಡಿದ ಅವರು, ದೇಶದ ಭದ್ರತೆಗಾಗಿ ವಿದೇಶಿಯರ ವಿವರಗಳನ್ನು ದಾಖಲಿಸುವುದು ಅಗತ್ಯ ಎಂದಿದ್ದಾರೆ.
ಪೂರ್ತಿ ಓದಿ06:46 PM (IST) Mar 27
ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ಸಿಕಂದರ್ ಬಿಡುಗಡೆಗೆ ಮುಂಚಿತವಾಗಿ ರಾಮ ಜನ್ಮಭೂಮಿ ವಾಚ್ ಧರಿಸಿ ಫೋಟೋ ಹಂಚಿಕೊಂಡಿದ್ದಾರೆ. ಈ ವಿಶೇಷ ವಾಚ್ ರಾಮ ಮಂದಿರದ ಕೆತ್ತನೆಗಳನ್ನು ಹೊಂದಿದೆ ಮತ್ತು ಇದರ ಬೆಲೆ 34 ಲಕ್ಷ ರೂಪಾಯಿ.
ಪೂರ್ತಿ ಓದಿ06:29 PM (IST) Mar 27
ಆನೇಕಲ್ ಹುಸ್ಕೂರು ಗ್ರಾಮದ ಮದ್ದೂರಮ್ಮ ದೇವಿಯ ಜಾತ್ರೆಯಲ್ಲಿ ತೇರು ಬಿದ್ದ ದುರಂತದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಾಜಸ್ವ ನಿರೀಕ್ಷಕ ಪ್ರಶಾಂತ್ ಮತ್ತು ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಡಿ. ಅವರನ್ನು ಇಲಾಖಾ ವಿಚಾರಣೆ ಬಾಕಿ ಉಳಿಸಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ಪೂರ್ತಿ ಓದಿ06:28 PM (IST) Mar 27
ಲಂಡನ್‌ನ ಕಿಂಗ್ ಚಾರ್ಲ್ಸ್ ಎಂಟ್ರಿ ಕೊಡುವ ವೇಳೆ ಗೌರವ ಸೂಚಕವಾಗಿ ಮ್ಯೂಸಿಕ್ ಬ್ಯಾಂಡ್ ತಂಡ ಪರಿಸ್ಥಿತಿಗೆ ತಕ್ಕಂತೆ ಮ್ಯೂಸಿಕ್ ಬಜಾಯಿಸಲಿದೆ. ಆದರೆ ಈ ಬಾರಿ ಲಂಡನ್ ಅರಮನೆಗೆ ಕಿಂಗ್ ಚಾರ್ಲ್ಸ್ ಎಂಟ್ರಿಕೊಡುವ ವೇಳೆ ಬಾಲಿವುಡ್‌ನ ಧೂಮ್ ಮಚಾಲೆ ಹಾಡಿನ ಮ್ಯೂಸಿಕ್ ಬಾರಿಸಿದ್ದಾರೆ.
ಪೂರ್ತಿ ಓದಿ06:28 PM (IST) Mar 27
ದೆಹಲಿಯಲ್ಲಿ ನವರಾತ್ರಿಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಬಿಜೆಪಿ ಒತ್ತಾಯಿಸಿದ್ದಕ್ಕೆ ಎಎಪಿ ಸಂಸದ ಸಂಜಯ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಗೆ ಧೈರ್ಯವಿದ್ದರೆ ಕೆಎಫ್‌ಸಿ ಮುಚ್ಚಲಿ ಎಂದು ಸವಾಲು ಹಾಕಿರುವ ಅವರು, ಮದ್ಯ ನಿಷೇಧದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ಪೂರ್ತಿ ಓದಿ06:16 PM (IST) Mar 27
ಸರ್ಕಾರಿ ಇಲಾಖೆಗಳು ಎಸ್ಕಾಂಗಳಿಗೆ ಬಾಕಿ ಉಳಿಸಿಕೊಂಡಿರುವ ಕಾರಣ ಕರ್ನಾಟಕವು ಸ್ಮಾರ್ಟ್ ಮೀಟರ್‌ಗಳ ಮೇಲಿನ ಸಬ್ಸಿಡಿಯನ್ನು ಕಳೆದುಕೊಳ್ಳುತ್ತಿದೆ. ವಿವಿಧ ಇಲಾಖೆಗಳು 8500 ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ, ಇದರಿಂದಾಗಿ ಗ್ರಾಹಕರಿಗೆ ಸಿಗಬೇಕಾದ ಸಬ್ಸಿಡಿ ತಪ್ಪಿಹೋಗುತ್ತಿದೆ.
ಪೂರ್ತಿ ಓದಿ06:03 PM (IST) Mar 27
ಕಾಂಗ್ರೆಸ್ ಸರ್ಕಾರವು 20 ತಿಂಗಳಲ್ಲಿ ಮೂರು ಬಾರಿ ಹಾಲಿನ ದರವನ್ನು ಏರಿಸಿದೆ, ಒಟ್ಟು 9 ರೂಪಾಯಿ ಹೆಚ್ಚಳವಾಗಿದೆ. ಈ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರಿದೆ.
ಪೂರ್ತಿ ಓದಿ06:02 PM (IST) Mar 27
ಯತ್ನಾಳ ಉಚ್ಚಾಟನೆ ಬೆನ್ನಲ್ಲೆ ವಿಜಯಪುರದಲ್ಲಿ ರಾಜೀನಾಮೆಗಳ ಮಹಾಪರ್ವ ಶುರುವಾಗಿದೆ. ನಗರ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 174 ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.
ಪೂರ್ತಿ ಓದಿ05:57 PM (IST) Mar 27
ಜಗಳ ಮಾಡುವ ಭರದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ಪತ್ನಿಯೊಬ್ಬಳು ತನ್ನ ಗಂಡ ನಾಲಿಗೆಯನ್ನು ತುಂಡರಿಸಿ ತಾನೂ ಸಾಯಲು ಹೊರಟಿರುವ ಘಟನೆ ನಡೆದಿದೆ. ಆಗಿದ್ದೇನು?
05:55 PM (IST) Mar 27
ಉತ್ತರ ಕನ್ನಡದಲ್ಲಿ ಅಡಿಕೆ ಸುಲಿಯುವ ಯಂತ್ರಕ್ಕೆ ಸೀರೆ ಸಿಲುಕಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶೋಭಾ ಹೆಗಡೆ ಮೃತಪಟ್ಟಿದ್ದಾರೆ. ಶಿರಸಿ ತಾಲೂಕಿನ ಹೊಸಬಾಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪೂರ್ತಿ ಓದಿ05:46 PM (IST) Mar 27
ಮಾಹಿತಿ ಹಕ್ಕು ಕಾರ್ಯಕರ್ತನ ಹೆಸರನ್ನು ಬ್ಲಾಕ್ ಲಿಸ್ಟ್ ನಿಂದ ತೆಗೆಯಲು ಲಂಚ ಕೇಳಿದ ಮಾಹಿತಿ ಆಯುಕ್ತ ರವೀಂದ್ರ ಢಾಕಪ್ಪ ಅವರು ಫೋನ್ ಪೇ ಮೂಲಕ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅವರು ಆರ್ ಟಿಐ ಕಾರ್ಯಕರ್ತರಿಂದ 3 ಲಕ್ಷ ರೂ ಬೇಡಿಕೆ ಇಟ್ಟಿದ್ದರು.
ಪೂರ್ತಿ ಓದಿ05:31 PM (IST) Mar 27
ಗೂಗಲ್ ಕ್ರೋಮ್ ಬಹುತೇಕರು ಬಳಕೆ ಮಾಡುತ್ತಾರೆ. ಆದರೆ ಕೇಂದ್ರ ಸರ್ಕಾರ ಗೂಗಲ್ ಕ್ರೋಮ್ ಬಳಕೆದಾರರಿಗೆ ಹೈ ರಿಸ್ಕ್ ಸೆಕ್ಯೂರಿಟಿ ವಾರ್ನಿಂಗ್ ನೀಡಿದೆ. ಕ್ರೋಮ್ ಬಳಕೆದಾರರು ಏನು ಮಾಡಬೇಕು?
ಪೂರ್ತಿ ಓದಿ04:50 PM (IST) Mar 27
ಕೇವಲ 22 ತಿಂಗಳ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳ ದರ ಏರಿಕೆ, ನಂದಿನಿ ಹಾಲಿನ ದರ ಏರಿಕೆ ಸೇರಿದಂತೆ ಸಾರ್ವಜನಿಕರು ತತ್ತರಿಸುವಂತಾಗಿದೆ. ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ04:42 PM (IST) Mar 27
ನಿಮ್ಮ ದೇಹದ ಅಂಗಗಳಲ್ಲಿ ಕಾಣುವ ಈ ಲಕ್ಷಣಗಳ ಆಧಾರದ ಮೇಲೆ ನೀವು ರೋಗವನ್ನು ಹೇಗೆ ನಿರ್ಣಯಿಸಬಹುದು ಎಂಬುದನ್ನು ಈ ಪೋಸ್ಟ್‌ನಲ್ಲಿ ತಿಳಿಯೋಣ.
ಪೂರ್ತಿ ಓದಿ04:26 PM (IST) Mar 27
ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಮೊದಲ ಹಂತದಲ್ಲಿ 14 ದೇವಾಲಯಗಳ ಪ್ರಸಾದವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ಪಡೆಯಬಹುದು.
ಪೂರ್ತಿ ಓದಿ04:11 PM (IST) Mar 27
ಉಚಿತ ChatGPT 4o ಇದೀಗ ಹತ್ತು ಹಲವು ಹೊಸ ಫೀಚರ್ಸ್ ನೀಡುತ್ತಿದೆ. ವಿಶೇಷ ಅಂದರೆ ನಿಮಗೆ ಘಿಬ್ಲಿ ಶೈಲಿಯ ಚಿತ್ರಗಳನ್ನು ಸುಲಭವಾಗಿ ಈ ChatGPT 4o ಮೂಲಕ ರಚಿಸಬಹುದು. ಎಐ ಇಮೇಜ್ ರಚಿಸವುದು ಹೇಗೆ?
ಪೂರ್ತಿ ಓದಿ03:12 PM (IST) Mar 27
ಪೂರಿಗೆ ಸರಿಯಾದ ಕಾಂಬೊ ಅಂದ್ರೆ ಅದು ಆಲೂಗಡ್ಡೆ ಮಸಾಲಾ. ಆದ್ರೆ ಹೋಟೆಲ್ಗಳಲ್ಲಿ ಸಿಗೋ ರೀತಿ ರುಚಿಯಾಗಿ ಮನೆಯಲ್ಲಿ ಮಾಡಿದ್ರೆ ಬರಲ್ಲ. ಇದಕ್ಕೆ ಕೆಲವು ರಹಸ್ಯ ವಿಧಾನಗಳನ್ನು ಅನುಸರಿಸಿದರೆ ಹೋಟೆಲ್ ರುಚಿಯನ್ನು ಮನೆಯಲ್ಲೇ ತರಬಹುದು.
ಪೂರ್ತಿ ಓದಿ03:03 PM (IST) Mar 27
ಮನೆ ಮುಂದೆ ನಡೆದ ಗಲಾಟೆ ವಿಷ್ಯಕ್ಕೆ ಸದ್ಯ ಸುದ್ದಿಯಲ್ಲಿರುವ ಕುಮಾರ್ ವಿಶ್ವಾಸ್, ಅದ್ಧೂರಿಯಾಗಿ ತಮ್ಮ ಮಗಳ ಮದುವೆ ಮುಗಿಸಿದ್ದಾರೆ. ಅವರ ಅಳಿಯ ಯಾರು? ಅವರ ಸಂಪಾದನೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.
02:39 PM (IST) Mar 27
ಬ್ರಹ್ಮಗಂಟು ಸೀರಿಯಲ್ ದೀಪಾ ಮತ್ತು ಚಿರು ಸಂಭಾವನೆ ಬಗ್ಗೆ ಹೇಳಿದ್ದೇನು? ದೀಪಾಗೆ ಕೋಪ ಬರುವುದು ಯಾವಾಗ? ಅವರ ಬಾಯಲ್ಲೇ ಕೇಳಿ..
02:37 PM (IST) Mar 27
ಜಾಯಿಂಟ್ ಹೋಮ್ ಲೋನ್: ಹೆಂಡತಿ ಜೊತೆ ಸೇರಿ ಹೋಮ್ ಲೋನ್ ತಗೊಂಡ್ರೆ ಬಡ್ಡಿ ರೇಟ್ ಕಡಿಮೆ ಇರುತ್ತೆ, ಟ್ಯಾಕ್ಸ್‌ನಲ್ಲಿ ವಿನಾಯಿತಿ ಸಿಗುತ್ತೆ, ಲೋನ್ ಲಿಮಿಟ್ ಕೂಡ ಹೆಚ್ಚಾಗುತ್ತೆ. ಇದರಿಂದ ಕ್ರೆಡಿಟ್ ಸ್ಕೋರ್ ಹೆಚ್ಚಾಗೋದರ ಜೊತೆಗೆ ಇಎಂಐ ಭಾರ ಕೂಡ ಕಡಿಮೆ ಆಗುತ್ತೆ.
ಪೂರ್ತಿ ಓದಿ02:20 PM (IST) Mar 27
ಆರ್‌ಬಿಐ 2025-26ರ ಎಂಪಿಸಿ ಸಭೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಡ್ಡಿ ದರಗಳ ಮೇಲಿನ ತೀರ್ಮಾನಗಳಿಗಾಗಿ ಕಾಯುವಿಕೆ!
ಪೂರ್ತಿ ಓದಿ02:19 PM (IST) Mar 27
ಕಾಂಗ್ರೆಸ್ ಸರ್ಕಾರದಿಂದ ನಂದಿನಿ ಹಾಲಿನ ದರ ಲೀಟರ್‌ಗೆ 4 ರೂ ಹೆಚ್ಚಳವಾಗಿದೆ. ಇದು ಸರ್ಕಾರ ಅಧಿಕಾರಕ್ಕೆ ಬಂದ ನಂತರ 3ನೇ ಬಾರಿಗೆ ಹಾಲಿನ ದರ ಏರಿಕೆಯಾಗಿದೆ.
ಪೂರ್ತಿ ಓದಿ01:55 PM (IST) Mar 27
ಡ್ರಗ್ಸ್ ಸೇವನೆ ಪ್ರಕರಣಗಳು, ಮಾರಾಟ ಸೇರಿದಂತೆ ಹಲವು ಸ್ಫೋಟಕ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದರ ನಡುವೆ ಮತ್ತೊಂದು ಭಯಾನಕ ಮಾಹಿತಿ ಬಯಲಾಗಿದೆ. ಡ್ರಗ್ಸ್ ಗ್ಯಾಂಗ್‌ನ 9 ಮಂದಿಗೆ ಹೆಚ್ಐವಿ ಸೋಂಕು ತಗುಲಿದೆ.
01:25 PM (IST) Mar 27
ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ, ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ನೀಡಿದ್ದಾರೆ. ನವೆಂಬರ್‌ನಲ್ಲಿ ಕೊಲೆಗೆ ಸಂಚು ರೂಪಿಸಲಾಗಿತ್ತು ಮತ್ತು ಜನವರಿಯಲ್ಲಿ ಸುಪಾರಿ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಪೂರ್ತಿ ಓದಿ01:19 PM (IST) Mar 27
ʼನನಗೆ ಟಾಕ್ಸಿಕ್ ರಿಲೇಶನ್‌ಶಿಪ್ ಇತ್ತು, ಈಗ ನಾನು ಅರೇಂಜ್ ಮ್ಯಾರೇಜ್ ಆಗ್ತೀನಿʼ ಎಂದು ʼಲಕ್ಷ್ಮೀ ನಿವಾಸʼ ಧಾರಾವಾಹಿ ನಟಿ ರೂಪಿಕಾ ಹೇಳಿದ್ದಾರೆ.
ಪೂರ್ತಿ ಓದಿ01:17 PM (IST) Mar 27
ಪರ್ಪ್ಲೆಕ್ಸಿಟಿ AI ಸಹ-ಸಂಸ್ಥಾಪಕ ಅರವಿಂದ್ ಶ್ರೀನಿವಾಸ್ ಇತ್ತೀಚೆಗೆ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ WTF ಆನ್‌ಲೈನ್ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿ ಕಾಮತ್ ಮೂರು ತಿಂಗಳ ಕಾಲ ಪರ್ಪ್ಲೆಕ್ಸಿಟಿ AI ನಲ್ಲಿ ಇಂಟರ್ನ್ ಆಗಲು ನಿಜವಾದ ಆಸಕ್ತಿಯನ್ನು ವ್ಯಕ್ತಪಡಿಸಿದರು.
ಪೂರ್ತಿ ಓದಿ01:11 PM (IST) Mar 27
ನಿಸಾನ್ ಮ್ಯಾಗ್ನೈಟ್ ಭಾರತದಲ್ಲಿ ಬಿಡುಗಡೆಯಾದ ಅತೀ ಕಡಿಮೆ ಬೆಲೆಯ ಉತ್ತಮ ಎಸ್‌ಯುವಿ ಕಾರು. ಇದೀಗ ಇದೇ ರೀತಿ ಅತೀ ಕಡಿಮೆ ಬೆಲೆಗೆ 5 ಸೀಟರ್ ಹಾಗೂ ಸೀಟರ್ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಇದರ ವಿನ್ಯಾಸ ಲಕ್ಷುರಿ ಕಾರುಗಳನ್ನು ಹಿಂದಿಕ್ಕುವಂತಿದೆ.
ಪೂರ್ತಿ ಓದಿ01:07 PM (IST) Mar 27
ವಿಶ್ವದ ಸುರಕ್ಷಿತ- ಡೇಂಜರ್ ದೇಶಗಳಾವುವು ಎಂಬ ಸಮೀಕ್ಷೆಯೊಂದು ಹೊರಕ್ಕೆ ಬಂದಿದೆ. ಇದರಲ್ಲಿ ಭಾರತಕ್ಕೆ ಶಾಕ್ ಆಗುವಂಥ ವರದಿಯೂ ಸೇರಿದ್ದು, ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಲಾಗಿದೆ. ಏನಿದೆ ಇದರಲ್ಲಿ?
01:00 PM (IST) Mar 27
ಕಿಪಿ ಕೀರ್ತಿ ತರಹದವರೇ ಮೂರು ಜನರನ್ನು ಮೇಂಟೇನ್ ಮಾಡ್ತಿದ್ದಾರೆ, ಇನ್ನು ಹೈ-ಲೆವೆಲ್ ಫಿಗರ್ ಎಷ್ಟು ಜನರನ್ನು ಮೇಂಟೇನ್ ಮಾಡಬಹುದು ಎಂದು ಹುಡುಗರು ತಿಳಿದುಕೊಳ್ಳುವುದು ತಪ್ಪು ಕಲ್ಪನೆ ಎಂದು ಮಹಿಳೆಯೊಬ್ಬರು ಸಲಹೆ ನೀಡಿದ್ದಾರೆ. ಹೈ ಲೆವೆಲ್ ಫಿಗರ್‌ಗಳು ಸಿಂಗಲ್ ಆಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ