ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಶವಗಳಿಗಾಗಿ ಶೋಧ ಕಾರ್ಯ ಮತ್ತೆ ಆರಂಭವಾಗಿದೆ. ಡ್ರೋನ್ ಮೌಂಟೆಡ್ ಜಿಪಿಆರ್ ತಂತ್ರಜ್ಞಾನ ಬಳಸಿ ತನಿಖಾ ತಂಡ ವಿಸ್ತೃತ ಪ್ರದೇಶದಲ್ಲಿ ಶೋಧ ನಡೆಸುತ್ತಿದೆ. ಆದರೆ, ಅನಾಮಿಕ ತೋರಿಸಿದ 13ನೇ ಪಾಯಿಂಟ್ ವ್ಯಾಪ್ತಿಯನ್ನು 3 ಪಟ್ಟು ವಿಸ್ತರಣೆ ಮಾಡಿಕೊಂಡು, ಶೋಧಿಸಲಾಗುತ್ತಿದೆ.

ದಕ್ಷಣ ಕನ್ನಡ (ಆ.12): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ತೋರಿಸಿದ ನೇತ್ರಾವತ ನದಿ ತೀರದ 13ನೇ ಪಾಯಿಂಟ್‌ನಲ್ಲಿ ಇಂದು ಡ್ರೋನ್ ಮೌಂಟೆಡ್ ಜಿಪಿಆರ್ ಶೋಧ ಕಾರ್ಯವನ್ನು ಮಂಗಳವಾರ ಪುನಾರಂಭಿಸಿದೆ. ಆದರೆ, ಅನಾಮಿಕ ತೋರಿಸಿದ ಜಾಗಕ್ಕಿಂತ ಕಳೇಬರ ಶೋಧ ವ್ಯಾಪ್ತಿಯನ್ನು ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಮೂರು ಪಟ್ಟು ಹೆಚ್ಚಳ ಮಾಡಿದ್ದಾರೆ.

ಧರ್ಮಸ್ಥಳ ಸ್ನಾನಘಟ್ಟ ನೇತ್ರಾವತಿ ನದಿ ತೀರದಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕಳೇಬರ ಶೋಧ ಕಾರ್ಯವನ್ನು ತೀವ್ರಗೊಳಿಸಿದೆ. ಈ ಹಿಂದೆ ಅನಾಮಿಕ ತೋರಿಸಿದ್ದ ಜಾಗಕ್ಕೆ ಅಪರಾಧ ಕೃತ್ಯ ನಡೆದ ಸ್ಥಳವೆಂದು ಸಾರ್ವಜನಕ ನಿಷೇಧಿತ ಪ್ರದೇಶವಾಗಿ ಎಸ್‌ಐಟಿ ಗುರುತು ಮಾಡಿತ್ತು. ಆದರೆ, ಇದೀಗ ಡ್ರೋನ್ ಮೌಂಟೆಡ್ ಜಿಪಿಆರ್ ಯಂತ್ರದಂದ ಶೋಧ ಕಾರ್ಯವನ್ನು ಆರಂಭಿಸಿುವ ಹಿನ್ನೆಲೆಯಲ್ಲಿ ಅನಾಮಿಕನಿದ ಗುರುತಿಸಲಾಗಿದ್ದ ಪ್ರದೇಶದ ವ್ಯಾಪ್ತಿಯನ್ನು 3 ಪಟ್ಟು ಹೆಚ್ಚಿಸಿದೆ. ಈಗಾಗಲೇ ಅಲ್ಲಿ ಬೆಳೆದಿದ್ದ ಎತ್ತರದ ಕಳೆ ಗಿಡಗಳು, ಗಿಡ ಗಂಟಿಗಳನ್ನು ಕಾರ್ಮಿಕರಿದ ಕತ್ತರಿಸಲಾಗಿದೆ. ಇದೀಗ ಡ್ರೋನ್ ಮೌಂಟೆಡ್ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (Drone GPR) ತಂತ್ರಜ್ಞಾನವನ್ನು ಬಳಸಿ ಶೋಧ ನಡೆಸಲಾಗುತ್ತಿದೆ.

ತನಿಖೆಯ ವ್ಯಾಪ್ತಿ ವಿಸ್ತರಣೆ: ಪಾಯಿಂಟ್ ನಂ 13 ರಲ್ಲಿ ಇದುವರೆಗೆ ಶೋಧ ಕಾರ್ಯ ನಡೆಯುತ್ತಿದ್ದ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗಗಳನ್ನೂ ಸೇರಿಸಿ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. SIT ಸೂಚನೆಯ ಮೇರೆಗೆ ಕಂದಾಯ ಇಲಾಖೆ ಮತ್ತು ಪಂಚಾಯತ್ ಸಿಬ್ಬಂದಿ ಈ ವಿಸ್ತೃತ ಪ್ರದೇಶದಲ್ಲಿದ್ದ ಗಿಡಗಂಟಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ಈ ಬೆಳವಣಿಗೆಯಿಂದ ತನಿಖೆಯಲ್ಲಿ ಏನೋ ಹೊಸ ಸುಳಿವು ಸಿಕ್ಕಿರುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹಬ್ಬಿವೆ.

ಡ್ರೋನ್ GPR ಮೂಲಕ ಶೋಧ

ಮಂಗಳವಾರದ ಶೋಧ ಕಾರ್ಯಕ್ಕೆ ತರಲಾದ ಡ್ರೋನ್ ಮೌಂಟೆಡ್ GPR ಯಂತ್ರದ ಜೋಡಣಾ ಕಾರ್ಯ ಪೂರ್ಣಗೊಂಡಿ. ಸಾಮಾನ್ಯ GPR ಯಂತ್ರಗಳಿಗಿಂತ ಭಿನ್ನವಾಗಿ, ಈ ತಂತ್ರಜ್ಞಾನದಲ್ಲಿ GPR ಆಂಟೆನಾವನ್ನು ಡ್ರೋನ್‌ನ ಕೆಳಭಾಗದಲ್ಲಿ ಅಳವಡಿಸಲಾಗದೆ. ಡ್ರೋನ್ ನೆಲದ ಮೇಲ್ಮೈಗೆ ಹತ್ತಿರದಲ್ಲಿ ಹಾರುತ್ತಾ, ಸಿಗ್ನಲ್‌ಗಳನ್ನು ಭೂಮಿಯೊಳಗೆ ಕಳುಹಿಸಿ, ಅಲ್ಲಿಂದ ಪ್ರತಿಫಲಿಸಿ ಬರುವ ಸಿಗ್ನಲ್‌ಗಳನ್ನು ಸೆನ್ಸರ್‌ಗಳ ಮೂಲಕ ದಾಖಲಿಸುತ್ತದೆ. ಈ ಡೇಟಾವನ್ನು ನಂತರ ಸಾಫ್ಟ್‌ವೇರ್ ಮೂಲಕ 2D ಮತ್ತು 3D ಚಿತ್ರಗಳಾಗಿ ಪರಿವರ್ತಿಸಿ, ನೆಲದೊಳಗಿರುವ ವಸ್ತುಗಳ ಕುರಿತು ನಿಖರ ಮಾಹಿತಿ ಪಡೆಯಲಾಗುತ್ತದೆ. ಮಾನವರು ಅಥವಾ ಕಾರ್ಮಿಕರು ತಲುಪಲು ಕಷ್ಟವಾದ ನದಿ ದಂಡೆಯಂತಹ ಪ್ರದೇಶಗಳಲ್ಲೂ ಸುಲಭವಾಗಿ ಶೋಧ ನಡೆಸಲು ಈ ತಂತ್ರಜ್ಞಾನ ಸಹಾಯಕವಾಗಿದೆ.

ಶೋಧ ಕಾರ್ಯಕ್ಕೆ ಬಿಗಿ ಭದ್ರತೆ:

ಸದ್ಯ ಪಾಯಿಂಟ್ ನಂ 13 ರ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ, ಕೆಎಸ್‌ಆರ್‌ಪಿ ತುಕಡಿ ಸಹಿತ ಶಸ್ತ್ರ ಸಜ್ಜಿತ ಪೊಲೀಸರು ಭದ್ರತೆಯನ್ನು ಒದಸುತ್ತಿದ್ದಾರೆ. ಡ್ರೋನ್ GPR ಮೂಲಕ ಶೋಧ ಕಾರ್ಯ ಆರಂಭವಾಗುತ್ತಿದ್ದಂತೆಯೇ, ಹಲವು ಮಹತ್ವದ ಸಂಗತಿಗಳು ಹೊರಬೀಳುವ ನಿರೀಕ್ಷೆ ಇದೆ.