Published : Aug 19, 2025, 07:30 AM ISTUpdated : Aug 19, 2025, 11:05 PM IST

Karnatata Latest News Live: ಎಸ್ಸಿ ಒಳಮೀಸಲಾತಿ - ಎಲ್ಲರಿಗೂ ಸಂತಸ, ಒಂದು ಸಮುದಾಯದಿಂದ ಭಾರೀ ಆಕ್ರೋಶ; ಯಾವ ಲೀಡರ್ ಏನಂದ್ರು ನೋಡಿ!

ಸಾರಾಂಶ

ಬೆಂಗಳೂರು (ಆ.19): ಎಫ್‌ಎಸ್‌ಎಲ್‌ ವರದಿ ಬರುವ ತನಕ ಧರ್ಮಸ್ಥಳದಲ್ಲಿ ಎಸ್‌ಐಟಿ ನಡೆಸುತ್ತಿರುವ ಶವಶೋಧ ಕಾರ್ಯ ಸ್ಥಗಿತವಾಗಲಿದೆ ಎಂದು ರಾಜಯ ಗೃಹಸಚಿವ ಡಾ.ಜಿ.ಪರಮೇಶ್ವರ್‌ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು. ನೂರಾರು ಶವ ಹೂತ ಕೇಸ್‌ನ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ತನಿಖೆ ಅಬಾಧಿತವಾಗಿ ಮುನ್ನಡೆಯಲಿದೆ. ಷಡ್ಯಂತ್ರ ಆಗಿದ್ದರೂ ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:05 PM (IST) Aug 19

ಎಸ್ಸಿ ಒಳಮೀಸಲಾತಿ - ಎಲ್ಲರಿಗೂ ಸಂತಸ, ಒಂದು ಸಮುದಾಯದಿಂದ ಭಾರೀ ಆಕ್ರೋಶ; ಯಾವ ಲೀಡರ್ ಏನಂದ್ರು ನೋಡಿ!

ದಲಿತ ಸಮುದಾಯಗಳಿಗೆ ಒಳಮೀಸಲಾತಿ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 6% ಹಾಗೂ ಉಳಿದ ಸಮುದಾಯಗಳಿಗೆ 5% ಮೀಸಲಾತಿ ಹಂಚಿಕೆ ಮಾಡಲಾಗಿದೆ. ಈ ನಿರ್ಧಾರದಿಂದ ಅಲೆಮಾರಿ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ.
Read Full Story

10:46 PM (IST) Aug 19

ರಾಹುಲ್ ಗಾಂಧಿ ಯಾತ್ರೆಯಲ್ಲಿ ಅವಘಡ, ಪೊಲೀಸ್‌ಗೆ ಡಿಕ್ಕಿಯಾದ ಕಾರು, ವಿಡಿಯೋ ಹಂಚಿಕೊಂಡ ಬಿಜೆಪಿ

ಮತಗಳ್ಳತನ ಆರೋಪದ ಬಳಿಕ ರಾಹುಲ್ ಗಾಂಧಿ ಬಿಹಾರದಲ್ಲಿ ವೋಟ್ ಅಧಿಕಾರಿ ಯಾತ್ರಾ ನಡೆಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಯಾತ್ರೆಯಲ್ಲಿ ಅವಘಡ ನಡೆದಿದೆ. ರಾಹುಲ್ ಗಾಂಧಿ ಬೆಂಬಲಿಗರೊಂದಿಗೆ ತೆರಳುತ್ತಿದ್ದ ಕಾರು ಪೊಲೀಸ್ ಪೇದೆ ಕಾಲಿನ ಮೇಲೆ ಹತ್ತಿದ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Read Full Story

10:21 PM (IST) Aug 19

ಒಳ ಮೀಸಲಾತಿ ಕಗ್ಗಂಟು ಬಿಡಿಸಿದ ಸರ್ಕಾರ - ಎಡಗೈ, ಬಲಗೈ ಸಮುದಾಯಗಳಿಗೆ ತಲಾ ಶೇ.6ರಷ್ಟು ಮೀಸಲಾತಿ

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಘೋಷಿಸಿದೆ. ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 6% ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ನಿರ್ಧಾರವನ್ನು ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
Read Full Story

09:58 PM (IST) Aug 19

ಭಾರಿ ಮಳೆಗೆ ರಾಜ್ಯದ 5 ಜಿಲ್ಲೆ, ಉತ್ತರ ಕನ್ನಡದ ಕೆಲ ತಾಲೂಕಿನ ಶಾಲಾ ಕಾಲೇಜಿಗೆ ನಾಳೆ ರಜೆ

ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರಿದಿದೆ. ಒಟ್ಟು ಐದು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ. ಈ ಪೈಕಿ ಉತ್ತರ ಕನ್ನಡದ ಕೆಲ ತಾಲೂಕುಗಳಿಗೆ ನಾಳೆ ರಜೆ ನೀಡಲಾಗಿದೆ. ಯಾವೆಲ್ಲಾ ಜಿಲ್ಲೆಯಲ್ಲಿ ನಾಳೆ ರಜೆ?

 

Read Full Story

09:48 PM (IST) Aug 19

ವಕೀಲ ಜಗದೀಶ್ ವಿರುದ್ಧ ಎಫ್‌ಐಆರ್ ದಾಖಲು; ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ?

ವಕೀಲ ಜಗದೀಶ್ ವಿರುದ್ಧ ಕೊಡಿಗೆಹಳ್ಳಿ ಪೊಲೀಸರು ಜಾತಿ ನಿಂದನೆ ಹಾಗೂ ಸಾಮಾಜಿಕ ಅಶಾಂತಿ ಹುಟ್ಟುಹಾಕಿದ ಆರೋಪದಡಿ FIR ದಾಖಲಿಸಿದ್ದಾರೆ. ಮಂಜುನಾಥ್ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 196 ಮತ್ತು 299ರ ಅಡಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟಿರುವ ಆರೋಪಿ ಇದೆ.

Read Full Story

09:27 PM (IST) Aug 19

ಮಂಗಳೂರು ವಿವಿ ವಿವಿಧ ವಿಭಾಗದ ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ಗೆ ಭೇಟಿ ನೀಡಿ.
Read Full Story

08:44 PM (IST) Aug 19

ಆನ್‌ಲೈನ್ ಬೆಟ್ಟಿಂಗ್, ಹಣದ ಗೇಮಿಂಗ್ ಬ್ಯಾನ್, ಹೊಸ ಬಿಲ್‌ಗೆ ಕೇಂದ್ರ ಅನುಮೋದನೆ

ಹಲವು ವರ್ಷಗಳಿಂದ ಆಗ್ರಹಿಸಿದ ಮಹತ್ವದ ನಿಯಮ ಇದೀಗ ಜಾರಿಯಾಗುತ್ತಿದೆ. ಹಣ ಹಾಕಿ ಆಡುವ ಗೇಮಿಂಗ್, ಆನ್‌ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ಹೊಸ ಆನ್‌ಲೈನ್ ಗೇಮಿಂಗ್ ಬಿಲ್ ತರುತ್ತಿದೆ. ಈ ಬಿಲ್‌ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

Read Full Story

08:31 PM (IST) Aug 19

ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟ ಜಿಲ್ಲಾಧಿಕಾರಿ

ಭಾರೀ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಆ. 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
Read Full Story

08:30 PM (IST) Aug 19

ಅಮಿತ್ ಶಾಗೆ ತಲುಪಿದ ಧರ್ಮಸ್ಥಳ ಪ್ರಕರಣ, ಬಯಲಾಗುತ್ತಾ ತಮಿಳುನಾಡು ರಾಜಕಾರಣಿ ಮುಖವಾಡ?

ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.ಆರೋಪಗಳು, ತನಿಖೆ,ವಿವಾದಗಳ ಬೆನ್ನಲ್ಲೇ ಇದೀಗ ಧರ್ಮಸ್ಥಳ ಪ್ರಕರಣ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಲುಪಿದೆ. ಈ ಮೂಲಕ ತಮಿಳುನಾಡು ರಾಜಕಾರಣಿಯ ಷಡ್ಯಂತ್ರ ಬಯಲಾಗುತ್ತಾ?

 

Read Full Story

08:03 PM (IST) Aug 19

ಚಾಮರಾಜನಗರ ಶಾಲೆಯಲ್ಲಿ ಕುಸಿದುಬಿದ್ದು 1ನೇ ತರಗತಿ ವಿದ್ಯಾರ್ಥಿ ಸಾವು, ಮರಿಯಾನೆ ರಕ್ಷಣೆ

ಚಾಮರಾಜನಗರದಲ್ಲಿ ಹೃದಯ ಸಮಸ್ಯೆಯಿಂದ ಬನ್ನಿತಾಳಪುರದಲ್ಲಿ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕೇರಳದ ಪುಲುಪಳ್ಳಿ ಶಾಲೆಗೆ ತಾಯಿ ಬಿಟ್ಟು ಬಂದ ಮರಿಯಾನೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಮಕ್ಕಳು ಆನೆ ಕಂಡು ಸಂಭ್ರಮಿಸಿದರು. ಅಧಿಕಾರಿಗಳು ಮರಿಯಾನೆಯನ್ನು ತಾಯಿಯೊಂದಿಗೆ ಸೇರಿಸಲು ಯತ್ನಿಸುತ್ತಿದ್ದಾರೆ.

Read Full Story

07:54 PM (IST) Aug 19

Aiyyo Shraddha Shows - ಕನ್ನಡಿಗರನ್ನು ಕೆಣಕಿದ ಮಂಗಳೂರಿನ ಅಯ್ಯೋ ಶ್ರದ್ಧಾರ ಅದೊಂದು ಮಾತು! ಏನದು?

Aiyyo Shraddha controversy: ಅಯ್ಯೋ ಶ್ರದ್ಧಾ ಎಂದೇ ಫೇಮಸ್‌ ಆಗಿರೋ ಶ್ರದ್ಧಾ ಜೈನ್‌ರ ಸ್ಟ್ಯಾಂಡಪ್‌ ಕಾಮಿಡಿಯೊಂದು ಈಗ ಕನ್ನಡಿಗರನ್ನು ಕೆಣಕಿದೆ. ಹಾಗಾದರೆ ಅಂತ ಮಾತು ಏನಿದೆ?

Read Full Story

07:29 PM (IST) Aug 19

ಒಳಮೀಸಲಾತಿ ಕಗ್ಗಂಟು - ಎಡಗೈ, ಬಲಗೈ ಸಮುದಾಯಗಳಿಂದ ಸರ್ಕಾರಕ್ಕೆ ಸವಾಲ್

ಎಡಗೈ ಸಮುದಾಯಕ್ಕೆ 6% ಮತ್ತು ಬಲಗೈ ಸಮುದಾಯಕ್ಕೆ 5% ಮೀಸಲಾತಿ ನೀಡಲು ನಾಗಮೋಹನ್ ದಾಸ್ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ. ಇಂದು ಸಂಜೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಒಳಮೀಸಲಾತಿ ಕುರಿತು ಚರ್ಚಿಸಲಾಗುವುದು.
Read Full Story

07:29 PM (IST) Aug 19

ಕೆಎಸ್ಆರ್ ಬೆಂಗಳೂರು–ಮಂಡ್ಯ ನಡುವೆ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಿಂದ ವಿಂಡೋ-ಟ್ರೈಲಿಂಗ್ ತಪಾಸಣೆ

ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೆ.ಎಸ್. ಜೈನ್ ಅವರು ಬೆಂಗಳೂರು-ಮಂಡ್ಯ ಮಾರ್ಗದಲ್ಲಿ ವಿಂಡೋ-ಟ್ರೈಲಿಂಗ್ ತಪಾಸಣೆ ನಡೆಸಿ, ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅಮೃತ ಭಾರತ ನಿಲ್ದಾಣ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

Read Full Story

07:07 PM (IST) Aug 19

ಇನ್ಮುಂದೆ ಬೆಂಗಳೂರಿನಲ್ಲಿ ಮೀಟರ್ ಆಧಾರದ ಮೇಲೆ ಓಡಲಿವೆ ಆಟೋಗಳು!

Bengaluru News: ಬೆಂಗಳೂರಿನಲ್ಲಿ ಆಟೋಗಳು ಮತ್ತೆ ಮೀಟರ್ ಆಧಾರದಲ್ಲಿ ಓಡಲಿವೆ. ಈ ಉಪಕ್ರಮವು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕವನ್ನು ಸುಧಾರಿಸಲು ಸಹಾಯಕವಾಗಲಿದೆ.

Read Full Story

07:07 PM (IST) Aug 19

ತೆರಿಗೆ ಸಲ್ಲಿಕೆಯ ಫಾರ್ಮ್ 16 ಡೌನ್ಲೋಡ್ ಹೇಗೆ? ಸ್ಯಾಲರಿ ಉದ್ಯೋಗಿಗಳ ಸುಲಭ ಗೈಡ್

3 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ವೇತನ ಪಡೆಯುವ ಪ್ರತಿಯೊಬ್ಬ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಫೈಲ್ ಮಾಡಬೇಕು. ತೆರಿಗೆ ಶೂನ್ಯವಾಗಿದ್ದರೂ ಸಲ್ಲಿಕೆ ಮಾಡಬೇಕು. ಆದರೆ ಈ ಟಿಡಿಎಸ್ ಫೈಲ್ ಮಾಡಲು ಫಾರ್ಮ್ 16 ಡೌನ್ಲೋಡ್ ಮಾಡುವುದು ಹೇಗೆ?

Read Full Story

06:54 PM (IST) Aug 19

ಕರ್ನಾಟಕದಲ್ಲಿ ಮುಂದುವರೆದ ಮಳೆ ಅಬ್ಬರ; ನಾಳೆಯೂ ಎರಡು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ!

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಕ್ಕಳ ಸುರಕ್ಷತೆಗಾಗಿ ಆಗಸ್ಟ್ 20 ರಂದು ಎರಡೂ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 7 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Read Full Story

06:26 PM (IST) Aug 19

ಧರ್ಮಸ್ಥಳ ಪ್ರಕರಣಕ್ಕೆ ಎಂಟ್ರಿ ಕೊಡುವ ಮುನ್ನ ಜ್ಯೂಸ್, ಕಷಾಯ ಮಾರುತ್ತಿದ್ದ ಸುಜಾತಾ ಭಟ್

ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ್ ಭಟ್ ಕೇಸ್ ಇದೀಗ ಹಲವು ತಿರುವು ಪಡೆದುಕೊಂಡಿದೆ. ಬುರುಡೆ ಪ್ರಕರಣದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಮಗಳ ಮಿಸ್ಸಿಂಗ್ ದೂರು ದಾಖಲಿಸುವ ಮೊದಲು ಸುಜಾತಾ ಭಟ್, ಬೆಂಗಳೂರಲ್ಲಿ ಜ್ಯೂಸ್, ಕಷಾಯ ಮಾರುತ್ತಿದ್ದ ವಿವರ ಬಹಿರಂಗವಾಗಿದೆ.

Read Full Story

06:21 PM (IST) Aug 19

ಸುಜಾತಾ ಭಟ್ ಸ್ಪಷ್ಟನೆ - ನಾನು ಕೊಟ್ಟಿರುವ ಫೋಟೋ ನನ್ನ ಮಗಳು ಅನನ್ಯಾಳದ್ದೇ, ವಾಸಂತಿ ಯಾರೆಂದೇ ಗೊತ್ತಿಲ್ಲ!

ಧರ್ಮಸ್ಥಳದಲ್ಲಿ ನಾಪತ್ತೆಯಾದ ಅನನ್ಯಾ ಭಟ್ ಫೋಟೋ ವಿವಾದಕ್ಕೆ ಸುಜಾತಾ ಭಟ್ ಸ್ಪಷ್ಟನೆ. ಫೋಟೋದಲ್ಲಿರುವ ವ್ಯಕ್ತಿ ರಂಗಪ್ರಸಾದ್ ಅವರ ಸೊಸೆ ವಾಸಂತಿ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಅನನ್ಯಾ ಅಸ್ತಿತ್ವದ ಬಗ್ಗೆಯೇ ಅನುಮಾನಗಳು ವ್ಯಕ್ತವಾಗುತ್ತಿವೆ.
Read Full Story

05:40 PM (IST) Aug 19

ನಾಳೆ ಬೆಂಗಳೂರಿನ ಈ ಭಾಗದಲ್ಲಿ ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಪವರ್ ಕಟ್

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಚ್‌ಬಿಆರ್ ಲೇಔಟ್, ನಾಗವಾರ, ಕಮ್ಮನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಇರುವುದಿಲ್ಲ.
Read Full Story

05:32 PM (IST) Aug 19

ಸುಳ್ಳು ಆರೋಪ,ಅಪಪ್ರಚಾರದಿಂದ ನೋವಾಗಿದೆ, ಧರ್ಮಸ್ಥಳ ಪ್ರಕರಣ ಕುರಿತು ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ

ಧರ್ಮಸ್ಥಳ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಆರೋಪಗಳು, ಎಸ್ಐಟಿ ತನಿಖೆ ತೀವ್ರಗೊಂಡಿದೆ. ಇತ್ತ ಸದನದಲ್ಲೂ ಧರ್ಮಸ್ಥಳ ಪ್ರಕರಣ ಭಾರಿ ಚರ್ಚೆಯಾಗಿದೆ. ಈ ಬೆಳವಣಿಗೆ ನಡುವೆ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಪ್ರಕರಣ ಕುರಿತು ಪಿಟಿಐಗೆ ನೀಡಿದ ಸಂದರ್ಶನ ಇಲ್ಲಿದೆ.

Read Full Story

05:28 PM (IST) Aug 19

ಕೊಡಗು ಪುಷ್ಪಗಿರಿ ಜಲಪಾತದಲ್ಲಿ ಯುವಕನ ಶವ ಪತ್ತೆ - ಮೂರು ದಿನಗಳ ಹುಡುಕಾಟದ ಅಂತ್ಯ

ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಹೈಡೆಲ್ ವಿದ್ಯುತ್ ಘಟಕದ ಚಿದಾನಂದ ನಾಪತ್ತೆಯಾಗಿ ಮೂರು ದಿನಗಳ ನಂತರ ಜಲಪಾತದಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹ*ತ್ಯೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

05:22 PM (IST) Aug 19

AI ಯುಗದಲ್ಲಿ PhD ಪದವಿಯ ಅವಶ್ಯಕತೆಯ ಬಗ್ಗೆ ತಜ್ಞರ ಅಭಿಪ್ರಾಯ, ಎಂದಿಗೂ ಈ ತಪ್ಪು ಮಾಡಬೇಡಿ

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪಿಎಚ್‌ಡಿ ಪದವಿಯ ಅಗತ್ಯತೆ ಕುಗ್ಗುತ್ತಿದೆ ಎಂದು ಗೂಗಲ್‌ನ ಮಾಜಿ AI ತಜ್ಞ ಜಾಡ್ ತಾರಿಫಿ ಅಭಿಪ್ರಾಯಪಟ್ಟಿದ್ದಾರೆ. ಐದು ವರ್ಷಗಳಲ್ಲಿ ಜ್ಞಾನ ಹಳೆಯದಾಗುವ ಕಾರಣ ವಿದ್ಯಾರ್ಥಿಗಳು ಪ್ರಾಯೋಗಿಕ ಅನುಭವಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದ್ದಾರೆ.
Read Full Story

05:17 PM (IST) Aug 19

ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತೀನಿ, ಆ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲ್ಲ - ಪ್ರತಾಪ್ ಸಿಂಹ

Pratap Simha Political Future: ಮಾಜಿ ಸಂಸದ ಪ್ರತಾಪ್ ಸಿಂಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹಾಗಾದ್ರೆ ಪ್ರತಾಪ್ ಸಿಂಹ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಯಾವುದು ಗೊತ್ತಾ?

Read Full Story

04:57 PM (IST) Aug 19

ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ತರಬೇತಿ; ಇವ್ರು ಗುಂಡಿ ಮುಚ್ಚೋದ್ರೊಳಗೆ ಅದೆಷ್ಟು ಜನ ಗುಂಡಿ ಸೇರ್ತಾರೋ?

ಬಿಬಿಎಂಪಿ ವತಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇವರು ತರಬೇತಿ ಪಡೆದು, ಪ್ರಾಕ್ಟೀಸ್ ಮಾಡಿ ಗುಂಡಿ ಮುಚ್ಚೋದರೊಳಗೆ ಅದೆಷ್ಟು ಜನರು ರಸ್ತೆ ಗುಂಡಿಯಲ್ಲಿ ಬಿದ್ದು, ಶಾಶ್ವತ ಗುಂಡಿ ಸೇರುತ್ತಾರೋ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ.

Read Full Story

04:51 PM (IST) Aug 19

ಭಾರಿ ಮಳೆ, ಜಲಾವೃತ ರಸ್ತೆ ನಡುವೆ ತಕ್ಕ ಸಮಯಕ್ಕೆ ಫುಡ್ ಡೆಲಿವರಿ, ಆತಂಕ ವ್ಯಕ್ತಪಡಿಸಿದ ಹಲವರು

ದೇಶದ ಹಲವು ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿದೆ. ಇದರ ನಡುವೆ ಫುಡ್ ಡೆಲಿವರಿ ಎಜೆಂಟ್ಸ್ ಸಾಹಸ ಮಾಡಿ ಡೆಲಿವರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಲವರು ಡೆಲಿವರಿ ಎಜೆಂಟ್ ಸವಾಲುಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

Read Full Story

04:06 PM (IST) Aug 19

ಸಾಲು ಮರದ ತಿಮ್ಮಕ್ಕ ನೆಟ್ಟಿದ್ದ 200ಕ್ಕೂ ಅಧಿಕ ಮರಗಳಿಗೆ ಕೊಡಲಿ ಏಟು- ದೂರು ದಾಖಲು

ಸಾಲು ಮರದ ತಿಮ್ಮಕ್ಕ ಅವರು ನೆಟ್ಟ 200ಕ್ಕೂ ಹೆಚ್ಚು ಮರಗಳನ್ನು ಕಡಿದ ಆರೋಪದ ಮೇಲೆ ಬೇಲೂರು ತಹಶೀಲ್ದಾರ್ ವಿರುದ್ಧ ದೂರು ದಾಖಲಾಗಿದೆ. .

Read Full Story

03:53 PM (IST) Aug 19

ಮಹೀಂದ್ರ ನ್ಯೂ ಜನರೇಶನ್ ಬೊಲೆರೋ ಕಾರಿಗೆ ಮನಸೋತ ಜನ, ಇಂಟಿರಿಯರ್ ಕೂಡ ಅತ್ಯಾಕರ್ಷ

ಮಹೀಂದ್ರ ಇತ್ತೀಚೆಗೆ ಅನಾವರಣ ಮಾಡಿದ ನಾಲ್ಕು ಕಾನ್ಸೆಪ್ಟ್ ಕಾರುಗಳ ಪೈಕಿ ನ್ಯೂ ಜನರೇಶನ್ ಬೊಲೆರೋ ಕಾರಿಗೆ ಹಲವರು ಮನಸೋತಿದ್ದಾರೆ. ಇದರ ವಿನ್ಯಾಸ, ಇಂಟಿರಿಯರ್ ಸೇರಿದಂತೆ ಕಾರು ಎಲ್ಲರ ಗಮನಸೆಳೆಯುತ್ತಿದೆ.

 

Read Full Story

03:53 PM (IST) Aug 19

ಕರ್ನಾಟಕದಲ್ಲಿ ಪ್ರವಾಹದ ಆತಂಕ - ಜಿಲ್ಲೆಗಳ ಎಲ್ಲಾ ಡ್ಯಾಂಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆ!

ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಹಲವು ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದ್ದು, ಪ್ರವಾಹದ ಆತಂಕ ಎದುರಾಗಿದೆ. ಕೃಷ್ಣಾ, ಕಾವೇರಿ, ತುಂಗಭದ್ರಾ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲಾಡಳಿತಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿವೆ.
Read Full Story

03:31 PM (IST) Aug 19

ಕಾರು ಖರೀದಿಗೆ ದುಡ್ಡಿಲ್ಲ, ಆಟೋ ಜೀವನದಲ್ಲಿ ಖುಷಿ ಇದೆ, ಬೆಂಗಳೂರಿನ ವೈರಲ್ ಆಟೋ ಚಾಲಕಿ

ನನಗೆ ಡ್ರೈವಿಂಗ್ ಇಷ್ಟ, ಕಾರು ಖರೀದಿಸುವಷ್ಟು ದುಡ್ಡಿಲ್ಲ. ನನ್ನ ಬಜೆಟ್‌ನಲ್ಲಿ ಆಟೋ ಖರೀದಿಸಿದ್ದೇನೆ. ಪ್ರತಿ ದಿನ ಖುಷಿ ಖುಷಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಪಟ ಪಟ ಇಂಗ್ಲೀಷ್ ಮಾತನಾಡುವ ಬೆಂಗಳೂರು ಆಟೋ ಚಾಲಕಿಯ ಬೋಲ್ಡ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

 

Read Full Story

02:18 PM (IST) Aug 19

ಧರ್ಮಸ್ಥಳ ಪ್ರಕರಣ - ಯಾವುದೇ ಹೇಳಿಕೆ ನೀಡದಂತೆ ಸಿಎಂ ಖಡಕ್ ಸೂಚನೆ, ಹಲವು ಸಚಿವರ ಪ್ರತಿಕ್ರಿಯೆ

ಧರ್ಮಸ್ಥಳದ ಅಸ್ಥಿಪಂಜರ ಪ್ರಕರಣದ ಬಗ್ಗೆ ಸಚಿವರು ಅನಗತ್ಯ ಹೇಳಿಕೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಆರೋಪಗಳಿಗೆ ಕಾಂಗ್ರೆಸ್‌ನಿಂದ ತಿರುಗೇಟು ನೀಡಲಾಗಿದೆ.
Read Full Story

01:36 PM (IST) Aug 19

ಹೆಲ್ತ್ಕೇರ್ ಎಕ್ಸಲೆನ್ಸ್ ಅವಾರ್ಡ್ - ಆರೋಗ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಪ್ರಶಸ್ತಿ ಪ್ರದಾನ

ಕೊಡಗಿನಲ್ಲಿ ಪ್ರವಾಹ ಆದಾಗ ಮೊದಲು ಸುದ್ದಿ ಹಾಕುವ ಜೊತೆಗೆ ಪರಿಹಾರ ಕಾರ್ಯ ಶುರು ಮಾಡಿದ್ದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್.

Read Full Story

01:20 PM (IST) Aug 19

ಧರ್ಮಸ್ಥಳ ಷಡ್ಯಂತ್ರ - ಕಾಂಗ್ರೆಸ್ ಸಂಸದ, ದಕ್ಷಿಣ ಕನ್ನಡ ಮಾಜಿ ಡಿಸಿ ಸಸಿಕಾಂತ್‌ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ

ಧರ್ಮಸ್ಥಳ ದೇವಸ್ಥಾನದ ವಿರುದ್ಧದ ಷಡ್ಯಂತ್ರದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಭಾಗಿಯಾಗಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಈ ಪ್ರಕರಣದ ಹಿಂದೆ ಸೆಂಥಿಲ್ ಮಾಸ್ಟರ್ ಮೈಂಡ್ ಎಂದು ರೆಡ್ಡಿ ಹೇಳಿದ್ದಾರೆ. 

Read Full Story

01:12 PM (IST) Aug 19

ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಸಾವಿನ ರಹಸ್ಯ, ಎಸ್‌ಐಟಿಗೆ ಬಂದ ದೂರುದಾರ ಜಯಂತ್

ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಸಾವಿನ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ ಅವರು ಪೊಲೀಸ್ ಅಧಿಕಾರಿಯ ಕರ್ತವ್ಯ ಲೋಪದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಎಸ್ಐಟಿ ತನಿಖೆ ಮುಂದುವರೆದಿದೆ.
Read Full Story

12:58 PM (IST) Aug 19

ಧರ್ಮಸ್ಥಳ ಪ್ರಕರಣ - ಅನಾಮಿಕನ ಹೇಳಿಕೆಗಳಲ್ಲಿ ವೈರುಧ್ಯ ಪತ್ತೆಹಚ್ಚಿದ ಎಸ್‌ಐಟಿ

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಬಗ್ಗೆ ಅನಾಮಿಕ ದೂರು ಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ದೂರುದಾರರ ಹೇಳಿಕೆಗಳು ಮತ್ತು ಸ್ಥಳೀಯರ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪೊಲೀಸ್ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
Read Full Story

12:31 PM (IST) Aug 19

ಕಾಂಗ್ರೆಸ್ಸಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಧಕ್ಕೆಗೆ ಯತ್ನ - ಸಂಸದ ಕಾರಜೋಳ ಆರೋಪ

ಕಾಂಗ್ರೆಸ್‌ ನಾಯಕರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

 

Read Full Story

12:28 PM (IST) Aug 19

Breaking - ರಂಗಪ್ರಸಾದ್‌ ಸೊಸೆ 'ವಾಸಂತಿ' ಫೋಟೋ ಸುಜಾತಾ ಭಟ್‌ ಕೈಗೆ ಸಿಕ್ಕಿದ್ದು ಹೇಗೆ?

ಸುಜಾತಾ ಭಟ್‌ ಅವರ ಮಗಳು ಅನನ್ಯಾ ಭಟ್‌ ನಾಪತ್ತೆ ಪ್ರಕರಣವು ಸುಳ್ಳೆಂದು ಸಾಬೀತಾಗಿದೆ. ಏಷ್ಯಾನೆಟ್‌ ಸುವರ್ಣನ್ಯೂಸ್‌ ತನಿಖೆಯಿಂದ ಸುಜಾತಾ ಹೇಳಿದ ಸುಳ್ಳುಗಳು ಬಯಲಾಗಿವೆ. ಅನನ್ಯಾ ಭಟ್‌ ಫೋಟೋ ವಿಚಾರದಲ್ಲೂ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ.
Read Full Story

12:17 PM (IST) Aug 19

ಸಾಲವೂ ತಪ್ಪಲಿಲ್ಲ, ತುಪ್ಪವೂ ಸಿಗಲಿಲ್ಲ. ಇದು ಮೋದಿ ಮ್ಯಾಜಿಕ್ - ಪ್ರಿಯಾಂಕ್ ಖರ್ಗೆ

Minister Priyank Kharge: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್ಚುತ್ತಿರುವ ಸಾಲದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. 

Read Full Story

12:15 PM (IST) Aug 19

ಮೂರು ಜಿಲ್ಲೆಗಳಲ್ಲಿ ಕಾವೇರಿ ಪ್ರವಾಹ, ಕೆಆರ್‌ಎಸ್‌ನಿಂದ ಭಾರೀ ನೀರು ಬಿಡುಗಡೆ, ಹಲವು ಗ್ರಾಮಗಳಿಗೆ ಎಚ್ಚರಿಕೆ

ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 

Read Full Story

11:54 AM (IST) Aug 19

ರಾಜಕಾರಣಿಗಳೂ ಕಲಿಯಬೇಕಿದೆ ಕೃಷ್ಣ ವಿದ್ಯೆ - ಕಠಿಣವೆನ್ನಿಸಿದರೂ ಅಪ್ರಿಯ ಸತ್ಯ ಪಾಲಿಸಬೇಕು

ಶ್ರೀಕೃಷ್ಣನ ಜೀವನವು ಧರ್ಮ ಕಾರ್ಯ ಎತ್ತಿಹಿಡಿಯುವ ನಿರಂತರ ಹೋರಾಟವೇ ಆಗಿತ್ತು. ಆತ ಅಸಾಂಪ್ರದಾಯಿಕ ಅಥವಾ ಮೇಲ್ನೋಟಕ್ಕೆ ನೈತಿಕವೆಂದು ಗೋಚರಿಸದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ.

Read Full Story

11:35 AM (IST) Aug 19

ಕೆಆರ್‌ಎಸ್ ಅಣೆಕಟ್ಟೆಯಲ್ಲಿ 2.002 ಟಿಎಂಸಿ ಹೂಳು ಇದೆ - ಡಿ.ಕೆ.ಶಿವಕುಮಾರ್

ಕೃಷ್ಣರಾಜಸಾಗರ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 49.431 ಟಿ.ಎಂ.ಸಿ ಇದೆ. 2022ರಲ್ಲಿ ಸರ್ವೇ ಕೈಗೊಳ್ಳಲಾಗಿದ್ದು, 2.002 ಟಿಎಂಸಿ ಸಂಚಿತ ಹೂಳು ಪ್ರಮಾಣ ಇರುವುದು ದಾಖಲಾಗಿದೆ.

Read Full Story

More Trending News