ಶಿವಮೊಗ್ಗ ಜಿಲ್ಲೆಯ ಶಾಲೆಯೊಂದರಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮತ್ತೊಂದು ಘಟನೆಯಲ್ಲಿ, ಬೈಕ್ ವ್ಹೀಲಿಂಗ್ ಮಾಡಿದ ಬ್ಯಾಂಕ್ ನೌಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಿವಮೊಗ್ಗ: ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹಾಳಸಸಿ ಗ್ರಾಮದಲ್ಲಿ ನಡೆದಿದೆ. ಅರು ವರ್ಷದ ತ್ರಿಲೋಕ್ ಜೈನ್ ಮೃತ ಬಾಲಕ. ಕೊಡವನಹಳ್ಳಿಯ ಗೌತಮ್ ಮತ್ತು ಶಿಲ್ಪಾ ದಂಪತಿಯ ಪುತ್ರನಾಗಿದ್ದ ತ್ರಿಲೋಕ್, ಆಟವಾಡುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ರೂ ತ್ರಿಲೋಕ್ ಸಾವನ್ನಪ್ಪಿದ್ದಾನೆ. ಹೃದಯಾಘಾತದಿಂದಲೇ ತ್ರಿಲೋಕ್ ಸಾವನ್ನಪ್ಪಿದ್ದು ಎಂದು ಹೇಳಲಾಗುತ್ತಿದ್ದು, ಬಾಲಕ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದನಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೈಕ್ ವ್ಹೀಲಿಂಗ್ ಮಾಡಿದ ಬ್ಯಾಂಕ್ ನೌಕರನ ವಿರುದ್ಧ ಕೇಸ್

ಬೈಕ್ ವ್ಹೀಲಿಂಗ್ ಮಾಡಿದ ಬ್ಯಾಂಕ್ ನೌಕರನ ವಿರುದ್ದ ಶಿವಮೊಗ್ಗ ಪೂರ್ವ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ಮಲವಗೊಪ್ಪ ಸಮೀಪದ ರಾಷ್ಟ್ರೀಯ ಹೆದ್ದಾರಿ-69ರ 3 ಕ್ರಾಸ್ ಬಳಿ ಬ್ಯಾಂಕ್ ನೌಕರ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ವೀಲಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ವ್ಹೀಲಿಂಗ್ ಮಾಡಿದ್ದ ಯುವಕ 20 ವರ್ಷದ, ಹೊಳೆಬೆನವಳ್ಳಿ ದೊಡ್ಡತಾಂಡಾ ನಿವಾಸಿ ಹಾಗೂ ಶಿವಮೊಗ್ಗದ ಬ್ಯಾಂಕ್‌ವೊಂದರ ನೌಕರ ಎಂದು ಗುರುತಿಸಲಾಗಿದೆ. ವೀಲಿಂಗ್‌ಗೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೋಜು ಮಸ್ತಿ ಮಾಡಿದ್ದಕ್ಕಾಗಿ ಯುವಕ ದಂಡ ತೆರಬೇಕಾಗಿದೆ.