ಕೊಡಗಿನಲ್ಲಿ ಪ್ರವಾಹ ಆದಾಗ ಮೊದಲು ಸುದ್ದಿ ಹಾಕುವ ಜೊತೆಗೆ ಪರಿಹಾರ ಕಾರ್ಯ ಶುರು ಮಾಡಿದ್ದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್.

ವ್ಯವಸ್ಥೆಯಲ್ಲಿ, ವೃತ್ತಿಯಲ್ಲಿ ದೋಷಗಳಾದಾಗ ಅದನ್ನು ಎತ್ತಿ ತೋರಿಸಿ ತಿದ್ದುವುದು, ಶಿಕ್ಷೆ ಕೊಡಿಸುವುದು, ಜಾಗೃತಿ ಮೂಡಿಸುವುದು ಮಾಧ್ಯಮದ ಕರ್ತವ್ಯ. ಅದೇ ರೀತಿ ವ್ಯವಸ್ಥೆ ಉತ್ತಮ ಪಡಿಸಲು ಶ್ರಮಿಸುವ ವಿವಧಿ ವೃತ್ತಿ ಬಾಂಧವರ ಉತ್ತಮ ಕಾರ್ಯಗಳನ್ನು ಮೆಚ್ಚಿ ಪ್ರಚಾರ ನೀಡುವುದೂ ಮಾಧ್ಯಮದ ಜವಾಬ್ದಾರಿಯೇ. ಆದರೆ, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಒಂದು ಹೆಜ್ಜೆ ಮುಂದೆ ಹೋಗಿ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸುತ್ತಿದೆ. ಕೊಡಗಿನಲ್ಲಿ ಪ್ರವಾಹ ಆದಾಗ ಮೊದಲು ಸುದ್ದಿ ಹಾಕುವ ಜೊತೆಗೆ ಪರಿಹಾರ ಕಾರ್ಯ ಶುರು ಮಾಡಿದ್ದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್.

ಅದೇ ರೀತಿ ಉತ್ತರ ಕರ್ನಾಟಕವು ಪ್ರವಾಹದಿಂದ ತತ್ತರಿಸಿದಾಗಲೂ ತನ್ನ ವೀಕ್ಷಕರು, ಓದುಗರ ನೆರವಿನಿಂದ ಸಂತ್ರಸ್ಥರ ನೆರವಿಗೆ ಧಾವಿಸಿದ್ದೆವು. ಅದು ನಮ್ಮ ಸಾಮಾಜಿಕ ಜವಾಬ್ದಾರಿ. ಸಾಮಾಜಿಕ ಜವಾಬ್ದಾರಿಯಾಗಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಾಲು ಸಾಲು ಕಾರ್ಯಕ್ರಮ ನಡೆಸುತ್ತಿದೆ. ವನ್ಯಜೀವ ಸಂರಕ್ಷಣಾ ಅಭಿಯಾನ, ಅಸಾಮಾನ್ಯ ಕನ್ನಡಿಗ, ರೈತ ರತ್ನ, ಕರ್ನಾಟಕ ಬ್ಯೂಸಿನೆಸ್ ಅವಾರ್ಡ್ಸ್, ಕರ್ನಾಟಕದ ಏಳು ಅದ್ಭುತಗಳು ಅಭಿಯಾನ, ಸುವರ್ಣ ಕನ್ನಡಿಗ, ಸುವರ್ಣ ಸಾಧಕಿ, ಎಮಿನೆಂಟ್ ಇಂಜಿನಿಯರ್ಸ್ ಅವಾರ್ಡ್ ಹೀಗೆ ಸಾಧಕರನ್ನು ಸಾಲು ಸಾಲಾಗಿ ಗುರುತಿಸಿ ಗೌರವಿಸಿದ್ದೇವೆ.

ಪ್ರಚಾರ ನೀಡಿದ್ದೇವೆ. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ನಿಂದ ಗುರುತಿಸಿ ಗೌರವಿಸಲ್ಪಟ್ಟ ಹಲವರು ನಂತರದಲ್ಲಿ ಪದ್ಮ ಪುರಸ್ಕಾರಗಳು, ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿರೋದು ನಮ್ಮ ಹೆಮ್ಮೆ. ಹೌದು ಎರಡನೇ ಬಾರಿಗೆ ನಾವು ವೈದ್ಯರ ದಿನಾಚರಣೆ ನಿಮಿತ್ತ ಹೆಲ್ತ್ ಕೇರ್ ಎಕ್ಸಲೆನ್ಸ್ ಅವಾರ್ಡ್ ನೀಡುತ್ತಿದ್ದೇವೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿಯಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಹೆಲ್ತ್ಕೇರ್ ಎಕ್ಸಲೆನ್ಸ್ ಅವಾರ್ಡ್ ನೀಡುತ್ತಿದ್ದೇವೆ. ಈ ಪ್ರಶಸ್ತಿಯು ಇತರೆ ವೈದ್ಯರಿಗೆ ಪ್ರೇರಣೆಯಾಗಲಿ, ಪ್ರಶಸ್ತಿ ಸ್ವೀಕರಿಸಿದವರ ಶಕ್ತಿ, ಉತ್ಸಾಹ ಹೆಚ್ಚಿಸಲಿ ಎನ್ನೋದೆ ನಮ್ಮ ಆಶಯ. ಪ್ರಶಸ್ತಿ ಸ್ವೀಕರಿಸಲಿರುವ ಎಲ್ಲಾ ವೈದ್ಯರಿಗೂ ಅಭಿನಂದನೆಗಳು.