ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಚ್‌ಬಿಆರ್ ಲೇಔಟ್, ನಾಗವಾರ, ಕಮ್ಮನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಇರುವುದಿಲ್ಲ.

ಬೆಂಗಳೂರು: ನಾಳೆ ಬುಧವಾರ ರಾಜಧಾನಿ ಬೆಂಗಳೂರಿನ (Bengaluru Power Cut) ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ (Electricity Supply) ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ. ಬೆಂಗಳೂರಿನ ಯಾವ ಭಾಗದಲ್ಲಿ ವಿದ್ಯುತ್ ಕಡಿತವಾಗಲಿದೆ (Power Supply) ಎಂಬುದರ ಮಾಹಿತಿ ಇಲ್ಲಿದೆ.

ಎಲ್ಲೆಲ್ಲಿ ವಿದ್ಯುತ್ ಕಟ್?

ಎಚ್‌ಬಿಆರ್ 1 ನೇ ಬ್ಲಾಕ್, 2 ನೇ ಬ್ಲಾಕ್, 3 ನೇ ಬ್ಲಾಕ್, 4 ನೇ ಮತ್ತು 5 ನೇ ಬ್ಲಾಕ್, ಯಾಸಿನ್ ನಗರ, ಸುಭಾಷ್ ಲೇಔಟ್, ರಾಮ ದೇವಸ್ಥಾನ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣಾರೆಡ್ಡಿ ಲೇಔಟ್, ಟೀಚರ್ಸ್ ಕಾಲೋನಿ, ಶಿವರಾಮಯ್ಯ ಲೇಔಟ್, ರಿಂಗ್ ರೋಡ್ ಸರ್ವಿಸ್ ರಸ್ತೆ, ಕೆ.ಕೆ. ಹಳ್ಳಿ ಗ್ರಾಮ, ಸಿಎಂಆರ್ ರಸ್ತೆ, ಕಾಮನಹಳ್ಳಿ ಮುಖ್ಯ ರಸ್ತೆ, ರಾಮಯ್ಯ ಲೇಔಟ್, ಲಿಂಗರಾಜಪುರಂ, ಜಾನಕಿರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯ ರಸ್ತೆ, ರಶಾದ್‌ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜು, ಕೆಜಿ ಹಳ್ಳಿ, ಗೋವಿಂದಪುರ ಗ್ರಾಮ, ಕೆಜಿ ಹಳ್ಳಿ, ವಿನೋಭನಗರ, ಬಿಎಂ ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಚ್‌ಬಿಆರ್-ನಾಗವಾರ ಮುಖ್ಯ ರಸ್ತೆ, ನಾಗವಾರ

ಎನ್‌ಜೆಕೆ ಗಾರ್ಮೆಂಟ್ಸ್, ಬೈರನ್‌ಕುಂಟೆ, ಕುಪ್ಪುಸ್ವಾಮಿ ಲೇಔಟ್, ಎಚ್‌ಕೆಬಿಕೆ ಕಾಲೇಜು, ವಿದ್ಯಾಸಾಗರ, ಥಣಿಸಂದ್ರ, ಆರ್‌ಕೆ ಹೆಗ್ಡೆ ನಗರ, ಕೆ. ನಾರಾಯಣಪುರ, ಎನ್‌ಎನ್ ಹಳ್ಳಿ, ಬಾಲಾಜಿ ಲೇಔಟ್, ರೈಲ್ವೇಮೆನ್ ಲೇಔಟ್, ಬಿಡಿಎಸ್ ಲೇಔಟ್, ಸೆಂಟ್ರಲ್ ಅಬಕಾರಿ, ಹೆಣ್ಣೂರು ಮುಖ್ಯ ರಸ್ತೆ, ಎಚ್‌ಆರ್‌ಬಿಆರ್ 3ನೇ ಬ್ಲಾಕ್, ಆಯಿಲ್ ಮಿಲ್ ರಸ್ತೆ, ಅರವಿಂದ್ ನಗರ, ನೆಹರು ರಸ್ತೆ. 

ಕಮ್ಮನಹಳ್ಳಿ ಮುಖ್ಯರಸ್ತೆ, ಬೇಥಾಲ್ ಸ್ಟ್ರೀಟ್, ಎಕೆ ಕಾಲೋನಿ, ಎಚ್‌ಆರ್‌ಬಿಆರ್ 1ನೇ ಬ್ಲಾಕ್, 80 ಅಡಿ ರಸ್ತೆ, ಕಾರ್ಲೆ, ಹೆಗ್ಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾರ್ಟರ್ಸ್, ಕೆಂಪೇಗೌಡ ಲೇಔಟ್, ಶಬರಿನಗರ, ಕೆಎಂಟಿ ಲೇಔಟ್, ಭಾರತೀಯ ನಗರ, ನೂರ್ ನಗರ, ಹಿದಾಯತ್ ನಗರ, ಲಿಡ್ಕರ್ ಕಾಲೋನಿ, ಬಿಎಂಆರ್‌ಸಿಎಲ್, ಗಾಂಧಿ ನಗರ, ಕುಶಾಲನರ ಮತ್ತು ಶಾಂಪುರ ಮೇನ್ ರೋಡ್

ನಾಳೆಯೂ ಮಳೆ ನಿರೀಕ್ಷೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 20 ರಂದು ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗಲಿದೆ. ಆ.21ರಂದು ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಮೋಡ ಕವಿದ ವಾತಾವರಣವಿರಲಿದೆ. ತಿಂಗಳ ಕೊನೆಯ ವಾರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬಿಸಿಲಿನ ವಾತಾವರಣ ನಿರ್ಮಾಣವಾಗಲಿದೆ.