ರಾಷ್ಟ್ರ ರಾಜಧಾನಿ ವ್ಯಾಪ್ತಿ-ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಕಳೆದ ಎರಡು ದಿನದಲ್ಲಿ 2ನೇ ಬಾರಿಗೆ ಭೂಕಂಪನವಾಗಿದೆ.
ನವದೆಹಲಿ (ಜು.11) ದೇಶದ ರಾಜಧಾನಿ ದೆಹಲಿ ಹಾಗೂ ರಾಜಧಾನಿ ವ್ಯಾಪ್ತಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಕಳೆದ ಎರಡು ದಿನದಲ್ಲಿ ಎರಡನೇ ಬಾರಿಗೆ ದೆಹಲಿಯಲ್ಲಿ ಭೂಕಂಪನವಾಗಿದೆ. ಇಂದು (ಜು.11) ಸಂಜೆ 7.49ರ ವೇಳೆ ದೆಹಲಿಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ. ಭೂಕಂಪದ ಮೂಲ ಹರ್ಯಾಣದ ಝಜ್ಜಾರ್‌ನ 10 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ಭೂಮಿ ಕಂಪಿಸುತ್ತಿದ್ದಂತೆ ದೆಹಲಿ ಜನತೆ ಸೋಶಿಯಲ್ ಮೀಡಿಯಾ ಮೂಲಕ ಅನುಭವ ಹಂಚಿಕೊಂಡಿದ್ದಾರೆ. ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ.
ದೆಹಲಿಯಲ್ಲಿ ಸತತ ಭೂಕಂಪದಿಂದ ಹಲವರರು ಆತಂಕಗೊಂಡಿದ್ದಾರೆ. ಸದ್ಯ ಎರಡು ದಿನದಲ್ಲಿ ಎರಡನೇ ಭಾರಿಗೆ ಭೂಕಂಪವಾಗಿದೆ. ಎರಡೂ ಭೂಕಂಪದ ಪ್ರಮಾಣ ಹಾಗೂ ತೀವ್ರತೆ ಕಡಿಮೆಯಾಗಿದೆ. ಹೀಗಾಗಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಪದೇ ಪದೇ ಈ ರೀತಿ ಭೂಕಂಪ ಸಂಭವಿಸತ್ತಿರುವುದರಿಂದ ಜನರ ಆತಂಕ ಹೆಚ್ಚಾಗಿದೆ.
ಗುರುವಾರ ದೆಹಲಿಯಲ್ಲಿ ಕಂಪಿಸಿದ್ದ ಭೂಮಿ
ಗುರುವಾರ (ಜು.10) ದೆಹಲಿಯಲ್ಲಿ ಭೂಮಿ ಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿತ್ತು. ಹರ್ಯಾಣ ಝಜ್ಜಾರ್ ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ ಇದರ ತೀವ್ರತೆ ದೆಹಲಿ ಹಾಗೂ ರಾಜಾಧಾನಿ ವ್ಯಾಪ್ತಿ ಪ್ರದೇಶಕ್ಕೂ ವ್ಯಾಪಿಸಿತ್ತು. ತೀವ್ರತೆ ಕಡಿಮೆ ಇದ್ದ ಕಾರಣ ಭೂಮಿ ಸಣ್ಣದಾಗಿ ಕಂಪಿಸಿದೆ. ಕಟ್ಟಡಗಳು, ಮನೆಗಳು ಅಲುಗಾಡಿದೆ. ಫ್ಯಾನ್ ಸೇರಿದಂತೆ ವಸ್ತುಗಳು ಅಲುಗಾಡಿದೆ. ಮೇಜಿನ ಮೇಲಿದ್ದ ವಸ್ತುಗಳು ಕೆಳಕ್ಕೆ ಬಿದ್ದಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಹೊರಗೋಡಿದ್ದಾರೆ. ಕಟ್ಟಡಗಳು, ಕಚೇರಿಗಳಿಂದ ಹೊರಬಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಲವರು ಭೂಕಂಪನದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇದೇ ವೇಳೆ ಹಲವು ದೆಹಲಿ ಭೂಕಂಪನದ ಟ್ರೋಲ್ ಮಾಡಿದ್ದರು. ಇದೀಗ ಮತ್ತೆ ಎರಡನೇ ದಿನದಲ್ಲಿ ದೆಹಲಿಯಲ್ಲಿ ಭೂಮಿ ಕಂಪಿಸಿದೆ. ಗುರುವಾರ ದೆಹಲಿಯಲ್ಲಿ ಬೆಳಗ್ಗೆ 9.04 ಗಂಟೆಗೆ ಭೂಮಿ ಕಂಪಿಸಿತ್ತು.
