ಭಾರಿ ವೇತನವಲ್ಲ, ಆದರೆ ಪರ್ವಾಗಿಲ್ಲ. ಈ ಸಂಬಳದಲ್ಲಿ ಪ್ರತಿ ತಿಂಗಳು ಸಣ್ಣ ಹೂಡಿಕೆ ಇಷ್ಟೇ ನೋಡಿ. ಇದೀಗ 45ರ ಹರೆಯದಲ್ಲೇ ಈ ಉದ್ಯೋಗಿ ನಿವೃತ್ತಿಯಾಗಿದ್ದಾರೆ. ಹೂಡಿಕೆ ಮೊತ್ತ ಇದೀಗ ಬರೋಬ್ಬರಿ 4.7 ಕೋಟಿಯಾಗಿದೆ.
ವಿದ್ಯಾಭ್ಯಾಸ ಮುಗಿಸಿ ಕೆಲಸ ಗಿಟ್ಟಿಸಿಕೊಂಡ ಬೆನ್ನಲ್ಲೇ ಕಮಿಟ್‌ಮೆಂಟ್ ಭೂತ ಹಿಂಬಾಲಿಸುತ್ತಲೇ ಇರುತ್ತದೆ. ಹೀಗಾಗಿ ಹಲವರು ಹೂಡಿಕೆಯತ್ತ ತಿರುಗಿ ನೋಡುವುದಿಲ್ಲ. ಆದರೆ ಚೊಕ್ಕವಾಗಿ ಸ್ಯಾಲರಿ ವಿಂಗಡಿಸಿ ಒಂದು ಸಣ್ಣ ಮೊತ್ತ ಹೂಡಿಕೆ ಆರಂಭಿಸಿದರೆ ಬಹುಬೇಗನೆ ಕೆಲಸಕ್ಕೆ ರಾಜೀನಾಮೆ ನೀಡಿ ವಿಶ್ರಾಂತಿ ಜೀವನ ನಡೆಸಲು ಸಾಧ್ಯವಿದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಇದೀಗ ಉದ್ಯೋಗಿಯೊಬ್ಬರು ತಮ್ಮ 45ನೇ ವಯಸ್ಸಿನಲ್ಲಿ ನಿವೃತ್ತಿ ಪಡೆದಿದ್ದಾರೆ. ಪ್ರತಿ ತಿಂಗಳು ಮಾಡಿದ ಸಣ್ಣ ಹೂಡಿಕೆ ಮೊತ್ತ ಇದೀಗ ಬಡ್ಡಿ ಸೇರಿ 4.7 ಕೋಟಿ ರೂಪಾಯಿ ಆಗಿದೆ. ಈ ಕುರಿತು ವ್ಯಕ್ತಿಯ ಸಂಬಂಧಿ ಮಾಹಿತಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಅಂಕಲ್ ನನ್ನ ಸ್ಪೂರ್ತಿ ಎಂದಿದ್ದಾರೆ.ಇವರ ಜೀವನ ಪಯಣ ಹಲವರಿಗೆ ಸ್ಪೂರ್ತಿಯಾಗಲಿದೆ.
ಹೂಡಿಕೆ ಕುರಿತು ಮಾಹಿತಿ ನೀಡಿದ ಸಂಬಂಧಿ
4.7 ಕೋಟಿ ರೂಪಾಯಿಯೊಂದಿಗೆ ನಿವೃತ್ತಿಯಾಗ ಉದ್ಯೋಗಿ ಕುರಿತು ಸಂಬಂಧಿ ಮಾಹಿತಿ ನೀಡಿದ್ದಾರೆ. ನನ್ನ ಅಂಕಲ್ ಆಸಕ್ತಿದಾಯಕ ಅಥವಾ ಭಾರಿ ಹೆಸರಿನ ಉದ್ಯೋಗದಲ್ಲಿರಲಿಲ್ಲ. ಡೀಸೆಂಟ್ ಸ್ಯಾಲರಿ ಪಡೆಯುತ್ತಿದ್ದರು. ಆದರೆ ಯಾವುದೇ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಯಾವುದೇ ಉದ್ಯಮ ನಡೆಸಲಿಲ್ಲ. ಪಾಲು ಖರೀದಿಸಲಿಲ್ಲ. ಆದರೆ ಸಮಯೋಚಿತ ಹಾಗೂ ಸರಿಯಾದ ನಿರ್ಧಾರ ತೆಗೆದುಕೊಂಡು 45ನೇ ವಯಸ್ಸಿಗೆ ನಿವೃತ್ತಿಯಾಗಿದ್ದಾರೆ ಎಂದಿದ್ದಾರೆ.
ಹೂಡಿಕೆ ಕುರಿತು ಸರಿಯಾದ ಮಾಹಿತಿ ಪಡೆದ ಅಂಕಲ್ 1998ರಲ್ಲಿ ಅಂಕಲ್ ಪ್ರತಿ ತಿಂಗಳು 10,000 ರೂಪಾಯಿ ಮ್ಯೂಚ್ಯುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಿದ್ದರು. ಇದು ಪ್ರತಿ ತಿಂಗಳು ಹೂಡಿಕೆ ಮಾಡುತ್ತಲೇ ಬಂದಿದ್ದಾರೆ. ಇನ್ನು ಕೆಲ ವರ್ಷಗಳ ಬಳಿಕ ಎಸ್ಐಪಿ ( ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್)ಯಲ್ಲಿ ತಿಂಗಳಿಗೆ 500 ರೂಪಾಯಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಎಸ್ಐಪಿ ಹೂಡಿಕೆಯನ್ನು ವೇತನ ಹೆಚ್ಚಾಗುತ್ತಿದ್ದಂತೆ ಏರಿಕೆ ಮಾಡುತ್ತಾ ಬಂದಿದ್ದಾರೆ.
2010ರ ವೇಳೆ ಮ್ಯೂಚ್ಯುವಲ್ ಫಂಡ್ ಹಾಗೂ ಎಸ್ಐಪಿ ಸೇರಿ ಒಟ್ಟು ತಿಂಗಳಿಗೆ 20,000 ರೂಪಾಯಿ ಹೂಡಿಕೆ ಮಾಡುತ್ತಿದ್ದರು. ಇನ್ನು ಅಂಕಲ್ 2 ಬಿಹೆಚ್‌ಕೆ ಮನೆಯಲ್ಲಿ ಕಳೆದ 3 ದಶಕಗಳಿಂದ ಇದ್ದಾರೆ. ಸ್ಕೂಟರ್ ಮೂಲಕವೇ ಓಡಾಡಿದ್ದಾರೆ. ಒಂದು ಪ್ರವಾಸ ಮಾಡಿದ್ದಾರೆ. ಕೇರಳಕ್ಕೆ ಪ್ರವಾಸ ಮಾಡಿದ್ದಾರೆ. ಹೆಚ್ಚಿನ ಐಷರಾಮಿತನ ಮಾಡಿಲ್ಲ. ಅಚ್ಚುಕಟ್ಟಾಗಿ ಜೀವನ ನಿರ್ವಹಿಸಿದ್ದಾರೆ. ಇದೀಗ ತಮ್ಮ 45ನೇ ವಯಸ್ಸಿನಲ್ಲಿ ನಿವೃತ್ತಿಯಾಗಿದ್ದಾರೆ. ಕಾರಣ ಇವರ ಮ್ಯೂಚ್ಯುವಲ್ ಫಂಡ್ ಹಾಗೂ ಎಸ್ಐಪಿ ಹೂಡಿಕೆಗೆ ಬಡ್ಡಿ ಎಲ್ಲಾ ಸೇರಿ ಇದೀಗ 4.7 ಕೋಟಿ ರೂಪಾಯಿ ಆಗಿದೆ.
ಇದೀಗ ಅಂಕಲ್ ಹಾಗೂ ಅವರ ಪತ್ನಿ ಪ್ರತಿ ವಾರ ಟ್ರಿಪ್ ಹೋಗುತ್ತಿದ್ದಾರೆ. ಯಾವುದೇ ಚಿಂತೆ ಇಲ್ಲ. ಸಮಯವಿದೆ. ಕೈಯಲ್ಲಿ ದುಡ್ಡಿದೆ. ಹೂಡಿಕೆ ಸರಿಯಾಗಿ ಮಾಡಿದ್ದಾರೆ. ಪ್ರತಿ ತಿಂಗಳ ಖರ್ಚಿಗೂ ಸಮಸ್ಯೆ ಇಲ್ಲ. ಹೂಡಿಕೆ ಮೊತ್ತವೂ ಸುರಕ್ಷಿತವಾಗಿದೆ. ಈ ಅಂಕಲ್ ನನ್ನ ಸ್ಪೂರ್ತಿ ಎಂದು ಸಂಬಂಧಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
