ಬೆಂಗಳೂರು (ಆ.12): ರಾಜ್ಯ ರಾಜಕಾರಣದಲ್ಲಿ ಅಪರೂಪದ ಬೆಳವಣಿಗೆ ಎನ್ನವಂತೆ, ಹಾಲಿ ಮಂತ್ರಿಯೇ ವಜಾ ಆಗಿದ್ದಾರೆ. ಸೆಪ್ಟೆಂಬರ್‌ಗೆ ರಾಜ್ಯದಲ್ಲಿ ಕ್ರಾಂತಿ ಎನ್ನುತ್ತಿದ್ದ ಸಹಕಾರ ಸಚಿವ ಆಗಸ್ಟ್‌ನಲ್ಲೇ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಸಹಕಾರ ಸಚಿವ ಕೆಎನ್ ರಾಜಣ್ಣ ಅವರವನ್ನು ಸಂಪುಟದಿಂದ ವಜಾ ಮಾಡಲಾಗಿದೆ.'ಮತಗಳ್ಳತನ ಆರೋಪ ಮಾಡಲು ನಾಚಿಕೆಯಾಗಬೇಕು' ಎಂದಿದ್ದಕ್ಕೆ ಮಂತ್ರಿ ತಲೆದಂಡವಾಗಿದೆ. ರಾಜೀನಾಮೆ ಕೊಡಲು ಮುಂದಾದರೂ ಅದನ್ನು ತಿರಸ್ಕರಿಸಿ ಕಾಂಗ್ರೆಸ್ ವರಿಷ್ಠರು ವಜಾ ಮಾಡಿದ್ದಾರೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್.

10:59 PM (IST) Aug 12
ಆ್ಯಪಲ್ ಮ್ಯಾಕ್‌ಬುಕ್ ಬೆಲೆ 1 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.ಆದರೆ ಇನ್ಮುಂದೆ ಕೇವಲ 52,000 ರೂಪಾಯಿಗೆ ಆ್ಯಪಲ್ ಮ್ಯಾಕ್‌ಬಕ್ ಲಭ್ಯವಾಗಲಿದೆ.
10:03 PM (IST) Aug 12
ಧರ್ಮಸ್ಥಳದ ಶವಗಳ ಶೋಧನೆ ಬಗ್ಗೆ ಶಾಸಕಾಂಗ ಸಭೆಯಲ್ಲಿ ತೀವ್ರ ಚರ್ಚೆಯಾಗಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ 13ನೇ ಸ್ಥಳದಲ್ಲೂ ಶವ ಸಿಗದಿದ್ದರೆ ಎಸ್ಐಟಿ ಶವ ಶೋಧನೆ ಸ್ಥಗಿತದ ಕುರಿತು ಸರ್ಕಾರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
09:51 PM (IST) Aug 12
'ಕೊತ್ತಲವಾಡಿ' ಸಿನಿಮಾದ ಬಗ್ಗೆ ಮಾತನಾಡಿದವರ ಕುರಿತಂತೆ ಗರಂ ಆಗಿರೋ ಯಶ್ ಅಮ್ಮ ಪುಷ್ಪಾ ಅರುಣ್ ಕುಮಾರ್ ಅವರು ಸಿದ್ದರಾಮಯ್ಯ-ಡಿಕೆಶಿಗೆ ಹೋಗಿ ಕಂಪ್ಲೇಂಟ್ ಕೊಡ್ತೇನೆ ಎಂದಿದ್ದಾರೆ. ಅವರು ಹೇಳಿದ್ದೇನು?
09:17 PM (IST) Aug 12
ಪತಿಗೆ ವೀರ್ಯಾಣು ಕಡಿಮೆ, ಪತಿಯಿಂದ ಗರ್ಭಿಣಿಯಾಗಲ್ಲ ಎಂದು ಮಾವ ಹಾಗೂ ಸಂಬಂಧಿಯೊಬ್ಬರು ಸೊಸೆ ಮೇಲೆ ನಿರಂತರ ಅತ್ಯಾ*ರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
09:12 PM (IST) Aug 12
ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ಕೋಡಿಮಠದ ಸ್ವಾಮೀಜಿ ಹೇಳಿದ್ದೇನು? ಇವರು ಹೇಳಿರುವ ಹಿಂದಿನ ನಿಗೂಢ ಅರ್ಥವೇನು? ಇಲ್ಲಿದೆ ಡಿಟೇಲ್ಸ್...
08:39 PM (IST) Aug 12
ಹೊಚ್ಚ ಹೊಸ ಜಾವಾ ಯೆಜ್ಡೆ ರೋಡ್‌ಸ್ಟರ್ ಬೈಕ್ ಬಿಡುಗಡೆಯಾಗಿದೆ. ರೆಟ್ರೋ ಶೈಲಿಯ ಈ ಬೈಕ್ ಮೊದಲ ನೋಟಕ್ಕೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಹೊಸ ಬೈಕ್ ವಿಶೇಷತೆ ಬೆಲೆ ಕುರಿತು ಫುಲ್ ವಿವರ ಇಲ್ಲಿದೆ.
08:15 PM (IST) Aug 12
ಹಳದಿ ಮೆಟ್ರೋ ಉದ್ಘಾಟನೆ ಆಯ್ತು. ಇದೀಗ ಕೆಂಪು ಮೆಟ್ರೋ. ಬೆಂಗಳೂರಿನ ಭಾರಿ ಟ್ರಾಫಿಕ್ ವಲಯ ಎಂದೇ ಗುರುತಿಸಿಕೊಂಡ ಹೆಬ್ಬಾಳ-ಸರ್ಜಾಪುರ ಮಾರ್ಗದಲ್ಲಿ ಕೆಂಪು ಮೆಟ್ರೋ ಸಂಚಾರ ಆರಂಭಿಸಲಿದೆ. ಯಾವೆಲ್ಲಾ ಪ್ರದೇಶ ಮೆಟ್ರೋ ಕವರ್ ಮಾಡಲಿದೆ.
08:01 PM (IST) Aug 12
07:51 PM (IST) Aug 12
ಈ ಫೋಟೋದಲ್ಲಿರೋ ಪುಟ್ಟ ಹುಡುಗ ಯಾರು ಗೊತ್ತಾ? ಮಾಜಿ ಉಪರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಈ ಹುಡುಗ ಈಗ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ. ಯಾರಿದು? ಕನ್ನಡ ಭಾಷೆಗೆ ಅವಮಾನಿಸಿ ಪೇಚಿಗೆ ಸಿಲುಕಿದ್ದ.!
07:49 PM (IST) Aug 12
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಬಂಧನದ ನಂತರ ಕಡ್ಡಾಯ ರಜೆಯಲ್ಲಿದ್ದ ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಿಸಲಾಗಿದೆ. ರನ್ಯಾ ರಾವ್ ಅವರನ್ನು 14.2 ಕೆಜಿ ಚಿನ್ನದೊಂದಿಗೆ ಬಂಧಿಸಲಾಗಿತ್ತು.
07:40 PM (IST) Aug 12
Bengaluru Yellow Line Metro Station Name: ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗದಲ್ಲಿ ಎರಡು ನಿಲ್ದಾಣಗಳ ಹೆಸರು ಅದಲು-ಬದಲು ಆಗಿರುವುದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ.
07:31 PM (IST) Aug 12
ಎಐ ಇದೀಗ ಎಲ್ಲರೂ ಬಳಕೆ ಮಾಡುತ್ತಿದ್ದಾರೆ. ಈ ಪೈಕಿ ಎಐ ಚಾಟ್‌ಬಾಟ್ ಜೊತೆ ಚಾಟಿಂಗ್ ಮಾಡುತ್ತಿದ್ದ ಯುವತಿಗೆ ಲವ್ ಶುರುವಾಗಿದೆ. ಇದೀಗ ಎಐ ಚಾಟ್‌ಬಾಟ್ ಜೊತೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾಳೆ.
07:27 PM (IST) Aug 12
ಚಿಕ್ಕಮಗಳೂರಿನ ದತ್ತಪೀಠದ ಆವರಣದಲ್ಲಿರುವ ಘೋರಿಗಳ ಉತ್ಖನನಕ್ಕೆ ಹಿಂದೂ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ. ಧರ್ಮಸ್ಥಳದ ಉತ್ಖನನದ ಮಾದರಿಯಲ್ಲೇ ಇಲ್ಲಿಯೂ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಘೋರಿಗಳಲ್ಲಿ ಯಾರನ್ನು ಹೂಳಲಾಗಿದೆ ಎಂಬುದರ ಸತ್ಯಾಸತ್ಯತೆ ಹೊರತೆಗೆಯಲು ಆಗ್ರಹಿಸಲಾಗಿದೆ.
07:09 PM (IST) Aug 12
ಬೆಂಗಳೂರಿನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಹಳದಿ ಮೆಟ್ರೋ ಮಾರ್ಗವನ್ನು ಬಳಸಲು ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ಪ್ರೋತ್ಸಾಹಿಸುತ್ತಿದೆ. ELCITA ಫೀಡರ್ ಶಟಲ್‌ಗಳು ಮೆಟ್ರೋ ನಿಲ್ದಾಣದಿಂದ ಇನ್ಫೋಸಿಸ್ ಕಚೇರಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.
06:48 PM (IST) Aug 12
KN Rajanna: ಮಾಜಿ ಸಚಿವ ರಾಜುಗೌಡ ಅವರ ಸ್ಫೋಟಕ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ, ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
06:23 PM (IST) Aug 12
ಭಾರತದಲ್ಲಿ ಅತೀ ಕಡಿಮೆ ಬೆಲೆಯ ಎಸ್‌ಯುವಿ ಕಾರು ಬಿಡುಗಡೆಯಾಗಿದೆ. ಸಿಟ್ರೊಯೆನ್ C3 & C3X ವೇರಿಯೆಂಟ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಶೇಷ ಅಂದರೆ ಇದರ ಆರಂಭಿಕ ಬೆಲೆ ಕೇವಲ 5.25 ಲಕ್ಷ ರೂ.
06:21 PM (IST) Aug 12
ಧರ್ಮಸ್ಥಳದಲ್ಲಿ ಅನಾಮಿಕ ತೋರಿಸಿದ 13ನೇ ಪಾಯಿಂಟ್‌ನಲ್ಲಿ 14 ಅಡಿ ಅಗೆದರೂ ಅಸ್ತಿಪಂಜರ ಸಿಗದೆ ನೀರು ಉಕ್ಕಿ, ಶೋಧ ಕಾರ್ಯಕ್ಕೆ ತಡೆ ಉಂಟಾಗಿದೆ. ನೀರನ್ನು ಹೊರಹಾಕಲು ಮೋಟರ್ ಅಳವಡಿಸಲಾಗಿದ್ದು, ಹಿಟಾಚಿ ಯಂತ್ರಗಳ ಕೆಲಸ ತಾತ್ಕಾಲಿಕ ಸ್ಥಗಿತಗೊಂಡಿದೆ. ಅನಾಮಿಕನ ಸುಳಿವುಗಳ ಮೇಲೆ ಎಸ್‌ಐಟಿ ಶೋಧ ಮುಂದುವರೆಸಿದೆ.
05:55 PM (IST) Aug 12
ಪ್ರಧಾನಿ ಮೋದಿಗೆ ನೀಡಿದ ಬೆಳ್ಳಿ ಗಣೇಶ ವಿಗ್ರಹ ಉಡುಗೊರೆ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಶಾಸಕರಿಂದ ಪಡೆದ ಉಡುಗೊರೆಯಲ್ಲ, ಸ್ವಂತ ಹಣದಿಂದ ಖರೀದಿಸಿದ್ದು ಎಂದು ತಿಳಿಸಿದ್ದಾರೆ.
05:14 PM (IST) Aug 12
05:11 PM (IST) Aug 12
04:59 PM (IST) Aug 12
ಬಿಜೆಪಿ ನಾಯಕನ ಪುತ್ರನ ದರ್ಪಕ್ಕೆ ಖಡಕ್ ಉತ್ತರ ನೀಡಿದ ಘಟನೆ ನಡೆದಿದೆ. ಅಪ್ಪನ ಮರ್ಯಾದೆ ತೆಗಿಬೇಡಾ, ನಿನಗಿಂತ ಹೆಚ್ಚು ವಿದ್ಯಾಭ್ಯಾಸ ಪಡೆದಿದ್ದೇನೆ ಎಂದು ಪೊಲೀಸ್ ಉತ್ತರಿಸಿದ್ದಾರೆ.
04:56 PM (IST) Aug 12
coolie Movie: ಈಗಾಗಲೇ ಕರ್ನಾಟಕ ಸರ್ಕಾರವು ಸಿನಿಮಾ ಥಿಯೇಟರ್‌ನಲ್ಲಿ ಒಂದು ಟಿಕೆಟ್ ಬೆಲೆ 200 ರೂಪಾಯಿ ಎಂದು ನಿಗದಿಪಡಿಸಿದೆ. ಆದರೆ ರಜನಿಕಾಂತ್ ಅವರ ಕೂಲಿ ಸಿನಿಮಾ ಟಿಕೆಟ್ ದರವು 2000ರೂಪಾಯಿ ಗಡಿ ದಾಟಿದೆ.
04:21 PM (IST) Aug 12
ಧರ್ಮಸ್ಥಳ ನೇತ್ರಾವತಿ ನದಿ ತೀರದ 13ನೇ ಪಾಯಿಂಟ್‌ನಲ್ಲಿ ಅನಾಮಿಕ ದೂರುದಾರನ ಮಾಹಿತಿ ಮೇರೆಗೆ ಎಸ್‌ಐಟಿ ತಂಡ ಎರಡು ಹಿಟಾಚಿಗಳಿಂದ 10 ಅಡಿ ಆಳಕ್ಕೆ ಉತ್ಖನನ ಮುಂದುವರೆಸಿದೆ. ಜಿಪಿಆರ್ ಸ್ಕ್ಯಾನ್‌ನಲ್ಲಿ ಅಸ್ಥಿಪಂಜರದ ಕುರುಹು ಸಿಗದಿದ್ದರೂ, ಅನಾಮಿಕನ ನಿರ್ದೇಶನದಂತೆ ಉತ್ಖನನ ನಡೆಯುತ್ತಿದೆ.
03:57 PM (IST) Aug 12
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರದ ಮೇಲೆ ಪರಮಾಣು ದಾಳಿ ಎಚ್ಚರಿಕೆ ನೀಡಿದರೂ ಭಾರತ ಬೆಚ್ಚಿ ಬೀಳಲೇ ಇಲ್ಲ. ಮುನೀರ್ ಮಾತನ್ನೂ ಭಾರತ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದ ಕೆರಳಿದ ಆಸೀಮ್ ಮನೀರ್ ಇದೀಗ ಮುಕೇಶ್ ಅಂಬಾನಿಯ ರಿಫೈನರಿ ಘಟಕದ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿದ್ದಾರೆ
03:24 PM (IST) Aug 12
ಒಡಿಶಾದ ಭುವನೇಶ್ವರದಲ್ಲಿ ಥಾರ್ ಗಾಡಿ ಡಿಕ್ಕಿ ಹೊಡೆದು ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲೂ ಇದೇ ರೀತಿಯ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರೋಪಿಯಿಂದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.
03:05 PM (IST) Aug 12
02:24 PM (IST) Aug 12
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯ ನಂತರವೂ ಪ್ರಾಣಾಪಾಯದಿಂದ ಪಾರಾಗಿಬಂದ ಪ್ರವಾಸಿಗನಿಗೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯು ಬರೋಬ್ಬರಿ ₹25,000 ದಂಡ ವಿಧಿಸಿದೆ.
02:16 PM (IST) Aug 12
01:16 PM (IST) Aug 12
01:06 PM (IST) Aug 12
12:52 PM (IST) Aug 12
ಜೆಫ್ರಿ ಸ್ಯಾಕ್ಸ್. ವಿಶ್ವ ಪ್ರಸಿದ್ಧ ಆರ್ಥಿಕ ತಜ್ಞ. ಭಾರತ- ಅಮೆರಿಕ ತೆರಿಗೆ ಯುದ್ಧ, ರಷ್ಯಾ- ಉಕ್ರೇನ್ ಸಮರದ ಬಗ್ಗೆ ಅತ್ಯಂತ ಒಳನೋಟದ ಅಭಿಪ್ರಾಯವನ್ನು ಮಂಡಿಸಿದ್ದಾರೆ.
12:52 PM (IST) Aug 12
ಕಾಂಗ್ರೆಸ್ ಹೈಕಮಾಂಡ್ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದ್ದಾರೆ. ರಮೇಶ್ ಜಾರಕಿಹೊಳಿ, ನಾಗೇಂದ್ರ ನಂತರ ಈಗ ಕೆ.ಎನ್. ರಾಜಣ್ಣ, ಮುಂದೆ ಸತೀಶ್ ಜಾರಕಿಹೊಳಿ ಸರದಿ ಎಂದು ಅವರು ಎಚ್ಚರಿಸಿದ್ದಾರೆ.
12:25 PM (IST) Aug 12
12:23 PM (IST) Aug 12
12:00 PM (IST) Aug 12
11:59 AM (IST) Aug 12
ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಶವಗಳಿಗಾಗಿ ಶೋಧ ಕಾರ್ಯ ಮತ್ತೆ ಆರಂಭವಾಗಿದೆ. ಡ್ರೋನ್ ಮೌಂಟೆಡ್ ಜಿಪಿಆರ್ ತಂತ್ರಜ್ಞಾನ ಬಳಸಿ ತನಿಖಾ ತಂಡ ವಿಸ್ತೃತ ಪ್ರದೇಶದಲ್ಲಿ ಶೋಧ ನಡೆಸುತ್ತಿದೆ. ಆದರೆ, ಅನಾಮಿಕ ತೋರಿಸಿದ 13ನೇ ಪಾಯಿಂಟ್ ವ್ಯಾಪ್ತಿಯನ್ನು 3 ಪಟ್ಟು ವಿಸ್ತರಣೆ ಮಾಡಿಕೊಂಡು, ಶೋಧಿಸಲಾಗುತ್ತಿದೆ.
11:47 AM (IST) Aug 12
ಇಂದಿನ ಡಿಜಿಟಲ್ ಯುಗದಲ್ಲಿ ಹಣದ ವರ್ಗಾವಣೆ ಬಲು ಸುಲಭ. ಆದರೆ ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಸುರಕ್ಷತೆ ದೊಡ್ಡ ತಲೆನೋವು. ಹೀಗಿರುವಾಗ ಸುರಕ್ಷಿತ ಹಣದ ವರ್ಗಾವಣೆಗೆ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್ ಇವೆರಡರಲ್ಲಿ ಯಾವುದು ಬೆಸ್ಟ್ ಅನ್ನೋ ವಿವರ ಈ ಬರಹದಲ್ಲಿದೆ.
11:32 AM (IST) Aug 12
11:22 AM (IST) Aug 12
ಬೆಂಗಳೂರಿನಲ್ಲಿ ಬಿಡುಗಡೆಯಾದ ಮೊದಲ ದಿನವೇ ಹೌಸ್‌ಫುಲ್ ಆಗಿರುವುದು ಭಾರೀ ವಿಶೇಷ. ಕುಳಿತುಕೊಳ್ಳುವುದಕ್ಕೂ ಆಸನ ಇಲ್ಲದ ರೀತಿಯಲ್ಲಿ ಜನರ ನೂಕು ನುಗ್ಗಲು ಆಗುವುದನ್ನು ನೋಡಿ ಸ್ವತಃ ಸಂಸದ ತೇಜಸ್ವಿ ಸೂರ್ಯು ಸಂತಸಗೊಂಡಿದ್ದಾರೆ. ಈ ಬಗ್ಗೆ ಅವರೇ ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಎಂದು ಬರೆದುಕೊಂಡಿದ್ದಾರೆ.
11:00 AM (IST) Aug 12