ಬೆಂಗಳೂರು: ಕೆಲವರು ಹಿಂದುತ್ವಕ್ಕೆ ಕಂಟಕ ತರಬೇಕು, ದೇಗುಲಗಳಿಗೆ ಕೆಟ್ಟದ್ದು ಮಾಡಬೇಕೆಂದು ಪಿತೂರಿ ನಡೆಸುತ್ತಿದ್ದಾರೆ. ಅಪನಂಬಿಕೆ ಮೂಡಿಸುವ ಹುನ್ನಾರ ನಡೆದಿದೆ ಎಂದು ಹರಿಹರ ಪಂಚಮ ಸಾಲಿ ಪೀಠದ ವಚನಾ ನಂದ ಸ್ವಾಮೀಜಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಧರ್ಮಸ್ಥಳ ಪ್ರಕರಣ ಬಗ್ಗೆ ಹೆಚ್ಚು ಮಾಹಿತಿ ಇಲ್ಲ, ಆದರೆ, ಹಿಂದುತ್ವ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಈ ಭಯ ಕೆಲವರಿಗೆ ಕಾಡುತ್ತಿದೆ. ಹೀಗಾಗಿ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದಾರೆ. ಇತ್ತ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಿಡಿಗೇಡಿಗಳು ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಎಸ್‌ಐಟಿ ಮಾಡಿದ್ದೀರಿ. ಎಷ್ಟು ವರ್ಷ ಇರಿಸಿಕೊಳ್ಳುವಿರಿ? ಮೆಕ್ಕಾ ಮದೀನಾದಲ್ಲಿ ಈ ರೀತಿ ನಡೆದುಕೊಂಡಿದ್ದರೆ ಸುಮ್ಮನಿರ್ತಿದ್ರಾ? ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಶ್ನೆ ಮಾಡಿದ್ದಾರೆ.

05:28 AM (IST) Aug 13
11:26 PM (IST) Aug 10
ಹಿಂದೂ ಯುವಕ ಗವಿಸಿದ್ದಪ್ಪ ಹತ್ಯೆ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಇದರ ಹಿನ್ನಲೆಯಲ್ಲಿ ಕೊಪ್ಪಳ ನಗರದ ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ.
11:12 PM (IST) Aug 10
11:01 PM (IST) Aug 10
ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಸ್ಥಾನಕ್ಕೆ ಹಿರಿಯ ನಾಯಕ ಆನಂದ್ ಶರ್ಮಾ ರಾಜೀನಾಮೆ ನೀಡಿದ್ದಾರೆ.
10:46 PM (IST) Aug 10
10:02 PM (IST) Aug 10
ವೇಗವಾಗಿ ಸಾಗುತ್ತದ್ದ ಕಾರು ಮರಕ್ಕೆ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭಿವಿಸಿದೆ. ಈ ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಒರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
09:49 PM (IST) Aug 10
09:25 PM (IST) Aug 10
ನಟ ವಿಷ್ಣುವರ್ಧನ್ ಸಮಾಧಿ ನೆಲೆಸಮಗೊಳಿಸುವ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣಾಗಿದೆ. ಹಲವು ಈ ಕುರಿತು ಪ್ರತಿಕ್ರಿಯೆಸಿದ್ದಾರೆ. ಇದೀಗ ಕೇಂದ್ರ ಸಚಿವ ಶೋಭಾ ಕರದ್ಲಾಂಜೆ ವಿಷ್ಣು ಸಮಾಧಿ ಉಳಿಸಿ, ಕಲಾ ಗ್ರಾಮವಾಗಿ ಅಭಿವೃದ್ಧಿಪಡಿಸಲು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
08:51 PM (IST) Aug 10
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದ ಆರೋಪ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಸತ್ಯ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ. ವೋಟರ್ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ದಾಖಲಾತಿ ಮತ್ತು ಡಬಲ್ ಹೆಸರುಗಳು ಕಂಡುಬಂದಿವೆ ಎಂದು ಅವರು ಆರೋಪಿಸಿದ್ದಾರೆ.
08:44 PM (IST) Aug 10
ಪ್ರಧಾನಿ ಮೋದಿ ಇಂದು ಬೆಂಗಳೂರಿನ ಹಳದಿ ಮೆಟ್ರೋ ಉದ್ಘಾಟನೆ ಮಾಡಿದ್ದಾರೆ. ನಾಳೆ ಬೆಳಗ್ಗೆಯಿಂದ ಹಳದಿ ಮೆಟ್ರೋ ಸಂಚಾರ ಆರಂಭಿಸುತ್ತಿದೆ. ರೈಲು ಸಮಯ, ನಿಲ್ದಾಣ, ಟಿಕೆಟ್ ದರ ಸೇರಿದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
08:17 PM (IST) Aug 10
08:03 PM (IST) Aug 10
ಸಚಿವ ರಾಮಲಿಂಗಾ ರೆಡ್ಡಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ತೆರಳಿದ್ದ ಸಚಿವ ರಾಮಲಿಂಗಾ ರೆಡ್ಡಿ ಲಿಫ್ಟ್‌ನಲ್ಲಿ ಸಿಲುಕಿದ ಘಟನೆ ನಡೆದಿದೆ.
07:46 PM (IST) Aug 10
ಕೊಪ್ಪಳದಲ್ಲಿ ಗವಿಸಿದ್ದಪ್ಪನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಕೆಎಸ್ ಈಶ್ವರಪ್ಪ ಅವರು ಗವಿಸಿದ್ದಪ್ಪನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
07:35 PM (IST) Aug 10
ಭೂಮಿಕಾ ಮತ್ತು ಮಗುವನ್ನು ಕೊಲ್ಲಿಸಲು ಅಪಘಾತ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ ಜೈದೇವ್ ಮತ್ತು ಶಕುಂತಲಾ. ಈ ಪ್ಲ್ಯಾನ್ನಲ್ಲಿ ಅರಿಯದೇ ತನ್ನ ಸ್ವಂತ ಮಗ ಪಾರ್ಥನನ್ನೇ ಬಲಿ ಕೊಡ್ತಾಳಾ ಶಕುಂತಲಾ? ಏನಿದು ಅಮೃತಧಾರೆ ಸೀರಿಯಲ್ ಟ್ವಿಸ್ಟ್?
07:24 PM (IST) Aug 10
ಗಾಯಗೊಂಡ ಮಹಿಳೆಯನ್ನು ಆ್ಯಂಬುಲೆನ್ಸ್ ಮೂಲಕ ವೇಗವಾಗಿ ಸಾಗಿಸುವ ನಡುವೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ. ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಸಾಧ್ಯಾಗದಷ್ಟು ಟ್ರಾಫಿಕ್. ಇತ್ತ ಗಾಯಗೊಂಡ ಮಹಿಳೆ ಕಿರುಚಾಡುತ್ತಲೇ ಆ್ಯಂಬುಲೆನ್ಸ್‌ನಲ್ಲೇ ಪ್ರಾಣಬಿಟ್ಟ ಘಟನೆ ನಡೆದಿದೆ.
07:07 PM (IST) Aug 10
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪದ ಬಗ್ಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಹಿಂದೆ ಕಾಣದ ಕೈಗಳಿವೆ ಮತ್ತು ಇದು ಡಾ.ವೀರೇಂದ್ರ ಹೆಗ್ಗಡೆಯವರ ಘನತೆಗೆ ಧಕ್ಕೆ ತರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
06:36 PM (IST) Aug 10
06:34 PM (IST) Aug 10
ಡಾ.ಬ್ರೋ ಅವರು ಕುತೂಹಲದ ಅಸ್ಥಿಪಂಜರದ ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಎಲ್ಲಿಯದ್ದು ಇದು? ಇವರಿಗೆ ಸಿಕ್ಕಿದ್ದು ಹೇಗೆ?
06:31 PM (IST) Aug 10
ವೋಟರ್ ಐಡಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಸಚಿವ ರಾಜಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಸುರ್ಜೇವಾಲರಿಗೆ ದೂರು ಸಲ್ಲಿಸಿದ್ದಾರೆ.
06:23 PM (IST) Aug 10
ಮುಕೇಶ್ ಅಂಬಾನಿ ರಿಲಯನ್ಸ್ ಜಿಯೋ ಹೊಸ ದಾಖಲೆ ಬರೆದಿದೆ. ವಿಶ್ವದ ಘಟಾನುಘಟಿ ಟೆಲಿಕಾಂ ಆಪರೇಟರ್ ಹಿಂದಿಕ್ಕಿರುವ ರಿಲಯನ್ಸ್ ಜಿಯೋ ಇದೀಗ ನಂ.1 ಆಪರೇಟರ್ ಹೆಗ್ಗಳಿಕೆಗೆ ಪಾತ್ರವಾಗಿದೆ.
05:58 PM (IST) Aug 10
05:20 PM (IST) Aug 10
ರಾಹುಲ್ ಗಾಂಧಿ ಅವರನ್ನು ಬಚ್ಚಾ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ. ನೆಹರು ಅವರ ಕಾಲದ ಉದಾಹರಣೆ ನೀಡಿ, ರಾಹುಲ್ ಗಾಂಧಿಗೆ ನೈತಿಕತೆ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಹಣ ಕೊಟ್ಟು ಮತ ಖರೀದಿಸಿದ್ದಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಬಿಜೆಪಿಗೆ ಅಗತ್ಯ ಬಿದ್ದರೆ ಸೇರುತ್ತೇನೆ.
05:12 PM (IST) Aug 10
ಮಾಜಿ ಸಂಸದರೊಬ್ಬರು ಹುಚ್ಚು ನಾಯಿಯಂತೆ ರಾಜ್ಯದ ನಾಯಕರಿಗೆ ಕಚ್ಚುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣನಂತೆ ಈ ಮಾಜಿ ಸಂಸದರ ಕರ್ಮಕಾಂಡವೂ ಬಯಲಾಗಲಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.
05:10 PM (IST) Aug 10
05:05 PM (IST) Aug 10
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಆದಿಯ ಎಂಟ್ರಿ ಆದಾಗಿನಿಂದಲೂ ಭಾಗ್ಯ ಮತ್ತು ಆದಿ ಮದುವೆಯಾಗಬೇಕು ಎಂದುಕೊಳ್ಳುತ್ತಿರುವವರೇ ಹೆಚ್ಚು. ಹಾಗಿದ್ರೆ ರಿಯಲ್ ಲೈಫ್ನಲ್ಲಿ ಆದಿ ಪತ್ನಿ ಯಾರು? ಮಕ್ಕಳು ಎಷ್ಟು? ಇಲ್ಲಿದೆ ಡಿಟೇಲ್ಸ್...
05:02 PM (IST) Aug 10
ಮಾರುತಿ ಸುಜುಕಿ ಇದೀಗ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ ಮಾಡಿದೆ. ನೆಕ್ಸಾ ಜೊತೆಗಿನ 10 ವರ್ಷದ ಸಂಭ್ರಮದಲ್ಲಿ ಈ ಕಾರು ಬಿಡುಗಡೆಯಾಗಿದೆ.
04:35 PM (IST) Aug 10
₹7 ಲಕ್ಷ ಸಾಲದ ವಿಚಾರವಾಗಿ ಅನೀಸ್‌ನನ್ನು ಕೊಲ್ಲಲಾಗಿದೆ ಎಂದು ಕುಟುಂಬ ಹೇಳಿಕೆ ನೀಡಿದರೆ, ಪೊಲೀಸರು ಅಕ್ರಮ ಸಂಬಂಧವೇ ಕಾರಣ ಎಂದಿದ್ದಾರೆ.
04:31 PM (IST) Aug 10
ಬೆಡ್ತಿ-ವರದಾ ನದಿ ಜೋಡಣೆಗೆ ಜನಶಕ್ತಿ ಪ್ರದರ್ಶನ ಅಗತ್ಯವೆಂದು ಮಾಜಿ ಸಿಎಂ ಬೊಮ್ಮಾಯಿ ಹಾವೇರಿಯಲ್ಲಿ ಹೇಳಿದರು. ನೀರು ಜೀವಜಲ, ಔಷಧಿಯೂ ಹೌದು. ನೀರಿನ ಸಮಸ್ಯೆ ಜಾಗತಿಕ. ನದಿಗಳ ಸಂರಕ್ಷಣೆ, ಬಳಕೆ ಮುಖ್ಯ. ಪಶ್ಚಿಮಕ್ಕೆ ಹರಿಯುವ ನದಿಗಳ ಬಳಕೆ ಸವಾಲಿನದ್ದು. ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸಬೇಕು.
04:12 PM (IST) Aug 10
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ 50 ಲಕ್ಷ ಸೀಟುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಟಿಕೆಟ್‌ಗಳು ಕ್ರಮವಾಗಿ ₹1,279 ಮತ್ತು ₹4,279 ರಿಂದ ಆರಂಭವಾಗುತ್ತವೆ. ಈ ಆಫರ್ ಆಗಸ್ಟ್ 10 ರಿಂದ 15 ರವರೆಗೆ ಮಾತ್ರ ಲಭ್ಯ.
04:09 PM (IST) Aug 10
ಮೈಕ್ರೋಸಾಫ್ಟ್ ತನ್ನ ಜನಪ್ರಿಯ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಸ್ಥಗಿತಗೊಳಿಸುತ್ತಿದೆ. ಸೆ.15ರಿಂದ ಈ ಸ್ಕ್ಯಾನಿಂಗ್ ಆ್ಯಪ್ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.
03:45 PM (IST) Aug 10
03:36 PM (IST) Aug 10
03:10 PM (IST) Aug 10
ಧರ್ಮಸ್ಥಳದ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡು ಬಂದ ಅನಾಮಿಕ ರತ್ನಗಿರಿ ಬೆಟ್ಟದಲ್ಲಿ ಗುರುತಿಸಿದ 16ನೇ ಪಾಯಿಂಟ್‌ನಲ್ಲಿ ಬರೋಬ್ಬರಿ 30 ಅಡಿ ಅಗಲ, 10 ಅಡಿ ಆಳಕ್ಕೆ ಗುಂಡಿ ತೋಡಿದ್ದಾರೆ. ಆದರೆ, ಅಲ್ಲಿ ಸಿಕ್ಕಿದ್ದೇನು? ಪ್ರತ್ಯಕ್ಷ ವರದಿ ಮಾಡಿದ ನಮ್ಮ ರಿಪೋರ್ಟರ್ ಕೊಟ್ಟ ಮಾಹಿತಿ ಇಲ್ಲಿದೆ.
03:06 PM (IST) Aug 10
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ 5 ವರ್ಷದ ಬಾಲಕಿ ಹೃದಯಸ್ವರ್ಶಿ ಪತ್ರ ಬರೆದಿದ್ದಾರೆ. ಇದು ಬಾಲಕಿಯ ಸಮಸ್ಯೆ ಮಾತ್ರವಲ್ಲ, ಬೆಂಗಳೂರಿನ ಬಹುತೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಅಷ್ಟಕ್ಕೂ ಬಾಲಕಿ ಬರೆದ ಪತ್ರದಲ್ಲಿ ಏನಿದೆ?
02:50 PM (IST) Aug 10
KSTDC Travel Package: ಮೈಸೂರಿನಿಂದ ತಿರುಪತಿಗೆ ಎರಡು ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಒಂದು ದಿನದ ತಿರುಪತಿ ಟ್ರಿಪ್ ಮತ್ತು ಮೂರು ದಿನಗಳ ತಿರುಪತಿ-ಕಾಳಹಸ್ತಿ ಟ್ರಿಪ್ ಪ್ಯಾಕೇಜ್‌ಗಳು ಲಭ್ಯವಿದೆ. ಈ ಪ್ಯಾಕೇಜ್‌ಗಳ ಬೆಲೆ ಮತ್ತು ಇತರ ಮಾಹಿತಿಯನ್ನು ತಿಳಿದುಕೊಳ್ಳಿ.
02:28 PM (IST) Aug 10
ಬೆಂಗಳೂರಿನಲ್ಲಿ 3ನೇ ಹಂತದ ಮೆಟ್ರೋ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.
01:54 PM (IST) Aug 10
12:54 PM (IST) Aug 10
ಹೆಣ್ಣುಮಕ್ಕಳು ಸ್ವಾವಲಂಬನೆಯಿಂದ ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯ ಇಟ್ಟುಕೊಂಡವರು ವೀರೇಂದ್ರ ಹೆಗ್ಗಡೆ. ಅವರ ಮನೆಯೊಳಗೆ ಈ ರೀತಿ ನಡೆಯುತ್ತೆ ಅಂದ್ರೆ ನಮಗೂ ನಂಬಕ್ಕಾಗಲ್ಲ ಎಂದರು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ.
12:35 PM (IST) Aug 10
2024ರಲ್ಲಿ 2.06 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 8 ಲಕ್ಷದ 96 ಸಾವಿರಕ್ಕೂ ಅಧಿಕ ಮಂದಿ ಭಾರತೀಯ ಪೌರತ್ವವನ್ನು ತೊರೆದಿದ್ದಾರೆ. ಇದಕ್ಕೆ ಆರ್ಥಿಕ ಅವಕಾಶಗಳು, ಶಿಕ್ಷಣ, ಕುಟುಂಬ ಸೇರಲು, ದ್ವಿಪೌರತ್ವದ ಆಕರ್ಷಣೆ ಹಲವು ಕಾರಣಗಳಿವೆ.
12:27 PM (IST) Aug 10
ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ 19.15 ಕಿ.ಮೀ. ಹಳದಿ ಮೆಟ್ರೋ ಮಾರ್ಗ ಸೋಮವಾರದಿಂದ ಕಾರ್ಯಾರಂಭ. ಆರಂಭದಲ್ಲಿ ಮೂರು ರೈಲುಗಳು 20-25 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. 2026ರಲ್ಲಿ 15 ರೈಲುಗಳೊಂದಿಗೆ ದೈನಂದಿನ 3.5 ಲಕ್ಷ ಪ್ರಯಾಣಿಕರ ಸಂಚಾರ ನಿರೀಕ್ಷಿತ.