ಬೆಂಗಳೂರು: ರಾಜ್ಯದಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದೆ.
ಎಸ್‌ಐಆರ್ ವೇಳೆ ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿ ಸಂಬಂಧ ಸಲ್ಲಿಕೆಯಾಗಿದ್ದ ಹಕ್ಕು, ಆಕ್ಷೇಪಣೆ, ನೋಟಿಸ್ ವಿಲೇವಾರಿ ಅ.22ರಂದು ಪೂರ್ಣಗೊಂಡಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದ್ದಾರೆ.
ಕರಡು ಮತದಾರರ ಪಟ್ಟಿಯ 4.50 ಕೋಟಿ ಮತದಾರರ ಪೈಕಿ ನೋ ಮ್ಯಾಪಿಂಗ್ ಮತ್ತು ತಾರ್ಕಿಕ ವ್ಯತ್ಯಾಸ ಕಾರಣಕ್ಕೆ 43.82 ಲಕ್ಷ ಮತದಾರರಿಗೆ ನೋಟಿಸ್ ಸೃಜಿಸಲಾಗಿತ್ತು. ಇಷ್ಟೂ ನೋಟಿಸ್‌ಗಳನ್ನು ಸಂಬಂಧಿತ ಮತದಾರರಿಗೆ ತಲುಪಿಸಿ ವಿಚಾರಣೆ ನಡೆಸಲಾಗಿದೆ. ಈ ಕರಡು ಮತದಾರರ ಪಟ್ಟಿಯಿಂದ ಎಷ್ಟು ಮತದಾರರ ಹೆಸರು ರದ್ದಾಗಲಿದೆ ಮತ್ತು ಹೊಸದಾಗಿ ಎಷ್ಟು ಮಂದಿ ಮತದಾರರು ಹೆಸರು ಸೇರ್ಪಡೆಯಾಗಿದೆ ಎಂಬುದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಸಂದರ್ಭದಲ್ಲಿ ಗೊತ್ತಾಗಲಿದೆ.
11:50 AM (IST) Oct 26
11:22 AM (IST) Oct 26
16ನೇ ಶತಮಾನದಲ್ಲಿ ನಿರ್ಮಾಣವಾದ ಕನಕಗಿರಿಯ ಐತಿಹಾಸಿಕ ವೆಂಕಟಪತಿ ಬಾವಿಯು ಮೂಲ ಸೌಕರ್ಯಗಳಿಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿದೆ. ಮೈಸೂರು ದಸರಾದಲ್ಲಿ ಪ್ರಥಮ ಸ್ಥಾನ ಪಡೆದ ಈ ಸ್ಮಾರಕದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್‌ಗೆ ಶುಲ್ಕ ವಿಧಿಸಿದರೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದರಿಂದಾಗಿ ಪ್ರವಾಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
11:15 AM (IST) Oct 26
09:42 AM (IST) Oct 26
08:50 AM (IST) Oct 26
08:32 AM (IST) Oct 26
08:19 AM (IST) Oct 26
A Rare Medical Case in Karnataka: ಸಿಂಧನೂರಿನ ಸಹನಾ ಆಸ್ಪತ್ರೆಗೆ ದಾಖಲಾದ 2 ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿರುವ ಅಪರೂಪದ ಘಟನೆ ನಡೆದಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು 'ಫೀಟಸ್ ಇನ್ ಫೀಟು' ಎನ್ನಲಿದ್ದು, ಇದು ಕರ್ನಾಟಕದ 3ನೇ ಪ್ರಕರಣವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
07:45 AM (IST) Oct 26
5 ಲಕ್ಷ ರೂ. ಸಾಲಕ್ಕಾಗಿ ದಲಿತ ರೈತನ 4 ಕೋಟಿ ರೂ. ಬೆಲೆಯ ಜಮೀನನ್ನು ಕರ್ಣಾಟಕ ಬ್ಯಾಂಕ್ ಅಕ್ರಮವಾಗಿ ಹರಾಜು ಮಾಡಿದೆ. ಇದನ್ನು ಖಂಡಿಸಿ ನವೆಂಬರ್ 2ರಂದು ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತನಿಗೆ ನ್ಯಾಯ ಒದಗಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘ ಎಚ್ಚರಿಸಿದೆ.
07:34 AM (IST) Oct 26
07:25 AM (IST) Oct 26
07:11 AM (IST) Oct 26
06:57 AM (IST) Oct 26
06:43 AM (IST) Oct 26
ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿತ್ತೂರು ಕೋಟೆ ಆವರಣದಲ್ಲಿ ₹40 ಕೋಟಿ ವೆಚ್ಚದ 'ಫ್ರೀಡಂ ಪಾರ್ಕ್' ನಿರ್ಮಾಣವನ್ನು ಘೋಷಿಸಿದ್ದಾರೆ. ಅಲ್ಲದೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 'ಕಿತ್ತೂರು ರಾಣಿ ಚೆನ್ನಮ್ಮ' ಹೆಸರನ್ನು ಮರುನಾಮಕರಣ ಮಾಡುವುದಾಗಿ ಮತ್ತು ₹520 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
06:30 AM (IST) Oct 26
06:16 AM (IST) Oct 26
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ವಿಡಿಯೋದಲ್ಲಿದ್ದ ಮಹಿಳೆ ತನಗೆ ಸಿದ್ದರಾಮಯ್ಯ ಪರಿಚಯವಿಲ್ಲ ಹಾಗೂ ಹೇಳಿಕೊಟ್ಟಂತೆ ಮಾತನಾಡಿದ್ದೆ ಎಂದು ಸಿಸಿಬಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದು, ತನಗೆ ಸ್ಟಿಂಗ್ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ.
06:08 AM (IST) Oct 26
05:50 AM (IST) Oct 26
05:39 AM (IST) Oct 26