ಬಿಜೆಪಿ ನಾಯಕನ ಪುತ್ರನ ದರ್ಪಕ್ಕೆ ಖಡಕ್ ಉತ್ತರ ನೀಡಿದ ಘಟನೆ ನಡೆದಿದೆ. ಅಪ್ಪನ ಮರ್ಯಾದೆ ತೆಗಿಬೇಡಾ, ನಿನಗಿಂತ ಹೆಚ್ಚು ವಿದ್ಯಾಭ್ಯಾಸ ಪಡೆದಿದ್ದೇನೆ ಎಂದು ಪೊಲೀಸ್ ಉತ್ತರಿಸಿದ್ದಾರೆ.
ಹಥ್ರಾಸ್ (ಆ.12) ಟ್ರಾಫಿಕ್ ಪೊಲೀಸ್ ಮೇಲೆ ದರ್ಪ ತೋರಿದ ಬಿಜೆಪಿ ನಾಯಕನ ಪುತ್ರನಿಗೆ ಖಡಕ್ ಉತ್ತರ ನೀಡಿದ ಘಟನೆ ವರದಿಯಾಗಿದೆ. ದಾರಿಯಲ್ಲಿ ಕಾರು ನಿಲ್ಲಿಸಿದ್ದ ಸಚಿವನ ಪುತ್ರನಿಗೆ ಟ್ರಾಫಿಕ್ ಸಮಸ್ಯೆಯಾಗುತ್ತಿದೆ, ಕಾರು ತೆಗೆಯಲು ಸೂಚಿಚಿಸಿದ್ದಾರೆ. ಆದರೆ ಇಲ್ಲಿಂದ ನಡಿ ಎಂದು ನಾಯಕನ ಪುತ್ರ ದರ್ಪದಿಂದ ಹೇಳಿದ್ದಾರೆ. ತಕ್ಷಣವೇ ಗರಂ ಆದ ಪೊಲೀಸ್ ನಿನಗಿಂತ ಹೆಚ್ಚು ಶಿಕ್ಷಣ ಪಡೆದಿದ್ದೇನೆ. ನಿಮ್ಮ ತಂದೆ ಸಚಿವರಾಗಿದ್ದಾರೆ, ಅವರ ಮಾನ ಬೀದಿಯಲ್ಲಿ ಕಳೆಯಬೇಡ ಎಂದು ಬುದ್ದಿವಾದ ಹೇಳಿದ ಘಟನೆ ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ನಡೆದಿದೆ.
ಕಾರು ಪಾರ್ಕ್ ಮಾಡಿದ ಕಾರಣದಿಂದ ಟ್ರಾಫಿಕ್ ಜಾಮ್
ಉತ್ತರ ಪ್ರದೇಶದ ಲೆಜಿಸ್ಲೇಟೀವ್ ಕೌನ್ಸಿಲ್ ಸದಸ್ಯ ಚೌಧರಿ ರಿಶಿಪಾಲ್ ಸಿಂಗ್ ಪುತ್ರ ತಪೇಶ್ ತಮ್ಮ ಸ್ಕಾರ್ಪಿಯೋ ಕಾರನ್ನು ಕಿರಿದಾದ ದಾರಿಯಲ್ಲಿ ನಿಲ್ಲಿಸಿದ್ದ. ಕಾರಿನಲ್ಲಿ ಶಾಸಕರು ಎಂದು ಬರೆದಿದ್ದು, ಬಿಜೆಪಿ ಬಾವುಟನ್ನು ಹಾಕಲಾಗಿತ್ತು. ಕಾರನ್ನು ಚಾಲಕ ಚಲಾಯಿಸುತ್ತಿದ್ದ. ಇತ್ತ ತಪೇಶ್ ಕೂಡ ಕಾರಿನಲ್ಲಿ ಕುಳಿತಿದ್ದ.ಕಾರನ್ನು ಕಿರಿದಾದ ದಾರಿಯಲ್ಲಿ ಪಾರ್ಕ್ ಮಾಡಲಾಗಿತ್ತು. ಇದರಿಂದ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ವಾಹನದ ಸುಗಮ ಸಂಚಾರಕ್ಕೆ ಈ ಕಾರು ಅಡ್ಡಿಯಾಗಿತ್ತು.
ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಟ್ರಾಫಿಕ್ ಕ್ಲಿಯರ್ ಮಾಡಲು ಮುಂದಾಗಿದ್ದಾರೆ. ಈ ಟ್ರಾಫಿಕ್ ಜಾಮ್ ಸಮಸ್ಯೆಗೆ ಮೂಲಕ ಕಾರಣವಾಗಿರುವ ಶಾಸಕನ ಪುತ್ರನ ಕಾರನ್ನು ತೆಗೆಯಲು ಪೊಲೀಸರು ಸೂಚಿಸಿದ್ದಾರೆ. ಟ್ರಾಫಿಕ್ ಪೊಲೀಸರು ಆಗಮಿಸಿ ಕಾರು ತೆಗೆಯಲು ಸೂಚಿಸುತ್ತಿದ್ದಂತೆ, ಗರಂ ಆದ ತಪೇಶ್, ಇಲ್ಲಿಂದ ನಡಿ ಎಂದಿದ್ದಾರೆ. ಈ ಮಾತಿನಿಂದ ಟ್ರಾಫಿಕ್ ಪೊಲೀಸ್ ಹಾಗೂ ತಪೇಶ್ ನಡುವೆ ಮಾತಿನ ಚಕಮಕಿ ಆರಂಭಗೊಂಡಿತು.
ಕಾರು ತೆಗೆದರೇ ಒಳ್ಳೇದು, ಇಲ್ಲಾ ಅಂದರೆ ಕಾನೂನು ಕ್ರಮ
ನನಗೆ 55 ವರ್ಷ, ನನಗೆ ಇಲ್ಲಿಂದ ನಡಿ ಎಂದು ಹೇಳುತ್ತಿದೆಯಾ? ಇದು ನೀನು ತೋರುತ್ತಿರುವ ಗೌರವ. ಕೇವಲ ಕಾರು ತೆಗೆಯಲು ಸೂಚಿಸಿದೆ. ಕಾರು ತೆಗೆದರೆ ಸಮಸ್ಯೆ ಮುಗೀತು. ಅನವಶ್ಯಕ ಮಾತುಗಲು ಬೇಕಾ ಎಂದು ಪೊಲೀಸ್ ಪ್ರಶ್ನಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿಸಿದ ತಪೇಶ್, ನಿಮ್ಮಂತವರಿಗೆ ಪೊಲೀಸ್ ಇಲಾಖೆಗೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಿಮ್ಮ ವಯಸ್ಸು ನೋಡಿ ನಡಿ ಇಲ್ಲಿಂದ ಹೇಳಿದ್ದು, ಇಲ್ಲಾ ಅಂದರೆ ಕತೆ ಬೇರೆ ಇರುತ್ತಿತ್ತು ಎಂದು ತಪೇಶ್ ಹೇಳಿದ್ದಾರೆ. ನಿನಗಿಂತ ಹೆಚ್ಚು ವಿದ್ಯಾಭ್ಯಾಸ ಪಡೆದಿದ್ದೇನೆ. ನನ್ನ ಕರ್ತವ್ಯದ ಬಗ್ಗೆ ನನಗೆ ಅರಿವಿದೆ. ನಿಮ್ಮ ತಂದೆಯ ಮಾನ ಮರ್ಯಾದೆಯನ್ನುು ದಾರಿಯಲ್ಲಿ ಕಳೇಯಬೇಡ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಾಕುತ್ತೇನೆ. ಯಾರು ಸರಿ ಎಂದು ಜನ ನಿರ್ಧರಿಸುತ್ತಾರೆ. ಮೊದಲು ಇಲ್ಲಿಂದ ಕಾರು ತೆಗಿ. ಒಳ್ಳೆಯ ಮಾತಲ್ಲಿ ಹೇಳಿದ್ದೇನೆ. ಇದರ ಮೇಲೆ ನಿರ್ಲಕ್ಷ್ಯ ಮಾಡಿದರೆ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಎಚ್ಚರಿಸಿದ್ದಾರೆ.
