ಭಾರತದಲ್ಲಿ ಅತೀ ಕಡಿಮೆ ಬೆಲೆಯ ಎಸ್‌ಯುವಿ ಕಾರು ಬಿಡುಗಡೆಯಾಗಿದೆ. ಸಿಟ್ರೊಯೆನ್ C3 & C3X ವೇರಿಯೆಂಟ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಶೇಷ ಅಂದರೆ ಇದರ ಆರಂಭಿಕ ಬೆಲೆ ಕೇವಲ 5.25 ಲಕ್ಷ ರೂ.
ನವದೆಹಲಿ (ಆ.12) ಭಾರತದಲ್ಲಿ ಕಡಿಮೆ ಬೆಲೆಯ ಹಲವು ಕಾರುಗಳು ಲಭ್ಯವಿದೆ. ಫ್ರೆಂಚ್ ಆಟೋಮೊಬೈಲ್ ಸಿಟ್ರೊಯೆನ್ ಭಾರತದಲ್ಲಿ ಈಗಾಗಲೇ ಹಲವು ಕಾರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಜನ ಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಲು ಸಿಟ್ರೊಯೆನ್ ಅತೀ ಕಡಿಮೆ ಬೆಲೆಗೆ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದೆ. ಸಿಟ್ರೊಯೆನ್ ಸಿ3 ಕಾರಿನ ಆರಂಭಿಕ ಬೆಲೆ ಕೇವಲ 5.23 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಸ್‌ಯುವಿ ಕಾರಾಗಿದೆ.
ಸಿಟ್ರೊಯೆನ್ ಸಿ3 ಹಾಗೂ ಸಿ3ಎಕ್ಸ್ ಕಾರಿನ ಬೆಲೆ ವಿವರ
ಸಿ3 ಲೈವ್ : 5,25,000 ರೂಪಾಯಿ (ಎಕ್ಸ್ ಶೋ ರೂಂ)
ಸಿ3 ಫೀಲ್ : 6,23,00 ರೂಪಾಯಿ (ಎಕ್ಸ್ ಶೋ ರೂಂ)
ಸಿ3 ಫೀಲ್ O: 7,27,000 ರೂಪಾಯಿ (ಎಕ್ಸ್ ಶೋ ರೂಂ)
ಸಿ3ಎಕ್ಸ್ ಶೈನ್ : 7,90,000 ರೂಪಾಯಿ (ಎಕ್ಸ್ ಶೋ ರೂಂ)
ಸಿ3 ಶೈನ್ ಡ್ಯುಯೆಲ್ ಟೋನ್ : 8,05,800 ರೂಪಾಯಿ (ಎಕ್ಸ್ ಶೋ ರೂಂ)
ಸಿ3 ಶೈನ್ ಟರ್ಬೋ : 9,10,800 ರೂಪಾಯಿ (ಎಕ್ಸ್ ಶೋ ರೂಂ)
ಸಿ3 ಶೈನ್ ಟರ್ಬೋ ಎಟಿ : 9,89,800 ರೂಪಾಯಿ (ಎಕ್ಸ್ ಶೋ ರೂಂ)
ಸಿ3ಎಕ್ಸ್ ಕಾರು 1.2 ಲೀಟರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್, 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿದೆ. 6 ಸ್ಪೀಡ್ ಮಾನ್ಯುಯೆಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ. ಇನ್ನು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ಸ್, ಆಟೋ ಡೈಮಿಂಗ್ ಐಆರ್‌ವಿಎಂ, ಕೀಲೆಸ್ ಎಂಟ್ರಿ ಫೀಚರ್ಸ್ ಹೊಂದಿದೆ.
360 ಡಿಗ್ರಿ ಕ್ಯಾಮೆರಾ, 6 ಎರ್‌ಬ್ಯಾಗ್, ಎಬಿಎಸ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್, ಇಬಿಡಿ, ಹಿಲ್ ಹೋಲ್ಡ್ ಅಸಿಸ್ಟ್, ISOFIX ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಇದರಲ್ಲಿದೆ. ಇದರ ಜೊತೆಗೆ 15ಕ್ಕೂ ಹೆಚ್ಚು ಹೊಸ ಫೀಚರ್ಸ್ ಈ ಕಾರಿನಲ್ಲಿದೆ. ಪ್ರಮುಖವಾಗಿ ಪ್ರಾಕ್ಸಿ ಸೆನ್ಸ್ ಪಿಇಪಿಎಸ್, ಕ್ರೂಸ್ ಕಂಟ್ರೋಲ್ ಜೊತೆಗೆ ಸ್ಪೀಡ್ ಲಿಮಿಟರ್, ಹ್ಯಾಲೋ 360 ಡಿಗ್ರಿ ಕ್ಯಾಮೆರಾ ಫೀಚರ್ಸ್ ಲಭ್ಯವಿದೆ.
ಸಿಟ್ರೊಯೆನ್ ಸಿ3 ಉತ್ತಮ ಕ್ಯಾಬಿನ್ ಸ್ಪೇಸ್ ಹೊಂದಿದೆ. ಜೊತೆಗೆ ಅತ್ಯಾಕರ್ಷಕ ಕ್ಯಾಬಿನ್ ಹೊಂದಿದೆ. 1,378 mm ರೇರ್ ಶೋಲ್ಡರ್ ರೂಮ್ ಹೊಂದಿದೆ. ಇನ್ನು ಥೇಯೇಟರ್ ಸ್ಟೈಲ್ ಹಿಂಬದಿ ಆಸನ ಹೊಂದಿದೆ. ಮುಂಭಾಗದ ರೆಡ್‌ರೂಮ್ 991 mm ಹೊಂದಿದ್ದರೆ, 2,540 mm ವ್ಹೀಲ್‌ಬೇಸ್ ಹಾಗೂ 315 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
