Published : Jul 11, 2025, 07:25 AM ISTUpdated : Jul 11, 2025, 10:57 PM IST

Karnatata Latest News Live: ತಿಂಗಳಲ್ಲಿ ಸಣ್ಣ ಹೂಡಿಕೆ, 45ರ ಹರೆಯದಲ್ಲಿ ನಿವೃತ್ತಿಯಾದ ವ್ಯಕ್ತಿ ಖಾತೆಯಲ್ಲೀಗ 4.7 ಕೋಟಿ ರೂ

ಸಾರಾಂಶ

ಬೆಂಗಳೂರು (ಜು.11): ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡುವೆ ಸಿದ್ಧರಾಮಯ್ಯ ಬಹುಮುಖ್ಯ ಹೇಳಿಕೆ ನೀಡಿದ್ದಾರೆ. ಮುಂದಿನ ಐದು ವರ್ಷಕ್ಕೂ ನಾನೇ ಮುಖ್ಯಮಂತ್ರಿ. ಅದರಲ್ಲಿ ಯಾವುದೇ ಅನುಮಾನ ಬೇಡ. ಡಿಕೆ ವಿರುದ್ಧ ಚುನಾವಣೆ ಗೆದ್ದು ಸಿಎಂ ಆಗಿದ್ದೇನೆ. ನಮ್ಮ ನಡುವೆ ಅಧಿಕಾರ ಹಂಚಿಕೆಯ ಡೀಲ್‌ ಆಗಿಯೇ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ದಾಗ ಶಿಂಧೆ ನಮ್ಮಿಬ್ಬರ ನಡುವೆ ಚುನಾವಣೆ ನಡೆಸಿದ್ದರು. ಆಗ ನಾನು ಗೆದ್ದಿದ್ದೇನೆ ಎಂದು ಸಿಎಂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

10:57 PM (IST) Jul 11

ತಿಂಗಳಲ್ಲಿ ಸಣ್ಣ ಹೂಡಿಕೆ, 45ರ ಹರೆಯದಲ್ಲಿ ನಿವೃತ್ತಿಯಾದ ವ್ಯಕ್ತಿ ಖಾತೆಯಲ್ಲೀಗ 4.7 ಕೋಟಿ ರೂ

ಭಾರಿ ವೇತನವಲ್ಲ, ಆದರೆ ಪರ್ವಾಗಿಲ್ಲ. ಈ ಸಂಬಳದಲ್ಲಿ ಪ್ರತಿ ತಿಂಗಳು ಸಣ್ಣ ಹೂಡಿಕೆ ಇಷ್ಟೇ ನೋಡಿ. ಇದೀಗ 45ರ ಹರೆಯದಲ್ಲೇ ಈ ಉದ್ಯೋಗಿ ನಿವೃತ್ತಿಯಾಗಿದ್ದಾರೆ. ಹೂಡಿಕೆ ಮೊತ್ತ ಇದೀಗ ಬರೋಬ್ಬರಿ 4.7 ಕೋಟಿಯಾಗಿದೆ.

Read Full Story

10:51 PM (IST) Jul 11

ಜಾತಿ ಆಧಾರಿತ ರಾಜಕಾರಣಕ್ಕೆ ಮುಂದಾದ ಕಾಂಗ್ರೆಸ್‌ - ಶಾಸಕ ಸಿ.ಸಿ.ಪಾಟೀಲ್ ಕಿಡಿ

ರಾಜ್ಯ ಸರ್ಕಾರ ಸುಮಾರು 500 ಮಠಗಳಿಗೆ ಬರಬೇಕಿದ್ದ ಅನುದಾನವನ್ನು ರಾಜ್ಯದ ಬೇರೆ ಬೇರೆ ಮಸೀದಿ, ಚರ್ಚ್‌ಗಳಿಗೆ ಹಂಚಿಕೆ ಮಾಡಿ ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸಿ.ಸಿ.ಪಾಟೀಲ್ ಕಿಡಿಕಾರಿದರು.

Read Full Story

10:29 PM (IST) Jul 11

ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ - ನಿಖಿಲ್ ಕುಮಾರಸ್ವಾಮಿ

ಜಿಪಂ, ತಾಪಂ ಚುನಾವಣೆ ನಡೆಸುವಂತೆ ಕೋರ್ಟ್ ಛೀಮಾರಿ ಹಾಕಿದ್ದರೂ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ನಡೆಸಲು ಧಮ್ಮು, ತಾಕತ್ತು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.

Read Full Story

10:01 PM (IST) Jul 11

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತು - ಸಚಿವ ಸಂತೋಷ್ ಲಾಡ್

ಕರ್ನಾಟಕ ಸರ್ಕಾರ ರಾಜ್ಯದ ಗಿಗ್ ಕಾರ್ಮಿಕರಿಗಾಗಿ (ಸ್ವತಂತ್ರ ಉದ್ಯೋಗಿ) ವಿಶೇಷ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Read Full Story

09:49 PM (IST) Jul 11

ಸಾಲದಲ್ಲಿದ್ದ ಪೋಷಕರಿಂದ 20 ದಿನದ ಮಗು ಮಾರಟ,ದಾಂಡೇಲಿಯಲ್ಲಿ ಹೃದವಿದ್ರಾವಕ ಘಟನೆ

ಕೈತುಂಬಾ ಸಾಲ ಮಾಡಿಕೊಂಡಿದ್ದ ಪೋಷಕರು ತಮ್ಮ 20 ದಿನದ ಮಗುವನ್ನು ಮಾರಾಟ ಮಾಡಿದ ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯಿಂದ ಪ್ರಕರಣ ಬೆಳಕೆಗಿ ಬಂದಿದೆ. ಇತ್ತ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.

Read Full Story

09:19 PM (IST) Jul 11

ಬೆಂಗಳೂರಲ್ಲಿ ನರ್ಸರಿ ಶುಲ್ಕಕ್ಕೆ ಸಾಲ ಪಡೆದ ತಂದೆ, ಮಧ್ಯಮ ವರ್ಗದ ನೋವಿನ ಕತೆ ಬಿಚ್ಚಿಟ್ಟ ತಂದೆ

ಬೆಂಗಳೂರಲ್ಲಿ ಮಗುವಿ ನರ್ಸರಿ ಶುಲ್ಕ ಬರೋಬ್ಬರ 2 ಲಕ್ಷ ರೂಪಾಯಿ. ಇದಕ್ಕಾಗಿ ಸಾಲ ಪಡೆದು ಇಎಂಐ ಕಟ್ಟುತ್ತಿರುವ ತಂದೆ ಇದೀಗ ನೋವು ಬಿಚ್ಚಿಟ್ಟಿದ್ದಾರೆ. ದುಬಾರಿ ಶುಲ್ಕ ಹಾಗೂ ಮಧ್ಯಮ ವರ್ಗದ ನೋವು ಯಾರಿಗೆ ಹೇಳಲಿ ಎಂದು ನೋವು ತೋಡಿಕೊಂಡಿದ್ದಾರೆ.

 

Read Full Story

09:08 PM (IST) Jul 11

ಆ ಸಿನಿಮಾದಲ್ಲಿ ತಮನ್ನಾ ಪಾತ್ರವೇ ಬಹಳ ಮುಖ್ಯವಾದದ್ದು - ನಿರ್ದೇಶಕ ರಾಜಮೌಳಿ ಮೆಚ್ಚುಗೆ

ದಕ್ಷಿಣ ಭಾರತ ಚಿತ್ರರಂಗದ ದಿಗ್ಗಜ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರವು ಒಂದು ಅದ್ಭುತ ದೃಶ್ಯಕಾವ್ಯ. ಎರಡು ಭಾಗಗಳಲ್ಲಿ ಬಿಡುಗಡೆಯಾದ ಈ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.
Read Full Story

08:59 PM (IST) Jul 11

ಅತೀ ಸೂಕ್ಷ್ಮ ಪ್ರದೇಶ ಭಟ್ಕಳಕ್ಕೆ ಬಾಂಬ್ ಬೆದರಿಕೆ - ಭದ್ರತಾ ಪಡೆಗಳು ಹೈ ಅಲರ್ಟ್

ಭಟ್ಕಳ ಪೊಲೀಸ್ ಠಾಣೆಗೆ ಬಾಂಬ್ ಸ್ಫೋಟಿಸುವ ಬೆದರಿಕೆ ಇ-ಮೇಲ್ ಬಂದಿದ್ದು, ಭದ್ರತಾ ಪಡೆಗಳು ತಪಾಸಣೆ ನಡೆಸಿವೆ. ಉಗ್ರ ಚಟುವಟಿಕೆಗಳಿಗೆ ಹೆಸರಾಗಿರುವ ಭಟ್ಕಳದಲ್ಲಿ ಈ ಬೆದರಿಕೆ ಆತಂಕ ಮೂಡಿಸಿದೆ.
Read Full Story

08:47 PM (IST) Jul 11

ಕನ್ನಡ ಕಡ್ಡಾಯ - ಸರ್ಕಾರಕ್ಕೆ ಹೈಕೋರ್ಟ್‌ನಿಂದ ಖಡಕ್‌ ಸೂಚನೆ, 3 ವಾರವಷ್ಟೇ ಗಡುವು

ಕನ್ನಡ ಕಡ್ಡಾಯ ನೀತಿಯ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಸರ್ಕಾರ ಇನ್ನೂ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ, 3 ವಾರಗಳ ಗಡುವು ನೀಡಿ ಹೈಕೋರ್ಟ್ ಎಚ್ಚರಿಸಿದೆ. CBSE ಮತ್ತು ICSE ಶಾಲೆಗಳ ಶಿಕ್ಷಕರು ,ಪೋಷಕರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

Read Full Story

08:35 PM (IST) Jul 11

ಒಂದು ತಿಂಗಳಲ್ಲಿ ಕೊಡಗಿನಲ್ಲಿ 77 ಮನೆಗಳಿಗೆ ಮಳೆ ಹಾನಿ - ಸಚಿವ ಬೋಸರಾಜು ಹೇಳಿದಿಷ್ಟು..

ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ 77 ಮನೆಗಳು ಹಾನಿಯಾಗಿವೆ ಎಂದು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

Read Full Story

08:27 PM (IST) Jul 11

ಎರಡು ದಿನದಲ್ಲಿ ದೆಹಲಿಯಲ್ಲಿ ಎರಡನೇ ಭಾರಿಗೆ ಭೂಕಂಪ, ಹೊರಗೋಡಿದ ಜನ

ರಾಷ್ಟ್ರ ರಾಜಧಾನಿ ವ್ಯಾಪ್ತಿ-ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಕಳೆದ ಎರಡು ದಿನದಲ್ಲಿ 2ನೇ ಬಾರಿಗೆ ಭೂಕಂಪನವಾಗಿದೆ.

 

Read Full Story

08:09 PM (IST) Jul 11

ಸಿಎಂ ಕುರ್ಚಿ ಖಾಲಿ ಇಲ್ಲ, ಬಿಜೆಪಿಗೆ ನಾಚಿಕೆ ಇಲ್ಲ - ಸಚಿವ ಬೋಸರಾಜ್ ತಿರುಗೇಟು

ಸರ್ಕಾರ ಚೆನ್ನಾಗಿಯೇ ನಡೆಯುತ್ತಿದ್ದು, ಉತ್ತಮ ಆಡಳಿತ ನಡೆಯುತ್ತಿದೆ. ಹೈಕಮಾಂಡ್ ಹೇಳಿದಂತೆ ಪಾಲಿಸುತ್ತೇವೆ ಅಂತ ಇಬ್ಬರೂ ಹೇಳಿದ್ದಾರೆ. ಇದರಲ್ಲಿ ಅನುಮಾನ ಊಹೆ ಮಾಡುವಂತಹದ್ದು ಏನು ಇಲ್ಲ ಎಂದು ಮಡಿಕೇರಿಯಲ್ಲಿ ಸಚಿವ ಬೋಸರಾಜ್ ಹೇಳಿದ್ದಾರೆ.

Read Full Story

07:59 PM (IST) Jul 11

Taal Film​ ಶೂಟಿಂಗ್​ ವೇಳೆ ಐಶ್ವರ್ಯರ ಬ್ಲೌಸ್​ ಹುಕ್​ ತೆರೆದಿತ್ತು... ಆಗ ನಾನು... ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಬಾಬಿ

ತಾಲ್​ ಚಿತ್ರದ ಶೂಟಿಂಗ್​ ವೇಳೆ ನಟಿ ಐಶ್ವರ್ಯರ ಬ್ಲೌಸ್​ ಹುಕ್​ ತೆರೆದಿದ್ದ ಸಮಯದಲ್ಲಿ ಅದನ್ನು ಹಾಕಲು ಹೇಳಿದಾಗ ನಡೆದ ಘಟನೆಯ ಬಗ್ಗೆ ಬಾಬಿ ಹೇಳಿದ್ದಾರೆ. ಅವರು ರಿವೀಲ್​ ಮಾಡಿದ್ದೇನು?

 

Read Full Story

07:52 PM (IST) Jul 11

ನನ್ನ ಮೇಲೆ ಕೈ ಹಾಕಿದ್ದಕ್ಕೆ ಹೊಡೆದೆ, ಆತ ಮಾತ್ರ..ಶಾಕಿಂಗ್ ಘಟನೆ ಬಿಚ್ಚಿಟ್ಟ ನಟಿ ಫಾತಿಮಾ ಸನಾ

ಸಾರ್ವಜನಿಕ ಪ್ರದೇಶದಲ್ಲಿ ಆತ ನನ್ನ ಮೇಲೆ ಕೈಹಾಕಿದ್ದ. ಆತನ ಅಸಭ್ಯ ವರ್ತನೆಗೆ ನಾನು ಕಪಾಳಕ್ಕೆ ಹೊಡೆದಿದ್ದೆ. ಆದರೆ ಬಳಿಕ ನಡೆದಿದ್ದ ಘನಘೋರ ಎಂದು ನಟಿ ಫಾತಿಮಾ ಸನಾ ಶೇಖ್ ಶಾಕಿಂಗ್ ಘಟನೆ ಬಿಚ್ಚಿಟ್ಟಿದ್ದಾರೆ.

Read Full Story

07:35 PM (IST) Jul 11

ಹುಲಿ, ಕೋತಿ ಬಳಿಕ ಚಾಮರಾಜನಗರದಲ್ಲಿ ಚಿರತೆ ಸಾವು - ವಿಷಪ್ರಾಶನ ಶಂಕೆ!

ಚಾಮರಾಜನಗರ ಜಿಲ್ಲೆಯಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಕರು ಮತ್ತು ನಾಯಿ ಮೃತದೇಹಗಳು ಸಹ ಪತ್ತೆಯಾಗಿದ್ದು, ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಹುಲಿ ಮತ್ತು ಕೋತಿಗಳ ಹತ್ಯೆಯೂ ನಡೆದಿತ್ತು.
Read Full Story

07:18 PM (IST) Jul 11

ಡಿ ಮಾರ್ಟ್ ಕ್ಲೀನಪ್ ಸೇಲ್ ಆಫರ್; ವಾರದಲ್ಲಿ ಈ ದಿನ ಶಾಪಿಂಗ್ ಹೋದವರಿಗೆ ಭಾರೀ ಡಿಸ್ಕೌಂಟ್!

ಪ್ರತಿ ತಿಂಗಳು DMart ಅಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಕೊಳ್ಳುತ್ತೀರಾ? ಹಾಗಾದರೆ ಯಾವ ದಿನಗಳಲ್ಲಿ DMart ಅಲ್ಲಿ ಶಾಪಿಂಗ್ ಮಾಡಿದರೆ ಇನ್ನೂ ಕಡಿಮೆ ಬೆಲೆಗೆ ಸಾಮಾನುಗಳು ಸಿಗುತ್ತವೆ ಎಂದು ಇಲ್ಲಿ ತಿಳಿದುಕೊಳ್ಳಿ.

 

Read Full Story

07:18 PM (IST) Jul 11

ಶಿವಮೊಗ್ಗದಲ್ಲಿ ಗಗನಕ್ಕೇರಿದ ಭೂಮಿಯ ಬೆಲೆ - ರಿಯಲ್ ಎಸ್ಟೇಟ್ ಮಾಫಿಯಾದವರ ಹೊಡೆದಾಟ

ಮಲೆನಾಡಿನ ಶಿವಮೊಗ್ಗದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು ರಿಯಲ್ ಎಸ್ಟೇಟ್ ಮಾಫಿಯಾ ಕುಳಗಳಿಗೆ ಕುತ್ತಿಗೆ ಮೇಲೆ ತಲೆ ನಿಲ್ಲುತ್ತಿಲ್ಲ. ಇದರ ಪರಿಣಾಮವೇ ಸಣ್ಣಪುಟ್ಟ ವಿಷಯಗಳಿಗೂ ಕಿರಿಕ್ ಮಾಡಿಕೊಂಡು ಬಡಿದಾಡುತ್ತಿದ್ದಾರೆ.

Read Full Story

07:16 PM (IST) Jul 11

Madhu Gowda - ಯುಟ್ಯೂಬ್​ ಮೂಲಕವೇ ಕೋಟ್ಯಧಿಪತಿ! ಅಬ್ಬಬ್ಬಾ ರೀಲ್ಸ್​ ಮೂಲಕ ಎಷ್ಟು ಗಳಿಸಿದ್ರು ಗೊತ್ತಾ?

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಯುಟ್ಯೂಬರ್​ ಮಧು ಗೌಡ ಅವರು, ತಮ್ಮ ವಿಡಿಯೋಗಳಿಂದ ಗಳಿಸಿದ್ದೆಷ್ಟು ಗೊತ್ತಾ? ಇವರ ಆದಾಯ ಅಬ್ಬಬ್ಬಾ ಎನ್ನುವಂತಿದೆ. ಡಿಟೇಲ್ಸ್​ ಇಲ್ಲಿದೆ ನೋಡಿ...

 

Read Full Story

07:06 PM (IST) Jul 11

ಧರ್ಮಸ್ಥಳ ಸಂಘದ ಸಾಲ ಕಟ್ಟದ ಹೆಂಡತಿ ಮೂಗು ಕಚ್ಚಿ ತುಂಡರಿಸಿದ ಗಂಡ!

ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದ ಸಾಲದ ಕಂತು ತಡವಾಗಿ ಪಾವತಿಸಿದ್ದಕ್ಕೆ ಪತಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ ಮೂಗು ಕಚ್ಚಿ ಕತ್ತರಿಸಿದ್ದಾನೆ. ಈ ಘಟನೆ ಜುಲೈ 8 ರಂದು ನಡೆದಿದ್ದು, ಪೊಲೀಸರು ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

06:55 PM (IST) Jul 11

ಚಿರಂಜೀವಿ ಹೀಗಾಗ್ತಾರೆ ಅಂತ ಊಹಿಸಿರಲಿಲ್ಲ - ಶಾಕಿಂಗ್ ಸತ್ಯ ಬಾಯ್ಬಿಟ್ಟ ಜಯಸುಧಾ

ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಹಿರಿಯ ನಟಿ ಜಯಸುಧಾ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ. ಶೂಟಿಂಗ್‌ನಲ್ಲಿ ಮೆಗಾಸ್ಟಾರ್ ಹೇಗಿರುತ್ತಿದ್ರು ಅಂತ ವಿವರಿಸಿದ್ದಾರೆ.

Read Full Story

06:51 PM (IST) Jul 11

ಬಾಹ್ಯಾಕಾಶದಲ್ಲಿ ಕಾಸ್ಮಿಕ್ ಗೂಬೆ ಗೋಚರ, ಅಚ್ಚರಿ ಸೆರೆ ಹಿಡಿದ ಟೆಲಿಸ್ಕೋಪ್

ಬಾಹ್ಯಾಕಾಶದಲ್ಲಿ ಅಚ್ಚರಿಯ ಬೆಳವಣಿಗೆ ಜೇಮ್ಸ್ ವೆಬ್ ಟೆಲಿಸ್ಕೋಪ್‌ನಲ್ಲಿ ಸೆರೆಯಾಗಿದೆ. ಆಳ ಬಾಹ್ಯಾಕಾಶದಲ್ಲಿ ಕಾಸ್ಮಿಕ್ ಗೂಬೆ ಆಕೃತಿಯೊಂದು ಪತ್ತೆಯಾಗಿದೆ. ಬ್ರಹ್ಮಾಂಡದ ಗೂಬೆ ಹಿಂದಿನ ರಹಸ್ಯವೇನು? ಏನಿದು?

Read Full Story

06:24 PM (IST) Jul 11

'ಬಾಹುಬಲಿ'ಯನ್ನ ಕಟ್ಟಪ್ಪ ಕೊಂದಿದ್ದಕ್ಕೆ 10 ವರ್ಷ - 'ದಿ ಎಪಿಕ್' ರೂಪದಲ್ಲಿ ಮತ್ತೆ ತೆರೆ ಮೇಲೆ ಎಂದ ಜಕ್ಕಣ್ಣ

ಬಾಹುಬಲಿ ಚಿತ್ರ ಬಿಡುಗಡೆ ಆಗಿ 10 ವರ್ಷ ಆದ ಸಂಭ್ರಮದಲ್ಲಿ ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನೂ ಸೇರಿಸಿ ‘ಬಾಹುಬಲಿ : ದಿ ಎಪಿಕ್‌’ ಸಿನಿಮಾ ಹೊರಬರಲಿದೆ.

Read Full Story

06:04 PM (IST) Jul 11

'ಮೋಡ ಕವಿದ ವಾತಾವರಣ'ದಲ್ಲಿ ಸಿಂಪಲ್‌ ಸುನಿ ಜೊತೆ ಕಾಣಿಸಿಕೊಂಡ ಮೋಕ್ಷಾ ಕುಶಾಲ್ - ಯಾಕೆ?

ಸ್ಯಾಂಡಲ್‌ವುಡ್‌ನ ಸಿಂಪಲ್‌ ಸುನಿ ನಿರ್ದೇಶನದ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ಕ್ಕೆ ಮೋಕ್ಷಾ ಕುಶಾಲ್ ನಾಯಕಿಯಾಗಿ ನಟಿಸಿದ್ದಾರೆ.

Read Full Story

05:57 PM (IST) Jul 11

ಬ್ರಾಹ್ಮಣ ಹುಡುಗಿಗೆ 16 ಲಕ್ಷ, OBCಗೆ 12 ಲಕ್ಷ - ಮತಾಂತರದಿಂದ ನೂರಾರು ಕೋಟಿ ಒಡೆಯ ಬಾಬಾನ ಬೆಚ್ಚಿಬೀಳೋ ಸ್ಟೋರಿ...

ತಾಯತ ಮಾರುವ ಸೋಗಿನಲ್ಲಿ ಇದಾಗಲೇ ಕೆಲವೇ ದಿನಗಳಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಹಿಂದೂ ಮಹಿಳೆಯರ ಮತಾಂತರ ಮಾಡಿಸಿರುವ ಛಂಗುರ್‌ ಬಾಬಾ ಜಮಾಲುದ್ದೀನ್‌ ಅರೆಸ್ಟ್​ ಆಗಿದ್ದು, ಆಘಾತಕಾರಿ ವಿಷ್ಯಗಳು ರಿವೀಲ್​ ಆಗ್ತಿವೆ.

 

Read Full Story

05:54 PM (IST) Jul 11

ಸಾಲದ ಹಣ ವಾಪಸ್ ಕೊಟ್ಟಿಲ್ಲವೆಂದು ಜೀವಂತ ಸುಡಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ!

ಬೆಂಗಳೂರಿನಲ್ಲಿ ಕೇವಲ 5 ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನಿಂದ ವ್ಯಕ್ತಿಯೊಬ್ಬ ಪರಿಚಿತರ ಮನೆಯವರನ್ನು ಜೀವಂತವಾಗಿ ಸುಡಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿದ್ದಾನೆ. ಮುಂದೇನಾಯ್ತು ನೀವೇ ನೋಡಿ…

Read Full Story

05:20 PM (IST) Jul 11

ಆ್ಯಪಲ್ ಕಂಪನಿ ಸಿಒಒ ಸ್ಥಾನಕ್ಕೆ ಆಯ್ಕೆಯಾದ ಭಾರತೀಯ ಮೂಲದ ಸಭಿ ಖಾನ್ ಯಾರು?

ಪ್ರತಿಷ್ಠಿತ ಆ್ಯಪಲ್ ಕಂಪನಿಯ ಮುಂದಿನ ಸಿಒಒ ಆಗಿ ಭಾರತೀಯ ಮೂಲದ ಸಭೀ ಖಾನ್ ಆಯ್ಕೆಯಾಗಿದ್ದಾರೆ. ಯಾರು ಈ ಸಭೀ ಖಾನ್? ಪ್ರತಿಷ್ಠಿತ ಕಂಪನಿಗಳ ಪ್ರಮುಖ ಸ್ಥಾನ ಇದೀಗ ಭಾರತೀಯಯ ಕೈಯಲ್ಲಿದೆ.

Read Full Story

05:17 PM (IST) Jul 11

Muguru Guruji - ಮುಂದಿನ ಸಿಎಂ ಯಾರು? ದರ್ಶನ್​, ಶಿವಣ್ಣ ಭವಿಷ್ಯವೇನು? ಖ್ಯಾತ ಜ್ಯೋತಿಷಿ ರಿವೀಲ್​...

ಒಂದೆಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ, ಇನ್ನೊಂದೆಡೆ ಜೈಲಿನಿಂದ ಬಿಡುಗಡೆಗೊಂಡಿರುವ ನಟ ದರ್ಶನ್​ ಚರ್ಚೆ, ಮತ್ತೊಂದೆಡೆ ಈಗಷ್ಟೇ ಕ್ಯಾನ್ಸರ್​ ರೋಗದಿಂದ ಗುಣಹೊಂದಿ ಕಮ್​ಬ್ಯಾಕ್​ ಆಗಿರುವ ಶಿವರಾಜ್​ಕುಮಾರ್​ ಚರ್ಚೆ... ಈ ಮೂರೂ ವಿಷಯಗಳ ಕುರಿತು ಖ್ಯಾತ ಜ್ಯೋತಿಷಿ  ಹೇಳಿದ್ದೇನು?

 

Read Full Story

04:46 PM (IST) Jul 11

Colour Therapy - ಕೂದಲು ಉದುರುವಿಕೆ ತಡೆಗೆ ಸಿಂಪಲ್​ ಬಣ್ಣದ ಚಿಕಿತ್ಸೆ - ವಿಡಿಯೋ ಮಾಹಿತಿ ಕೊಟ್ಟ ವೈದ್ಯರು

ಹಲವು ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಬಣ್ಣದ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎನ್ನುವುದು ಇದಾಗಲೇ ಸಾಬೀತಾಗಿದೆ. ಈ ಬಣ್ಣ ಹಚ್ಚುವುದರಿಂದ ಕೂದಲು ಉದುರುವುದನ್ನು ಹೇಗೆ ತಡೆಯಬಹುದು? ವಿಡಿಯೋ ಇಲ್ಲಿದೆ ನೋಡಿ.

 

Read Full Story

04:44 PM (IST) Jul 11

ಕನ್ನಡ ಚಿತ್ರರಂಗದಲ್ಲಿ 3ನೇ ತಲೆಮಾರಿಗೂ ಬಂದ 'ಮುತ್ತು'! ಇದು ರಾಜ್‌ ಕುಟುಂಬದವರ ಸಿನಿಮಾ ಗತ್ತು!

ಡಾ. ರಾಜ್‌ಕುಮಾರ್ ಅವರ ಮೂಲ ಹೆಸರಾದ 'ಮುತ್ತುರಾಜು' ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಸಿನಿಮಾಗಳಲ್ಲಿ ಮುಂದುವರೆದಿದೆ. ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನಂತರ, ಈಗ ಯುವ ರಾಜ್‌ಕುಮಾರ್ ಅವರ 'ಎಕ್ಕ' ಸಿನಿಮಾದಲ್ಲೂ 'ಮುತ್ತು' ಎಂಬ ಹೆಸರು ಕಾಣಿಸಿಕೊಂಡಿದೆ.
Read Full Story

04:35 PM (IST) Jul 11

ನೀವು ಲೂಸ್ ಫಾಸ್ಟಾಗ್ ಬಳಸುತ್ತಿದ್ದೀರಾ? ವಾಹನ ಬ್ಲಾಕ್‌ಲಿಸ್ಟ್‌ಗೆ ಸೇರಿಸಲು NHAI ಆದೇಶ

ಟೋಲ್ ಪಾವತಿಗೆ ಫಾಸ್ಟಾಗ್ ಕಡ್ಡಾಯ. ಆದರೆ ನೀವು ಲೂಸ್ ಫಾಸ್ಟಾಗ್ ಬಳಸುತ್ತಿದ್ದೀರಾ? ಹೀಗಿದ್ದರೆ ನಿಮ್ಮ ಫಾಸ್ಟಾಗ್ ಹಾಗೂ ವಾಹನ ಬ್ಲಾಕ್‌ಲಿಸ್ಟ್‌ಗೆ ಸೇರಿಸಲಾಗುತ್ತೆ. ಇದರಿಂದ ಟೋಲ್ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ.

 

Read Full Story

04:20 PM (IST) Jul 11

ಬಿಗ್‌ಬಾಸ್‌ನಲ್ಲಿ ಮಿಂಚಿದ ಕ್ರೀಡಾ ತಾರೆಗಳು, ಗೆದ್ದವರೆಷ್ಟು? ಕನ್ನಡದಲ್ಲಿ ಇದ್ದವರೆಷ್ಟು?

ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಮನ ಗೆದ್ದ ಕ್ರೀಡಾಪಟುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಕ್ರಿಕೆಟ್, ಕುಸ್ತಿ, ರೇಸಿಂಗ್ ಸೇರಿದಂತೆ ವಿವಿಧ ಕ್ರೀಡಾ ಕ್ಷೇತ್ರಗಳ ಹಲವು ತಾರೆಗಳು ಬಿಗ್‌ಬಾಸ್‌ ಮನೆಯೊಳಗೆ ತಮ್ಮ ಛಾಪು ಮೂಡಿಸಿದ್ದಾರೆ.
Read Full Story

04:02 PM (IST) Jul 11

Vidya Balan - 9 ಚಿತ್ರಗಳಿಂದ ಏಕಾಏಕಿ ವಿದ್ಯಾ ಬಾಲನ್​ ಔಟ್​! ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಟಿ

ಬಹುಭಾಷಾ ತಾರೆ ವಿದ್ಯಾ ಬಾಲನ್‌ ಅವರನ್ನು ಏಕಾಏಕಿ 9 ಸಿನಿಮಾಗಳಿಂದ ತೆಗೆದುಹಾಕಲಾಗಿತ್ತು. ಇದರ ಕುರಿತು ನಟಿ ಮಾತನಾಡಿದ್ದಾರೆ. ಸಿನಿ ಇಂಡಸ್ಟ್ರಿಯ ಇನ್ನೊಂದು ಮುಖವನ್ನೂ ಅವರು ಹೇಳಿದ್ದಾರೆ.

 

Read Full Story

03:57 PM (IST) Jul 11

ನಾಳೆನೇ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿಗೆ ಸಿಎಂ ಪಟ್ಟ ಕೊಡಿ ಎನ್ನುತ್ತಿಲ್ಲ - ಮಾಗಡಿ ಶಾಸಕ ಬಾಲಕೃಷ್ಣ

ಸಿದ್ದರಾಮಯ್ಯ ಅವರ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯ ಅವಕಾಶ ಸಿಗಬೇಕೆಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಐದು ವರ್ಷಗಳ ನಂತರ ಡಿಕೆಶಿಗೆ ಸಿಎಂ ಸ್ಥಾನ ಸಿಗಬೇಕೆಂದು ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದೂ ಅವರು ಹೇಳಿದ್ದಾರೆ.
Read Full Story

03:45 PM (IST) Jul 11

ಪಿಎಫ್ ಖಾತೆದಾರರಿಗೆ ಗುಡ್ ನ್ಯೂಸ್, ನಿಮ್ಮ ಯಾವುದೇ ದೂರು -ಸಮಸ್ಯೆಗೆ 7 ಸೂತ್ರ ಜಾರಿ

ನೀವು ಪಿಎಫ್ ಖಾತೆ, ನಿಧಿ, ಹಣ ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ದೂರು ನೀಡಿದ್ದೀರಾ? ಅಥವಾ ಯಾವುದೇ ಪಿಎಫ್ ಖಾತೆ ಸಮಸ್ಯೆ ಎದುರಿಸುತ್ತಿದ್ದೀರಾ? ಇನ್ನು ನೀವು ಸಮಸ್ಯೆ ಸರಿಪಡಿಸಲು ಲೆಕ್ಕವಿಲ್ಲದಷ್ಟು ದಿನ ಕಚೇರಿಗೆ ಅಲೆದಾಡಬೇಕಿಲ್ಲ. ಹೊಸ ನೀತಿ ಜಾರಿಯಾಗುತ್ತಿದೆ.

Read Full Story

03:40 PM (IST) Jul 11

ಬ್ಯಾಂಕ್‌ ಸಾಲ ತೀರಿಸಲು 1500 ಕೋಟಿಗೆ ದೂರವಾಣಿ ನಗರದಲ್ಲಿನ ಜಾಗ ಮಾರಲಿರುವ ಐಟಿಐ!

ಐಟಿಐ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರೈಗೆ ಪಿಎಸ್‌ಯು ಕೆಲ ಆಂತರಿಕ ಸಂಪನ್ಮೂಲಗಳನ್ನು ₹ 1,500 ಕೋಟಿ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಯೋಜನೆ ರೂಪಿಸುತ್ತಿದೆ.

 

Read Full Story

03:22 PM (IST) Jul 11

Breaking - ಭಟ್ಕಳ ನಗರ 24 ಗಂಟೆಯಲ್ಲಿ ವಿನಾಶ; ಬಾಂಬ್ ಹಾಕುವ ಇ-ಮೇಲ್ ಕಳಿಸಿದ ಕಣ್ಣನ್!

ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕ್ವಾಡ್ ನಗರದಾದ್ಯಂತ ತಪಾಸಣೆ ನಡೆಸುತ್ತಿದೆ. ಸೈಬರ್ ವಿಭಾಗದ ಸಹಾಯದಿಂದ ಇ-ಮೇಲ್ ಮೂಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
Read Full Story

03:06 PM (IST) Jul 11

ಅಪ್ಪನ ಗುಂಡೇಟಿಗೆ ಬಲಿಯಾದ ಟೆನಿಸ್ ಪಟು ರಾಧಿಕಾಗೆ ಮುಳುವಾದ ರೊಮ್ಯಾಂಟಿಕ್ ವಿಡಿಯೋ

ಅಪ್ಪನ ಗುಂಡೇಟಿಕೆ ಟೆನಿಸ್ ಪಟು ರಾಧಿಕಾ ಯಾದವ್ ಬಲಿಯಾದ ಘಟನೆ ಹಿಂದಿನ ಕಾರಣಗಳು ಒಂದೊಂದೆ ಬಹಿರಂಗವಾಗುತ್ತಿದೆ. ರಾಧಿಕಾ ನಡೆಸುತ್ತಿದ್ದ ಟೆನಿಸ್ ಅಕಾಡೆಮಿ, ಆಕೆ ಕಾಣಿಸಿಕೊಂಡಿದ್ದ ಮ್ಯೂಸಿಕ್ ಆಲ್ಬಮ್ ತಂದೆಯ ಸಹನೆ ಕಟ್ಟೆ ಒಡೆಯುವಂತೆ ಮಾಡಿದೆ. ತಂದೆ ಪಿತ್ತ ನೆತ್ತಿಗೇರಿಸಿದ ಆ ಮ್ಯೂಸಿಕ್ ವಿಡಿಯೋ ಯಾವುದು?

Read Full Story

02:49 PM (IST) Jul 11

ತಿರುಪತಿ ರೈಲಿಗೆ ಮೂರು ಬಾರಿ ಅಡ್ಡಬಿದ್ದು ನಮಸ್ಕಾರ ಮಾಡಿದ ಅಜ್ಜಿ - ಚಿಕ್ಕಮಗಳೂರಿನಲ್ಲಿ ಭಕ್ತಿಯ ಅಪರೂಪದ ದೃಶ್ಯ

ಚಿಕ್ಕಮಗಳೂರಿನಿಂದ ತಿರುಪತಿಗೆ ಹೊಸ ರೈಲು ಸಂಚಾರ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಅಜ್ಜಿಯೊಬ್ಬರು 3 ಬಾರಿ ರೈಲಿಗೆ ಅಡ್ಡಬಿದ್ದು ನಮಸ್ಕರಿಸಿ, ದಕ್ಷಿಣೆ ಇಟ್ಟ ಘಟನೆ ವೈರಲ್ ಆಗಿದೆ. ತಿರುಪತಿ ವೆಂಕಟೇಶ್ವರನ ಭಕ್ತೆಯಾಗಿರುವ ಈ ವೃದ್ಧೆ, ಹೊಸ ರೈಲು ಸಂಚಾರ ಆರಂಭದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Read Full Story

02:13 PM (IST) Jul 11

'ಡೈವರ್ಟ್ ಪಾಲಿಟಿಕ್ಸ್ ಬೇಡ..' ಪ್ರತಾಪ್ ಸಿಂಹಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ತಿರುಗೇಟು

ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ತಿರುಗೇಟು ನೀಡಿದ್ದು, ಡೈವರ್ಟ್ ಪಾಲಿಟಿಕ್ಸ್ ಬೇಡ, ಗ್ರೌಂಡ್ ಲೇವಲ್‌ನಲ್ಲೇ ಕೆಲಸ ಮಾಡೋಣ ಎಂದಿದ್ದಾರೆ. ಸಂಸತ್‌ನಲ್ಲಿ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಆಗಿರುವ ಮಲತಾಯಿ ಧೋರಣೆಯ ಬಗ್ಗೆ ಚರ್ಚಿಸಿದ್ದೇನೆ ಎಂದಿದ್ದಾರೆ.
Read Full Story

01:19 PM (IST) Jul 11

ಎಸ್ಸೆಸ್ಸೆಲ್ಸಿ 100% ರಿಸಲ್ಟ್‌ಗಾಗಿ 'ದಡ್ಡ' ಮಕ್ಕಳಿಗೆ ಟೀಸಿ, ಕೊಪ್ಪಳದಲ್ಲಿ200+ ಮಕ್ಕಳು ಶಾಲೆಯಿಂದ ಹೊರಕ್ಕೆ! ಶಾಕಿಂಗ್ ಸ್ಟೋರಿ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶಕ್ಕಾಗಿ ಖಾಸಗಿ ಶಾಲೆಗಳು 'ಜಾಣರಿಲ್ಲದ' ವಿದ್ಯಾರ್ಥಿಗಳನ್ನು ಹೊರದಬ್ಬುತ್ತಿವೆ. ವಿದ್ಯಾರ್ಥಿಗಳು ಪರ್ಯಾಯ ಶಾಲೆಗಳನ್ನು ಹುಡುಕುವಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.
Read Full Story

More Trending News