3 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ವೇತನ ಪಡೆಯುವ ಪ್ರತಿಯೊಬ್ಬ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಫೈಲ್ ಮಾಡಬೇಕು. ತೆರಿಗೆ ಶೂನ್ಯವಾಗಿದ್ದರೂ ಸಲ್ಲಿಕೆ ಮಾಡಬೇಕು. ಆದರೆ ಈ ಟಿಡಿಎಸ್ ಫೈಲ್ ಮಾಡಲು ಫಾರ್ಮ್ 16 ಡೌನ್ಲೋಡ್ ಮಾಡುವುದು ಹೇಗೆ?

ಬೆಂಗಳೂರು (ಆ.19) ಸ್ಯಾಲರಿ ಉದ್ಯೋಗಿಗಳು ಟ್ಯಾಕ್ಸ್ ಫೈಲಿಂಗ್ ಕಡ್ಡಾಯವಾಗಿದೆ. 3 ಲಕ್ಷ ರೂಪಾಯಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಯಾಲರಿ ಪಡೆಯುತ್ತಿರುವ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ಸ (ಐಟಿಆರ್) ಸಲ್ಲಿಕೆ ಮಾಡಬೇಕು. ಪ್ರತಿ ವರ್ಷ ಇದು ಕಡ್ಡಾಯವಾಗಿದೆ. ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್ ಮೂಲಕ ಸುಲಭವಾಗಿ ಟ್ಯಾಕ್ಸ್ ಫೈಲ್ ಮಾಡಬೇಕು. ಹೀಗೆ ಟ್ಯಾಕ್ಸ್ ಫೈಲ್ ಮಾಡಲು ಫಾರ್ಮ್ 16 ಅವಶ್ಯಕತೆ ಇದೆ. ಫಾರ್ಮ್ 16 ಡೌನ್ಲೋಡ್ ಮಾಡುವುದು ಹೇಗೆ? ಫಾರ್ಮ್ 16 ಎಲ್ಲಿ ಲಭ್ಯವಿರುತ್ತದೆ?

ಐಟಿಆರ್ ಸಲ್ಲಿಕೆ ಮಾಡಲು ಆರ್ಥಿಕ ವರ್ಷದ ನಿಮ್ಮ ತೆರಿಗೆ ಕಡಿತದ ಮೂಲ (ಟಿಡಿಎಸ್)ವಿವರಣೆ ಅಗತ್ಯ. ಇದು ಫಾರ್ಮ್ 16 ನಲ್ಲಿ ವಿವರವಾಗಿ ನೀಡಲಾಗಿರುತ್ತದೆ. ಕಂಪನಿಯೂ ತನ್ನ ಉದ್ಯೋಗಿಗೆ ಈ ಫಾರ್ಮ್ 16 ನೀಡುತ್ತದೆ. ಪ್ರಮುಖವಾಗಿ ಆರ್ಥಿಕ ವರ್ಷದಲ್ಲಿ ಉದ್ಯೋಗಿ ಪಡೆದ ವೇತನ, ಕಡಿತಗೊಂಡ ಮೊತ್ತ, ಆದಾಯ ತೆರಿಗೆ ಸೇರಿದಂತೆ ಎಲ್ಲಾ ಮಾಹಿತಿಗಳು ಇದರಲ್ಲಿರುತ್ತದೆ. ಫಾರ್ಮ್ 16ನಲ್ಲಿ ಪಾರ್ಟ್ ಎ ಹಾಗೂ ಪಾರ್ಟ್ ಬಿ ಎಂದು ಎರಡು ವಿಭಾಗವಿದೆ. ಫಾರ್ಮ್ 16 ಉದ್ಯೋಗಿಯ ಆದಾಯದ ಮೂಲ, ತೆರಿಗೆ ಸೇರಿದಂತೆ ಇತರ ಸಂಪೂರ್ಣ ಮಾಹಿತಿ ನೀಡುತ್ತದೆ.

ಸ್ಯಾಲರಿ ಉದ್ಯೋಗಿಗಳು ಫಾರ್ಮ್ 16 ಡೌನ್ಲೋಡ್ ಮಾಡುವುದು ಹೇಗೆ?

1) ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಕ್ಲಿಕ್ ಮಾಡಿ ( ಅನವಶ್ಯಕ, ಫಿಶಿಂಗ್ ಲಿಂಕ್ ಕ್ಲಿಕ್ ಮಾಡಿ ಮೋಸಹೋಗಬೇಡಿ)

2) ನಿಮ್ಮ ಖಾತೆಗೆ ಲಾಗಿನ್ ಆಗಬೇಕು

ಲಾಗಿನ್ ಬಟನ್ ಕ್ಲಿಕ್ ಮಾಡಿ ಪಾನ್ ಕಾರ್ಡ್ ನಂಬರ್, ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಹಾಕಬೇಕು. ಬಳಿಕ ಲಾಗಿನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು.

3) ಮೈ ಅಕೌಂಟ್ ಸೆಕ್ಷನ್

ಲಾಗಿನ್ ಬಳಿಕ ಮೆನು ಬಾರ್‌ನಲ್ಲಿ ಮೈ ಅಕೌಂಟ್ ಸೆಕ್ಷನ್ ಕ್ಲಿಕ್ ಮಾಡಬೇಕು, ಇಲ್ಲಿ ನಿಮ್ಮ ಟ್ಯಾಕ್ಸ್ ಕುರಿತು ದಾಖಲೆ ಲಭ್ಯವಿರುತ್ತದೆ

4) ವೀವ್ಯೂ ಫಾರ್ಮ್ 16

ಮೈ ಅಕೌಂಟ್ ಸೆಕ್ಷನ್ ಅಡಿಯಲ್ಲಿ ವೀವ್ಯೂ ಫಾರ್ಮ್ 16 ಕ್ಲಿಕ್ ಮಾಡಬೇಕು

5) ವರ್ಷ ಆಯ್ಕೆ ಮಾಡಿ

ಯಾವ ವರ್ಷದ ಫಾರ್ಮ್ 16 ಬೇಕು ಅನ್ನೋದು ಆಯ್ಕೆ ಮಾಡಬೇಕು

6) ಡೌನ್ಲೋಡ್

ವರ್ಷ ಆಯ್ಕೆ ಬಳಿಕ ಕೆಳಗಿರುವ ಡೌನ್ಲೋಡ್ ಬಟನ್ ಕ್ಲಿಕ್ ಮಾಡಿದರೆ ಫಾರ್ಮ್ 16 ಡೌನ್ಲೋಡ್ ಆಗಲಿದೆ.

7) ವೆರಿಫೈ ಫಾರ್ಮ್ 16

ಡೌನ್ಲೋಡ್ ಆಗಿರುವ ಫಾರ್ಮ್ 16 ಚೆಕ್ ಮಾಡಿಕೊಳ್ಳಬೇಕು. ಪಾನ್ ನಂಬರ್, ಟ್ಯಾನ್ ನಂಬರ್ ಸೇರಿದಂತೆ ಇತರ ವಿವರ ಪರಿಶೀಲಿಸಿಕೊಳ್ಳಿ

ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಬಳಿಕವೂ ಫಾರ್ಮ್ 16 ಲಭ್ಯವಿಲ್ಲದಿದ್ದರೆ, ನಿಮ್ಮ ಕಂಪನಿಯ ಹೆಚ್ಆರ್ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ. ಕೆಲವು ಬಾರಿ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್ ತಾಂತ್ರಿಕ ದೋಷಗಳಿಂದಲೂ ಫಾರ್ಮ್ 16 ಲಭ್ಯವಾಗದೇ ಇರಬಹುದು. ಮರಳಿ ಪ್ರಯತ್ನಿಸಿ, ಇಲ್ಲದಿದ್ದರೂ ಆದಾಯ ತೆರಿಗೆ ಇಲಾಖೆ ಸೂಚನೆ ಪಾಲಿಸಿ.