'ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಇನ್ನು ಮುಂದೆ ಪ್ರತಿ ವರ್ಷ ಯುಗಾದಿ ಪುರಸ್ಕಾರ ನೀಡಿ ಗೌರವಿಸಲಾಗುವುದು' ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು.
ಬೆಂಗಳೂರು (ಮಾ.30): 'ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಇನ್ನು ಮುಂದೆ ಪ್ರತಿ ವರ್ಷ ಯುಗಾದಿ ಪುರಸ್ಕಾರ ನೀಡಿ ಗೌರವಿಸಲಾಗುವುದು' ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು. ಗುಬ್ಬಿಗೂಡಿನಲ್ಲಿ ಆಯೋಜಿಸಿದ್ದ ಯುಗಾದಿ ಸಂಭ್ರಮ ಮತ್ತು ಯುಗಾದಿ ಪುರಸ್ಕಾರ ಪ್ರದಾನ ಸಮಾರಂಭದ ಆಶಯದ ಬಗ್ಗೆ ಮಾತನಾಡಿದ ಅವರು, 'ಇಡೀ ದಿನ ಯುಗಾದಿ ಹಬ್ಬವನ್ನು ಸಂಭ್ರಮಿಸುವಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಬಹಳ ಹಿಂದೆಯೇ ತಯಾರಿ ನಡೆಸಿದ್ದೆವು.
ಅದೇ ಸಮಯಕ್ಕೆ ಕೊರೋನಾ ಆಗಮನದಿಂದಾಗಿ ಚಾಲನೆ ನೀಡಲು ಸಾಧ್ಯವಾಗಲಿಲ್ಲ. ಬಳಿಕ ಕೊರೋನಾದಿಂದಾಗಿಯೇ ಮೂರ್ನಾಲ್ಕು ವರ್ಷ ಕಾರ್ಯಕ್ರಮ ಮುಂದೂಡಿಕೆಯಾಯಿತು. ಇದೀಗ ಹೊಸ ಉತ್ಸಾಹದಿಂದ ಕಾರ್ಯಕ್ರಮ ಆಯೋಜಿಸಿದ್ದೇವೆ' ಎಂದು ಬಣ್ಣಿಸಿದರು. 'ಪರಿಸರದಲ್ಲಿ ಒಂದಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇಲ್ಲಿನ ವಿಶೇಷವಾಗಿದೆ. ಕಲಾ ಗ್ಯಾಲರಿ, ಕವನ ವಾಚನ, ವೀರಗಾಸೆ, ಗಂಭೀರ ಚರ್ಚೆ, ಹರಿಕಥೆ, ನಾಟಕ ಮತ್ತಿತರ ಕಾರ್ಯಕ್ರಮಗಳಿದ್ದು ಇವೆಲ್ಲವನ್ನೂ ಪ್ರತ್ಯೇಕ ವೇದಿಕೆಗಳಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಕವನದ ಕಟ್ಟೆ, ನಾಟಕ ಜಗುಲಿಯ ವ್ಯವಸ್ಥೆಯನ್ನೂ ಮಾಡಲಾಗಿದೆ.
ಶುದ್ಧೀಕರಣ ಎಂಬುದು ಇಂದು ಎಲ್ಲ ರಂಗದಲ್ಲೂ ಆಗಬೇಕಿದೆ: ಮುಖ್ಯಮಂತ್ರಿ ಚಂದ್ರು
ಇಡೀ ದಿನ ಲವಲವಿಕೆಯಿಂದ ಇರುವಂತಹ ವಾತಾವರಣ ಸೃಷ್ಟಿಸಲಾಗಿದೆ. ಯಾವುದೇ ಚೌಕಟ್ಟು ಇಲ್ಲ' ಎಂದು ಸ್ಪಷ್ಟಪಡಿಸಿದರು. 'ನಮಗೆ ಹೇಳಿಕೇಳಿ ಪ್ರತಿ ದಿನವೂ ಯುಗಾದಿಯೇ. ಏಕೆಂದರೆ ಪ್ರತಿ ದಿನ ಬೆಳಗಿನಿಂದ ರಾತ್ರಿಯವರೆಗೂ ಸಿಹಿ-ಕಹಿ ಸುದ್ದಿಗಳನ್ನು ಬರುತ್ತಿರುತ್ತವೆ. ಇದರಿಂದಾಗಿ ಪ್ರತಿ ದಿನ ಸಿಹಿ-ಕಹಿ ಅನುಭವವಾಗುತ್ತದೆ. ಯುಗಾದಿ ಆಚರಣೆ ನಮಗೆ ನೆಪ ಮಾತ್ರವಾಗಿದೆ. ರಾಜ್ಯದ ಹೆಗ್ಗುರುತುಗಳಾದ ನಿಮ್ಮಂತಹ ಸಾಧಕರೊಂದಿಗೆ ಯುಗಾದಿ ಕಳೆಯುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನಗರದಿಂದ ದೂರದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಧಾವಂತ ಇರುವುದಿಲ್ಲ ಎಂದು ಇಲ್ಲಿ ಆಯೋಜನೆ ಮಾಡಲಾಗಿದೆ' ಎಂದು ಹೇಳಿದರು.
'ನಾಲೈದು ವರ್ಷದಿಂದ ಈಗಿನ ಮಾಧ್ಯಮಗಳು ವಾಣಿಜ್ಯಕರಣಗೊಳ್ಳುತ್ತಿವೆ. ವಾಹಿನಿಗಳು ಟಿಆರ್ ಪಿಗಾಗಿ, ಪತ್ರಿಕೆಗಳು ಸರ್ಕ್ಯೂಲೇಷನ್‌ಗೆ ಒತ್ತು ನೀಡುವಂತಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ವಿಮರ್ಶೆಗೆ ಮೊದಲು ಬಹಳಷ್ಟು ಪುಟಗಳನ್ನು ಮೀಸಲಿಡಲಾಗಿತ್ತು. ಆದರೆ ಇದೀಗ ಬಹಳಷ್ಟು ಪತ್ರಿಕೆಗಳು ಪುಟ ಕಡಿಮೆ ಮಾಡಬೇಕಾಗಿದೆ. ಆದ್ದರಿಂದ ಯುಗಾದಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಯೋಜನೆ ಮಾಡಬೇಕು ಎಂದು ಜೋಗಿ ಜೊತೆ ಚರ್ಚಿಸಿ ಕಾರ್ಯರೂಪಕ್ಕೆ ತಂದೆವು. ಅದರ ಫಲವೇ ಇದು' ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಿಂದ ಸಂಬಂಧ ಗಟ್ಟಿ: 'ಗುಬ್ಬಿಗೂಡಿನ ಪರಿಸರನೋಡಿ ಬೇರೆಯದೇ ಲೋಕಕ್ಕೆ ಬಂದಅನುಭವವಾಯಿತು.ಸಾಮಾಜಿಕ ಜಾಲತಾಣಗ ಳಿಂದಾಗಿ ನಾವೆಲ್ಲಾ ಬೇರೆ ಬೇರೇಯೇನೋ ಎಂಬ ವಾತಾವರಣ ಇಂದು ನಿರ್ಮಾಣವಾಗಿದೆ.ಸಾಮಾಜಿಕ ಜಾಲತಾಣಗಳ ಕಹಿಗಳು ಬೆಲ್ಲವಾಗಲಿ ಎಂದು ಇಲ್ಲಿ ನಮ್ಮನ್ನು ಸೇರಿಸಿದ್ದೀರಿ. ಇಂತಹ ಕಾರ್ಯಕ್ರಮಗಳು ನಮ್ಮ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಇದಕ್ಕಾಗಿ 'ಕನ್ನಡಪ್ರಭ' ಮತ್ತು 'ಏಷ್ಯಾನೆಟ್ ಸುವರ್ಣ ನ್ಯೂಸ್'ಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ಹೇಳಿದರು.
'ಕನ್ನಡಪ್ರಭ' ಮತ್ತು 'ಏಷ್ಯಾನೆಟ್ ಸುವರ್ಣ ನ್ಯೂಸ್ 'ಗುಬ್ಬಿಗೂಡು ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಯುಗಾದಿ ಸಂಭ್ರಮ ಮತ್ತು ಯುಗಾದಿ ಪುರಸ್ಕಾರ ಪ್ರದಾನ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ತೆಂಗುಗರಿಗಳ ನೆರಳಿನಲ್ಲಿ ಹಸಿರು ಅಂಗಳದಲ್ಲಿ ವಿಶಿಷ್ಟವಾಗಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ 'ಕನ್ನಡ ಪ್ರಭ' ಯುಗಾದಿ ವಿಶೇಷಾಂಕವನ್ನು ಲೋಕಾರ್ಪಣೆಗೊಳಿಸಲಾಯಿತು. 'ಕನ್ನಡಪ್ರಭ' ಮತ್ತು 'ಏಷ್ಯಾನೆಟ್ ಸುವರ್ಣ: ಪ್ರಧಾನ ಸಂಪಾದಕ ರವಿ ಹೆಗಡೆ, ಪ್ರಧಾನ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಮತ್ತಿತರರು ಹಾಜರಿದ್ದರು.
ಸಿನಿಮಾಗಳನ್ನು ಮಾರ್ಕೆಟಿಂಗ್ ಮಾಡಬೇಕು: ನಿರ್ದೇಶಕ ಗಿರೀಶ್ ಕಾಸರವಳ್ಳಿ
ನಾಲೈದು ವರ್ಷದಿಂದ ಈಗಿನ ಮಾಧ್ಯಮಗಳು ವಾಣಿಜ್ಯಕರಣಗೊಳ್ಳುತ್ತಿವೆ. ಕಲೆ, ಸಾಹಿತ್ಯ, ಸಂಸ್ಕೃತಿ ವಿಮರ್ಶೆಗೆ ಮೊದಲು ಬಹಳಷ್ಟು ಪುಟಗಳನ್ನು ಮೀಸಲಿಡಲಾಗುತ್ತಿತ್ತು. ಆದರೆ ಇದೀಗ ಬಹಳಷ್ಟು ಪತ್ರಿಕೆಗಳು ಪುಟ ಕಡಿಮೆ ಮಾಡಬೇಕಾಗಿದೆ. ಆದ್ದರಿಂದ ಯುಗಾದಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಯೋಜನೆ ಮಾಡಬೇಕು ಎಂದು ಚರ್ಚಿಸಿ ಕಾರ್ಯ ರೂಪಕ್ಕೆ ತಂದೆವು. ಅದರ ಫಲವೇ ಇದು.
-ರವಿ ಹೆಗಡೆ ಪ್ರಧಾನ ಸಂಪಾದಕ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್