ಅಪ್ಪನ ಗುಂಡೇಟಿಕೆ ಟೆನಿಸ್ ಪಟು ರಾಧಿಕಾ ಯಾದವ್ ಬಲಿಯಾದ ಘಟನೆ ಹಿಂದಿನ ಕಾರಣಗಳು ಒಂದೊಂದೆ ಬಹಿರಂಗವಾಗುತ್ತಿದೆ. ರಾಧಿಕಾ ನಡೆಸುತ್ತಿದ್ದ ಟೆನಿಸ್ ಅಕಾಡೆಮಿ, ಆಕೆ ಕಾಣಿಸಿಕೊಂಡಿದ್ದ ಮ್ಯೂಸಿಕ್ ಆಲ್ಬಮ್ ತಂದೆಯ ಸಹನೆ ಕಟ್ಟೆ ಒಡೆಯುವಂತೆ ಮಾಡಿದೆ. ತಂದೆ ಪಿತ್ತ ನೆತ್ತಿಗೇರಿಸಿದ ಆ ಮ್ಯೂಸಿಕ್ ವಿಡಿಯೋ ಯಾವುದು?
ಗುರುಗಾಂವ್ (ಜು.11) ಅಪ್ಪ ಮಗಳ ನಡುವೆ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಖ್ಯಾತ ಟೆನಿಸ್ ಪಟು ರಾಧಿಕಾ ಯಾದವ್ ತಂದೆ ಜೊತೆ ನಡೆಸಿದ ವಾಗ್ವಾದ ಬೆನ್ನಲ್ಲೇ ಗುಂಡೇಟಿಗೆ ಬಲಿಯಾಗಿದ್ದಾಳೆ. 25ರ ಹರೆಯದ ರಾಧಿಕಾ ಯಾದವ್ ಹತ್ಯೆಗೆ ಕೆಲ ಕಾರಣಗಳು ಬಹಿರಂಗವಾಗಿದೆ. ಈ ಪೈಕಿ ರಾಧಿಕಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ಮ್ಯೂಸಿಕ್ ಆಲ್ಬಮ್ ಕೂಡ ಒಂದು. ಈ ಮ್ಯೂಸಿಕ್ ಆಲ್ಬಮ್ ಹಾಗೂ ನಂತರದ ಬೆಳವಣಿಗೆ ರಾಧಿಕಾ ಯಾದವ್ ತಂದೆ ದೀಪಕ್ ಯಾದವ್ ಸಹನೆ ಕಳೆದುಕೊಳ್ಳುವಂತೆ ಮಾಡಿ ಘನ ಘೋರ ದುರಂತವನ್ನೇ ಮಾಡಿದ್ದಾರೆ.
ರೊಮ್ಯಾಂಟಿಕ್ ಮ್ಯೂಸಿಕ್ ವಿಡಿಯೋ ತಂದ ಆಪತ್ತು
ಗುರುಗಾಂವ್‌ನ ಟೆನಿಸ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದ ರಾಧಿಕಾ ಯಾದವ್ ಟೆನಿಸ್ ಅಕಾಡೆಮಿ ನಡೆಸುತ್ತಿದ್ದರು. ಟೆನಿಸ್ ಅಕಾಡೆಮಿ, ಆಕೆಯ ಗೆಳೆತನ, ಪಾರ್ಟಿ ಇದ್ಯಾವುದು ತಂದೆ ಇಷ್ಟವರಲಿಲ್ಲ. ದೀಪಕ್ ಯಾದವ್‌ಗೆ ಆದಾಯದ ಮೂಲದಲಲ್ಲಿ ಯಾವುದೇ ಕೊರತೆ ಇರಲಿಲ್ಲ. ಹೀಗಾಗಿ ರಾಧಿಕಾ ಯಾದವ್‌ಗೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ತಂದೆ ದೀಪಕ್ ಯಾದವ್ ಸೂಚಿಸಿದ್ದರು. ಟೆನಿಸ್ ಜೊತೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಳ್ಳಲು ಬಯಸಿದ ರಾಧಿಕಾ ಯಾದವ್, ಇದಕ್ಕಾಗಿ ರೀಲ್ಸ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಒಂದು ಮ್ಯೂಸಿಕ್ ಆಲ್ಬಮ್‌ನಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಬಳಿಕ ತಂದೆಯ ಕೋಪ ನಿಯಂತ್ರಣಕ್ಕೆ ಸಿಗದಾಗಿದೆ.
ಜೀಶಾನ್ ಅಹಮ್ಮದ್ ನಿರ್ಮಾಣದ ಮ್ಯೂಸಿಕ್ ವಿಡಿಯೋ
ಕಾರ್‌ವಾನ್ ಅನ್ನೋ ಹೆಸರಿನಲ್ಲಿ ರಾಧಿಕಾ ಯಾದವ್ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಪ್ರಣಯ ಹಕ್ಕಿಗಳ ಕುರಿತ ಈ ವಿಡಿಯೋದಲ್ಲಿ ರಾಧಿಕಾ ಹಾಗೂ ನಾಯಕನಾಗಿ ಇನಾಮ್ ಕಾಣಿಸಿಕೊಂಡಿದ್ದ. ಇವರಿಬ್ಬ ರೊಮ್ಯಾಂಟಿಕ್ ಜೋಡಿ ಮ್ಯೂಸಿಕ್ ವಿಡಿಯೋವನ್ನು ಜೀಶಾನ್ ಅಹಮ್ಮದ್ ನಿರ್ಮಾಣ ಮಾಡಿದ್ದ. ಈ ವಿಡಿಯೋದಲ್ಲಿ ರಾಧಿಕಾ ಹಾಗೂ ಇನಾಮ್ ಹಲವು ರೊಮ್ಯಾಂಟಿಕ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದರು.
ಈ ಮ್ಯೂಸಿಕ್ ಆಲ್ಬಮ್ ವಿಡಿಯೋ ಬಳಿಕ ಇನಾಮ್, ಜೀಶಾನ್ ಅಹಮ್ಮದ್ ಮತ್ತಷ್ಟು ವಿಡಿಯೋಗಳನ್ನು ತೆಗೆಯಲು ಒಂದಷ್ಟು ಸುತ್ತಾಡಿದ್ದಾರೆ. ಇದ್ಯಾವುದು ತಂದೆ ದೀಪಕ್ ಯಾದವ್‌ಗೆ ಸುತಾರಂ ಇಷ್ಟವಿರಲಿಲ್ಲ. ಈ ಮ್ಯೂಸಿಕ್ ಆಲ್ಬಮ್ ಬಳಿಕ ಮಗಳ ಸುತ್ತಾಟ, ಆಕೆಯ ಜೊತೆಗಿರುವ ವ್ಯಕ್ತಿಗಳ ಬಗ್ಗೆ ತಂದೆಗೆ ತೀವ್ರ ಅಸಮಾಧಾನವಿತ್ತು. ಇದೇ ಕಾರಣದಿಂದ ಟೆನಿಸ್ ಅಕಾಡೆಮಿ ಮುಚ್ಚಲು ಹಲವು ಬಾರಿ ಸೂಚಿಸಿದ್ದರು. ಜೂನ್ 10 ರಂದು ಇದೇ ವಿಚಾರಕ್ಕೆ ಮತ್ತೆ ತಂದೆ ಹಾಗೂ ಮಗಳ ನಡುವೆ ಜಗಳವಾಗಿದೆ.
ಒಂದು ವರ್ಷದ ಹಿಂದೆ ಮ್ಯೂಸಿಕ್ ವಿಡಿಯೋ ಆಲ್ಬಮ್ ಹೊರತಂದಿದ್ದಾರೆ. ವರ್ಷಗಳಿಂದ ಇದೇ ವಿಚಾರದಲ್ಲಿ ತಂದೆ ಹಾಗೂ ಮಗಳ ಜೊತೆ ವಾಗ್ವಾದ ನಡೆಯುತ್ತಲೇ ಇತ್ತು.
ತಿಂಡಿ ಮಾಡುತ್ತಿದ್ದ ಮಗಳಿಗೆ ಹಿಂದಿನಿಂದಲೇ ಗುಂಡು
ತಂದೆ ಜೊತೆ ಜಗಳ, ವಾಗ್ವಾದ ನಡೆಸಿ ನೇರವಾಗಿ ಅಡುಗೆ ಕೋಣೆಗೆ ತೆರಳಿದ ರಾಧಿಕಾ ಯಾದವ್ ಉಪಾಹರದ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತ ತಂದೆ ದೀಪಕ್ ಯಾದವ್ ನೇರವಾಗಿ ತನ್ನ ಕೋಣೆಗೆ ತೆರಳಿ ರಿವಾಲ್ವರ್ ತಂದು ಅಡುಗೆ ಮಾಡುತ್ತಿದ್ದ ಮಗಳ ಮೇಲೆ ಗುಂಡು ಹಾರಿಸಿದ್ದಾರೆ. ಹಿಂದಿನಿಂದಲೇ ಗುಂಡು ಹಾರಿಸಿದ್ದಾರೆ. ಮೂರು ಗುಂಡಗಳು ಈಕೆಯ ದೇಹ ಹೊಕ್ಕಿದೆ. ಮನೆಯಲ್ಲಿ ರಾಧಿಕಾ ದುರಂತ ಅಂತ್ಯಕಂಡಿದ್ದಾಳೆ.

