ಕೇಂದ್ರ ಸರ್ಕಾರವು ದೀರ್ಘಾವಧಿ ವೀಸಾ (ಲಾಂಗ್ ಟರ್ಮ್ ವೀಸಾ-ಎಲ್‌ಟಿವಿ)ಗಳಿಗೆ ವಿನಾಯ್ತಿ ನೀಡಿದ ಹಿನ್ನೆಲೆಯಲ್ಲಿ ಗಡೀಪಾರು ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ನೆಲೆಸಿರುವ 108 ಪಾಕಿಸ್ತಾನಿ ಪ್ರಜೆಗಳ ಪೈಕಿ ಸುಮಾರು 88 ಮಂದಿ ನಿರಾಳರಾಗಿದ್ದಾರೆ. ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ನರಮೇಧ ಘಟನೆ ಬಳಿಕ ಪಾಕಿಸ್ತಾನ ಪ್ರಜೆಗಳ ಗಡೀಪಾರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅಲ್ಲದೆ ಪಾಕಿಸ್ತಾನ ಪ್ರಜೆಗಳ ಎಲ್ಲಾ ರೀತಿಯ ವೀಸಾ ರದ್ದುಪಡಿಸಿದ್ದ ಸರ್ಕಾರ, ಲಾಂಗ್ ಟರ್ಮ್ ವೀಸಾ (ಬಹುಕಾಲ ನೆಲೆಸಿರುವ)ಗಳಿಗೆ ವಿನಾಯ್ತಿ ನೀಡಿ ಶುಕ್ರವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೆಂಗಳೂರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮೈಸೂರು, ಮಂಗಳೂರು ಹಾಗೂ ಧಾರವಾಡ ಸೇರಿ ಇತರೆಡೆ ಎಲ್‌ಟಿವಿ ಆಧಾರದ ಮೇರೆಗೆ ನೆಲೆಸಿರುವ 88 ಪಾಕಿಸ್ತಾನಿ ಪ್ರಜೆಗಳಲ್ಲಿದ್ದ ಆತಂಕ ಕೊನೆಯಾಗಿದೆ ಎಂದು ತಿಳಿದು ಬಂದಿದೆ. ದಶಕಗಳಿಂದ ಪಾಕಿಸ್ತಾನದ ಜತೆ ರಾಜ್ಯದ ಕೆಲ ಕುಟುಂಬಗಳು ವೈವಾಹಿಕ ಸಂಬಂಧ ಹೊಂದಿವೆ. ಹೀಗೆ ವೈವಾಹಿಕ ನಂಟು ಹೊಂದಿರುವವರು ಎಲ್‌ಟಿವಿ ಪಡೆದಿದ್ದಾರೆ. ಹೀಗಾಗಿ ಪ್ರಸುತ ವಿಷಮ ಸನ್ನಿವೇಶದಲ್ಲಿ ಅವರು ಗಡಿಪಾರಿನಿಂದ ಪಾರಾಗಿದ್ದಾರೆ. ಭಾರತದಲ್ಲಿ ಬಹುಕಾಲ ನೆಲೆಸುವ ವೀಸಾವನ್ನು ಆ ದೇಶವಾಸಿಗಳಿಗೆ ಕಾನೂನು ಪ್ರಕಾರ ನೀಡಲಾಗಿದೆ.

11:56 PM (IST) Apr 27
ಡೆಲ್ಲಿ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ, ಕೆ.ಎಲ್. ರಾಹುಲ್‌ಗೆ ಕಾಂತಾರ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಕೊಹ್ಲಿ ಮತ್ತೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ಪೂರ್ತಿ ಓದಿ11:24 PM (IST) Apr 27
ಪಾಕಿಸ್ತಾನ-ಚೀನಾ ಸಂಬಂಧ: ಪರಮಾಣು ಬಾಂಬ್ ಬೆದರಿಕೆ ಹಾಕುವ ಪಾಕಿಸ್ತಾನದ ಆರ್ಥಿಕ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಪ್ರತಿ ದಿನ ಯಾವುದಾದರೊಂದು ದೇಶದಿಂದ ಸಾಲ ಕೇಳುತ್ತಿದೆ. ಈಗ ನೆರೆಯ ಚೀನಾ ಮುಂದೆ ಕೈಚಾಚಿದೆ.
ಪೂರ್ತಿ ಓದಿ11:18 PM (IST) Apr 27
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ಪೂರ್ತಿ ಓದಿ11:07 PM (IST) Apr 27
ಚಾಮರಾಜನಗರದ ಬೂದಿತಿಟ್ಟು ಗ್ರಾಮದ ನಂಜಶೆಟ್ಟಿ ಅವರು ಅಡಿಕೆ ವ್ಯಾಪಾರಕ್ಕಾಗಿ ಖಾಸಗಿ ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಕೋವಿಡ್ ಸಮಯದಲ್ಲಿ ವ್ಯಾಪಾರ ನಷ್ಟದಿಂದಾಗಿ ಸಾಲ ತೀರಿಸಲಾಗದೆ ಮನೆ ಜಪ್ತಿಯಾಗಿ ಬೀದಿಗೆ ಬಿದ್ದಿದ್ದಾರೆ.
ಪೂರ್ತಿ ಓದಿ10:34 PM (IST) Apr 27
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಬಿಸಿಲಿನ ಬಯಲು ಪ್ರದೇಶದಲ್ಲಿ ಸೇಬು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ. ಈ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ರೀಶೈಲರನ್ನು ಶ್ಲಾಘಿಸಿದ್ದಾರೆ. ರೈತನ ಸಾಧನೆ ವಿವರ ನೋಡಿ..
ಪೂರ್ತಿ ಓದಿ09:39 PM (IST) Apr 27
ನಿವೃತ್ತ ವಾಯುಪಡೆ ಯೋಧನೊಬ್ಬ ನಾಲ್ಕು ವರ್ಷಗಳ ನಂತರ ಪತ್ನಿಯಿಂದ ಪತ್ತೆಯಾಗಿದ್ದು, ತಾನು ಪೋರ್ನ್ ಸ್ಟಾರ್ ಎಂದು ಹೇಳಿಕೊಂಡು ಯಾಮಾರಿಸಲು ಯತ್ನಿಸಿದ್ದಾನೆ. ಪೊಲೀಸರ ಮಧ್ಯಸ್ಥಿಕೆಯ ನಂತರ ಮದುವೆ ನೋಂದಣಿ ಮಾಡಿಸಲಾಗಿದೆ.
ಪೂರ್ತಿ ಓದಿ09:01 PM (IST) Apr 27
ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ನರಮೇಧ ಖಂಡಿಸಿ ರಿಪ್ಪನ್ ಪೇಟೆಯಲ್ಲಿ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು. ಇಸ್ಲಾಂ ಧರ್ಮದ ಹೆಸರಿನಲ್ಲಿ ನಡೆದ ಈ ಹೀನ ಕೃತ್ಯವನ್ನು ಮುಸ್ಲಿಂ ಮುಖಂಡರು ಖಂಡಿಸಿದ್ದಾರೆ.
ಪೂರ್ತಿ ಓದಿ08:21 PM (IST) Apr 27
ಸೂರ್ಯಕುಮಾರ್ ಯಾದವ್ ಮತ್ತು ರಿಯಾನ್ ರಿಕೆಲ್ಟನ್ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 54 ರನ್‌ಗಳ ಜಯ ಸಾಧಿಸಿದೆ. ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಮುಂಬೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
ಪೂರ್ತಿ ಓದಿ08:14 PM (IST) Apr 27
16 ವರ್ಷದ ಯುವಕ ತನಗಿಂತ 7 ವರ್ಷ ದೊಡ್ಡವಳಾದ ಯುವತಿಯನ್ನು ರಾತ್ರಿ ವೇಳೆ ಭೇಟಿ ಮಾಡಲು ಹೋದಾಗ ಹುಡುಗಿಯ ಪೋಷಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಆದರೆ, ಮುಂದೆ ನಡೆದ ಘಟನೆ ಮಾತ್ರ ಯುವಕನ ಜೀವನದ ಅತ್ಯಂತ ಸಂತಸದ ಕ್ಷಣಗಳನ್ನು ದುಃಖದಿಂದ ಸ್ವೀಕಾರ ಮಾಡುವಂತಹ ಘಟನೆ ನಡೆದು ಹೋಯಿತು.
ಪೂರ್ತಿ ಓದಿ07:12 PM (IST) Apr 27
ಸೂಪರ್ ಸಂಡೆಯಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿದೆ. ಫಿಲ್ ಸಾಲ್ಟ್ ಬದಲಿಗೆ ಜೇಕೊಬ್ ಬೆಥೆಲ್ ಆಡುವ ಹನ್ನೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಪೂರ್ತಿ ಓದಿ06:19 PM (IST) Apr 27
ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಸಮಯದಲ್ಲಿ ಪಾಕಿಸ್ತಾನದ ಧ್ವಜದ ರಕ್ಷಣೆ ಮಾಡಿದ್ದಾರೆ ಕರ್ನಾಟಕದ ಮಹಿಳೆಯರು. ವಿಡಿಯೋ ನೋಡಿ!
ಪೂರ್ತಿ ಓದಿ06:13 PM (IST) Apr 27
ಬೆಂಗಳೂರಿನ ಬಾರ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದ ಗುಂಪಿಗೆ ಶ್...! ಎಂದಿದ್ದಕ್ಕೆ ಗ್ಯಾರೇಜ್ ಸುರೇಶನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಪೂರ್ತಿ ಓದಿ05:37 PM (IST) Apr 27
ಬೇರೆ ಬೇರೆಯಾದ ಅಪ್ಪ-ಅಮ್ಮನನ್ನು ನೆನೆದು ತಮ್ಮ ನೋವಿನ ದಿನಗಳನ್ನು ತಿಳಿಸಿ ವೇದಿಕೆ ಮೇಲೆ ಕಣ್ಣೀರಾಗಿದ್ದಾರೆ ಆ್ಯಂಕರ್ ನಿರಂಜನ್ ದೇಶ್ಪಾಂಡೆ...
ಪೂರ್ತಿ ಓದಿ05:22 PM (IST) Apr 27
ಪಾಕಿಸ್ತಾನದ ಜಿಯೋ ಟಿವಿಯಲ್ಲಿ ಯುದ್ಧದ ಕುರಿತು ಸಿದ್ದರಾಮಯ್ಯ ಅವರನ್ನು ಹೊಗಳಲಾಗಿದೆ. ಇದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಹೇಳಿದ್ದೇನು ಕೇಳಿ...
04:47 PM (IST) Apr 27
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ-2025ರ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ. ಭೌತಶಾಸ್ತ್ರದಲ್ಲಿ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದ್ದು, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಕೆಲವು ಉತ್ತರಗಳನ್ನು ಪರಿಷ್ಕರಿಸಲಾಗಿದೆ. ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ.
ಪೂರ್ತಿ ಓದಿ04:43 PM (IST) Apr 27
ಹಿಂದೂ ಯುವತಿಯರ ಹಿಂದೆ ಬಿದ್ದು ಅವರು ವಿರೋಧಿಸಿದಾಗ ಒತ್ತಾಯಪೂರ್ವಕವಾಗಿ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯವೆಸಗಿ ಅದನ್ನು ವೀಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡಿದ್ದಲ್ಲದೇ ಅವರ ಮೂಲಕ ಇನ್ನು ಅನೇಕರನ್ನು ಇದೇ ಜಾಲಕ್ಕೆ ಎಳೆಸಿ ತಂದು ಮತಾಂತರಕ್ಕೂ ಒತ್ತಾಯ ಮಾಡಿ ಕಿರುಕುಳ ನೀಡಿದ ಮೂವರು ಮುಸ್ಲಿಂ ಯುವಕರನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೂರ್ತಿ ಓದಿ03:37 PM (IST) Apr 27
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು ಎಂಬ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯುದ್ಧವು ಯಾವುದೇ ದೇಶದ ಅಂತಿಮ ಆಯ್ಕೆಯಾಗಿದ್ದು, ಶತ್ರುವನ್ನು ಮಣಿಸುವ ಇತರ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದೂ ಅವರು ತಿಳಿಸಿದ್ದಾರೆ.
ಪೂರ್ತಿ ಓದಿ03:04 PM (IST) Apr 27
ಕೇಂದ್ರದ ಆದೇಶದಂತೆ ಪಾಕಿಸ್ತಾನಿಯರನ್ನು ದೇಶದಿಂದ ವಾಪಸ್ ಕಳುಹಿಸುವಂತೆ ಎಸ್ ಪಿ ಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಧೀರ್ಘಾವಧಿ ವೀಸಾ ಹೊಂದಿರುವವರು, ವಿವಾಹಿತರು ಸೇರಿದಂತೆ ಕೆಲವರಿಗೆ ವಿನಾಯಿತಿ ನೀಡಲಾಗಿದ್ದು, ಉಳಿದವರನ್ನು ವಾಪಸ್ ಕಳುಹಿಸಲಾಗುವುದು.
ಪೂರ್ತಿ ಓದಿ02:55 PM (IST) Apr 27
ಪಹಲ್ಗಾಮ್ ದಾಳಿಯ ನಂತರ ದೇಶ ವಿರೋಧಿ ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗಾಗಿ 19 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಶಾಸಕ, ಪತ್ರಕರ್ತ, ವಕೀಲ ಮತ್ತು ನಿವೃತ್ತ ಶಿಕ್ಷಕರು ಸೇರಿದ್ದಾರೆ. ಈ ಬಂಧನಗಳು ಅಸ್ಸಾಂ, ಮೇಘಾಲಯ ಮತ್ತು ತ್ರಿಪುರಾದಲ್ಲಿ ನಡೆದಿವೆ.
ಪೂರ್ತಿ ಓದಿ02:39 PM (IST) Apr 27
ವಿಜಯಪುರದಲ್ಲಿ ಪತ್ನಿಯೊಬ್ಬಳು ಪತಿಯ ಕುತ್ತಿಗೆಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ್ದಾಳೆ. ಮೊಬೈಲ್ ಚಾಟಿಂಗ್ ವಿಚಾರವಾಗಿ ಗಲಾಟೆ ನಡೆದಿದ್ದು, ಪತ್ನಿ ತೇಜು ಪತಿ ಅಜಿತ್ ರಾಠೋಡ್ ಮೇಲೆ ಹಲ್ಲೆ ನಡೆಸಿದ್ದಾಳೆ.
ಪೂರ್ತಿ ಓದಿ02:10 PM (IST) Apr 27
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯವರನ್ನು ಪೂರ್ಣಾವಧಿ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಈ ಹಿಂದೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದ ಅವರು, ಈಗ ಹೆಚ್ಚು ಸಕ್ರಿಯ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
ಪೂರ್ತಿ ಓದಿ01:24 PM (IST) Apr 27
ಜೊಮಾಟೋ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿದೆ ಮತ್ತು ಆಂತರಿಕವಾಗಿ ಅವ್ಯವಸ್ಥೆಯಲ್ಲಿದೆ ಎಂಬ ಆರೋಪಗಳನ್ನು ಸಿಇಒ ದೀಪಿಂದರ್ ಗೋಯಲ್ ತಳ್ಳಿಹಾಕಿದ್ದಾರೆ. ಉದ್ಯೋಗಿಗಳು ಭಯಭೀತರಾಗಿದ್ದಾರೆ, ವಿತರಣಾ ಪಾಲುದಾರರು ಕಂಪನಿಯನ್ನು ತೊರೆಯುತ್ತಿದ್ದಾರೆ ಮತ್ತು ಗ್ರಾಹಕರು ಅತೃಪ್ತರಾಗಿದ್ದಾರೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದಾರೆ.
ಪೂರ್ತಿ ಓದಿ01:17 PM (IST) Apr 27
ಮುಂಬೈನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವುಗಳಾಗಿಲ್ಲ, ಬೆಂಕಿಗೆ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ.
ಪೂರ್ತಿ ಓದಿ01:06 PM (IST) Apr 27
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧದಲ್ಲಿ 26 ಮಂದಿ ಹಿಂದೂಗಳನ್ನು ಧಾರ್ಮಿಕ ಗುರುತು ಪರಿಶೀಲಿಸಿ ಹತ್ಯೆ ಮಾಡಲಾಗಿದೆ ಎಂದು ತನಿಖಾ ತಂಡ ಬಹಿರಂಗಪಡಿಸಿದೆ. ಮೃತರ ಒಳ ಉಡುಪುಗಳನ್ನು ತೆಗೆದು ಪರಿಶೀಲಿಸಿದ ನಂತರ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ಕೆಲವರು ಈ ಹೇಳಿಕೆಯನ್ನು ಸುಳ್ಳು ಎಂದು ಹೇಳುತ್ತಿದ್ದಾರೆ.
ಪೂರ್ತಿ ಓದಿ12:34 PM (IST) Apr 27
26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರದ ಮೊದಲ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಯೋತ್ಪಾದನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
ಪೂರ್ತಿ ಓದಿ11:58 AM (IST) Apr 27
ಪಹಲ್ಗಾಂ ದಾಳಿಯ ನಂತರ, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಮೂರು ದಿನಗಳಲ್ಲಿ ಆರು ಉಗ್ರರ ಮನೆ ಧ್ವಂಸೊಂಡಿದೆ. ಅರ ಬೆಂಬಲಿಗರಿಗೂ ಸೇನೆ ಹುಡುಕಾಟ ನಡೆಸುತ್ತಿದೆ.
ಪೂರ್ತಿ ಓದಿ11:51 AM (IST) Apr 27
ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಬರುವಾಗ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕ ಮಹ್ಮದ್ ಭಾಷಾ ಅತ್ತಾರ ಮೇಲೆ ಟಿಟಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
11:44 AM (IST) Apr 27
ಹರಿಯಾಣ ಮೂಲದ ಎಟಿಎಂ ದರೋಡೆಕೋರ ಗ್ಯಾಂಗ್ ಮೇಲೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
11:38 AM (IST) Apr 27
ರಾಜ್ಯದಲ್ಲಿರುವ ಪಾಕ್ ಪ್ರಜೆಗಳನ್ನು ಹುಡುಕಿ ವಾಪಸ್ ಕಳುಹಿಸಲು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಪೂರ್ತಿ ಓದಿ11:33 AM (IST) Apr 27
ಕ್ಯಾಲಿಫೋರ್ನಿಯಾ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ, ಜಪಾನ್ ಅನ್ನು ಮೀರಿಸಿದೆ. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಇದಕ್ಕೆ ಕಾರಣ, ಆದರೆ ಟ್ರಂಪ್ ಆಡಳಿತದ ಸುಂಕ ನೀತಿಗಳು ಆರ್ಥಿಕತೆಗೆ ಹಾನಿಕಾರಕ ಎಂದು ಗವರ್ನರ್ ನ್ಯೂಸಮ್ ಎಚ್ಚರಿಸಿದ್ದಾರೆ.
ಪೂರ್ತಿ ಓದಿ11:19 AM (IST) Apr 27
ಸತತ 4 ಪಂದ್ಯಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್, ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿದೆ. ಉಭಯ ತಂಡಗಳು 9 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಸಮಬಲದಲ್ಲಿವೆ.
ಪೂರ್ತಿ ಓದಿ11:05 AM (IST) Apr 27
ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳಿಗೆ ತಾಯ್ನಾಡಿಗೆ ಮರಳಲು ನೀಡಿದ್ದ ಗಡುವು ಇಂದು ಅಂತ್ಯಗೊಳ್ಳಲಿದೆ. ಭಾರತ ತೊರೆಯದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಆತಂಕಕ್ಕೆ ಒಳಗಾಗಿದ್ದಾರೆ.
ಪೂರ್ತಿ ಓದಿ11:01 AM (IST) Apr 27
ಸಾವರ್ಕರ್ ಮತ್ತು ಗೋಲ್ವಾಲ್ಕರ್ ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ಇದ್ದವರು ಎನ್ನುವ ಸ್ಪಷ್ಟ ತಿಳಿವಳಿಕೆ ಕಾರ್ಯಕರ್ತರಿಗೆ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪೂರ್ತಿ ಓದಿ10:40 AM (IST) Apr 27
ದಾಖಲೆ ದರ ಏರಿಕೆ ನಡುವೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಕ್ಷಯ ತೃತೀಯಕ್ಕೆ ಚಿನ್ನ ಮುಂಗಡ ಬುಕ್ಕಿಂಗ್ ಶೇಕಡ 10ರಷ್ಟು ಹೆಚ್ಚಾಗಿದೆ.
10:31 AM (IST) Apr 27
ಬೆಂಗಳೂರಿನಲ್ಲಿ ನಡೆಯುತ್ತಿರುವ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ ಕಾರಣಕ್ಕೆ ಇಂದು ನಗರದ ವಿವಿಧ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಪೂರ್ತಿ ಓದಿ10:27 AM (IST) Apr 27
ಜನಿವಾರ ಪ್ರಕರಣದ ಪ್ರಮುಖ ಸಂತ್ರಸ್ತರಾದ ಬೀದರ್‌ನ ವಿದ್ಯಾರ್ಥಿ ಸಚಿವ್ರತ ಕುಲಕರ್ಣಿ ಸಮಸ್ಯೆ ಇತ್ಯರ್ಥವಾದಂತಾಗಿದೆ.
ಪೂರ್ತಿ ಓದಿ10:00 AM (IST) Apr 27
ಪಹಲ್ದಾಂ ನರಮೇಧಕ್ಕೆ ಕಾರಣ ಎನ್ನಲಾದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಂ ಮುನೀರ್ ಅವರನ್ನು ಪದಚ್ಯುತಿಗೊಳಿಸುವಂತೆ ಪಾಕಿಸ್ತಾನಿ ನಾಗರಿಕರು ಮತ್ತು ನಿವೃತ್ತ ಸೇನಾಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.
ಪೂರ್ತಿ ಓದಿ09:57 AM (IST) Apr 27
ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಈಗ ಕೊಹ್ಲಿ ತವರಿನಲ್ಲಿ ಸೆಣಸಲಿದೆ. ರಾಹುಲ್ ಮತ್ತು ಕೊಹ್ಲಿ ನಡುವಿನ ಪೈಪೋಟಿ ಮತ್ತು ಹೇಜಲ್‌ವುಡ್ vs ಸ್ಟಾರ್ಕ್ ವೇಗದ ಜಿದ್ದಾಜಿದ್ದಿ ಈ ಪಂದ್ಯದ ಪ್ರಮುಖ ಆಕರ್ಷಣೆ.
ಪೂರ್ತಿ ಓದಿ09:53 AM (IST) Apr 27
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಶೂಟ್‌ಔಟ್ ಪ್ರಕರಣ ಒಂದು ವಾರವಾದರೂ ಭೇದಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಮುತ್ತಪ್ಪ ರೈ ಮಾಜಿ ಗನ್‌ಮ್ಯಾನ್ ಮನ್ನಪ್ಪ ವಿಠ್ಠಲ್ ಮೇಲೆ ಅನುಮಾನ ಬಲವಾಗಿದ್ದು, ಚೇತರಿಸಿಕೊಂಡ ರಿಕ್ಕಿ ಆಸ್ಪತ್ರೆಯಿಂದ ಇಂದು ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.
ಪೂರ್ತಿ ಓದಿ09:48 AM (IST) Apr 27
ನನ್ನ ಮತ್ತು ಕನ್ನಡಿಯ ನಡುವಿನ ಒಂದು ತೆಳುವಾದ ಅಗೋಚರ ರೇಖೆಯು ನನ್ನ ಕನ್ನಡಿಯು ನನಗೆ ಎಲ್ಲವನ್ನೂ ಪ್ರತಿಬಿಂಬಿಸುವುದನ್ನು ತಡೆಯುತ್ತದೆ.