ಮೈಕ್ರೋಸಾಫ್ಟ್ ತನ್ನ ಜನಪ್ರಿಯ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಸ್ಥಗಿತಗೊಳಿಸುತ್ತಿದೆ. ಸೆ.15ರಿಂದ ಈ ಸ್ಕ್ಯಾನಿಂಗ್ ಆ್ಯಪ್ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.
ನವದೆಹಲಿ (ಆ.10) ಭಾರತದ ಸೇರಿದಂತೆ ಎಲ್ಲಾ ದೇಶಗಳಿಗೂ ಮೈಕ್ರೋಸಾಫ್ಟ್ ಅವಿಭಾಜ್ಯ ಅಂಗವಾಗಿದೆ. ವಿಶ್ವದ ಅತೀ ದೊಡ್ಡ ಟೆಕ್ ಕಂಪನಿ ಮೈಕ್ರೋಸಾಫ್ಟ್ ಇದೀಗ ತನ್ನ ಅತ್ಯಂತ ಜನಪ್ರಿಯ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಸ್ಥಗಿತಗೊಳಿಸುತ್ತಿದೆ. ಸೆಪ್ಟೆಂಬರ್ 15ರಿಂದ ಈ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಲೆನ್ಸ್-ಪಿಡಿಎಫ್ ಸ್ಕ್ಯಾನರ್ ಆ್ಯಪ್ ಸ್ಥಗಿತಗೊಳ್ಳುತ್ತಿದೆ. ವಿಶ್ವಾದ್ಯಂತ ಆ್ಯಂಡ್ರಾಯ್ಡ್ ಹಾಗೂ ಐಒಎಸ್‌ಗಳಲ್ಲಿ ಬಳಕೆಯಾಗುತ್ತಿದ್ದ ಈ ಆ್ಯಪ್ ಸೆಪ್ಟೆಂಬರ್ 15ರ ಬಳಿಕ ಲಭ್ಯವಿಲ್ಲ. ಈಗಾಗಲೇ ಮಿಲಿಯನ್ ಡೌನ್ಲೋಡ್ ಕಂಡಿರುವ ಈ ಆ್ಯಪ್ ಕಾರ್ಯನಿರ್ವಹಣೆ ಸ್ಥಗಿತಗೊಳಿಸುತ್ತಿದೆ.
ಏನಿದು ಮೈಕ್ರೋಸಾಫ್ಟ್ ಲೆನ್ಸ್ ಆ್ಯಪ್?
ಆ್ಯಂಡ್ರಾಯ್ಡ್ ಹಾಗೂ ಇಒಎಸ್ ಬಳೆಕೆದಾರರು ಇಮೇಜ್‌ಗಳನ್ನು ಪಿಡಿಎಫ್, ವರ್ಡ್, ಪವರ್ ಪಾಯಿಂಟ್, ಎಕ್ಸೆಲ್ ಕನ್ವರ್ಟ್ ಮಾಡಲು ಹೆಚ್ಚಾಗಿ ಈ ಲೆನ್ಸ್ ಡಾಕ್ಯುಮೆಂಟ್ ಸ್ಕ್ಯಾನರ್ ಆ್ಯಪ್ ಬಳಸುತ್ತಿದ್ದರು. ಆರಂಭದಲ್ಲಿ ಇದು ಆಫೀಸ್ ಲೆನ್ಸ್ ಎಂಬ ಹೆಸರಿನಲ್ಲಿ ಜನಪ್ರಿಯವಾಗಿದ್ದರೆ, ಬಳಿಕ ಮೈಕ್ರೋಸಾಫ್ಟ್ ಲೆನ್ಸ್ ಎಂದು ಮರುನಾಮಕರಣ ಮಾಡಲಾಗಿತ್ತು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ 50 ಮಿಲಿಯನ್‌ಗೂ ಹೆಚ್ಚು ಡೌನ್ಲೋಡ್ ಕಂಡಿತ್ತು. 5ರಲ್ಲಿ 4.9 ರೇಟಿಂಗ್ ಪಡೆದಿದ್ದ ಈ ಮೈಕ್ರೋಸಾಫ್ಟ್ ಲೆನ್ಸ್ ಆ್ಯಪ್ ಟಾಪ್ ರೇಟಿಂಗ್ ಆ್ಯಪ್ ಎಂದು ಪರಿಗಣಿಸಲ್ಪಟ್ಟಿತ್ತು.
ಸೆ.15ಕ್ಕೆ ಲೆನ್ಸ್ ಆ್ಯಪ್ ನಿವೃತ್ತಿ, ನವೆಂಬರ್ 15ಕ್ಕೆ ಪ್ಲೇ ಸ್ಟೋರ್‌ನಿಂದ ಡಿಲೀಟ್
ಮೈಕ್ರೋಸಾಫ್ಟ್ ಈ ಕುರಿತು ಸ್ಪಷ್ಟನೆ ನೀಡಿದೆ. ಮೈಕ್ರೋಸಾಫ್ಟ್ ಲೆನ್ಸ್ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಸೆಪ್ಟೆಂಬರ್ 15ಕಕ್ಕೆ ಮೈಕ್ರೋಸಾಫ್ಟ್ ಲೆನ್ಸ್ ನಿವೃತ್ತಿಯಾಗುತ್ತಿದೆ ಎಂದಿದೆ. ನವೆಂಬರ್ 15ಕ್ಕೆ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್‌ನಿಂದ ಆ್ಯಪ್ ಡಿಲೀಟ್ ಆಗಲಿದೆ ಎಂದಿದೆ. ಮೈಕ್ರೋಸಾಫ್ಟ್ ಲೆನ್ಸ್ ಬದಲು ಹೊಸ ಸ್ಕ್ಯಾನರ್ ಅಭಿವೃದ್ಧಿ ಮಾಡಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಡಿಸೆಂಬರ್ 15ರ ವರೆಗೆ ಬಳಕೆದಾರಿಗೆ ಸ್ಕ್ಯಾನಿಂಗ್ ಆ್ಯಪ್ ಸೇವೆ
ಸೆಪ್ಟೆಂಬರ್ 15ಕ್ಕೆ ಮೈಕ್ರೋಸಾಫ್ಟ್ ಲೆನ್ಸ್ ಆ್ಯಪ್ ಸೇವೆ ಸ್ಥಗಿತಗೊಳಿಸುತ್ತಿದೆ. ಆದರೆ ಪ್ಲೇ ಸ್ಟೋರ್‌ನಿಂದ ನೆವೆಂಬರ್ 15ಕ್ಕೆ ಆ್ಯಪ್ ಡಿಲೀಟ್ ಆಗಲಿದೆ. ಇತ್ತ ಈಗಾಗಲೇ ಡೌನ್ಲೋಡ್ ಮಾಡಿ ಬಳಕೆ ಮಾಡುತ್ತಿರುವ ಬಳಕೆದಾರರು ಡಿಸೆಂಬರ್ 15ರ ವರೆಗೆ ಬಕೆ ಮಾಡಲು ಸಾಧ್ಯವಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಈಗಾಲೇ ಮೈಕ್ರೋಸಾಫ್ಟ್ ಲೆನ್ಸ್ ಆ್ಯಪ್ ಬಳಕೆ ಮಾಡುತ್ತಿರುವವರು ನಿರಾಸೆ ಪಡಬೇಕಿಲ್ಲ. ಮೈಕ್ರೋಸಾಫ್ಟ್ 365 ಕೋಪೈಲೆಟ್ ಆ್ಯಪ್ ಈ ಎಲ್ಲಾ ಸೇವೆ ನೀಡುತ್ತಿದೆ. ಹೀಗಾಗಿ ಬಳಕೆದಾರರು ಈ ಆ್ಯಪ್ ಬಳಕೆ ಮಾಡಬಹುದು ಎಂದು ಮೈಕ್ರೋಸಾಫ್ಟ್ ಹೇಳಿದೆ.
