ಬೆಂಗಳೂರಲ್ಲಿ ಮಗುವಿ ನರ್ಸರಿ ಶುಲ್ಕ ಬರೋಬ್ಬರ 2 ಲಕ್ಷ ರೂಪಾಯಿ. ಇದಕ್ಕಾಗಿ ಸಾಲ ಪಡೆದು ಇಎಂಐ ಕಟ್ಟುತ್ತಿರುವ ತಂದೆ ಇದೀಗ ನೋವು ಬಿಚ್ಚಿಟ್ಟಿದ್ದಾರೆ. ದುಬಾರಿ ಶುಲ್ಕ ಹಾಗೂ ಮಧ್ಯಮ ವರ್ಗದ ನೋವು ಯಾರಿಗೆ ಹೇಳಲಿ ಎಂದು ನೋವು ತೋಡಿಕೊಂಡಿದ್ದಾರೆ. 

ಬೆಂಗಳೂರು (ಜು.11) ಮಧ್ಯಮ ವರ್ಗದ ಕುಟುಂಬಕ್ಕೆ ಬೆಂಗಳೂರಲ್ಲಿ ಮಕ್ಕಳ ವಿದ್ಯಾಭ್ಯಾಸ ಅತ್ಯಂತ ಹೊರೆಯಾಗುತ್ತಿರುವುದು ಮಾತ್ರವಲ್ಲ ಅಸಾಧ್ಯ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಪೋಷಕರ ನೋವಿನ ಕತೆಯನ್ನು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಯಿನ್ ಸ್ವಿಚ್ ಆ್ಯಂಜ್ ಲೆಮನ್ ಕಂಪನಿ ಸಹ ಸಂಸ್ಥಾಪಕ ಆಶಿಶ್ ಸಿಂಘಾಲ್ ಈ ಪೋಸ್ಟ್ ಹಾಕಿದ್ದಾರೆ. ತಮ್ಮ ಮಗಳನ್ನು ಶಾಲೆಗೆ ಸೇರಿಸಲು ನಡೆಸಿದ ಮಾತುಕತೆ, ಶಾಲಾ ಶುಲ್ಕ ಅಚ್ಚರಿ ಮಾತ್ರವಲ್ಲ ಮಕ್ಕಳ ವಿದ್ಯಾಭ್ಯಾಸ ಹೇಗೆ ಅನ್ನೋ ಪ್ರಶ್ನೆ ಮೂಡುವಂತೆ ಮಾಡಿದೆ. ಇಷ್ಟೇ ಅಲ್ಲ ಇದೇ ವೇಳೆ ಇತರ ಮಧ್ಯಮ ವರ್ಗದ ಪೋಷಕರು ಮಕ್ಕಳ ಶಾಲಾ ಶುಲ್ಕಕ್ಕಾಗಿ ಸಾಲ ಪಡೆದು ವರ್ಷವಿಡಿ ಕಂತು ಪಾವತಿಸುತ್ತಿರುವ ನೋವಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಶಾಲಾ ಶುಲ್ಕಗಳು ವರ್ಷದಿಂದ ವರ್ಷಕ್ಕೆ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದೆ ಎಂದು ಆಶೀಶ್ ಹೇಳಿದ್ದಾರೆ. ಬರೋಬ್ಬರಿ ಶೇಕಡಾ 30 ರಷ್ಟು ಶುಲ್ಕ ಹೆಚ್ಚಳ. ಇದು ದರೋಡೆ ಅಲ್ಲದೇ ಮತ್ತೇನು ಎಂದು ಆಶೀಶ್ ಪ್ರಶ್ನಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸುತ್ತಿದ್ದೆ. ನನ್ನ ಮಗಳನ್ನು ಶಾಲೆಯ ಆಡಳಿತ ಮಂಡಳಿ ಮಾತುಗಳನ್ನು ಕೇಳಿ ಅಚ್ಚರಿಯಾಯಿತು. ಕಾರಣ ಬೆಂಗಳೂರಿನಲ್ಲಿ ಪೋಷಕರು ಸಾಮಾನ್ಯ ಶಾಲೆಯಲ್ಲಿ 3ನೇ ತರಗತಿಗೆ 2.1 ಲಕ್ಷ ರೂಪಾಯಿ ಶುಲ್ಕ ಪಾವತಿಸುತ್ತಿದ್ದಾರೆ. ಇದು ಅಂತಾರಾಷ್ಟ್ರೀಯ ಸ್ಕೂಲ್ ಅಲ್ಲ, ಸಾಮಾನ್ಯ ಸಿಬಿಎಸ್‌ಇ ಶಾಲೆ ಎಂದು ಅಶೀಶ್ ಹೇಳಿದ್ದಾರೆ.

3ನೇ ತರಗತಿ ಶಾಲೆ ಅಡ್ಮಿಷನ್‌ ಕುರಿತು ಒಬ್ಬರ ಪೋಷಕರು ಮಾತನಾಡುವಾಗ ಕೆಲ ಮಹತ್ವದ ಅಂಶ ಹೇಳಿದ್ದರು. 2 ಲಕ್ಷ ರೂಪಾಯಿ ಫೀಸ್ ಕಟ್ಟಿದ್ದಾರೆ. ಎಂಜಿನೀಯರಿಂಗ್ ಡಿಗ್ರಿ ಕಾಲೇಜು ಫೀಸ್ ಕೂಡ ಇಷ್ಟಿಲ್ಲ ಎಂದು ಪೋಷಕರು ಹೇಳುತ್ತಿದ್ದರು. ಇದೊಂದೆ ಅಲ್ಲ ಎಂದು ಅಶೀಶ್ ಹಲವು ಅಂಶಗಳನ್ನು ತೆರೆದಿಟ್ಟಿದ್ದಾರೆ. ಶಾಲೆಗಳು ಪ್ರತಿ ವರ್ಷ ಶೇಕಡಾ 10 ರಿಂದ 30 ರಷ್ಟು ಶುಲ್ಕ ಹೆಚ್ಚಳ ಮಾಡುತ್ತಿದೆ. ಮಧ್ಯಮ ವರ್ಗಜ ವೇತನ ಹೆಚ್ಚಳ ಶೇಕಡಾ 0.4 ರಷ್ಟು ಮಾತ್ರ. ಇದು ಕಳೆದ ಒಂದು ದಶಕದಿಂದ ಹೆಚ್ಟಾಗಿಲ್ಲ. ಆದರೆ ಮನೆಯ ಆದಾಯದಲ್ಲಿ ಶೇಕಡಾ 19ಕ್ಕಿಂತ ಹೆಚ್ಚು ಕೇವಲ ಶಾಲೆಯ ಶುಲ್ಕಕ್ಕೆ ವೆಚ್ಚವಾಗುತ್ತಿದೆ. ಇದೇ ಅಹಮ್ಮದಾಬಾದ್‌ನಲ್ಲಿ ವಾರ್ಷಿಕ ನಾಲ್ಕನೇ ತರತಗಿ ಶಾಲಾ ಶುಲ್ಕ 1.8 ಲಕ್ಷ ರೂಪಾಯಿ ವಾರ್ಷಿಕ ಎಂದು ಅಶೀಶ್ ಹೇಳಿದ್ದಾರೆ.

ಮಕ್ಕಳ ಕಾಲೇಜು ಸೇರಿದಂತೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಳಿತಾಯ ಮಾಡುವ ಮಾತು ದೂರ. ಆದರೆ ಈಗ ನರ್ಸರಿಗೆ ಪೋಷಕರು ಸಾಲ ಮಾಡುತ್ತದ್ದಾರೆ. ವರ್ಷವಿಡಿ ಸಾಲ ಕಟ್ಟುತ್ತಾ ಪರದಾಡುತ್ತಿದ್ದಾರೆ. ಶಿಕ್ಷಣದ ಹಣದುಬ್ಬರ ಶೇಕಡಾ 4ರಷ್ಟಾಗಿದೆ ಎಂದು ಅಶೀಶ್ ಹೇಳಿದ್ದಾರೆ.

ಮಧ್ಯಮ ವರ್ಗದ ಕುಟುಂಬ ತಮ್ಮ ಮಕ್ಕಳನ್ನು ಬೆಂಗಳೂರಲ್ಲಿ ವಿದ್ಯಾಭ್ಯಾಸ ಪೂರೈಸುತ್ತಿರುವುದು ಹೇಗೆ? ಶಿಕ್ಷಣ ಬೆಂಗಳೂರಲ್ಲಿ ಕೈಗೆಟುಕದ ವಸ್ತುವಾಗುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ವಿದ್ಯಾಭ್ಯಾಸ ಬ್ಯೂಸಿನೆಸ್ ಆಗಿ ಮಾರ್ಪಟಾಗಿದೆ ಎಂದಿದ್ದಾರೆ.