Gejje Nada: ಗದಗದ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ, ಬೆಂಕಿ ಅವಘಡದಿಂದ ವಿರೂಪಗೊಂಡ ದೇವರ ಮೂರ್ತಿಗಳನ್ನು ಸ್ಥಳಾಂತರಿಸಿದ ಮಾರುತಿ ಮಂದಿರದಿಂದ ನಿಗೂಢ ಗೆಜ್ಜೆನಾದ ಕೇಳಿಬರುತ್ತಿದೆ.

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ದೇವಸ್ಥಾನದಿಂದ ಕೇಳಿ ಬರುತ್ತಿರುವ ನಿಗೂಢ ಗೆಜ್ಜೆನಾದಕ್ಕೆ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಈ ಹಿಂದಿನ ಅಮವಾಸ್ಯೆಯಂದು ಕೊರ್ಲಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿಯಿಂದ ವಿರೂಪಗೊಂಡಿದ್ದ ಮಾಯಮ್ಮ, ದುರ್ಗಮ್ಮ ದೇವರ ಮೂರ್ತಿಗಳನ್ನು ಗ್ರಾಮದ ಮಾರುತಿ ಮಂದಿರಕ್ಕೆ ಸ್ಥಳಾಂತರಿಸಲಾಗಿತ್ತು. ದೇವರ ವಿಗ್ರಹಗಳನ್ನು ಇರಿಸಿದ್ದ ಸ್ಥಳವನ್ನು ಹಾಳೆಗಳಿಂದ ಕವರ್ ಮಾಡಲಾಗಿತ್ತು. ಇದೀಗ ಇದೇ ಮಾರುತಿ ಮಂದಿರದಿಂದ ಗೆಜ್ಜೆ ನಾದ ಕೇಳಿಸುತ್ತಿದೆ.

ಮಾಯಮ್ಮ, ದುರ್ಗಮ್ಮ ದೇವರ ಮೂರ್ತಿ ಸ್ಥಳಾಂತರ

ಗೆಜ್ಜೆನಾದ ಕೇಳುತ್ತಿರುವ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಗ್ರಾಮಸ್ಥರೆಲ್ಲರೂ ಮಾರುತಿ ಮಂದಿರದ ಬಳಿ ರಾತ್ರಿ ಜಮಾಯಿಸಿದ್ದಾರೆ. ಮಾಯಮ್ಮ, ದುರ್ಗಮ್ಮ ದೇವರ ಮೂರ್ತಿಗಳನ್ನು ಸ್ಥಳಾಂತರಿಸಿದ ಬಳಿಕ ಪೂಜೆ ಪುನಸ್ಕಾರ ಯಾವುದು ನಡೆದಿಲ್ಲ. ಇದರಿಂದ ಈ ಗೆಜ್ಜೆನಾದ ಕೇಳಿಸುತ್ತಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿಂದು ಸಭೆ

ಸಾಮಾನ್ಯವಾಗಿ ವಿರೂಪ ಅಥವಾ ಭಗ್ನಗೊಂಡ ಮೂರ್ತಿಗಳಿಗೆ ಪೂಜೆ ಸಲ್ಲಿಕೆ ಮಾಡಲ್ಲ. ಆದ್ರೆ ಇದೀಗ ಗೆಜ್ಜೆ ಸದ್ದು ಯಾವುದರ ಮುನ್ಸೂಚನೆ ಎಂದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಇಂದು ಗ್ರಾಮಸ್ಥರು, ದೇವಸ್ಥಾನದ ಅರ್ಚಕರು ಒಂದೆಡೆ ಸೇರಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಉತ್ಖನನ ವೇಳೆ ನಿಧಿ ದೊರೆತರೆ ಲಕ್ಕುಂಡಿ ಗ್ರಾಮವೇ ಸ್ಥಳಾಂತರ?

ಇದನ್ನೂ ಓದಿ: ಲಕ್ಕುಂಡಿಗೆ ಶ್ರೀರಾಮನ ಕಾಲದ ಇತಿಹಾಸವಿದೆ, ಆತ ಭೇಟಿ ಕೊಟ್ಟ ಪುಣ್ಯ ಭೂಮಿ: ಇತಿಹಾಸ ತಜ್ಞ ಅಬ್ದುಲ್ ಕಟ್ಟಿಮನಿ