ಬೆಳಗಾವಿ: ಶಾಸಕ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಶಾಸಕ ರಾಜು ಕಾಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಐನಾಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ ಇನ್ನೂ ಎರಡು ಸಚಿವ ಸ್ಥಾನ ನೀಡಬೇಕೆಂದು ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇವೆ. ಲಕ್ಷ್ಮಣ ಸವದಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊಡಬೇಕೆಂದು ಹೇಳಿರುವುದಾಗಿ ತಿಳಿಸಿದರು. ಬೆಳಗಾವಿ ಜಿಲ್ಲೆಯ ಶಾಸಕರಿಗಿಂತ ನಾನು ಹಿರಿಯ. ಆದರೆ, ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಾನು ಸಚಿವ ಸ್ಥಾನ ಕೇಳಿಲ್ಲ. ಅಶೋಕ ಪಟ್ಟಣ, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದರು.

11:42 PM (IST) Jul 11
ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಇಡೀ ಚಿತ್ರರಂಗವೇ ದುಃಖದಲ್ಲಿ ಮುಳುಗಿದೆ. ಸುಮಾರು 6 ದಶಕಗಳ ಕಾಲ, ಹಲವು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
10:41 PM (IST) Jul 11
ದಕ್ಷಿಣ ಭಾರತದ ಗಾನ ಕೋಗಿಲೆ ಎಸ್. ಜಾನಕಿ ನಮ್ಮನ್ನಗಲಿದ್ದಾರೆ. ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಇದೆ. ಆರು ದಶಕಗಳ ಕಾಲ ಸಂಗೀತ ಲೋಕವನ್ನಾಳಿದ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?
10:30 PM (IST) Jul 11
10:16 PM (IST) Jul 11
'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಎಸ್ ಜಾನಕಿಯವರು ತಮ್ಮ 88ನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರನ್ನು ಭೌತಿಕವಾಗಿ ಕಳೆದುಕೊಂಡಿರುವ ಭಾರತ ಹಾಗೂ ಜಗತ್ತಿನ ಸಂಗೀತಪ್ರೇಮಿಗಳು ಈ ಸಂಗೀತದ ಮೇರುಪ್ರತಿಭೆಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.
10:07 PM (IST) Jul 11
ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ನಂತರ, ಅವರ ಕೊನೆಯ ಇಚ್ಛೆಯಂತೆ ಮೈಸೂರಿನಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
09:50 PM (IST) Jul 11
ಎಸ್. ಜಾನಕಿ ಅವರಿಗೆ ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಇತ್ತು. ಓದಿಗಿಂತ ಸಂಗೀತವೇ ಅವರ ಬದುಕಿನ ಕನಸಾಗಿತ್ತು. ಮಗಳ ಪ್ರತಿಭೆಯನ್ನು ಗುರುತಿಸಿದ ತಂದೆ ಸಂಗೀತಾಭ್ಯಾಸಕ್ಕೆ ಕಳುಹಿಸಿದರು.
09:49 PM (IST) Jul 11
Singer S Janaki: ಅಭಿಮಾನಿಗಳಿಂದ ಜಾನಕಿಯಮ್ಮ ಎಂದೇ ಕರೆಸಿಕೊಳ್ಳುವ S Janaki ಅವರು 25 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 'ದಕ್ಷಿಣ ಭಾರತದ ಕೋಗಿಲೆ' ಎಂಬ ಬಿರುದು ಪಡೆದಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಆಕ್ಟಿವ್ ಆಗಿ ಹಾಡು ಹಾಡಿದ್ದ ಅವರು ಇಂದು ನಮಗೆ ನೆನಪು.
09:44 PM (IST) Jul 11
09:31 PM (IST) Jul 11
ಎಸ್. ಜಾನಕಿ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.
09:26 PM (IST) Jul 11
09:14 PM (IST) Jul 11
1952ರಲ್ಲಿ ಜಿ.ಕೆ. ವೆಂಕಟೇಶ್ ಅವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಹಾಡಿದ್ದ ಎಸ್ ಜಾನಕಿಯವರು, ಮತ್ತೆ ಅಕ್ಟೋಬರ್ 28, 2017ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಗಾನಸುಧೆ ಹರಿಸಿದ್ದೇ ಕೊನೆಯ ಕಾರ್ಯಕ್ರಮ.
09:04 PM (IST) Jul 11
08:55 PM (IST) Jul 11
KGF ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆದ ಯಶ್, ಇದೀಗ 'ಟಾಕ್ಸಿಕ್', 'ರಾಮಾಯಣ' ಸೇರಿದಂತೆ 5 ದೊಡ್ಡ ಸಿನಿಮಾಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅವರ ಮುಂಬರುವ ಚಿತ್ರಗಳ ಸಂಪೂರ್ಣ ಪಟ್ಟಿ ಮತ್ತು ಲೇಟೆಸ್ಟ್ ಅಪ್‌ಡೇಟ್ ಇಲ್ಲಿದೆ.
08:19 PM (IST) Jul 11
ಖ್ಯಾತ ಗಾಯಕಿ ಎಸ್. ಜಾನಕಿ ಅವರು ಮಹಾನಟಿ ಸಾವಿತ್ರಿ ಸಿನಿಮಾಗಳಿಗೆ ಹಾಡುವುದನ್ನು ಏಕೆ ನಿರಾಕರಿಸಿದ್ದರು? ಪಿ. ಸುಶೀಲಾ, ಸಾವಿತ್ರಿ ಮತ್ತು ಜಾನಕಿ ನಡುವೆ ನಡೆದ ಘಟನೆಯ ಹಿಂದಿನ ಅಸಲಿ ಕಥೆ ಹಾಗೂ ಜಾನಕಿ ಸಂದರ್ಶನದಲ್ಲಿ ಹೇಳಿದ ಸತ್ಯ ಇಲ್ಲಿದೆ.
08:06 PM (IST) Jul 11
ಪ್ರಖ್ಯಾತ ಗಾಯಕಿ ಎಸ್.ಜಾನಕಿ ಶನಿವಾರ ವಹೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
07:46 PM (IST) Jul 11
ಶಾಸಕ ಶಿವರಾಜ ತಂಗಡಗಿ, ಆರ್‌ಎಸ್‌ಎಸ್‌ಗೆ ಬರುತ್ತಿರುವ ಹಣದ ಮೂಲದ ಬಗ್ಗೆ ಇಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಬಿಜೆಪಿ, ಎಸ್‌ಐಆರ್, ಅಂಜನಾದ್ರಿ ಕಾಣಿಕೆ ಹುಂಡಿ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
07:34 PM (IST) Jul 11
ಚಿತ್ರದುರ್ಗದ ಸಣ್ಣ ಹಳ್ಳಿಯ ಯುವ ಇಂಜಿನಿಯರ್ ಪೃಥ್ವಿರಾಜ್, ತಮ್ಮ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಪ್ರಖ್ಯಾತ ಟೆಕ್ ಕಂಪನಿ ‘ಎನ್‌ವಿಡಿಯಾ’ದಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಐಐಟಿ ಪದವಿ ಇಲ್ಲದಿದ್ದರೂ, ಕೌಶಲ್ಯ ಅಭಿವೃದ್ಧಿಯಿಂದಲೇ ವಾರ್ಷಿಕ 2.6 ಕೋಟಿ ರೂ. ವೇತನದ ಉದ್ಯೋಗ ಗಿಟ್ಟಿಸಿದ್ದಾರೆ.
07:00 PM (IST) Jul 11
Sanya Iyer: 'ಬಿಗ್ ಬಾಸ್ ಕನ್ನಡ' ಖ್ಯಾತಿಯ ಸಾನ್ಯ ಅಯ್ಯರ್ 'ಎರಡು ಪ್ಲೇಟ್ ದೋಸೆ' ರ್ಯಾಪ್ ಸಾಂಗ್ ಬಿಡುಗಡೆಯಾಗಿ ಒಂದು ತಿಂಗಳಾದ ಬೆನ್ನಲ್ಲೇ ಹೊಸ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
06:27 PM (IST) Jul 11
06:17 PM (IST) Jul 11
ಶಾಸಕ ಜನಾರ್ದನ ರೆಡ್ಡಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಕುರಿತು ನೀಡುತ್ತಿರುವ ಹೇಳಿಕೆಗಳು, ಇಲಾಖೆಯ ನಿರ್ವಹಣೆ ಹಾಗೂ ರಾಜಕೀಯ ಉದ್ದೇಶಗಳ ಬಗ್ಗೆ ರೆಡ್ಡಿ ಹಲವು ಆರೋಪಗಳನ್ನು ಮಾಡಿದರು.
06:06 PM (IST) Jul 11
ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಚಿತ್ರಮಂದಿರ ಬಿಡುಗಡೆಯ ಸುಮಾರು ಏಳು ತಿಂಗಳ ಬಳಿಕ ಜುಲೈ 17ರಿಂದ ZEE5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ OTT ರಿಲೀಸ್ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
05:41 PM (IST) Jul 11
ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರು ಡಿಐಜಿ ರವಿ ಡಿ. ಚನ್ನಣ್ಣನವರ್, ಜ್ಞಾನ, ಶಿಸ್ತು, ಸಂಸ್ಕಾರ, ಸಮಯದ ಮಹತ್ವ ಹಾಗೂ ಮೊಬೈಲ್ ದುರ್ಬಳಕೆ ಬಗ್ಗೆ ವಿದ್ಯಾರ್ಥಿನಿಯರಿಗೆ ಮಹತ್ವದ ಸಲಹೆ ನೀಡಿದರು.
05:27 PM (IST) Jul 11
'ಬಿಗ್ ಬಾಸ್ ಕನ್ನಡ' ಖ್ಯಾತಿಯ ಜಾನ್ವಿ ಜೆಡಿಎಸ್ ಸೇರಿದ ಬಳಿಕ ಸ್ವಗ್ರಾಮದಲ್ಲಿ ಕಣ್ಣು ಕಾಣದ ಮಾವ ಹಾಗೂ ಅತ್ತೆಗೆ ಸ್ಮಾರ್ಟ್ ಟಿವಿ ಉಡುಗೊರೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಭಾವುಕ ವಿಡಿಯೋ ಜೊತೆಗೆ ಎರಡನೇ ಮದುವೆ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ.
05:09 PM (IST) Jul 11
ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದ್ರೆ ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈ ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಆದ್ರೆ ಹುಮಾ!?
05:01 PM (IST) Jul 11
ಏಷ್ಯಾದ ಅತೀ ದೊಡ್ಡ ಏರ್ ಶೋ ಆಗಿ ಹೊರಹೊಮ್ಮಿರುವ ಏರೋ ಇಂಡಿಯಾ ಈ ಬಾರಿಯೂ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. ಇದೀಗ ಕೇಂದ್ರ ರಕ್ಷಣಾ ಇಲಾಖೆ ಏರೋ ಇಂಡಿಯಾ ಆಯೋಜನೆ ದಿನಾಂಕ ಘೋಷಿಸಿದೆ.
04:54 PM (IST) Jul 11
B Jayashree Karavali: ಅಪ್ಪಟ ಕನ್ನಡ ಮಣ್ಣಿನ ಸೊಗಡನ್ನು ಹೊತ್ತಿರುವ 'ಕರಾವಳಿ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದೆ.
04:47 PM (IST) Jul 11
ಏಕದಿನ ತಂಡದ ನಾಯಕ ಶುಭಮನ್ ಗಿಲ್ ವಿಂಬಲ್ಡನ್ ಸುದ್ದಿಯಲ್ಲಿದ್ದಾರೆ. ಅಲ್ಲದೇ ಸಚಿನ್ ತೆಂಡೂಲ್ಕರ್ ಹಾಗೂ ಅವರ ಕುಟುಂಬದೊಂದಿಗೆ ರಾಯಲ್ ಬಾಕ್ಸ್‌ನಲ್ಲಿ ಗಿಲ್ ಪಂದ್ಯ ವೀಕ್ಷಿಸುತ್ತಿರುವುದು ಕಂಡುಬಂದಿತು. ಅಲ್ಲದೇ ಅವರ ಜತೆಯಲ್ಲಿದ್ದ ಹುಡುಗಿ ಯಾರು ಎನ್ನುವ ಸುದ್ದಿಯೂ ಸಖತ ವೈರಲ್ ಆಗಿದೆ.
04:31 PM (IST) Jul 11
Mother Promise Movie Review: ಅನಿವಾರ್ಯತೆಯೇ ಶತ್ರು. ನಟ ಪೂರ್ಣಚಂದ್ರ ಇಲ್ಲಿ ಬರಹಗಾರನಾಗಿ, ನಿರ್ದೇಶಕನಾಗಿ ಅಪರಾವತಾರ ಮೆರೆದಿದ್ದಾರೆ. ನಿರೀಕ್ಷೆಯೇ ಇಲ್ಲದೆ ಸಿನಿಮಾ ನೋಡಿದವರಿಗೆ ಅಚ್ಚರಿ ಹುಟ್ಟಿಸುತ್ತಾರೆ.
04:12 PM (IST) Jul 11
04:09 PM (IST) Jul 11
ನಾಳೆ, ಜುಲೈ 12ರಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಕರ್ನಾಟಕದ ಶಿವಣ್ಣ ಅಭಿಮಾನಿಗಳು ಸಿದ್ಧರಾಗಿದ್ದಾರೆ. 64ರ ವಯಸ್ಸಿನಲ್ಲೂ ಹದಿಹರೆಯದ ಹುಡುರಂತೆ ಚಟುವಟಿಕೆಯಿಂದ ಇರುವ ಶಿವಣ್ಣನ ಜನ್ಮದಿನವು ಈ ಬಾರಿ ಅಭಿಮಾನಿಗಳ ಜೊತೆ ನಡೆಯಲಿದೆ. ಅದಕ್ಕಾಗಿ 'ಶ್ರೀಮುತ್ತು' ಶೃಂಗಾರಗೊಳ್ಳುತ್ತಿದೆ.
04:02 PM (IST) Jul 11
ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದ್ದರೂ, ಈಗಾಗಲೇ ಶಾಲಾ-ಕಾಲೇಜು ಹಂತದಲ್ಲಿ ಕನ್ನಡ ಕಲಿತವರಿಗೆ ಮತ್ತೊಮ್ಮೆ ಪರೀಕ್ಷೆ ಬರೆವ ಹೊರೆಯಿಂದ ಮುಕ್ತಿ ನೀಡಲು ಈ ಮಹತ್ವದ ರೂಲ್ ಜಾರಿಗೆ ತರಲಾಗಿದೆ. ಈ ನಿಯಮ ಯಾರಿಗೆಲ್ಲ ಅನ್ವಯಿಸುತ್ತದೆ ಮತ್ತು ವಿನಾಯಿತಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
03:09 PM (IST) Jul 11
The Tattoo Ghost divorce: ಡಿವೋರ್ಸ್ ತಗೊಳ್ಳಲು ಸಾಕಷ್ಟು ಕಾರಣಗಳು ಇರುತ್ತವೆ. ಕೆಲವರು ಡಿವೋರ್ಸ್ ತಗೊಂಡೆವು ಎಂದು ಕೂಡ ಹೇಳೋದಿಲ್ಲ. ಇನ್ನೂ ಕೆಲವರು ಇದರಿಂದ ಹೊರಗಡೆ ಬರಲು ತುಂಬ ಸಮಯ ತಗೊಳ್ತಾರೆ. ಆದರೆ ಇಲ್ಲೊಂದು ಜೋಡಿಯೊಂದು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
01:35 PM (IST) Jul 11
ಲವ್ ಬರ್ಡ್ಸ್‌ಗಳಿಗೆ ಸಿಹಿ ಮುತ್ತುಗಳೇ ಪರಪಂಚ. ಆದ್ರೆ ಈ ಮುತ್ತುಗಳೇ ಗಿನ್ನಿಸ್ ದಾಖಲೆಯಾದ್ರೆ ಹೇಗಿರುತ್ತೆ ಹೇಳಿ? ಜಸ್ಟ್ 30 ಸೆಕೆಂಡ್‌ನಲ್ಲಿ 195 ಕಿಸ್ ಕೊಡಲು ನಿಮ್ಮಿಂದ ಸಾಧ್ಯಾನಾ? ಈ ರೋಮ್ಯಾಂಟಿಕ್ ಕಪಲ್‌ನ ಮುತ್ತುಗಳ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
01:16 PM (IST) Jul 11
01:12 PM (IST) Jul 11
ಕಳೆದ ಮೂರು ವರ್ಷಗಳಿಂದ ಕರುನಾಡಿನ ಪ್ರೀತಿಯ ನಟ ಶಿವಣ್ಣರಿಗೆ ತಮ್ಮ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅದೃಷ್ಟ ಕೈತಪ್ಪಿ ಹೋಗಿತ್ತು. ಈ ವರ್ಷ ಅವರ ಹಾಗೂ ಫ್ಯಾನ್ಸ್ ಆಸೆ ಈಡೇರುತ್ತಿದೆ. ಫ್ಯಾನ್ಸ್ ಜೊತೆ ಬರ್ತ್‌ಡೇ ಬಾಯ್ ಆಗಲು ಶಿವರಾಜ್‌ಕುಮಾರ್ ಸಹ ಉತ್ಸುಕತೆಯಿಂದ ಸಿದ್ಧರಾಗಿದ್ದಾರೆ.
01:10 PM (IST) Jul 11
ರೆಡ್ಡಿಟ್‌ನ 'ಗರ್ಲ್ ಡಿನ್ನರ್ ಡೈರೀಸ್' (Girl Dinner Diaries) ವೇದಿಕೆಯಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿರುವ, ಪ್ರಸ್ತುತ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಈ ಹೃದಯಸ್ಪರ್ಶಿ ಹಾಗೂ ಆಘಾತಕಾರಿ ಘಟನೆಯ ಸಂಪೂರ್ಣ ವಿವರ ಇಲ್ಲಿದೆ..
01:06 PM (IST) Jul 11
Actor Prajwal Devaraj: ಪ್ರಜ್ವಲ್ ದೇವರಾಜ್ ‘ಕರಾವಳಿ’ ಸಿನಿಮಾದ ಟ್ರೇಲರ್ ಕಾರ್ಯಕ್ರಮಕ್ಕೆ ಪ್ರಜ್ವಲ್ ಅವರೇ ಬಂದಿರಲಿಲ್ಲ. ಆದರೆ ಅವರ ಅಭಿಮಾನಿಗಳು ಬಂದು ಟ್ರೇಲರ್‌ನಲ್ಲಿ ಪ್ರಜ್ವಲ್ ಧ್ವನಿ ಇಲ್ಲ ಎಂದು ಜಗಳ ಮಾಡಿದರು. ಆಮೇಲೆ ನಿರ್ದೇಶಕ ಗುರುದತ್ ಗಾಣಿಗ ಅವರು ಪ್ರಜ್ವಲ್ ವಿರುದ್ಧ ಆರೋಪ ಮಾಡಿದರು, ಆಮೇಲೆ ಪ್ರಜ್ವಲ್ ಕೂಡ ಒಂದಿಷ್ಟು ಮಾತನಾಡಿದರು. ಈಗ ಪ್ರಜ್ವಲ್ ದೇವರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ.
12:30 PM (IST) Jul 11
ಟಾಕ್ಸಿಕ್ ಸಿನಿಮಾ ಅಗಸ್ಟ್ 26ಕ್ಕೆ ಬರುತ್ತೆ. ಆದ್ರೆ ಈ ಸಿನಿಮಾಗೆ ಸೆನ್ಸಾರ್ ಏನಾಗುತ್ತೆ ಅನ್ನೋ ಕುತೂಹಲವೂ ಇದೆ. ಯಾಕಂದ್ರೆ ವೈಲೆನ್ಸ್ ಜೊತೆ ವೈಬ್ರೇಷನ್ ತರೋ ರೊಮ್ಯಾನ್ಸ್ಈ ಸಿನಿಮಾದಲ್ಲಿದೆ. ಈ ಝಲಕ್ಗಳನ್ನೆಲ್ಲಾ ನೋಡಿದ್ರೆ ಟಾಕ್ಸಿಕ್ಗೆ ಎ ಸರ್ಟಿಫಿಕೆಟ್ ಸಿಕ್ಕಿದ್ರು ಆಶ್ಚರ್ಯವಿಲ್ಲ.
11:14 AM (IST) Jul 11
10:53 AM (IST) Jul 11