ನನಗೆ ಡ್ರೈವಿಂಗ್ ಇಷ್ಟ, ಕಾರು ಖರೀದಿಸುವಷ್ಟು ದುಡ್ಡಿಲ್ಲ. ನನ್ನ ಬಜೆಟ್‌ನಲ್ಲಿ ಆಟೋ ಖರೀದಿಸಿದ್ದೇನೆ. ಪ್ರತಿ ದಿನ ಖುಷಿ ಖುಷಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಪಟ ಪಟ ಇಂಗ್ಲೀಷ್ ಮಾತನಾಡುವ ಬೆಂಗಳೂರು ಆಟೋ ಚಾಲಕಿಯ ಬೋಲ್ಡ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

ಬೆಂಗಳೂರು (ಆ.19) ಮಹಿಳೆಯರು ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿರುವುದು ಹೊಸದೇನಲ್ಲ. ಬೆಂಗಳೂರು ಸೇರಿದಂತೆ ಹಲೆವೆಡೆ ಮಹಿಳಾ ಆಟೋ ಚಾಲಕಿಯರು ಕಾಣಿಸಿಗುತ್ತಾರೆ. ಆದರೆ ಬೆಂಗಳೂರಿನ ಆಟೋ ಚಾಲಕಿ ಇದೀಗ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿದ್ಯಾಭ್ಯಾಸದ ಬಳಿಕ ಕೆಲಸ ಮಾಡಲೇಬೇಕು. ತನಗೆ ಡ್ರೈವಿಂಗ್ ತುಂಬಾ ಇಷ್ಟ. ಆದರೆ ಕಾರು ಖರೀದಿಸುವಷ್ಟು ಹಣವಿಲ್ಲ. ಹೀಗಾಗಿ ಆಟೋ ಖರೀದಿಸಿದ್ದೇನೆ. ಖುಷಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಈ ಮಹಿಳಾ ಆಟೋ ಚಾಲಕಿ ಹೇಳಿದ್ದಾಳೆ.

ಬೆಂಗಳೂರು ನಿವಾಸಿ ತಮನ್ನಾ ತನ್ವೀರ್ ಆಟೋ ಬುಕ್ ಮಾಡುವಾಗ ಬಂದಿದ್ದೇ ಈ ಮಹಿಳಾ ಆಟೋ ಚಾಲಕಿ. ತಮನ್ನಾ ತನ್ವೀರ್ ಪ್ರಕಾರ, ಇದೇ ಮೊದಲ ಬಾರಿಗೆ ಮಹಿಳಾ ಆಟೋ ಚಾಲಕಿ ಆಟೋದಲ್ಲಿ ಕುಳಿತು ಪ್ರಯಾಣ ಆರಂಭಿಸಿದ್ದಾಳೆ. ಆಟೋ ಡ್ರೈವರ್ ಆಗಿ ಯುವತಿಯನ್ನು ನೋಡಿದ ತಮನ್ನಾ ಕೂಡ ಪುಳಕಿತರಾಗಿದ್ದಾರೆ. ಹೀಗಾಗಿ ಪ್ರಯಾಣದ ನಡುವೆ ಮಾತನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಟೋ ಚಾಲಕಿಯ ನಿರ್ಧಾರ, ಆಕೆಯ ಧೈರ್ಯದ ಮಾತುಗಳು ತಮನ್ನಾ ಮಾತ್ರವಲ್ಲ ಹಲವು ಮಹಿಳೆಯರಿಗೆ ಸ್ಪೂರ್ತಿಯಾಗಿದೆ.

ಸ್ವಿಫ್ಟ್ ಅಥವಾ ಕಾರು ಖರೀದಿಗೆ ದುಡ್ಡಿಲ್ಲ

ತಮನ್ನಾ ಆಟೋ ಚಾಲಕಿಯನ್ನು ಮಾತಾನಾಡಿಸುತ್ತಿದ್ದಂತೆ ಹೊಸ ಲೋಕ ತೆರೆದುಕೊಂಡಿದೆ. ವಿದ್ಯಾಭ್ಯಾಸ ಮಾಡಿದ್ದೀರಿ, ಇಂಗ್ಲೀಷ್ ಚೆನ್ನಾಗಿದೆ, ಮತ್ತೆ ಆಟೋ ಯಾಕೆ ಎಂದು ತಮನ್ನಾ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆಟೋ ಚಾಲಕಿ ನನಗೆ ಡ್ರೈವಿಂಗ್ ಎಂದರೆ ತುಂಬಾ ಇಷ್ಟ. ನಾನು ಆಟೋ, ಕಾರು, ಬೈಕ್ ಸೇರಿದಂತೆ ಯಾವುದೇ ವಾಹನ ಚಲಾಯಿಸುತ್ತೇನೆ. ನನ್ನ ಬಜೆಟ್‌ನಲ್ಲಿ ಆಟೋ ಖರೀದಿಸಲು ಮಾತ್ರ ಸಾಧ್ಯವಾಗಿತ್ತು. ನನ್ನ ಬಳಿ ಸ್ವಿಫ್ಟ್ ಅಥವಾ ಇತರ ಯಾವುದೇ ಕಾರು ಖರೀದಿಸಲು ಬಜೆಟ್ ಇರಲಿಲ್ಲ. ನನ್ನ ಇಷ್ಟದ ಕೆಲಸ ಡ್ರೈವಿಂಗ್ ಹೀಗಾಗಿ ನಾನು ಆಟೋ ಖರೀದಿಸಿ ಚಾಲಕಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾಳೆ.

ಇವತ್ತು ಮಂಡೆ, ಕೆಲಸಕ್ಕೆ ಹೋಗಬೇಕು ಅನ್ನೋ ಒತ್ತಡವಿಲ್ಲ

ಮೊದಲು ಆಟೋ ಖರೀದಿಸಿ ಚಾಲನೆ ಮಾಡುತ್ತಾ ಹೀಗೆ ಜೀವನ ಸಾಗಿಸಬಹುದು ಅನ್ನೋದು ಗೊತ್ತಾಗಲಿದೆ. ಮುಂದಿನ ದಿನಗಳಲ್ಲಿ ನೋಡೋಣ ನನಗೆ ಕಾರು ಖರೀದಿ ಸಾಧ್ಯವೇ ಅನ್ನೋದು ಎಂದು ಈ ಚಾಲಕಿ ಹೇಳಿದ್ದಾಳೆ. ನಾನು ಏನು ಮಾಡುತ್ತಿದ್ದೇನೆ ಅದರಲ್ಲಿ ಸಂಪೂರ್ಣ ಸಂತೋಷವಿದೆ. ಓ ಇಂದು ಸೋಮವಾರ, ಕಚೇರಿಕೆಗೆ ತೆರಳಬೇಕು ಅನ್ನೋ ಒತ್ತಡ ನನಗಿಲ್ಲ. ಏನಾದರೂ ಕೆಲಸ ಮಾಡಲೇಬೇಕು. ನಾನು ಪ್ರತಿ ದಿನ ಖುಷಿ ಖುಷಿಯಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿ ದಿನ ಅದೇ ಎನರ್ಜಿ, ಅದೇ ಸಂತೋಷದಿಂದ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾಳೆ.

ತಾಯಿಗೆ ಕೊಂಚ ಭಯವಿದ್ದರೂ ನನ್ನ ಧೈರ್ಯವೇ ಅವರಿಗೆ ಸಮಾಧಾನ

ಬೆಂಗಳೂರಲ್ಲಿ ಆಟೋ ಓಡಿಸುತ್ತೇನೆ ಎಂದಾಗ ತಾಯಿಗೆ ಭಯವಾಗಿತ್ತು. ಆದರೆ ಬೋಲ್ಡ್ ನಿರ್ಧಾರಗಳು, ನನ್ನ ಧೈರ್ಯದ ಕುರಿತು ತಾಯಿಗೆ ಅರಿವಿದೆ. ಹೀಗಾಗಿ ತಾಯಿ ಸಮಾಧಾನದಿಂದ ಇದ್ದಾರೆ ಎಂದು ಈಕೆ ಹೇಳಿದ್ದಾಳೆ. ಈ ಮಾತುಗಳನ್ನು ಹೇಳುತ್ತಿದ್ದಂತೆ ತಮನ್ನಾ ಕೂಡ ನಿಮ್ಮ ಧೈರ್ಯ ನನಗೂ ಪ್ರೇರಣೆಯಾಗಿದೆ ಎಂದಿದ್ದಾರೆ.

ಬೆಂಗಳೂರು ಆಟೋ ಚಾಲಕಿಯ ಈ ವಿಡಿಯೋಗೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗಿದೆ. ತನ್ನಿಷ್ಟದ ಫ್ಯಾಶನ್‌ನಲ್ಲಿ ಮುಂದುವರಿದರೆ ಮಾತ್ರ ಜೀವನದಲ್ಲಿ ನೆಮ್ಮದಿ ಇರುತ್ತೆ. ಕೆಲಸ ಯಾವುದೇ ಆಗಲಿ, ಖುಷಿಯಿಂದ ಮಾಡುವಂತಿರಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

View post on Instagram