Published : Jun 15, 2026, 05:01 AM ISTUpdated : Jun 15, 2026, 09:48 PM IST

Karnataka News Live: Kodagu - ಸಚಿವ ಸಂಪುಟ ವಿಸ್ತರಣೆ ಯಾವಾಗ? - ಶಾಸಕ ಎ.ಎಸ್.ಪೊನ್ನಣ್ಣ ಕೊಟ್ರು ಮಹತ್ವದ ಸುಳಿವು!

ಸಾರಾಂಶ

ದಾವಣಗೆರೆ: ತಮ್ಮ ಸಹೋದರ, ಸಚಿವ ಸತೀಶ್‌ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೇ ಇರುವುದು ಒಳ್ಳೆಯದಾಗಿದೆ. ಅಧ್ಯಕ್ಷರಾಗಿದ್ದರೆ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಹೊಣೆಯನ್ನು ನಾಯಕ ಸಮಾಜಕ್ಕೆ ಕಟ್ಟುತ್ತಿದ್ದರು ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಭಾನುವಾರ ನಡೆದ ಸಂವಿಧಾನಬದ್ಧ ಶೇ.7ರ ಎಸ್‌ಟಿ ಮೀಸಲಾತಿ ಜಾರಿಯಾಗಲೇಬೇಕು ಎಂಬ ಸಮಾವೇಶದಲ್ಲಿ ಮಾತನಾಡಿ, ಒಂದು ವೇಳೆ ತಮ್ಮ ಸಹೋದರ ಅಧ್ಯಕ್ಷರಾಗಿದ್ದರೆ ಇಡೀ ನಮ್ಮ ಸಮುದಾಯ ಕೆಡುತ್ತಿತ್ತು. ಕಾಂಗ್ರೆಸ್ ಸೋತರೆ ನಾಯಕ ಸಮಾಜದ ಲೀಡರ್‌ಶಿಪ್‌ನಿಂದಾಗಿಯೇ ಪಕ್ಷಕ್ಕೆ ಸೋಲಾಯಿತು ಅಂತ ನಮ್ಮ ಮೇಲೆಯೇ ಕಾಂಗ್ರೆಸ್ಸಿನವರು ಅಪವಾದ ಹೊರಿಸುತ್ತಿದ್ದರು. ಅದಕ್ಕೆ ದೇವರು ಒಳ್ಳೆಯದನ್ನೇ ಮಾಡಿದ್ದಾನೆ ಎಂದರು.

ಬಿಜೆಪಿ ತಪ್ಪಿನಿಂದಲೇ ಇವತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಅಧಿಕಾರದಲ್ಲಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲಾ ಸಮಾಜಗಳನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರೆ ಸೋಲುತ್ತಿರಲಿಲ್ಲ. ಗೆದ್ದ ಮೇಲೆ ಒಂದೇ ಸಮುದಾಯದ ರಾಜಕೀಯವನ್ನೂ ಮಾಡಬಾರದು. ಅದನ್ನು ನಾವು ಹೋರಾಟದ ಮೂಲಕ ಗಟ್ಟಿಯಾಗಿ ಎದುರಿಸಬೇಕು ಎಂದು ಹೇಳಿದರು.

09:48 PM (IST) Jun 15

Kodagu - ಸಚಿವ ಸಂಪುಟ ವಿಸ್ತರಣೆ ಯಾವಾಗ? - ಶಾಸಕ ಎ.ಎಸ್.ಪೊನ್ನಣ್ಣ ಕೊಟ್ರು ಮಹತ್ವದ ಸುಳಿವು!

Karnataka Cabinet Expansion: ಜೂ.18ಕ್ಕೆ ಪರಿಷತ್ ಚುನಾವಣೆ ಇದ್ದು ಅದರ ಬಳಿಕ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. 

Read Full Story

09:01 PM (IST) Jun 15

Chikkamagaluru - ಹಣ ನೀಡಲಿಲ್ಲವೆಂದು ಪೋಷಕರೊಂದಿಗೆ ಜಗಳ - ಆಕ್ರೋಶದಿಂದ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ

Chikkamagaluru News: ಚಿಕ್ಕಮಗಳೂರು ಜಿಲ್ಲೆಯ ಬನ್ನೂರು ಗ್ರಾಮದಲ್ಲಿ ಹಣದ ವಿಚಾರವಾಗಿ ಪೋಷಕರೊಂದಿಗೆ ಜಗಳವಾಡಿದ 27 ವರ್ಷದ ಯುವಕ ಪ್ರದೀಪ್ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ.

Read Full Story

08:39 PM (IST) Jun 15

Snakes - ಹಾವುಗಳಿಗೆ ಮರಿಗಳ ಮೇಲೆ ಪ್ರೀತಿ ಇಲ್ವಾ? ಮೊಟ್ಟೆಯಿಟ್ಟ ತಕ್ಷಣ ದೂರ ಹೋಗೋದೇಕೆ? ಇಲ್ಲಿದೆ ಸತ್ಯ!

Snakes: ಜಗತ್ತಿನ ಎಲ್ಲಾ ಪ್ರಾಣಿಗಳು ತಮ್ಮ ಮರಿಗಳ ಜೊತೆ ಇರುತ್ತವೆ, ಆದರೆ ಹಾವುಗಳು ಮಾತ್ರ ಯಾಕೆ ಒಂಟಿಯಾಗಿರುತ್ತವೆ? ಈ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ಈ ಗ್ಯಾಲರಿಯಲ್ಲಿ ತಿಳಿಯೋಣ.

Read Full Story

07:18 PM (IST) Jun 15

Viral Video - ಮೈದಾನದಲ್ಲೇ ಕೈ ಮಿಲಾಯಿಸುವ ಹಂತಕ್ಕೆ ಹೋದ ಪ್ಲೇಯರ್ಸ್‌ - ಲಂಕಾ ಕ್ರಿಕೆಟಿಗನ ಎದೆಗೆ ಕೈಯಿಟ್ಟು ತಳ್ಳಿದ Vaibhav Sooryavanshi

ದಂಬುಲ್ಲಾದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ತ್ರಿಕೋನ ಸರಣಿಯ ಪಂದ್ಯವು ಸೂಪರ್ ಓವರ್‌ನಲ್ಲಿ ಅಂತ್ಯಗೊಂಡಿದ್ದು, ಶ್ರೀಲಂಕಾ 'ಎ' ಜಯ ಸಾಧಿಸಿತು. ಪಂದ್ಯದ ನಂತರ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅಂಪೈರ್ ತೀರ್ಪುಗಳ ಬಗ್ಗೆಯೂ ಗೊಂದಲ ಸೃಷ್ಟಿಯಾಗಿತ್ತು.
Read Full Story

06:55 PM (IST) Jun 15

ಮೈಸೂರು ರೆಸ್ಟೋ ಪಬ್‌ನಲ್ಲಿ ಸ್ಫೋಟ ಪ್ರಕರಣ, ಸ್ಯಾಂಡಲ್‌ವುಡ್‌ ನಟನ ಮಾಲಿಕತ್ವದ ಬಾರ್, ಸ್ವತಃ ನಟನಿಗೂ ಗಂಭೀರ ಗಾಯ!

ಮೈಸೂರಿನ ದಟ್ಟಗಳ್ಳಿ ಬಳಿಯ ನಟ ಪ್ರೀತಂ ಪುಮೀತ್ ಮಾಲೀಕತ್ವದ 'ಫಾಕ್ಸ್ ಡೆನ್' ಪಬ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಮೃತಪಟ್ಟು, ನಟ ಪ್ರೀತಂ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story

06:27 PM (IST) Jun 15

ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆಗೆ ಮನೆ ಬೇಕೇ? - ಉತ್ತಮ ಸಂಪರ್ಕ ಹೊಂದಿರುವ 8 ಬಜೆಟ್ ಸ್ನೇಹಿ ಏರಿಯಾಗಳಿವು

ಬೆಂಗಳೂರಿನಲ್ಲಿ ವಸತಿ ವೆಚ್ಚ ಹೆಚ್ಚಾಗಿದ್ದರೂ, ಕೆಲವು ಪ್ರದೇಶಗಳು ಇಂದಿಗೂ ಕೈಗೆಟುಕುವ ದರದಲ್ಲಿ ಬಾಡಿಗೆ ಮನೆಗಳನ್ನು ಒದಗಿಸುತ್ತವೆ. ಈ ಲೇಖನವು ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ, ಮತ್ತು ಯಲಹಂಕದಂತಹ ಎಂಟು ಬಜೆಟ್-ಸ್ನೇಹಿ ಸ್ಥಳಗಳನ್ನು ಪರಿಚಯಿಸುತ್ತದೆ.

Read Full Story

06:10 PM (IST) Jun 15

ರೇಣುಕಾಸ್ವಾಮಿ ಕೇಸ್ - ವಾರಕ್ಕೆ 4 ದಿನ ವಿಚಾರಣೆ ನಡೆಸಲು ಸಮ್ಮತಿ, ಕೋರ್ಟ್‌ಗೆ ದರ್ಶನ್‌ ಖುದ್ದು ಹಾಜರಿಗೆ ವಕೀಲರ ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಹೊಸ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ತ್ವರಿತಗತಿ ವಿಚಾರಣೆಗೆ ಕೋರ್ಟ್ ಆದೇಶಿಸಿದೆ. ವಾರದಲ್ಲಿ ನಾಲ್ಕು ದಿನ ವಿಚಾರಣೆ ನಡೆಸಲು ಸಮ್ಮತಿಸಿದ್ದು, ದರ್ಶನ್ ಅವರನ್ನು ಖುದ್ದು ಹಾಜರುಪಡಿಸಲು ಅವರ ವಕೀಲರು ವಿಶೇಷ ಅರ್ಜಿ ಸಲ್ಲಿಸಿದ್ದಾರೆ, ಇದರ ತೀರ್ಪು ನಾಳೆಗೆ ಕಾಯ್ದಿರಿಸಲಾಗಿದೆ.
Read Full Story

05:34 PM (IST) Jun 15

Chanakya Niti - ಮಹಿಳೆಯರ ಈ 5 ಅಭ್ಯಾಸಗಳು ಮನೆ ಮರ್ಯಾದೆ ಕಳೆಯುತ್ತವೆ, ಎಚ್ಚರ ಎಂದ ಚಾಣಕ್ಯ!

Chanakya Niti For Women: ಆಚಾರ್ಯ ಚಾಣಕ್ಯರ ನೀತಿಗಳ ಪ್ರಕಾರ, ಮಹಿಳೆಯರಲ್ಲಿರುವ ಕೆಲವು ಅಭ್ಯಾಸಗಳು ಇಡೀ ಕುಟುಂಬದ ಗೌರವಕ್ಕೆ ಧಕ್ಕೆ ತರಬಹುದು ಸೇರಿದಂತೆ ಯಾವೆಲ್ಲಾ ಅಭ್ಯಾಸಗಳಿಂದ ದೂರವಿರಬೇಕು ಎಂದು ಚಾಣಕ್ಯರು ಹೇಳಿದ್ದಾರೆ.

Read Full Story

04:49 PM (IST) Jun 15

ಮೈಸೂರು - ಲಿಕ್ಕರ್ ಗ್ಯಾರೇಜ್ ಪಬ್ ನಲ್ಲಿ ಸಿಲಿಂಡರ್ ಸ್ಫೋಟ, ಇಬ್ಬರು ಹೊರ ರಾಜ್ಯದವರ ಬಲಿ, ಹಲವರು ಗಂಭೀರ!

ಮೈಸೂರಿನ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್' ಪಬ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಮೃತಪಟ್ಟು, ಹಲವರು ಗಾಯಗೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ಜನರು ಕಟ್ಟಡದಿಂದ ಜಿಗಿದಿದ್ದಾರೆ. ಸದ್ಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
Read Full Story

04:36 PM (IST) Jun 15

Special Interview - ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ, ನಾನು ಸ್ಟ್ರಿಕ್ಟ್ - ನಟಿ ನಿಮಿಷಾ ಚಂದ್ರ

Special Interview: ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ ಎಂದು ಸಂದರ್ಶನದಲ್ಲಿ ನಟಿ ನಿಮಿಷಾ ಚಂದ್ರ ತಿಳಿಸಿದರು.

Read Full Story

04:29 PM (IST) Jun 15

ಕೊಲ್ಲಿ ಯುದ್ಧದಿಂದ ಡಾಂಬರ್‌ ದರ ದುಪ್ಪಟ್ಟು ದುಬಾರಿ - ಕರ್ನಾಟಕದ ಹಲವು ಕಡೆ ರಸ್ತೆ ಕೆಲಸ ಸ್ಥಗಿತ

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಡಾಂಬರ್ ಬೆಲೆ ಪ್ರತಿ ಟನ್‌ಗೆ ₹45 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಹೂವಿನಹಡಗಲಿ ತಾಲೂಕಿನ ಹಲವು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಗುತ್ತಿಗೆದಾರರು ಜೆಲ್ಲಿಕಲ್ಲು ಹಾಕಿ ಕಾಮಗಾರಿ ನಿಲ್ಲಿಸಿದ್ದಾರೆ.

Read Full Story

04:11 PM (IST) Jun 15

Exclusive Interview - ಹಳ್ಳಿ ಕಡೆಗೆ ಹೋದಾಗಲೆಲ್ಲ ಪೊಲಿಟಿಕಲ್‌ ಪವರ್‌ ಬೇಕು ಅನಿಸುತ್ತದೆ - ರಂಗಾಯಣ ರಘು

Exclusive Interview: 400 ಚಿತ್ರಗಳ ಸಂಭ್ರಮದಲ್ಲಿರುವ ಹಿರಿಯ ನಟ ರಂಗಾಯಣ ರಘು ತಮ್ಮ ಸಿನಿಮಾ ಪಯಣ, ರಂಗಭೂಮಿ ಅನುಭವ, ರಾಜಕೀಯ ಪ್ರವೇಶದ ಅವಕಾಶ, ಕೃಷಿ ಜೀವನ ಮತ್ತು ಭವಿಷ್ಯದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Read Full Story

03:32 PM (IST) Jun 15

ರಾಯಚೂರಿನ 200 ಕೋಟಿ ರೂ. ಹಗರಣ - ದರ್ವೇಶ್ ಕಂಪನಿ ರಹಸ್ಯವೇ ಗೊತ್ತಾಗ್ತಿಲ್ಲ, ಸೂಜಾ ಸಿಕ್ತಿಲ್ಲ!

ರಾಯಚೂರಿನಲ್ಲಿ ‘ದರ್ವೇಶ್ ಗ್ರೂಪ್ ಆಫ್ ಕಂಪನಿ’ ಅಧಿಕ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ. ಕಂಪನಿಯ ಮಾಲೀಕ ಮಹಮ್ಮದ್ ಸೂಜಾ ನಾಪತ್ತೆಯಾಗಿದ್ದು, ಎರಡು ವರ್ಷಗಳಿಂದ ಸಿಐಡಿ ತನಿಖೆ ನಡೆದರೂ ಆತ ಸಿಕ್ಕಿಲ್ಲ. ಇದೀಗ ಹಣ ಕಳೆದುಕೊಂಡ ಸಂತ್ರಸ್ತರು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
Read Full Story

01:11 PM (IST) Jun 15

ಗೃಹಲಕ್ಷ್ಮೀ ಆಯ್ತು ಗೃಹ ಜ್ಯೋತಿ ಯೋಜನೆಗೆ ಸರ್ಕಾರದ ಮೇಜರ್ ಸರ್ಜರಿ, ಉಚಿತ ವಿದ್ಯುತ್ ಪಡೆಯುವಲ್ಲಿಯೂ ಗೋಲ್ ಮಾಲ್!

ಗೃಹ ಜ್ಯೋತಿ ಯೋಜನೆಯ ದುರುಪಯೋಗ ತಡೆಯಲು ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ವಾಣಿಜ್ಯ ಬಳಕೆ ಮತ್ತು ಹೊರ ರಾಜ್ಯದ ಅನರ್ಹ ಫಲಾನುಭವಿಗಳನ್ನು ಕೈಬಿಡಲು ಆಧಾರ್ ಮತ್ತು ಇ-ಕೆವೈಸಿ ಮೂಲಕ ಮರುಪರಿಶೀಲನೆ ನಡೆಸಲು ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ.
Read Full Story

12:31 PM (IST) Jun 15

ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸ್‌, 'ಸಸ್ಪೆಂಡ್‌ ಮಾಡಿದ್ದೀವಿ' ಎಂದ ಪ್ರಿಯಾಂಕ್‌ ಖರ್ಗೆ

ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದಿದ್ದಾರೆ. ತಮ್ಮ ಮೇಲಿನ ಬಿಜೆಪಿ ಟೀಕೆಗಳಿಗೆ, ಗ್ಯಾರಂಟಿ ಯೋಜನೆಗಳ ವಿವಾದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

Read Full Story

12:25 PM (IST) Jun 15

ಪಿ.ಲಂಕೇಶ್ ಪತ್ನಿ, ಲೇಖಕಿ ಇಂದಿರಾ ಲಂಕೇಶ್ ನಿಧನ - ಸಾಹಿತ್ಯ-ಪತ್ರಿಕೋದ್ಯಮದ ಅಪೂರ್ವ ಕೊಂಡಿ ಕಳಚಿತು!

ಹಿರಿಯ ಲೇಖಕಿ ಮತ್ತು ಪಿ. ಲಂಕೇಶ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 'ಲಂಕೇಶ್ ಪತ್ರಿಕೆ'ಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಅವರು, 'ಹುಳಿಮಾವು ಮತ್ತು ನಾನು' ಕೃತಿಯ ಮೂಲಕವೂ ಗುರುತಿಸಿಕೊಂಡಿದ್ದರು.
Read Full Story

11:39 AM (IST) Jun 15

ಬೆಂಗಳೂರು ಉಪನಗರ ರೈಲು - ಸೋಲದೇವನಹಳ್ಳಿ 26 ಎಕರೆ ಜಾಗದಲ್ಲಿ 200 ಕೋಟಿ ರು. ವೆಚ್ಚದಲ್ಲಿ ನಿರ್ವಹಣಾ ಘಟಕ

ಬೆಂಗಳೂರು ಉಪನಗರ ರೈಲು ಯೋಜನೆಗೆ ಪೂರಕವಾಗಿ, ಸೋಲದೇವನಹಳ್ಳಿಯಲ್ಲಿ ರೈಲು ನಿರ್ವಹಣಾ ಘಟಕ ನಿರ್ಮಿಸಲು ಬಿ-ರೈಡ್‌ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ. ಚಿಕ್ಕಬಾಣಾವರ ಬಳಿ 26 ಎಕರೆ ಜಾಗದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ಘಟಕವು, ಕಾರಿಡಾರ್‌ 2 ಮತ್ತು 4ರ ರೈಲುಗಳ ನಿರ್ವಹಣೆ ಮಾಡಲಿದೆ.
Read Full Story

11:36 AM (IST) Jun 15

ಕರ್ನಾಟಕ ಶಾಲಾ ಪಠ್ಯಪುಸ್ತಕಗಳಿಗೆ ಹೊಸ ಹೆಸರು - ವಿಜ್ಞಾನ ಪುಸ್ತಕಕ್ಕೆ ‘ಕುತೂಹಲ’, ಕನ್ನಡಕ್ಕೆ ‘ಸಿರಿ ಕನ್ನಡ’

ರಾಜ್ಯ ಪಠ್ಯಪುಸ್ತಕ ರಚನಾ ಮಂಡಳಿಯು ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಪಠ್ಯಪುಸ್ತಕಗಳಿಗೆ ಹೊಸ ಹೆಸರುಗಳನ್ನು ನೀಡಿದೆ. ವಿಜ್ಞಾನಕ್ಕೆ 'ಕುತೂಹಲ' ಎಂದು ಹೆಸರಿಡಲಾಗಿದ್ದು, ಈ ಹೊಸ ಪುಸ್ತಕಗಳು ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಚಟುವಟಿಕೆ ಆಧಾರಿತ ಕಲಿಕೆ ಮತ್ತು ಅನ್ವೇಷಣೆಗೆ ಒತ್ತು ನೀಡುತ್ತವೆ. ವರ್ಣಮಯ ಚಿತ್ರಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ ಮೂಡಿಸುತ್ತಿವೆ.
Read Full Story

10:45 AM (IST) Jun 15

ರಾಮನಗರ ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ - ಓಪನ್ ಹಾರ್ಟ್ ಸರ್ಜರಿಗೆ ಸಿದ್ಧತೆ

ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸ್ಟಂಟ್ ಅಳವಡಿಸಲಾಗಿದ್ದು, ಶೀಘ್ರದಲ್ಲೇ ಓಪನ್ ಹಾರ್ಟ್ ಸರ್ಜರಿ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.
Read Full Story

10:33 AM (IST) Jun 15

Jamakhandi - ತನಿಖೆಗೆ ತೆರಳಿದ್ದ ವೇಳೆಯೇ ASI ಭೀಮಶಿ ಮಧುರಖಂಡಿ ಹೃದಯಾಘಾತದಿಂದ ನಿಧನ

ಪ್ರಕರಣವೊಂದರ ತನಿಖೆಗಾಗಿ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳಿದ್ದ ಬಾಗಲಕೋಟೆ ನಗರ ಠಾಣೆಯ ಎಎಸ್‌ಐ ಭೀಮಶಿ ಮಧುರಖಂಡಿ, ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ 59 ವರ್ಷದ ಅಧಿಕಾರಿಯ ಅಂತ್ಯಕ್ರಿಯೆ ಸ್ವಗ್ರಾಮ ಹುನ್ನೂರಿನಲ್ಲಿ ನಡೆಯಲಿದೆ.
Read Full Story

09:59 AM (IST) Jun 15

ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ HD ಕುಮಾರಸ್ವಾಮಿ

ಕೇಂದ್ರ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿ, ಇರಿಮುಡಿ ಹೊತ್ತು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಅವರೊಂದಿಗೆ ಜೆಡಿಎಸ್ ನಾಯಕರಾದ ಸುರೇಶ್ ಬಾಬು, ಬೋಜೇಗೌಡ, ಸಾ ರಾ ಮಹೇಶ್ ಸೇರಿದಂತೆ ಹಲವರು ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ.
Read Full Story

09:46 AM (IST) Jun 15

ಗುಟ್ಟಾಗಿ ಮದ್ವೆಯಾಗಿದ್ದ ಸೀಕ್ರೆಟ್ ಪತ್ನಿಯ ಕೊಂದ ಪಾಪಿ ಪತಿ! ಇನ್‌ಸ್ಟಾಗ್ರಾಂ ಸ್ಟೋರಿಯಿಂದ ಸಿಕ್ಕಿಬಿದ್ದ

ಬೆಂಗಳೂರಿನ ತಿಗಳರಪಾಳ್ಯದಲ್ಲಿ, ಪೋಷಕರ ಒತ್ತಾಯಕ್ಕೆ ಮಣಿದು ಮತ್ತೊಂದು ಮದುವೆಗೆ ಸಿದ್ಧಳಾಗಿದ್ದ ಭವಾನಿ ಎಂಬ ಯುವತಿಯನ್ನು ಆಕೆಯ ರಹಸ್ಯ ಪತಿಯೇ ಉಸಿರುಗಟ್ಟಿಸಿ ಕೊಂದಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಹಾಕಿದ್ದರಿಂದ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಆತ್ಮಹತ್ಯೆಯ ನಾಟಕವಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

09:32 AM (IST) Jun 15

ಇಂದು ಸಂಜೆ ಬೆಂಗಳೂರಿನಲ್ಲಿ ಮಳೆಯಾಗುತ್ತಾ? ಮನೆಯಿಂದ ಹೊರ ಹೋಗುವ ಮುನ್ನ ಈ ಸುದ್ದಿ ಓದಿ

ಬೆಂಗಳೂರಿನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ರಾಜಧಾನಿ ಸೇರಿದಂತೆ ರಾಜ್ಯದ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Read Full Story

08:52 AM (IST) Jun 15

Shivamogga - ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕ ಹೃದಯಾಘಾತದಿಂದ ಸಾವು

ಶಿವಮೊಗ್ಗ ಜಿಲ್ಲೆಯ ಶಾಲೆಯೊಂದರಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮತ್ತೊಂದು ಘಟನೆಯಲ್ಲಿ, ಬೈಕ್ ವ್ಹೀಲಿಂಗ್ ಮಾಡಿದ ಬ್ಯಾಂಕ್ ನೌಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Read Full Story

08:40 AM (IST) Jun 15

Amruthadhaare Serial - ಎಲ್ಲ ಸತ್ಯ ಹೊರಬಿತ್ತು; ತ್ರಿಶೂಲದ ಗುಟ್ಟು ಗೊತ್ತಾಯ್ತು, ಸೀರಿಯಲ್‌ ಮುಗೀತಾ?

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ಗೆ ಸ್ವಂತ ಮಗಳನ್ನು ಹುಡುಕೋ ಸಮಸ್ಯೆ ಒಂದುಕಡೆಯಾದರೆ, ಮನೆಯಲ್ಲಿರುವ ಮಿಂಚುಳನ್ನು ಉಳಿಸಿಕೊಳ್ಳಬೇಕಿದೆ. ಇದೊಂದು ಟಾಸ್ಕ್‌ ಆಗಿದೆ. ಹೀಗಿರುವಾಗ ಕರ್ಣ ಧಾರಾವಾಹಿ ಕರ್ಣನ ಆಗಮನದಿಂದ ಎಲ್ಲ ಗೊಂದಲ ಬಗೆಹರಿದಿದೆ.

 

Read Full Story

07:48 AM (IST) Jun 15

ರಾಮಮಂದಿರ ದೇಣಿಗೆ ರಹಸ್ಯ - 18,000 ಸಂಬಳದ ಸಿಬ್ಬಂದಿಯಿಂದ 1.5 ಕೋಟಿ ಮೌಲ್ಯದ ಭೂಮಿ ಖರೀದಿ

ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ 7 ಕೋಟಿ ರೂ. ಅಕ್ರಮ ನಡೆದಿದೆ ಎನ್ನಲಾಗಿದ್ದು, ಮೂವರು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕಡಿಮೆ ಸಂಬಳ ಪಡೆಯುತ್ತಿದ್ದ ಈ ಸಿಬ್ಬಂದಿ ಇತ್ತೀಚೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ್ದು, ಓರ್ವನ ಮನೆಯಿಂದ 12 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
Read Full Story

07:47 AM (IST) Jun 15

Shivamogga - ತಿಂಗಳುಗಾಗುವಷ್ಟು ರಕ್ತ ಒಂದೇ ದಿನ ಸಂಗ್ರಹ!

ವಿಶ್ವ ರಕ್ತದಾನಿಗಳ ದಿನದಂದು ಶಿವಮೊಗ್ಗದಲ್ಲಿ ಯಶಸ್ವಿ ರಕ್ತ ಸಂಗ್ರಹ ನಡೆದಿದ್ದು, ಜಿಲ್ಲೆಯು ರಕ್ತ ಸಂಗ್ರಹಣೆಯಲ್ಲಿ ಸ್ವಾವಲಂಬನೆ ಸಾಧಿಸುತ್ತಿದೆ. ಜಿಲ್ಲೆಯಲ್ಲಿರುವ 9 ರಕ್ತನಿಧಿ ಕೇಂದ್ರಗಳು ಮತ್ತು ಸ್ವಯಂ ಪ್ರೇರಿತ ದಾನಿಗಳ ನೆರವಿನಿಂದ, ಇದೀಗ ನೆರೆಯ ಜಿಲ್ಲೆಗಳಿಗೂ ರಕ್ತ ಪೂರೈಸುವ ಮಟ್ಟಕ್ಕೆ ಬೆಳೆದಿದೆ.
Read Full Story

07:34 AM (IST) Jun 15

ಮಹಾರಾಜ ಟ್ರೋಫಿ - ಕೋಸ್ಟಲ್ ಕಿಂಗ್ಸ್ ತಂಡ ಹೊಸ ಜೆರ್ಸಿ, ನೂತನ ನಾಯಕನ ಘೋಷಣೆ

ಕೆಎಸ್‌ಸಿಎ ಆಯೋಜಿಸುವ ಮಹಾರಾಜ ಟ್ರೋಫಿ ಟಿ20ಯಲ್ಲಿ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡಕ್ಕೆ ಕರುಣ್‌ ನಾಯರ್‌ ನಾಯಕರಾಗಿ ಮತ್ತು ಶ್ರೇಯಸ್‌ ಗೋಪಾಲ್‌ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ಜೆರ್ಸಿ ಹಾಗೂ ಥೀಮ್‌ ಸಾಂಗ್‌ ಬಿಡುಗಡೆ ಮಾಡಲಾಗಿದ್ದು, ಜೂ.20ರಿಂದ ಪಂದ್ಯಾವಳಿ ಆರಂಭವಾಗಲಿದೆ.
Read Full Story

07:20 AM (IST) Jun 15

Dharwad - ಮೃತ ಗೆಳೆಯನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ 1999-2000ನೇ ಸಾಲಿನ ಸ್ನೇಹಿತರು

ಧಾರವಾಡದ ಆರ್‌ಎಲ್‌ಎಸ್‌ ಹೈಸ್ಕೂಲಿನ 1999-2000ನೇ ಸಾಲಿನ ವಿದ್ಯಾರ್ಥಿಗಳು ಇತ್ತೀಚೆಗೆ ನಿಧನರಾದ ತಮ್ಮ ಸಹಪಾಠಿ ನಬಿಸಾಬ್‌ ಚಣಕನ್ನವರ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಸಹಪಾಠಿ ನಾಗರಾಜ ಜಾವೂರ ಅವರು ಮೃತನ ಮಗನ ವೈದ್ಯಕೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
Read Full Story

07:12 AM (IST) Jun 15

Koppal - ಸ್ವಂತ ಖರ್ಚಿನಲ್ಲಿ ಜನರಿಗೆ ತನ್ನದೇ ಕೊಳಬಾವಿಯ ನೀರು ಪೂರೈಕೆ ಮಾಡುವ ಶಿವಕುಮಾರ್

ಯಲಬುರ್ಗಾ ಪಟ್ಟಣದ 12ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಉಂಟಾದಾಗ, ಶಿವಕುಮಾರ ಮ್ಯಾಗೇರಿ ಎಂಬ ಯುವಕ ತನ್ನ ಸ್ವಂತ ಕೊಳವೆಬಾವಿಯಿಂದ ನಿವಾಸಿಗಳಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಆತ ಮಾಡುತ್ತಿರುವ ಈ ಸಮಾಜ ಸೇವೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.

Read Full Story

06:46 AM (IST) Jun 15

ದ್ವೇಷಭಾಷಣ ಮಸೂದೆ ರಾಜ್ಯದಲ್ಲಿ ಜಾರಿ ಅನಾವಶ್ಯ - ವಿಧೇಯಕ ಜಾರಿಗೆ ಬಂದರೆ ಹಿರಿಯರು ಬುದ್ಧಿವಾದ ಹೇಳಲಾಗದು, ಇತಿಹಾಸಕಾರರು ಸತ್ಯ ನುಡಿಯಲು ಆಗದು!

ಭಾರತದ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ, ಅದರ ಮೇಲಿನ ನಿಯಂತ್ರಣಗಳು ಮತ್ತು ದ್ವೇಷ ಭಾಷಣದ ಕಾನೂನುಗಳನ್ನು ಈ ಲೇಖನ ವಿವರಿಸುತ್ತದೆ. ಇಂತಹ ಕಾನೂನುಗಳ ದುರುಪಯೋಗವನ್ನು ತಡೆಯಲು ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಗಳನ್ನು ಚರ್ಚಿಸುತ್ತಾ, ಕರ್ನಾಟಕದ ಹೊಸ ದ್ವೇಷಭಾಷಣ ಮಸೂದೆಯ ಅನಗತ್ಯತೆಯನ್ನು ಇದು ಪ್ರತಿಪಾದಿಸುತ್ತದೆ.
Read Full Story

06:37 AM (IST) Jun 15

ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಶಾಲೆ ಮೇಲ್ಛಾವಣಿ ಕಾಂಕ್ರೀಟ್‌ ಕುಸಿತ - ತಪ್ಪಿದ ಅವಘಡ

ಸಂಗೋಳಗಿ ಗ್ರಾಮದ ಸರ್ಕಾರಿ ಶಾಲೆಯ ಹಳೆಯ, ಬಳಕೆಯಲ್ಲಿಲ್ಲದ ಕಟ್ಟಡದ ಛಾವಣಿ ಕುಸಿದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಈ ಘಟನೆಯು ತಾಲೂಕಿನಲ್ಲಿರುವ ಶಿಥಿಲಗೊಂಡ ಶಾಲಾ ಕಟ್ಟಡಗಳ ಸುರಕ್ಷತೆಯ ಗಂಭೀರ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

Read Full Story

06:28 AM (IST) Jun 15

ಮುನಿಸು ಮರೆತು ಒಂದಾದ ಮೈತ್ರಿ ಪಕ್ಷದ ನಾಯಕರು; ಅಕ್ಕಪಕ್ಕ‌ ಕುಳಿತು ಖುಷಿಯಿಂದಲೇ ಮಾತುಕತೆ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಬೇಡ ಎಂದಿದ್ದ ಬಿಜೆಪಿ ನಾಯಕ ಕೆ.ಸಿ.ನಾರಾಯಣಗೌಡ, ಇದೀಗ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಆಡಳಿತ ಸ್ಮರಣೆ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಅಕ್ಕಪಕ್ಕ ಕುಳಿತು ಖುಷಿಯಿಂದ ಮಾತನಾಡಿದ್ದು, ಮೈತ್ರಿ ಪಕ್ಷಗಳ ನಡುವಿನ ಮುನಿಸು ಶಮನವಾದಂತೆ ಕಂಡುಬಂದಿದೆ.
Read Full Story

06:16 AM (IST) Jun 15

ಉಚ್ಛಾಟಿತ ಈಶ್ವರಪ್ಪ, ಯತ್ನಾಳ್ ಮತ್ತೆ ಬಿಜೆಪಿ ಸೇರ್ಪಡೆ ಆಗ್ತಾರಾ? ರಮೇಶ ಜಾರಕಿಹೊಳಿ ಹೇಳಿದ್ದೇನು?

ಬಿಜೆಪಿಯಿಂದ ಉಚ್ಛಾಟಿತ ನಾಯಕರ ಮರುಸೇರ್ಪಡೆಗೆ ತಮ್ಮ ಬೆಂಬಲವಿದೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. ತಮ್ಮ ಸಹೋದರ ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿರುವುದೇ ಒಳ್ಳೆಯದಾಯಿತು, ಇಲ್ಲದಿದ್ದರೆ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.
Read Full Story

06:08 AM (IST) Jun 15

ಫ್ರೀ ಬಸ್‌ ಪಾಸ್‌ ಅರ್ಜಿ - ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಪರದಾಟ

ಶಾಲಾ-ಕಾಲೇಜು ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸರ್ವರ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದೆ. ಒಟಿಪಿ ಬಾರದಿರುವುದು ಮತ್ತು ಬೋರ್ಡಿಂಗ್/ಡ್ರಾಪಿಂಗ್ ಪಾಯಿಂಟ್ ದೋಷಗಳಿಂದಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ಪ್ರತಿದಿನ ಹಣ ಕೊಟ್ಟು ಪ್ರಯಾಣಿಸುವಂತಾಗಿದೆ. ಈ ತಾಂತ್ರಿಕ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸುತ್ತಿದ್ದಾರೆ.
Read Full Story

05:44 AM (IST) Jun 15

ವರುಣನ ಅಬ್ಬರಕ್ಕೆ ಸಿಲುಕಿದ ಬೆಂಗಳೂರು, ದಕ್ಷಿಣ ಕನ್ನಡ; ಎಲ್ಲಿ, ಎಷ್ಟು ಮಳೆ? ಇಲ್ಲಿದೆ ಮಾಹಿತಿ

ಭಾನುವಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಮುಂಗಾರು ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರಕ್ಕೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
Read Full Story

05:39 AM (IST) Jun 15

ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಸ್ಥಗಿತದ ಸುದ್ದಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

‘ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಅವು ಶೇಕಡಾ ನೂರಕ್ಕೆ ನೂರರಷ್ಟು ಮುಂದುವರಿಯುತ್ತವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನಕಲಿ ಖಾತೆಗಳನ್ನು ತಡೆಯಲು ಫಲಾನುಭವಿಗಳ ದೃಢೀಕರಣಕ್ಕಾಗಿ ಮರು ಅರ್ಜಿ ಕೇಳಲಾಗಿದೆಯೇ ಹೊರತು, ಯೋಜನೆ ನಿಲ್ಲಿಸಲು ಅಲ್ಲ ಎಂದು ಅವರು ತಿಳಿಸಿದ್ದಾರೆ.
Read Full Story

05:32 AM (IST) Jun 15

ಹಣ ಇಲ್ಲದಿದ್ರೆ ಗ್ಯಾರಂಟಿ ಸ್ಕೀಂ ನೀಡಬೇಡಿ, ಸರಿಯಾಗಿ ಪ್ಲ್ಯಾನ್ ಮಾಡ್ಕೊಳ್ಳಿ - ವಿತ್ತ ಸಚಿವೆ ಸಲಹೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಫಲಾನುಭವಿಗಳಿಗೆ ಕತ್ತರಿ ಹಾಕಲು ಸರ್ಕಾರ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
Read Full Story

05:26 AM (IST) Jun 15

ಹೆಚ್ಚು ತೆರಿಗೆ ಕಟ್ಟಿದ್ದಕ್ಕೆ ಹೆಚ್ಚಿನ ಅನುದಾನ ಸಿಗದು - ನಿರ್ಮಲಾ ಸೀತಾರಾಮನ್ ತಿರುಗೇಟು

ಕೇಂದ್ರದಿಂದ ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದ್ದಾರೆ. ರಾಜ್ಯಗಳಿಗೆ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗವೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

More Trending News