ಪ್ರತಿ ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿ ದರ ಹೆಚ್ಚಿಸುವ ಚಾಳಿಯನ್ನು ಖಾಸಗಿ ಬಸ್‌ ಮಾಲೀಕರು ಮುಂದುವರಿಸಿದ್ದು, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ತೆರಳುವವರಿಗೆ ಮತ್ತೆ ದುಬಾರಿ ಪ್ರಯಾಣ ದರ ವಸೂಲಿಗೆ ಮುಂದಾಗಿದ್ದಾರೆ.

ಬೆಂಗಳೂರು (ಮಾ.27): ಪ್ರತಿ ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿ ದರ ಹೆಚ್ಚಿಸುವ ಚಾಳಿಯನ್ನು ಖಾಸಗಿ ಬಸ್‌ ಮಾಲೀಕರು ಮುಂದುವರಿಸಿದ್ದು, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ತೆರಳುವವರಿಗೆ ಮತ್ತೆ ದುಬಾರಿ ಪ್ರಯಾಣ ದರ ವಸೂಲಿಗೆ ಮುಂದಾಗಿದ್ದಾರೆ.

ಹಬ್ಬಗಳು ಬಂದಾಗಲೆಲ್ಲ ಖಾಸಗಿ ಬಸ್‌ ಮಾಲೀಕರು ಬೇಕಾಬಿಟ್ಟಿಯಾಗಿ ಪ್ರಯಾಣ ದರ ನಿಗದಿ ಮಾಡುತ್ತಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಖಾಸಗಿ ಬಸ್‌ಗಳನ್ನು ನಿಯಂತ್ರಿಸಲು ಮುಂದಾಗದೆ ಕಣ್ಮುಚ್ಚಿ ಕೂತಿದ್ದಾರೆ. ಆರಂಭದಲ್ಲಿ ಕೆಲ ಕಡೆ ದಾಳಿ ನಡೆಸಿ ನಂತರ ಸುಮ್ಮನಾಗುತ್ತದೆ. ಇದೀಗ ಯುಗಾದಿ ಸಂದರ್ಭದಲ್ಲೂ ಖಾಸಗಿ ಬಸ್‌ಗಳು ದುಬಾರಿ ಪ್ರಯಾಣ ದರ ನಿಗದಿ ಮಾಡಿದ್ದರೂ, ಅದರ ನಿಯಂತ್ರಣಕ್ಕೆ ಸಾರಿಗೆ ಇಲಾಖೆ ಮುಂದಾಗಿಲ್ಲ. ಮಾ.28ರ ರಾತ್ರಿಯಿಂದಲೇ ಬೆಂಗಳೂರಿನಿಂದ ವಿವಿಧ ಕಡೆಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳ ದರ 3 ಪಟ್ಟು ಹೆಚ್ಚಾಗಿದ್ದು, ಪ್ರಯಾಣಿಕರು ದುಬಾರಿ ದರ ಪಾವತಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಲೋಪ ತೋರಿಸಿದರೆ ಸ್ಮಾರ್ಟ್‌ ಮೀಟರ್‌ ಟೆಂಡರ್‌ಗೆ ತಡೆ: ಸಚಿವ ಕೆ.ಜೆ.ಜಾರ್ಜ್‌

ಮಾ. 28ರಿಂದ ಖಾಸಗಿ ಬಸ್‌ಗಳ ಪ್ರಯಾಣ ದರ (ಸ್ಲೀಪರ್‌ ಬಸ್‌)
ಮಾರ್ಗ ಹಿಂದಿನ ದರ(ರು.ಗಳಲ್ಲಿ) ಹಬ್ಬದ ದರ(ರು.ಗಳಲ್ಲಿ)

ಬೆಂಗಳೂರು-ಮಡಿಕೇರಿ 500-600 1000-1500
ಬೆಂಗಳೂರು-ಉಡುಪಿ 600-950 1700-2000
ಬೆಂಗಳೂರು-ಧಾರವಾಡ 800-1200 2300-3500
ಬೆಂಗಳೂರು-ಬೆಳಗಾವಿ 1000-1200 2500-3000
ಬೆಂಗಳೂರು-ಶಿವಮೊಗ್ಗ 600-800 1500
ಬೆಂಗಳೂರು-ಮಂಗಳೂರು 800-1200 2000-3000
ಬೆಂಗಳೂರು-ಕಲಬುರಗಿ 1000-1300 2000-3000