ಪತಿಗೆ ವೀರ್ಯಾಣು ಕಡಿಮೆ, ಪತಿಯಿಂದ ಗರ್ಭಿಣಿಯಾಗಲ್ಲ ಎಂದು ಮಾವ ಹಾಗೂ ಸಂಬಂಧಿಯೊಬ್ಬರು ಸೊಸೆ ಮೇಲೆ ನಿರಂತರ ಅತ್ಯಾ*ರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ವಡೋದರ (ಆ.12) ದೇಶದಲ್ಲಿ ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿದೆ. ಪ್ರತಿ ದಿನ ಚಿತ್ರ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿದೆ. ಒಂದೂವರೆ ವರ್ಷದ ಹಿಂದೆ ಮದುವೆಯಾದ ಮಹಿಳೆ ಗಂಡನ ಮನೆಯಲ್ಲಿ ನರಕಯಾತನೆ ಅನುಭವಿಸಿದ್ದಾಳೆ. ಪತಿಯ ವೀರ್ಯಾಣು ಅತೀ ಕಡಿಮೆ, ಪತಿಯಿಂದ ಗರ್ಭಿಯಾಣಿಗಲು ಸಾಧ್ಯವಿಲ್ಲ ಎಂದು ಮಾವ ಹಾಗೂ ಗಂಡನ ಸಂಬಂಧಿ ನಿರಂತರ ಅತ್ಯಾ*ರ ಎಸಗಿದ ಘಟನೆ ಗುಜರಾತ್ನ ವಡೋದರಲ್ಲಿ ವರದಿಯಾಗಿದೆ.
ಮದುವೆಯಾದ ತಿಂಗಳಲ್ಲೇ ನರಕಯಾತನೆ
ವಡೋದರ ಕುಟುಂಬದಲ್ಲಿ ನಡೆದ ಈ ಘಟನೆ ವಿರುದ್ಧ ಆಕ್ರೋಶಗಳು ತೀವ್ರಗೊಳ್ಳುತ್ತಿದೆ. 2024ರ ಫೆಬ್ರವರಿಯಲ್ಲಿ ಇವರ ಮದುವೆಯಾಗಿತ್ತು. ಗಂಡನ ಮನೆಗೆ ಬಂದ ಈಕೆಗೆ ಪ್ರತಿ ದಿನ ಆಕೆಯನ್ನು ಅತ್ತೆ ಮಾವ ಮಾತು ಮಾತಿಗೂ ಚುಚ್ಚುತ್ತಿದ್ದರು. ಇವೆಲ್ಲವನ್ನು ಸಹಿಸಿಕೊಂಡು 4 ರಿಂದ 5 ತಿಂಗಳು ಕಳೆದಿದೆ ಅಷ್ಟೇ. ಈಕೆ ಗರ್ಭಿಣಿಯಾಗಿಲ್ಲ ಎಂದು ಅತ್ತೆ ಹಾಗೂ ಮಾವ ರಂಪಾಟ ಶುರು ಮಾಡಿದ್ದಾರೆ. ಈಕೆ ಗರ್ಭಿಯಾಗಲ್ಲ, ಈಕೆಯ ವಯಸ್ಸು 40 ದಾಟಿದೆ ಹೀಗಾಗಿ ಗರ್ಭಿಣಿಯಾಗಲ್ಲ ಎಂದು ಚುಚ್ಚು ಮಾತುಗಳಿಂದ ಪ್ರತಿ ದಿನ ನೋಯಿಸಿದ್ದಾರೆ. ಇಷ್ಟೇ ಅಲ್ಲ ಚಿಕಿತ್ಸೆಗೆ ಸೂಚಿಸಿದ್ದಾರೆ.
ಪತಿಯಲ್ಲಿ ವೀರ್ಯವೇ ಇಲ್ಲ, ಸೊಸೆ ಮೇಲೆ ಎರಗಿದ ಮಾವ
ಇದರಂತೆ ಫರ್ಟಿಲಿಟಿ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದರೂ ಗರ್ಭಿಣಿಯಾಗಲಿಲ್ಲ. ಇತ್ತ ಈಕೆ ಮಗು ದತ್ತು ಪಡೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಅತ್ತೆ ಹಾಗೂ ಮಾವ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 2024ರ ಜುಲೈ ತಿಂಗಳಲ್ಲಿ ರಾತ್ರಿ ಮಲಗಿದ್ದ ಈಕೆಯ ಮೇಲೆ ಮಾವನೇ ಎರಗಿದ್ದಾನೆ. ಕಿರುಚಾಡಿದರೂ ಯಾರೂ ನೆರವಿಗೆ ಬರಲಿಲ್ಲ. ಇಷ್ಟೇ ಅಲ್ಲ ಕಪಾಳಕ್ಕೆ ಭಾರಿಸಿ ಅತ್ಯಾ*ರ ಎಸಗಿದ್ದಾನೆ. ಬಳಿಕ ಪತಿಯಲ್ಲಿ ವೀರ್ಯ ಕಡಿಮೆ ಇದೆ. ಆತನಿಂದ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ಹೇಳಿ ಮಾವ ನಿರಂತ ಅತ್ಯಾ*ರ ಮಾಡಿದ್ದಾನೆ. ಈ ವಿಚಾರ ಪತಿಗೆ ಹೇಳಿದರೂ ಪತಿ ತನಗೆ ಮಗು ಬೇಕು ಅಷ್ಟೇ ಎಂದು ಹೊರಟು ಹೋಗಿದ್ದಾನೆ.
ಪತಿಯ ಸಂಬಂಧಿಯಿಂದಲೂ ಇದೇ ಕೃತ್ಯ
ತಿಂಗಳು ಕಳೆದರೂ ಈಕೆ ಗರ್ಭಿಣಿಯಾಗಿಲ್ಲ. ಪ್ರತಿ ಬಾರಿ ವಿರೋಧಿಸಿದರೂ ಈಕೆಯ ನೆರವಿಗೆ ಯಾರೂ ಬರಲಿಲ್ಲ. ಇತ್ತ ಪತಿಯ ತಂಗಿಯ ಗಂಡನಿಂದ ಅತ್ಯಾ*ರ ಆರಂಭಗೊಂಡಿದೆ. ಮಾವನಿಗೆ ವಯಸ್ಸಾಗಿದೆ. ಮಾವನ ವೀರ್ಯ ಶಕ್ತಿ ಕಳೆದುಕೊಂಡಿದೆ ಎಂದು ಪತಿಯ ತಂಗಿಯ ಗಂಡ ಅತ್ಯಾ*ರ ಶುರುಮಾಡಿದ್ದಾನೆ. ಈ ಅತ್ಯಾ*ರದ ಪರಿಣಾಮ ಜೂನ್ ತಿಂಗಳಲ್ಲಿ ಈಕೆ ಗರ್ಭಿಣಿಯಾಗಿದ್ದಾಳೆ. ಆದರೆ ಜುಲೈ ತಿಂಗಳಲ್ಲಿ ಗರ್ಭಪಾತವಾಗಿದೆ. ಇನ್ನು ಸಹಿಸಲು ಸಾಧ್ಯವಿಲ್ಲ, ತನಗೆ ಗಂಡನ ಮನೆಯಲ್ಲಿ ಯಾರೂ ನೆರವಿಗೆ ಬರುತ್ತಿಲ್ಲ ಎಂದು ತನ್ನ ಮನೆಯಲ್ಲಿ ಹೇಳಿಕೊಂಡಿದ್ದಾಳೆ. ಮಗಳ ಪರಿಸ್ಥಿತಿ ಕೇಳಿ ಆಗಾತಗೊಂಡ ಪೋಷಕರು ದೂರು ನೀಡಲು ಸೂಚಿಸಿದ್ದಾರೆ. ಪೋಷಕರ ನೆರವಿನಿಂದ ದೂರು ನೀಡಿದ್ದಾಳೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.
