ಹಳದಿ ಮೆಟ್ರೋ ಉದ್ಘಾಟನೆ ಆಯ್ತು. ಇದೀಗ ಕೆಂಪು ಮೆಟ್ರೋ. ಬೆಂಗಳೂರಿನ ಭಾರಿ ಟ್ರಾಫಿಕ್ ವಲಯ ಎಂದೇ ಗುರುತಿಸಿಕೊಂಡ ಹೆಬ್ಬಾಳ-ಸರ್ಜಾಪುರ ಮಾರ್ಗದಲ್ಲಿ ಕೆಂಪು ಮೆಟ್ರೋ ಸಂಚಾರ ಆರಂಭಿಸಲಿದೆ. ಯಾವೆಲ್ಲಾ ಪ್ರದೇಶ ಮೆಟ್ರೋ ಕವರ್ ಮಾಡಲಿದೆ.

ಬೆಂಗಳೂರು (ಆ.12) ಉದ್ಘಾಟನೆ ಪ್ರಧಾನಿ ಮೋದಿ ನಮ್ಮ ಮೆಟ್ರೋ ಹಳದಿ ಲೈನ್ ಉದ್ಘಾಟನೆ ಬಳಿಕ ಜನರು ಈ ಮಾರ್ಗದಲ್ಲಿ ಓಡಾಡುತ್ತಿದ್ದಾರೆ. ಇದೀಗ ಕೆಂಪು ಮೆಟ್ರೋ ಲೈನ್ ಭಾರಿ ಚರ್ಚೆಯಾಗುತ್ತಿದೆ. ಕಾರಣ ಬೆಂಗಳೂರಿನ ಅತೀ ದೊಡ್ಡ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ಈ ಕೆಂಪು ಮೆಟ್ರೋದಲ್ಲಿ ಓಡಾಡಲು ಹಲವರು ಕಾಯುತ್ತಿದ್ದಾರೆ. ಕಾರಣ ಹೆಬ್ಬಾಳ-ಸರ್ಜಾಪುರ ರಸ್ತೆಗಳ ಟ್ರಾಫಿಕ್. ಇದೀಗ ಈ ಟ್ರಾಫಿಕ್ ಸಮಸ್ಯೆಗೆ ಉತ್ತರ ನೀಡಲು ಕೆಂಪು ಮೆಟ್ರೋ ಬರುತ್ತಿದೆ. ಈ ಮಾರ್ಗದಲ್ಲಿ ನಿಲ್ದಾಣಗಳ ಲಿಸ್ಟ್ ಇಲ್ಲಿದೆ.

37 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗ

ಮೆಟ್ರೋ ಮೂರನೇ ಹಂತದ ಕಾರಿಡಾರ್‌ಗೆ ರಾಜ್ಯ ಸಂಪುಟ ಅನುಮೋದನೆ ನೀಡಿದೆ. ಈ ಮೂರನೇ ಹಂತದ ಮೆಟ್ರೋ ಕಾರಿಡಾರ್‌ನಲ್ಲಿ ಪ್ರಮುಖ ಮೆಟ್ರೋ ಯೋಜನೆ ಇದೇ ರೆಡ್ ಲೈನ್. ಕೇಂದ್ರದ ಅನುಮೋದನೆ ಬಾಕಿ ಇದೆ. ಹೆಬ್ಬಾಳದಿಂದ ಸರ್ಜಾಪುರ ವರೆಗಿನ 37 ಕಿಲೋಮೀಟರ್ ಉದ್ದದ ಈ ಮೆಟ್ರೋ ಬೆಂಗಳೂರಿನ ಅತೀ ದೊಡ್ಡ ಮೆಟ್ರೋ ರೈಲು ಮಾರ್ಗವಾಗಲಿದೆ. ಈ ಮೆಟ್ರೋ ಬರೋಬ್ಬರಿ 28 ರೈಲು ನಿಲ್ದಾಣಗಳನ್ನು ಹೊಂದಿರಲಿದೆ. ಇಷ್ಟೇ ಅಲ್ಲ ಟ್ರಾಫಿಕ್‌ನಿಂದ ಕಿಕ್ಕಿರಿದು ತುಂಬಿದ ಭಾಗದ ಮೂಲಕ ಈ ಮೆಟ್ರೋ ಹಾದು ಹೋಗಲಿದೆ.

ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು

ಅತೀ ಹೆಚ್ಚು ಟ್ರಾಫಿಕ್ ವಲಯ ಎಂದು ಗುರುತಿಸಿಕೊಂಡಿರುವ ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು. ಮಾರ್ಥಹಳ್ಳಿ ಸೇರಿದಂತೆ ಪ್ರಮುಖ ವಲಯದ ಮೂಲಕ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಐಟಿ ಕಂಪನಿ, ರೆಸೆಡೆನ್ಶಿಯಲ್ ವಲಯಗಳ ಮೂಲಕ ಈ ಮೆಟ್ರೋ ಹಾದು ಹೋಗಲಿದೆ. ಇದರಿಂದ ಬೆಂಗಳೂರಿನ ಅರ್ಧ ಟ್ರಾಫಿಕ್ ಸಮಸ್ಯೆಗೆ ಉತ್ತರವಾಗಲಿದೆ ಎಂದು ಹೇಳಲಾಗುತ್ತಿದೆ.

ಹೆಬ್ಬಾಳ ಸರ್ಜಾಪುರ ಮೆಟ್ರೋ ನಿಲ್ದಾಣ ಲಿಸ್ಟ್

ಸರ್ಜಾಪುರ

ಕದಾ ಅಗ್ರಹಾರ ರಸ್ತೆ

ಸೊಂಪುರ

ದೊಮ್ಮಸಂದ್ರ

ಮತನಲ್ಲೂರು

ಕೊಡತಿ ಗೇಟ್

ಅಂಬೇಡ್ಕರ್ ನಗರ್

ಕಾರ್ಮೆಲರಾಂ

ದೊಡ್ಡಕನ್ನಳ್ಳಿ

ಕೈಕೊಂಡ್ರಹಳ್ಳಿ

ಬೆಳ್ಳಂದೂರು ಗೇಟ್

ಇಬ್ಬಲೂರು

ಅಗರ

ಜಕ್ಕಸಂದ್ರ

ಕೋರಮಂಗಲ ಮೂರನೇ ಬ್ಲಾಕ್

ಕೋರಮಂಗಲ 2ನೇ ಬ್ಲಾಕ್

ಡೈರಿ ಸರ್ಕಲ್

ನಿಮ್ಹಾನ್ಸ್

ಶಾಂತಿನಗರ

ಟೌನ್ ಹಾಲ್

ಕೆಆರ್ ಸರ್ಕಲ್

ಬಸವೇಶ್ವರ ಸರ್ಕಲ್

ಗಾಲ್ಫ್ ಕ್ಲಬ್

ಪ್ಯಾಲೆಸ್ ಗುಟ್ಟಹಳ್ಳಿ

ಮೇಖ್ರಿ ಸರ್ಕಲ್

ವೆಟರಿನರಿ ಕಾಲೇಜು

ಗಂಗಾನಗರ್

ಹೆಬ್ಬಾಳ

ಮೂರನೇ ಹಂತದ ಮೆಟ್ರೋ ಉದ್ಘಾಟನೆಯಾದರೆ ಬೆಂಗಳೂರಿನ ಅರ್ಧರ್ಧ ಸಮಸ್ಯೆ ಪರಿಹಾರವಾಗಲಿದೆ. ಕೋರಮಂಗಲ, ಕಾರ್ಪೋರೇಶನ್, ಶಾಂತಿನಗರ ಸೇರಿದಂತೆ ಪ್ರಮಖ ಪ್ರದೇಶಗಳ ಮೂಲಕ ಈ ಮೆಟ್ರೋ ಹಾದುಹೋಗಲಿದೆ.