LIVE NOW
Published : Jan 17, 2026, 06:55 AM ISTUpdated : Jan 17, 2026, 09:47 AM IST

Karnataka News Live: ವಿಕಸಿತ ಭಾರತದ ಸಂಕಲ್ಪಕ್ಕೆ ''ರಾಮ್ ಜಿ'' ಶಕ್ತಿ

ಸಾರಾಂಶ

ಬಳ್ಳಾರಿ: ಬ್ಯಾನರ್ ಗಲಭೆ ಖಂಡಿಸಿ ಬಳ್ಳಾರಿ ನಗರದ ಎಪಿಎಂಸಿ ಬಳಿ ಶನಿವಾರ ಬಿಜೆಪಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶಕ್ಕೆ ₹50 ಲಕ್ಷದ ಬಾಂಡ್ ನೀಡುವಂತೆ ಜಿಲ್ಲಾಡಳಿತ ಕೇಳಿದ್ದು, ಈ ಬಗ್ಗೆ ಶುಕ್ರವಾರ ಪಕ್ಷದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೋಕಾ ಅವರಿಗೆ ನೋಟಿಸ್‌ ನೀಡಲು ಬಂದ ಪೊಲೀಸರನ್ನೇ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಬಳ್ಳಾರಿ ತಾಲೂಕು ತಹಸೀಲ್ದಾರ್ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ಮೂಲಕ ನೋಟಿಸ್ ನೀಡಲಾಗಿದ್ದು, ಪ್ರತಿಭಟನಾ ಸಮಾವೇಶಕ್ಕೆ 20 ಸಾವಿರ ಜನರು ಸೇರುವ ನಿರೀಕ್ಷೆ ಇರುವುದರಿಂದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಂಭವವಿದೆ. ಹಾಗಾಗಿ ₹50 ಲಕ್ಷ ಮುಚ್ಚಳಿಕೆ ಬಾಂಡ್ ನೀಡುವಂತೆ ನೋಟಿಸ್‌ ಕೊಡಲು ಪಿಎಸ್‌ಐ ರಫೀಕ್ ಆಗಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ಈ ಹಿಂದೆ ಯಾವುದಾದರೂ ಕಾರ್ಯಕ್ರಮಕ್ಕೆ ಬಾಂಡ್ ಬರೆಸಿಕೊಂಡಿದ್ದರೆ ತೆಗೆದುಕೊಂಡು ಬನ್ನಿ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Dr K sudhakar

09:47 AM (IST) Jan 17

ವಿಕಸಿತ ಭಾರತದ ಸಂಕಲ್ಪಕ್ಕೆ ''ರಾಮ್ ಜಿ'' ಶಕ್ತಿ

ಅಭಿವೃದ್ಧಿ, ಪಾರದರ್ಶಕತೆ ಮತ್ತು ಬಡವರ ಸಬಲೀಕರಣ - ಈ ಮೂರೂ ಅಂಶಗಳು ಕಾಂಗ್ರೆಸ್‌ ಪಕ್ಷಕ್ಕೆ ಎಂದಿಗೂ ಅಲರ್ಜಿ. ದಶಕಗಳ ಕಾಲ ಬಡವರ ಹೆಸರಿನಲ್ಲಿ ಅಧಿಕಾರ ಅನುಭವಿಸಿ, ಅವರನ್ನೇ ವಂಚಿಸಿದ ಇತಿಹಾಸ ಕಾಂಗ್ರೆಸ್ಸಿಗರದ್ದು

Read Full Story

09:27 AM (IST) Jan 17

ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಧಕ್ಕೆ ಆಗದಿರಲಿ - ಎಚ್‌ಡಿಕೆ

ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಮೈತ್ರಿಗೆ ಧಕ್ಕೆಯಾಗದಂತೆ ಕಾರ್ಯಕರ್ತರು, ಮುಖಂಡರು ಕೆಲಸ ಮಾಡಬೇಕು. ಹೆಚ್ಚು ವಾರ್ಡುಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ದುಡಿಯಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.

Read Full Story

09:25 AM (IST) Jan 17

BBK 12 ಗ್ರ್ಯಾಂಡ್‌ ಫಿನಾಲೆ ಶೂಟಿಂಗ್;‌ ವಿಜೇತರ ಲಿಸ್ಟ್‌ ಲೀಕ್‌ ಆಗೋಯ್ತು! ಹಾಗಾದ್ರೆ ವಿನ್ನರ್‌ ಯಾರು?

Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿ ಅದರಲ್ಲೂ ಈ ಬಾರಿ ಯಾರು ವಿನ್ನರ್‌ ಆಗ್ತಾರೆ ಎಂಬ ಕುತೂಹಲ ಹೆಚ್ಚಾಗ್ತಿದೆ. ಹೀಗಿರುವಾಗ ಸೋಶಿಯಲ್‌ ಮೀಡಿಯಾದಲ್ಲಿ ವಿನ್ನರ್‌, ರನ್ನರ್‌ ಯಾರು ಎಂಬ ಪೋಸ್ಟ್‌ವೊಂದು ವೈರಲ್‌ ಆಗ್ತಿದೆ. ಹಾಗಾದರೆ ಯಾರದು?

 

Read Full Story

09:10 AM (IST) Jan 17

ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ - ಶೋಭಾ ಕರಂದ್ಲಾಜೆ

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶದ ಉಳಿವಿಗೆ ಆಧ್ಯಾತ್ಮಿಕತೆ ಮತ್ತು ಕಾವಿ ಬಟ್ಟೆ ಮುಖ್ಯ ಎಂದರು. ಮಾಜಿ ಸಿಎಂ ಬೊಮ್ಮಾಯಿ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಶಿಕ್ಷಣ, ಸಂಸ್ಕೃತಿ, ನೀರಾವರಿ ಸೇರಿದಂತೆ ಮಠದ ಬಹುಮುಖಿ ಸೇವೆಗಳನ್ನು ಶ್ಲಾಘಿಸಿದರು.
Read Full Story

08:29 AM (IST) Jan 17

30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ - ಕುಣಿದಾಡಿದ ರೈತರು

ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ 30 ವರ್ಷಗಳ ರೈತರ ಕನಸಾಗಿದ್ದ ರಾಮನಗುಡ್ಡ ಕೆರೆಗೆ ಕಾವೇರಿ ನೀರು ಹರಿಸಲಾಗಿದೆ. ಈ ಯೋಜನೆಯಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ಅನುಕೂಲವಾಗಲಿದ್ದು, ಅಂತರ್ಜಲ ಮಟ್ಟವೂ ವೃದ್ಧಿಯಾಗುವ ನಿರೀಕ್ಷೆಯಿದೆ.

Read Full Story

08:27 AM (IST) Jan 17

ಅಂದು ಶಿರಸಿಯಲ್ಲಿಯೇ ಘೋಷಿಸಿದ್ದ Shiva Rajkumar - ನಾನು ಅವ್ರ ಕಾಲು ಧೂಳಿಗೂ ಸಮ ಇಲ್ಲ - ಗಿಲ್ಲಿ ನಟ

Bigg Boss Kannada Grand Finale: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಫಿನಾಲೆ ಸ್ಪರ್ಧಿ ಗಿಲ್ಲಿ ನಟ ಅವರು ಗೆಲ್ಲುತ್ತಾರಾ? ಇಲ್ಲವಾ ಎಂಬ ಪ್ರಶ್ನೆ ಬಂದಿದೆ.  ಈ ಮಧ್ಯೆ ಸಂಕಷ್ಟದ ದಿನಗಳ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.

Read Full Story

08:04 AM (IST) Jan 17

ಕರಾವಳಿ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ ನೀಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಕರಾವಳಿ ಜಿಲ್ಲೆಗಳ ರೈಲು ನಿಲ್ದಾಣಗಳ ಮೇಲ್ದರ್ಜೆಗಾಗಿ ಕೇಂದ್ರ ರೈಲ್ವೆ ಸಚಿವರು 100 ಕೋಟಿ ರು. ಅನುದಾನವನ್ನು ಅನುಮೋದಿಸಿದ್ದಾರೆ. ಉಡುಪಿ ರೈಲು ನಿಲ್ದಾಣದಲ್ಲಿ ನೂತನ ಸೌಲಭ್ಯಗಳನ್ನು ಉದ್ಘಾಟಿಸಲಾಗಿದ್ದು, ಅಮೃತ ಭಾರತ ಯೋಜನೆಯಡಿ ಇನ್ನಷ್ಟು ಅಭಿವೃದ್ಧಿ ಹಾಗೂ ವಂದೇ ಭಾರತ್ ರೈಲು ವಿಸ್ತರಣೆಯ ಯೋಜನೆಗಳಿವೆ.
Read Full Story

07:41 AM (IST) Jan 17

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ 1ರ ಕೆಲ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಜ.19ರಿಂದ ಆರಂಭವಾಗಲಿರುವ ಪೂರ್ವ ಸಿದ್ಧತಾ ಪರೀಕ್ಷೆ 2ರಲ್ಲಿ ಮತ್ತೆ ಇಂಥ ಲೋಪಗಳಾಗದಂತೆ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ.

Read Full Story

07:36 AM (IST) Jan 17

ಇನ್ಮುಂದೆ Zepto, Blinkit, Swiggy 10 ನಿಮಿಷದ ಡೆಲಿವರಿ ಸಿಗಲ್ಲ - ಸರ್ಕಾರದ ಆದೇಶ! ಖುಷಿಯಿಂದ ಒಪ್ಕೊಂಡ ಗ್ರಾಹಕರು

10 Minutes Delivery: ಐದು ನಿಮಿಷದಲ್ಲಿ ಪಾರ್ಸೆಲ್‌ ಡೆಲಿವರಿ ಮಾಡಬೇಕು, ಬೇಗ ಡೆಲಿವರಿ ಸಿಗಬೇಕು ಎಂದು ಅನೇಕರು ಡೆಲಿವರಿ ಬಾಯ್‌ಗಳ ಜೊತೆಯಲ್ಲಿ ಜಗಳ ಆಡೋದುಂಟು. ಈಗ ಸರ್ಕಾರವೇ ಹತ್ತು ನಿಮಿಷದೊಳಗಡೆ ಡೆಲಿವರಿ ಮಾಡಬೇಕು ಅಂತೇನಿಲ್ಲ ಎಂದು ಹೇಳಿದೆ.

 

Read Full Story

07:33 AM (IST) Jan 17

ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು - ಬೆನ್ನಲ್ಲಿರು ವಸ್ತು ನೋಡಿ ಜನರು ಶಾಕ್

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದೊಂದು ಪತ್ತೆಯಾಗಿ ಕುತೂಹಲ ಮೂಡಿಸಿತ್ತು. ತನಿಖೆಯ ನಂತರ, ಇದು ಮಹಾರಾಷ್ಟ್ರ ಅರಣ್ಯ ಇಲಾಖೆಯ ಸಂಶೋಧನಾ ಅಧ್ಯಯನದ ಭಾಗವೆಂದು ತಿಳಿದುಬಂದಿದೆ. 

Read Full Story

07:31 AM (IST) Jan 17

ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ

ಮುಂಬರುವ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಕರ್ನಾಟಕ ಸರ್ಕಾರಿ ಸ್ವಾಮ್ಯದ, ಮೈಸೂರು ಕಂಪನಿ ಉತ್ಪಾದಿಸುವ ಇಂಕ್‌ ಅನ್ನೇ ಮತದಾರರ ಕೈಗೆ ಗುರುತು ಹಾಕಲು ಬಳಸಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Read Full Story

07:24 AM (IST) Jan 17

ಮಾಜಿ ಸಚಿವ ರಾಜಣ್ಣಗೆ ಸಿಹಿ ಸುದ್ದಿ - ಮುಖ್ಯಮಂತ್ರಿ ಸಿದ್ಧರಾಮಯ್ಯ

ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಜತೆ ಸಿಹಿ ಸುದ್ದಿನೇ ಇರುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ಅವರು ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆ.ಎನ್.ರಾಜಣ್ಣ ಅವರ ಮನೆಯಲ್ಲಿ ಔತಣ ಕೂಟದಲ್ಲಿ ಭಾಗವಹಿಸಿದ್ದರು.

Read Full Story

07:21 AM (IST) Jan 17

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ - ಲೋಹದ ಹಕ್ಕಿಯ ಹಾರಾಟ ಆರಂಭ ಯಾವಾಗ?

ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಮಾರ್ಚ್ ತಿಂಗಳಲ್ಲಿ ವಿಮಾನ ಹಾರಾಟ ಆರಂಭಿಸುವ ನಿರೀಕ್ಷೆಯಿದೆ. ಸದ್ಯ ಪರಿಸರ ಮಾಲಿನ್ಯ ಇಲಾಖೆಯ ಅನುಮತಿಗಾಗಿ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯಲಾಗುತ್ತಿದ್ದು, ಶೀಘ್ರದಲ್ಲೇ ಪರವಾನಗಿ ಸಿಗುವ ಭರವಸೆಯಿದೆ.
Read Full Story

07:06 AM (IST) Jan 17

ದಿಲ್ಲಿ ಗಣರಾಜ್ಯೋತ್ಸವ ಪರೇಡಲ್ಲಿ ಈ ಬಾರಿ ರಾಜ್ಯದ ಸ್ತಬ್ಧಚಿತ್ರ ಇಲ್ಲ

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ಹತ್ತಾರು ಬಾರಿ ತನ್ನ ಸಂಸ್ಕೃತಿ ಹಾಗೂ ಪರಂಪರೆ ಪ್ರದರ್ಶಿಸಿದ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ಲಭ್ಯವಾಗಿಲ್ಲ. ‘ಮಿಲೆಟ್ಸ್‌ ಟು ಮೈಕ್ರೋ ಚಿಪ್‌’ ವಿಷಯಾಧಾರಿತ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಒಪ್ಪದ ಕೇಂದ್ರ

Read Full Story

More Trending News